ಮಾಸ್ಕೋ: ರಷ್ಯಾ ರಾಷ್ಟ್ರಾಧ್ಯಕ್ಷ ವ್ಲಾಡಿಮಿರ್ ಪುಟಿನ್ (Vladimir Putin) ಮುಂದಿನ ವರ್ಷ ತಮ್ಮ ಸ್ಥಾನದಿಂದ ಕೆಳಗಿಳಿಯುವ ಸಾಧ್ಯತೆ ಇದೆ ಎನ್ನಲಾಗಿದೆ. ಮಾಧ್ಯಮ ವರದಿಗಳ ಪ್ರಕಾರ, ಅವರು ಪಾರ್ಕಿನ್ಸನ್ ಕಾಯಿಲೆಯಿಂದ ಬಳಲುತ್ತಿದ್ದಾರೆ ಮತ್ತು ಈ ರೋಗವು ನಿರಂತರವಾಗಿ ಹೆಚ್ಚುತ್ತಿದೆ. ಪುಟಿನ್ (68) ಅವರ ಗೆಳತಿ ಮತ್ತು ಮಾಜಿ ಜಿಮ್ನಾಸ್ಟ್ ಆಟಗಾರ್ತಿ ಅಲೀನಾ ಕಬೇವಾ (37) ಅವರು ಬೆಳೆಯುತ್ತಿರುವ ಸಮಸ್ಯೆಯನ್ನು ನೋಡಿ ಕೆಳಗಿಳಿಯುವಂತೆ ಒತ್ತಾಯಿಸಿದ್ದಾರೆ.
ಫೂಟೇಜ್ ನಲ್ಲಿ ಅಸಹಜವಾಗಿ ಕಾಣಿಸಿಕೊಂಡ ಪುಟಿನ್
ಮೂಲಗಳ ಮಾಹಿತಿ ಪ್ರಕಾರ, ಪುಟಿನ್ ಅವರು ಇತ್ತೀಚಿನ ಒಂದು ಟಿವಿ ತುಣುಕಿನಲ್ಲಿ ದಿಗ್ಭ್ರಮೆಗೊಂಡಂತೆ ಕಾಣಿಸಿಕೊಂಡಿದ್ದಾರೆ ಮತ್ತು ಅವರ ಕಣ್ಣುಗಳು ಸಹ ಸ್ಥಿರವಾಗಿರಲಿಲ್ಲ. ಒಂದು ಕಪ್ ಹಿಡಿದಿರುವಾಗ ಪುಟಿನ್ ತಮ್ಮ ಬೆರಳುಗಳನ್ನು ಬೇರ್ಪಡಿಸುತ್ತಿರುವಂತೆ ತುಣುಕಿನಲ್ಲಿ ಕಾನಿಸ್ಕೊಂದಿದ್ದಾರೆ ಎಂದು ವರದಿಯಾಗಿದೆ. ಅದರಲ್ಲಿ ಬಹುಶಃ ಔಷಧಿ ಇರಬಹುದು ಎನ್ನಲಾಗಿದೆ.ಹೀಗಾಗಿ ಪುಟಿನ್ ಹೊರಹೊಗಲಿದ್ದಾರೆ ಎಂಬ ಚರ್ಚೆಗಳು ಕೇಳಿಬರಲಾರಂಭಿಸಿವೆ . ಕಳೆದ ವಾರ ಪುಟಿನ್ ಮುಂದೆ ಮಸೂದೆಯನ್ನು ಮಂಡಿಸಲಾಗಿದೆ. ಇದರಲ್ಲಿ ಅವರಿಗೆ ಜೀವನಪೂರ್ತಿ ಸೆನೆಟರ್ ಆಗಿ ಉಳಿಯಲು ಅವಕಾಶ ಕಲ್ಪಿಸಲಾಗಿದೆ. ಈ ಮಸೂದೆ ಅಂಗೀಕರಿಸಿದ ನಂತರ, ಪುಟಿನ್ ಬಳಿ ಜೀವನಪೂರ್ತಿ ರಷ್ಯಾ ಅಧ್ಯಕ್ಷರಾಗಿ ಉಳಿಯುವ ಮಾರ್ಗ ಸುಗಮವಾದಂತಾಗಿದೆ.
ಇದನ್ನು ಓದಿ- ರಷ್ಯಾ ಅಧ್ಯಕ್ಷ ವಾಡ್ಲಿಮೀರ್ ಪುಟಿನ್ ಗೆ ಕರೆ ಮಾಡಿ ಪ್ರಧಾನಿ ಮೋದಿ ಹೇಳಿದ್ದೇನು?
16 ವರ್ಷಗಳವರೆಗೆ ಅವರು ಗುಪ್ತಚರ ಅಧಿಕಾರಿಯಾಗಿದ್ದರು
ವ್ಲಾಡಿಮಿರ್ ಪುಟಿನ್ 16 ವರ್ಷಗಳ ಕಾಲ ಸೋವಿಯತ್ ಒಕ್ಕೂಟದ ಗೂಢಚಾರ ಸಂಸ್ಥೆ KGBಯ ಅಧಿಕಾರಿಯಾಗಿದ್ದರು. 1991 ರಲ್ಲಿ ಅಲ್ಲಿಂದ ನಿವೃತ್ತಿಯಾದ ನಂತರ, ಅವರು ತಮ್ಮ ಸ್ಥಳೀಯ ನಗರವಾದ ಸೇಂಟ್ ಪೀಟರ್ಸ್ಬರ್ಗ್ನಿಂದ ರಾಜಕೀಯಕ್ಕೆ ಪ್ರವೇಶ ಪಡೆದಿದ್ದಾರೆ. ಅವರು 1996 ರಲ್ಲಿ ಮಾಸ್ಕೋದಲ್ಲಿ ಅಧ್ಯಕ್ಷ ಬೋರಿಸ್ ಯೆಲ್ಟ್ಸಿನ್ ಅವರ ಆಡಳಿತಕ್ಕೆ ಸೇರಿದರು. 31 ಡಿಸೆಂಬರ್ 1999 ರಂದು, ಯೆಲ್ಟ್ಸಿನ್ ಅವರ ಹಠಾತ್ ರಾಜೀನಾಮೆಯಿಂದಾಗಿ ಅವರು ರಷ್ಯಾದ ಅಧ್ಯಕ್ಷರಾದರು. ತರುವಾಯ, ಪುಟಿನ್ 2000 ಮತ್ತು ನಂತರ 2004 ರ ಅಧ್ಯಕ್ಷೀಯ ಚುನಾವಣೆಯಲ್ಲಿ ನಿರಂತರ ಗೆಲುವು ದಾಖಲಿಸಿದ್ದಾರೆ.
ಇದನ್ನು ಓದಿ- ರಷ್ಯಾ ಅಧ್ಯಕ್ಷ ಪುಟಿನ್ ನಡೆ ಬಗ್ಗೆ ಪಾಶ್ಚಿಮಾತ್ಯ ದೇಶಗಳ ಮುನಿಸು
2012ರವರೆಗೆ ಪ್ರಧಾನಿ ಹುದ್ದೆ ಅಲಂಕರಿಸಿದ್ದಾರೆ
ರಷ್ಯಾದ ಸಂವಿಧಾನ ನಿಗದಿಪಡಿಸಿದ ಅಧಿಕಾರಾವಧಿಯ ಮಿತಿಯಿಂದಾಗಿ 2008 ರಲ್ಲಿ ಸತತ ಮೂರನೇ ಬಾರಿಗೆ ಅಧ್ಯಕ್ಷೀಯ ಚುನಾವಣೆಯಲ್ಲಿ ನಿಲ್ಲಲು ಅವರು ಅನರ್ಹರಾಗಿದ್ದರು. 2008 ರಲ್ಲಿ ನಡೆದ ಅಧ್ಯಕ್ಷೀಯ ಚುನಾವಣೆಯಲ್ಲಿ ಡಿಮಿಟ್ರಿ ಮೆಡ್ವೆಡೆವ್ ಗೆದ್ದು, ಪುಟಿನ್ ಅವರನ್ನು ಪ್ರಧಾನ ಮಂತ್ರಿಯಾಗಿ ನೇಮಿಸಿದರು. 2012 ರಲ್ಲಿ, ಪುಟಿನ್ ಅವರು ಅಧ್ಯಕ್ಷ ಸ್ಥಾನಕ್ಕೆ ಮೂರನೇ ಅವಧಿಯ ಹುಡುಕಾಟದಲ್ಲಿ ಚುನಾವಣೆಗೆ ಸ್ಪರ್ಧಿಸುವುದಾಗಿ ಘೋಷಿಸಿದರು, ಇದು ರಷ್ಯಾದ ಹಲವಾರು ನಗರಗಳಲ್ಲಿ ದೊಡ್ಡ ಪ್ರಮಾಣದ ಪ್ರತಿಭಟನೆಗೆ ಕಾರಣವಾಯಿತು. ಅವರು ಮಾರ್ಚ್ 2012 ರಲ್ಲಿ ಈ ಚುನಾವಣೆಯಲ್ಲಿ ಗೆದ್ದರು. ಇದರ ನಂತರ, ಅವರು 2018 ರಲ್ಲಿ ಮತ್ತೆ ರಷ್ಯಾ ಅಧ್ಯಕ್ಷರಾಗಲು ಯಶಸ್ವಿಯಾಗಿದ್ದಾರೆ.
ಇದನ್ನು ಓದಿ- ಸಾಂವಿಧಾನಿಕ ಬದಲಾವಣೆ ಪ್ರಸ್ತಾಪಿಸಿದ ಪುಟೀನ್, ರಷ್ಯಾ ಸರ್ಕಾರ ವಜಾ
ದೇಹವನ್ನು ಅಸಹಾಯಕವನ್ನಾಗಿಸುತ್ತದೆ ಪರ್ಕಿನಸನ್ ಕಾಯಿಲೆ
ಪರ್ಕಿನ್ಸನ್ ಕಾಯಿಲೆಯಲ್ಲಿ, ದೇಹದ ಮೆದುಳಿನ ಸಂಪರ್ಕ ಕೋಶಗಳು ನಿಧಾನವಾಗಿ ಒಡೆಯಲಾರಂಭಿಸುತ್ತವೆ. ಇದರಿಂದಾಗಿ ರೋಗಿ ಮೆದುಳಿನಿಂದ ರವಾನೆಯಾಗುವ ಸಂದೇಶಗಳನ್ನು ಸ್ವೀಕರಿಸಲು ಸಾಧ್ಯವಾಗುವುದಿಲ್ಲ ಮತ್ತು ಅವರು ಅಸಮರ್ಥರಾಗಲು ಪ್ರಾರಂಭಿಸುತ್ತಾರೆ. ಈ ರೋಗವು ಮಾನವನ ದೇಹದಲ್ಲಿ ನಡುಗುವಿಕೆ, ಠೀವಿ, ನಡೆಯಲು ತೊಂದರೆ, ಸಮತೋಲನ ಮತ್ತು ಸಮನ್ವಯದಂತಹ ಸಮಸ್ಯೆಗಳನ್ನು ಉಂಟುಮಾಡುತ್ತದೆ. ಈ ರೋಗವು ಆರಂಭದಲ್ಲಿ ಪಾರ್ಶ್ವವಾಯುವಿನಂತೆ ಕಾಣಿಸಿಕೊಳ್ಳುತ್ತದೆ. ಆದರೆ, ನಂತರ ಗಂಭೀರ ಸ್ವರೂಪ ಪಡೆದುಕೊಳ್ಳುತ್ತದೆ.