Good News: ಭಾರತಕ್ಕೆ ತಲುಪಿದ ರಷ್ಯಾ Corona Vaccine Sputnik-V ಮೊದಲ ಸರದಿ

ಭಾರತದ ದಿಗ್ಗಜ ಔಷಧಿ ಕಂಪನಿ ಡಾ. ರೆಡ್ಡಿಸ್ ಲ್ಯಾಬೋರೇಟರಿಸ್ ಭಾರತದಲ್ಲಿ ಮಾನವ ಪ್ರಯೋಗಗಳಿಗೆ ಅನುಮತಿ ಪಡೆದ ನಂತರ ರಷ್ಯಾದ ಕೊರೊನಾ ಲಸಿಕೆ Sputnik-Vರ ಮೊದಲ ಸರಕು ಭಾರತಕ್ಕೆ ತಲುಪಿದೆ.

Last Updated : Nov 14, 2020, 01:24 PM IST
Good News: ಭಾರತಕ್ಕೆ ತಲುಪಿದ ರಷ್ಯಾ Corona Vaccine Sputnik-V ಮೊದಲ ಸರದಿ title=

ನವದೆಹಲಿ: ಕೊರೊನಾವೈರಸ್ (Coronavirus) ಸೋಂಕನ್ನು ತಡೆಗಟ್ಟಲು ವಿಶ್ವದಾದ್ಯಂತ ದೇಶಗಳು ಲಸಿಕೆಗಾಗಿ ಕಾಯುತ್ತಿವೆ. ಏತನ್ಮಧ್ಯೆ, ಭಾರತಕ್ಕೆ ಲಸಿಕೆ ಕುರಿತು ಒಳ್ಳೆಯ ಸುದ್ದಿ ಪ್ರಕಟವಾಗಿದ್ದು ಮತ್ತು ರಷ್ಯಾ ಅಭಿವೃದ್ಧಿಪಡಿಸಿರುವ Sputnik Vರ ಮೊದಲ ಸರಕು ದೇಶವನ್ನು ತಲುಪಿದೆ ಎಂದು ಹೇಳಲಾಗುತ್ತಿದೆ.ಆಗಸ್ಟ್ 12ರಂದು ರಷ್ಯಾ ತನ್ನ ದೇಶದ Sputnik-V ಲಸಿಕೆಗೆ ಅನುಮೋದನೆ ನೀಡಿತ್ತು ಮತ್ತು ಇದು ವಿಶ್ವದ ಮೊದಲ ಕರೋನಾ ಲಸಿಕೆಯಾಗಿದೆ. ಆದರೂ ಅದರ ಅಂತಿಮ ಹಂತದ ಪ್ರಯೋಗಗಳು ಇನ್ನೂ ಬಾಕಿ ಉಳಿದಿದೆ.

ಹೈದ್ರಾಬಾದ್ ತಲುಪಿದ Sputnik-Vರ ಮೊದಲ ಸರಕು
ಹೆಚ್ಚುತ್ತಿರುವ ಕರೋನಾ ವೈರಸ್ ಸೋಂಕಿನ ಮಧ್ಯೆ ರಷ್ಯಾದ ಲಸಿಕೆ Sputnik-V ಹೈದರಾಬಾದ್ ವಿಮಾನ ನಿಲ್ದಾಣಕ್ಕೆತಲುಪಿರುವ ಫೋಟೋಗಳು ಇದೀಗ ಭಾರಿ ವೈರಲ್ ಆಗುತ್ತಿವೆ. ವೈರಲ್ ವೀಡಿಯೊದಲ್ಲಿ, ಡಾ. ರೆಡ್ಡಿ ಮತ್ತು ಸ್ಪುಟ್ನಿಕ್-ವಿ ಕಂಪನಿಯ ಲೋಗೋ ಇರುವ  ಕಂಟೇನರ್ ಗಳನ್ನು ಸಣ್ಣ ಟ್ರಕ್‌ನಿಂದ ಇಳಿಸುತ್ತಿರುವುದನ್ನು ನೀವು ಕಾಣಬಹುದು.
 

ಶೇ.92 ರಷ್ಟು ಪರಿಣಾಮಕಾರಿಯಾಗಿದೆ ಸ್ಪುಟ್ನಿಕ್-V
ರಷ್ಯಾದ ಸಾಂಕ್ರಾಮಿಕ ರೋಗಶಾಸ್ತ್ರ ಮತ್ತು ಸೂಕ್ಷ್ಮ ಜೀವವಿಜ್ಞಾನದ ರಾಷ್ಟ್ರೀಯ ಸಂಶೋಧನಾ ಕೇಂದ್ರ ಮತ್ತು ರಷ್ಯಾದ ನೇರ ಹೂಡಿಕೆ ನಿಧಿ (ಆರ್‌ಡಿಐಎಫ್) ಬುಧವಾರ ಸ್ಪುಟ್ನಿಕ್-ವಿ ಲಸಿಕೆಯಾ ಕ್ಲಿನಿಕಲ್ ಟ್ರಯಲ್ ನ ಫಲಿತಾಂಶಗಳನ್ನು ಪ್ರಕಟಿಸಿದೆ ಮತ್ತು ಶೇಕಡಾ 92 ರಷ್ಟು ಇದು ಪರಿಣಾಮಕಾರಿ ಎಂದು ಕಂಡುಬಂದಿದೆ ಎಂದು ಘೋಷಿಸಿದೆ.
 

2 ವರ್ಷಗಳ ಕಾಲ ಕೊರೊನಾ ರೋಗದಿಂದ ಇಮ್ಯೂನಿಟಿ ನೀಡುತ್ತದೆ ಸ್ಪುಟ್ನಿಕ್-V
ರಷ್ಯಾದ ನೇರ ಹೂಡಿಕೆ ನಿಧಿ (RDIF) ಪ್ರಕಾರ, ಸ್ಪುಟ್ನಿಕ್-V ಲಸಿಕೆ 2 ವರ್ಷಗಳ ಕಾಲ ಕರೋನಾ ವೈರಸ್‌ಗೆ ಪ್ರತಿರಕ್ಷೆಯನ್ನು ನೀಡುತ್ತದೆ, ಅಂದರೆ ಒಮ್ಮೆ ಲಸಿಕೆ ಹಾಕಿಸಿಕೊಂಡ ಬಳಿಕ, ವ್ಯಕ್ತಿಯು 2 ವರ್ಷಗಳ ಕಾಲ ಕರೋನಾ ವೈರಸ್ ಸೋಂಕಿನಿಂದ ರಕ್ಷಣೆ ಪಡೆಯುತ್ತಾನೆ. ಇನ್ನೊಂದೆಡೆ, ಕರೋನಾ ಲಸಿಕೆ ತಯಾರಿಸಿರುವ ಅಮೆರಿಕನ್ ಕಂಪನಿ ಫೈಸರ್ ಮತ್ತು ಜರ್ಮನ್ ಕಂಪನಿ ಬಯೋಂಟೆಕ್ ಈಗಾಗಲೇ ತಮ್ಮ ಲಸಿಕೆಯು ಕ್ಲಿನಿಕಲ್ ಟ್ರಯಲ್ ನಲ್ಲಿ ಶೇ.90 ರಷ್ಟು ಪರಿಣಾಮಕಾರಿ ಸಾಬೀತಾಗಿದೆ ಎಂದು ಹೇಳಿಕೊಂಡಿವೆ.
 

ಎರಡನೆಯ ಹಾಗೂ ಮೂರನೇ ಹಂತದ ಟ್ರಯಲ್ ಶೀಘ್ರವೇ ಆರಂಭ
ಭಾರತದಲ್ಲಿ ಪ್ರಯೋಗ ಮತ್ತು ವಿತರಣೆಗಾಗಿ ಸ್ಪುಟ್ನಿಕ್-Vಹೈದರಾಬಾದ್‌ನ ಡಾ. ರೆಡ್ಡಿ ಲ್ಯಾಬೊರೇಟರೀಸ್‌ನೊಂದಿಗೆ ಒಪ್ಪಂದ ಮಾಡಿಕೊಂಡಿದೆ. ಡಾ. ರೆಡ್ಡೀಸ್ ಲ್ಯಾಬೊರೇಟರೀಸ್ ಸ್ಪುಟ್ನಿಕ್-V ಮೊದಲ ಸಾಗಣೆ ಭಾರತ ತಲುಪಿದ ನಂತರ ದೇಶದಲ್ಲಿ ಲಸಿಕೆಯ ಎರಡನೇ ಮತ್ತು ಮೂರನೇ ಹಂತದ ಕ್ಲಿನಿಕಲ್ ಪ್ರಯೋಗಗಳನ್ನು ನಡೆಸುವುದಾಗಿ ಕಂಪನಿ ಹೇಳಿದೆ.

ದೇಶದಲ್ಲಿ 30ಕ್ಕೂ ಹೆಚ್ಚು ವ್ಯಾಕ್ಸಿನ್ ಗಳ ಮೇಲೆ ಕಾರ್ಯ ಪ್ರಗತಿಯಲ್ಲಿದೆ
ಈ ಕುರಿತು ಶುಕ್ರವಾರ ಬ್ರಿಕ್ಸ್ ಸಮಾವೇಶದಲ್ಲಿ ಮಾತನಾಡಿರುವ  ಕೇಂದ್ರ ಆರೋಗ್ಯ ಸಚಿವ ಡಾ. ಹರ್ಷವರ್ಧನ್, ಕೊವಿಡ್ 19 ವ್ಯಾಕ್ಸಿನ್ ನ ಅಭಿವೃದ್ಧಿಗಾಗಿ ತಮ್ಮ ಸರ್ಕಾರ 1 ಮಿಲಿಯನ್ ಡಾಲರ್ ಹೂಡಿದೆ ಮಾಡಿದ್ದು, ಪ್ರಸ್ತುತ ದೇಶಾದ್ಯಂತ ಸುಮಾರು 30ಕ್ಕೂ ಅಧಿಕ ವ್ಯಾಕ್ಸಿನ್ ಗಳ ಮೇಲೆ ಕಾರ್ಯ ಪ್ರಗತಿಯಲ್ಲಿದೆ ಎಂದು ಬ್ರಿಕ್ಸ್ ನಾಯಕರಿಗೆ ಮಾಹಿತಿ ನೀಡಿದ್ದಾರೆ.

Trending News