ಕಾಂಗ್ರೆಸ್ ನತ್ತ ಮುಖ ಮಾಡಿದ್ರಾ ರಾಯಣ್ಣ ಬ್ರಿಗೇಡ್ ನ ನಾಯಕರು?

   

Last Updated : Feb 22, 2018, 04:46 PM IST
ಕಾಂಗ್ರೆಸ್ ನತ್ತ ಮುಖ ಮಾಡಿದ್ರಾ ರಾಯಣ್ಣ ಬ್ರಿಗೇಡ್ ನ ನಾಯಕರು? title=

ಬೆಂಗಳೂರು: ಬಿಜೆಪಿ ಪಕ್ಷದಲ್ಲಿ ಸೂಕ್ತ ಸ್ಥಾನ ಸಿಗದ ಹಿನ್ನಲೆಯಲ್ಲಿ ಈಶ್ವರಪ್ಪನ ಬೆಂಬಲಿಗರಾದ ರಾಯಣ್ಣ  ಬ್ರಿಗೇಡ್  ಕಾಂಗ್ರೆಸ್ ಪಕ್ಷವನ್ನು ಸೇರಲು ತುದಿಗಾಲಲ್ಲಿ ನಿಂತಿದ್ದಾರೆ.

ಇಂದು ಕರ್ನಾಟಕದ ಉಸ್ತುವಾರಿ ಕೆ ಮುರಳಿಧರರಾವ್ ನೇತೃತ್ವದಲ್ಲಿ ಅತೃಪ್ತಿಗೊಂಡಿರುವ ರಾಯಣ್ಣ ಬ್ರಿಗೇಡ್ ನ ಸದಸ್ಯರ ಜೊತೆ ಸಭೆಯನ್ನು ಏರ್ಪಡಿಸಲಾಗಿದೆ. ಈಗಾಗಲೇ ಈ ಸಭೆಯಲ್ಲಿ ಭಾಗವಹಿಸಲು ಬಾಗಲಕೋಟೆಯಿಂದ ಬೆಂಗಳೂರಿಗೆ  ಬ್ರಿಗೇಡ್ ರಾಜ್ಯಾದ್ಯಕ್ಷ ವಿರುಪಾಕ್ಷಪ್ಪ, ರಾಜ್ಯ ಪ್ರಧಾನ ಕಾಯ೯ದಶಿ೯ ಕಾಶೀನಾಥ ಹುಡೇದ
ಆಗಮಿಸಿದ್ದಾರೆ.

ಬಿಜೆಪಿಯಲ್ಲಿ ಕೆ ಎಸ್ ಈಶ್ವರಪ್ಪ ನವರನ್ನು ಕಡೆಗಣಿಸುತ್ತಿರುವ ಹಿನ್ನಲೆಯಲ್ಲಿ ಬೇಸತ್ತ ನಾಯಕರು  ಕಾಂಗ್ರೆಸ್ ಪಕ್ಷವನ್ನು  ಸೇರಲು ನಿರ್ಧರಿಸಿದ್ದಾರೆ ಎಂದು ಹೇಳಲಾಗಿದೆ. ಇದಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಕೂಡಾ ಆಸಕ್ತಿ ವಹಿಸಿದ್ದಾರೆ ಎಂದು ತಿಳಿದುಬಂದಿದೆ.

ಈ ಎಲ್ಲ ಬೆಳವಣಿಗೆಗಳನ್ನು ಅರಿತುಕೊಂಡು ಎಚ್ಚೆತ್ತಿರುವ ಬಿಜೆಪಿ ನಾಯಕರು ಈಗ ತುರ್ತು ಸಭೆ ಕರೆದು ಬ್ರಿಗೇಡ್ ನಾಯಕರ ಮನ ಒಲಿಸುತ್ತಿದ್ದಾರೆ ಎಂದು ಹೇಳಲಾಗಿದೆ. ಒಂದು ವೇಳೆ ಇದರಲ್ಲಿ ವಿಫಲವಾದರೆ ರಾಯಣ್ಣ ಬ್ರಿಗೇಡ್ ನ ನಾಯಕರು ಕಾಂಗ್ರೆಸ್ ಸೇರುವುದು ಗ್ಯಾರಂಟಿ ಎನ್ನುವ ಮಾತುಗಳು ದಟ್ಟವಾಗಿ ಕೇಳಿ ಬರುತ್ತಿವೆ.

 

 

Trending News