ನವದೆಹಲಿ: ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಕರೋನಾವೈರಸ್ ಅನ್ನು ನಿಯಂತ್ರಿಸಲು ದೆಹಲಿ ಸರ್ಕಾರ ಬಲವಾದ ನಿರ್ಧಾರವನ್ನು ತೆಗೆದುಕೊಂಡಿದೆ. ದೆಹಲಿಯಲ್ಲಿ ಮಾಸ್ಕ್ ಧರಿಸದಿದ್ದರೆ ಈಗ 2000 ರೂ.ಗಳ ಭಾರೀ ದಂಡವನ್ನು ಪಾವತಿಸಬೇಕಾಗುತ್ತದೆ ಎಂದು ಸಿಎಂ ಅರವಿಂದ ಕೇಜ್ರಿವಾಲ್ ಹೇಳಿದ್ದಾರೆ.
A fine of Rs 2000 will be imposed on anyone who is found not wearing a mask at a public place: Delhi CM Arvind Kejriwal #COVID19 pic.twitter.com/ysp15VsQVK
— ANI (@ANI) November 19, 2020
ನಿಯಂತ್ರಣ ತಪ್ಪಿರುವ ಕರೋನಾದ ಪರಿಸ್ಥಿತಿ ಕುರಿತು ಚರ್ಚಿಸಲು ಇಂದು ಸರ್ವಪಕ್ಷ ಸಭೆ ಕರೆದಿದ್ದ ಸಿಎಂ ಅರವಿಂದ್ ಕೇಜ್ರಿವಾಲ್ (Arvind Kejriwal) ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ ಇಂದಿನ ಸಭೆಯಲ್ಲಿ ಉತ್ತಮ ಚರ್ಚೆ ನಡೆಯಿತು. ಅನೇಕ ಸಲಹೆಗಳನ್ನು ಸ್ವೀಕರಿಸಲಾಯಿತು, ನಾವು ಆ ಸಲಹೆಗಳನ್ನು ಕಾರ್ಯಗತಗೊಳಿಸುತ್ತೇವೆ ಎಂದರು.
Covid-19:ತನ್ನ ವ್ಯಾಕ್ಷಿನ್ ಶೇ.95ರಷ್ಟು ಯಶಸ್ವಿ ಎಂದ Pfizer, ಸುರಕ್ಷತೆಯ ಮಾನದಂಡಗಳ ಮೇಲೂ ಸೈ
ಇದೇ ಸಂದರ್ಭದಲ್ಲಿ ಛಾತ್ ಪೂಜೆ ಕುರಿತಂತೆ ಸ್ಪಷ್ಟನೆ ನೀಡಿದ ಅರವಿಂದ್ ಕೇಜ್ರಿವಾಲ್ ರಾಜ್ಯ ಸರ್ಕಾರದಿಂದ ಛಾತ್ ಪೂಜೆ (Chhathpuja) ಮಾಡುವುದನ್ನು ನಿಷೇಧಿಸಲಾಗಿಲ್ಲ. ಆದರೆ 200 ಜನರು ಛಾತ್ ಪೂಜೆ ಮಾಡಲು ನದಿ ಅಥವಾ ಕೊಳಕ್ಕೆ ಇಳಿದರೆ ಮತ್ತು ಅವರಲ್ಲಿ ಯಾರಿಗಾದರೂ ಕರೋನಾ ಇದ್ದರೆ ಅದು ದೊಡ್ಡ ಪ್ರಮಾಣದಲ್ಲಿ ಹರಡುತ್ತದೆ. ವೈರಸ್ ನೀರಿಗೆ ಹೋಗುತ್ತದೆ ಮತ್ತು ಕರೋನಾ ವೇಗವಾಗಿ ಹರಡುವ ಅಪಾಯ ಹೆಚ್ಚಾಗುತ್ತದೆ ಎಂದು ಆತಂಕ ವ್ಯಕ್ತಪಡಿಸಿದರು.
ಕೊರೊನಾ ವೇಳೆ ಮಕ್ಕಳಿಗಾಗಿ ವಿಡಿಯೋ ಕ್ಲಿಪಿಂಗ್ ಸಿದ್ದಪಡಿಸಿದ ನಿಮಾನ್ಸ್
ಈ ಹಿನ್ನಲೆಯಲ್ಲಿ ಜನರು ಗುಂಪು ಗುಂಪಾಗಿ ಸೇರಿ ಪೂಜೆ ಮಾಡುವುದಕ್ಕಿಂತ ಇಂತಹ ಬಿಕ್ಕಟ್ಟಿನ ಸಂದರ್ಭದಲ್ಲಿ ಎಲ್ಲರೂ ತಮ್ಮ ತಮ್ಮ ಮನೆಗಳಲ್ಲಿ ಛತ್ ಪೂಜೆಯನ್ನು ಆಚರಿಸಬೇಕು ಎಂದು ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಮನವಿ ಮಾಡಿದರು.
You can imagine that #COVID19 will be spread on a large scale. So, celebrations are not banned. What is banned is the entering of a large number of people in a pond or river at once. Let's celebrate at homes: Delhi CM Arvind Kejriwal https://t.co/nAZ7AUuJmF
— ANI (@ANI) November 19, 2020
ಅನೇಕ ರಾಜ್ಯಗಳಲ್ಲಿ ಸರ್ಕಾರಗಳು ಛಾತ್ ಪೂಜೆಯನ್ನು ನದಿ ತೀರದಲ್ಲಿ ಅಥವಾ ಸಾರ್ವಜನಿಕ ಸ್ಥಳಗಳಲ್ಲಿ, ಕೊಳದ ಬಳಿ ಮಾಡಲು ನಿಷೇಧಿಸಿವೆ. ಏಕೆಂದರೆ ಅದರಿಂದ ಕೋವಿಡ್ 19 (Covid 19) ಹರಡುವ ಸಾಧ್ಯತೆ ಹೆಚ್ಚಾಗಿದೆ. ಅದಕ್ಕಾಗಿ ಈ ಬಗ್ಗೆ ರಾಜಕೀಯ ಮಾಡಬಾರದೆಂದು ಕೇಜ್ರಿವಾಲ್ ಇತರ ಪಕ್ಷಗಳನ್ನು ಕೋರಿದರು.