Drugs Case: ಡ್ರಗ್ಸ್ ಪೆಡ್ಲರ್ ಬಂಧಿಸಲು ಹೋದ NCB ತಂಡದ ಮೇಲೆ ದಾಳಿ, 2 ಅಧಿಕಾರಿಗಳಿಗೆ ಗಾಯ

ನಾರ್ಕೋಟಿಕ್ಸ್  ಕಂಟ್ರೋಲ್ ಬ್ಯೂರೊ ತಂಡದ ಮೇಲೆ ಸುಮಾರು 60 ಜನರ ಗುಂಪು  ಹಲ್ಲೆ ನಡೆಸಿದೆ ಎನ್ನಲಾಗಿದೆ.  ಎನ್‌ಸಿಬಿ ವಲಯ ನಿರ್ದೇಶಕ ಸಮೀರ್ ವಾಂಖೆಡೆ ಮತ್ತು ಅವರ ತಂಡ ಡ್ರಗ್ ಪ್ಯಾಡ್ಲರ್‌ನನ್ನು ಹಿಡಿಯಲು ಹೋದಾಗ ಅವರ ಮೇಲೆ ಹಲ್ಲೆ ನಡೆಸಲಾಗಿದೆ.

Last Updated : Nov 23, 2020, 02:23 PM IST
  • ಮುಂಬೈನ ಗೋರೆಗಾಂವ್ ನಲ್ಲಿ NCB ತಂಡದ ಮೇಲೆ ದಾಳಿ.
  • ಡ್ರಗ್ಸ್ ಪೆಡ್ಲರ್ ನನ್ನು ಬಂಧಿಸಲು ಹೋದಾಗ ಸಮೀರ್ ವಾಂಖೆಡೆ ಮತ್ತು ಅವರ ತಂಡದ ಮೇಲೆ ದಾಳಿ.
  • ಡ್ರಗ್ಸ್ ಪೆಡ್ಲರ್ ಸೇರಿದಂತೆ ಒಟ್ಟು ನಾಲ್ವರನ್ನು ಬಂಧಿಸಿದ ಮುಂಬೈ ಪೋಲೀಸ್.
Drugs Case: ಡ್ರಗ್ಸ್ ಪೆಡ್ಲರ್ ಬಂಧಿಸಲು ಹೋದ NCB ತಂಡದ ಮೇಲೆ ದಾಳಿ, 2 ಅಧಿಕಾರಿಗಳಿಗೆ ಗಾಯ title=

ಮುಂಬೈ: ಮಹಾರಾಷ್ಟ್ರದಲ್ಲಿ ಮುಂಬೈನ ಗೋರೆಗಾಂವ್ ಪ್ರದೇಶದಲ್ಲಿ ಡ್ರಗ್ ಪೆಡ್ಲರ್ ಗಳ ಗುಂಪೊಂದು ನಾರ್ಕೋಟಿಕ್ಸ್  ಕಂಟ್ರೋಲ್ ಬ್ಯೂರೋನ (NCB)  ಝೋನಲ್ ಡೈರೆಕ್ಟರ್ ಸಮೀರ್ ವಾಂಖೆಡೆ ಹಾಗೂ ಅವರ ತಂಡ ಸೇರಿದಂತೆ ಒಟ್ಟು ಐವರ ಮೇಲೆ ದಾಳಿ ನಡೆಸಿದ್ದಾರೆ. ಈ ದಾಳಿಯಲ್ಲಿ NCBಯ ಇಬ್ಬರು ಅಧಿಕಾರಿಗಳು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.

ನಾರ್ಕೋಟಿಕ್ಸ್ ಕಂಟ್ರೋಲ್  ಬ್ಯೂರೊ ತಂಡದ ಮೇಲೆ ಸುಮಾರು 60 ಜನರ ಗುಂಪು ಈ  ಹಲ್ಲೆ ನಡೆಸಿದೆ ಎನ್ನಲಾಗಿದೆ.  ಎನ್‌ಸಿಬಿ ವಲಯ ನಿರ್ದೇಶಕ ಸಮೀರ್ ವಾಂಖೆಡೆ ಮತ್ತು ಅವರ ತಂಡ ಡ್ರಗ್ ಪ್ಯಾಡ್ಲರ್‌ನನ್ನು ಹಿಡಿಯಲು ಹೋದಾಗ ಅವರ ಮೇಲೆ ಹಲ್ಲೆ ನಡೆಸಲಾಗಿದೆ.

ಇದನ್ನು ಓದಿ- Drugs Case: ಭಾರತಿ ಹಾಗೂ ಹರ್ಷ್ ಗೆ ಭಾರಿ ಹಿನ್ನಡೆ, 14 ದಿನಗಳ ನ್ಯಾಯಾಂಗ ವಶಕ್ಕೆ

ಎನ್‌ಸಿಬಿ ತಂಡ ಹಿಡಿಯಲು ಹೋದ ಡ್ರಗ್ ಪ್ಯಾಡ್‌ಲರ್‌ನನ್ನು ಕ್ಯಾರಿ ಮಾಂಡಿಸ್ ಎಂದು ಗುರುತಿಸಲಾಗಿದೆ.  ಆದರೆ, ಪ್ರಸ್ತುತ ಮುಂಬೈ ಪೊಲೀಸರ ಸಹಾಯದಿಂದ ಸ್ಥಿತಿಯನ್ನು ನಿಯಂತ್ರಣಕ್ಕೆ ತರಲಾಗಿದೆ. ಕ್ಯಾರಿ ಮಾಂಡಿಸ್‌ ನನ್ನು ಆತನ  3 ಸಹಚರರೊಂದಿಗೆ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಐಪಿಸಿಯ ಸೆಕ್ಷನ್ 353 ರ ಅಡಿಯಲ್ಲಿ ಈ ನಾಲ್ವರ ವಿರುದ್ಧ ಪ್ರಕರಣ ದಾಖಲಾಗಿದೆ.

ದಿವಂಗತ ಬಾಲಿವುಡ್ ನಟ ಸುಶಾಂತ್ ಸಿಂಗ್ ರಾಜ್ಪುತ್ ಸಾವು ಪ್ರಕರಣದಲ್ಲಿ ಆರಂಭಗೊಂಡ ತನಿಖೆಯಲ್ಲಿ ಡ್ರಗ್ಸ್ ಆಂಗಲ್ (Drugs Case) ಬೆಳಕಿಗೆ ಬಂದ ಬಳಿಕ NCB ಅಧಿಕಾರಿಗಳು ಬಾಲಿವುಡ್ ಖ್ಯಾತನಾಮರ ಮನೆಗಳ ಮೇಲೆ ದಾಳಿ ನಡೆಸುತ್ತಿದ್ದಾರೆ. ಪ್ರಕರಣದಲ್ಲಿ ಹಲವು ಖ್ಯಾತನಾಮಾರ ವಿಚಾರಣೆ ನಡೆದಿದೆ. ಇದೀಗ ತನಿಖೆಯ ಕೊಂಡಿಗಳು ಒಂದಕ್ಕೊಂದು ಸೇರಿ ಭಾರತಿ ಸಿಂಗ್ ಹಾಗೂ ಅವರ ಪತಿ ಹರ್ಷ್ ಲಿಂಬಾಚಿಯಾ ಅವರನ್ನು ಬಂದು ತಲುಪಿದೆ.

ಇದನ್ನು ಓದಿ-Drugs Case: ಕಾಮಿಡಿಯನ್ Bharti Singh ಪತಿ Harsh Limbachiyaaನನ್ನು ಬಂಧಿಸಿದ NCB

ಕಳೆದ ಒಂದು ತಿಂಗಳಿನಲ್ಲಿ NCB 4-5 ದೊಡ್ಡ ಡ್ರಗ್ಸ್ ಪೆಡ್ಲರ್ ಗಳ ಮೇಲೆ ತಮ್ಮ ಪಟ್ಟು ಬಿಗಿಗೊಳಿಸಿದ್ದು, ಇವರೆಲ್ಲರೂ ಮುಂಬೈನ ಅಂಧೇರಿ ಹಾಗೂ ಬಾಂದ್ರಾ ನಡುವೆ ಬಂಧಿಸಲಾಗಿದೆ. ಅವರ ವಿಚಾರಣೆಯ ವೇಳೆ ಹೊರಬಂದ ಮಾಹಿತಿಯ ಆದಾರದ ಮೇಲೆ ಇದಕ್ಕೂ ಮೊದಲು ಖ್ಯಾತ ನಟ ಅರ್ಜುನ್ ರಾಮ್ ಪಾಲ್ ಅವರನ್ನು ಕೂಡ ವಿಚಾರಣೆ ನಡೆಸಲಾಗಿದೆ.

Trending News