ನವದೆಹಲಿ: ಸಿ -130 ಜೆ ಸೂಪರ್ ಹರ್ಕ್ಯುಲಸ್ ಮಿಲಿಟರಿ ಸಾರಿಗೆ ವಿಮಾನಗಳ ಜೊತೆಗೆ ಭಾರತಕ್ಕೆ 90 ಮಿಲಿಯನ್ ಡಾಲರ್ ಮೌಲ್ಯದ ಮಿಲಿಟರಿ ಯಂತ್ರಾಂಶ ಮತ್ತು ಸೇವೆಗಳನ್ನು ಮಾರಾಟ ಮಾಡಲು ಅಮೆರಿಕಾ ಅನುಮೋದನೆ ನೀಡಿದೆ.
ಈ ಪ್ರಸ್ತಾವಿತ ಮಾರಾಟವು ಯುಎಸ್-ಭಾರತೀಯ ಕಾರ್ಯತಂತ್ರದ ಸಂಬಂಧವನ್ನು ಬಲಪಡಿಸಲು ಮತ್ತು ಪ್ರಮುಖ ರಕ್ಷಣಾ ಪಾಲುದಾರರ ಸುರಕ್ಷತೆಯನ್ನು ಸುಧಾರಿಸಲು ಸಹಾಯ ಮಾಡುವ ಮೂಲಕ ಯುನೈಟೆಡ್ ಸ್ಟೇಟ್ಸ್ ನ ವಿದೇಶಾಂಗ ನೀತಿ ಮತ್ತು ರಾಷ್ಟ್ರೀಯ ಭದ್ರತೆಯನ್ನು ಬೆಂಬಲಿಸುತ್ತದೆ ಎಂದು ರಕ್ಷಣಾ ಇಲಾಖೆಯ ರಕ್ಷಣಾ ಭದ್ರತಾ ಸಹಕಾರ ಸಂಸ್ಥೆ (ಡಿಎಸ್ಸಿಎ) ತಿಳಿಸಿದೆ.
ಇಂಡೋ-ಪೆಸಿಫಿಕ್ ಮತ್ತು ದಕ್ಷಿಣ ಏಷ್ಯಾ ಪ್ರದೇಶದಲ್ಲಿ ರಾಜಕೀಯ ಸ್ಥಿರತೆ, ಶಾಂತಿ ಮತ್ತು ಆರ್ಥಿಕ ಪ್ರಗತಿಗೆ ಭಾರತವು ಒಂದು ಪ್ರಮುಖ ಶಕ್ತಿಯಾಗಿ ಮುಂದುವರೆದಿದೆ ಎಂದು ಕಾಂಗ್ರೆಸ್ಗೆ ನೀಡಿದ ಪ್ರಮುಖ ಮಾರಾಟ ಅಧಿಸೂಚನೆಯಲ್ಲಿ ಡಿಎಸ್ಸಿಎ ತಿಳಿಸಿದೆ.ಭಾರತ ಮಾಡಿದ ವಿನಂತಿಗಳಲ್ಲಿ ವಿಮಾನ ಬಳಕೆಯ ವಸ್ತುಗಳು ಮತ್ತು ದುರಸ್ತಿ / ರಿಟರ್ನ್ ಭಾಗಗಳು ಇದರಲ್ಲಿ ಸೇರಿವೆ ಎನ್ನಲಾಗಿದೆ. ಇವುಗಳ ಅಂದಾಜು ಒಟ್ಟು ಮೊತ್ತ 90 ಮಿಲಿಯನ್ ಯುಎಸ್ ಡಾಲರ್ ಎನ್ನಲಾಗಿದೆ.
ಪ್ರಸ್ತಾವಿತ ಮಾರಾಟವು ಈ ಹಿಂದೆ ಸಂಗ್ರಹಿಸಿದ ವಿಮಾನವು ಭಾರತೀಯ ವಾಯುಪಡೆ (ಐಎಎಫ್), ಸೇನೆ ಮತ್ತು ನೌಕಾಪಡೆಯ ಸಾರಿಗೆ ಅಗತ್ಯತೆಗಳು, ಸ್ಥಳೀಯ ಮತ್ತು ಅಂತರರಾಷ್ಟ್ರೀಯ ಮಾನವೀಯ ನೆರವು ಮತ್ತು ಪ್ರಾದೇಶಿಕ ವಿಪತ್ತು ಪರಿಹಾರದ ಅಗತ್ಯಗಳನ್ನು ಪೂರೈಸಲು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತದೆ ಎನ್ನುವುದನ್ನು ಖಚಿತಪಡಿಸುತ್ತದೆ ಎಂದು ಪೆಂಟಗನ್ ಹೇಳಿದೆ.
2016 ರಲ್ಲಿ ರಕ್ಷಣಾ ವ್ಯಾಪಾರ ಮತ್ತು ತಂತ್ರಜ್ಞಾನ ಹಂಚಿಕೆಯನ್ನು ತನ್ನ ಹತ್ತಿರದ ಮಿತ್ರರಾಷ್ಟ್ರಗಳು ಮತ್ತು ಪಾಲುದಾರರ ಮಟ್ಟಕ್ಕೆ ಏರಿಸುವ ಉದ್ದೇಶದಿಂದ ಯುಎಸ್ ಭಾರತವನ್ನು ಪ್ರಮುಖ ರಕ್ಷಣಾ ಪಾಲುದಾರ ಎಂದು ನೇಮಿಸಿತ್ತು.