Amazon Apple Days Sale: ಈ iPhone-ಟಿವಿಗಳ ಮೇಲೆ ಭಾರೀ ಡಿಸ್ಕೌಂಟ್

ಅಮೆಜಾನ್‌ನಲ್ಲಿ ಮತ್ತೊಂದು ಗ್ರೇಟ್ ಸೇಲ್ ಆರಂಭವಾಗಿದ್ದು ಕಂಪನಿಯು ಆಪಲ್ ಡೇಸ್ ಮಾರಾಟವನ್ನು ಘೋಷಿಸಿದೆ. ಇದರ ಅಡಿಯಲ್ಲಿ ಅನೇಕ ಆಕರ್ಷಕ ರಿಯಾಯಿತಿಗಳನ್ನು ನೀಡಲಾಗುತ್ತಿದೆ.

Last Updated : Dec 12, 2020, 02:20 PM IST
  • ಐಫೋನ್ 11 ಸರಣಿ, ಐಫೋನ್ 7 ಸೇರಿದಂತೆ ಹಲವು ಉತ್ಪನ್ನಗಳ ಬೆಲೆ ಭಾರೀ ರಿಯಾಯಿತಿ
  • ಅಮೆಜಾನ್‌ನಲ್ಲಿ ಶಾಪಿಂಗ್ ಮಾಡುವುದರ ಜೊತೆಗೆ ತೆರಿಗೆ ಪ್ರಯೋಜನಗಳ ಲಾಭ
  • ಫ್ರಿಜ್-ಟಿವಿಯಲ್ಲಿ ಭಾರೀ ರಿಯಾಯಿತಿ
Amazon Apple Days Sale: ಈ iPhone-ಟಿವಿಗಳ ಮೇಲೆ ಭಾರೀ ಡಿಸ್ಕೌಂಟ್ title=
File Image

ಬೆಂಗಳೂರು: ಅಮೆಜಾನ್‌ನಲ್ಲಿ ಮತ್ತೊಂದು ಗ್ರೇಟ್ ಸೇಲ್ ಆರಂಭವಾಗಿದ್ದು ಕಂಪನಿಯು ಆಪಲ್ ಡೇಸ್ ಮಾರಾಟವನ್ನು ಘೋಷಿಸಿದೆ. ಇದರ ಅಡಿಯಲ್ಲಿ ಅನೇಕ ಆಕರ್ಷಕ ಕೊಡುಗೆಗಳನ್ನು ತರಲಾಗಿದೆ. ಅಲ್ಲದೆ ಐಫೋನ್ 11 ಸರಣಿ, ಐಫೋನ್ 7 ಸೇರಿದಂತೆ ಹಲವು ಉತ್ಪನ್ನಗಳ ಬೆಲೆ ಭಾರೀ ರಿಯಾಯಿತಿ ನೀಡಲಾಗುತ್ತಿದೆ. ಕಂಪನಿಯ ಪ್ರಕಾರ ಈ ಕೊಡುಗೆ ಡಿಸೆಂಬರ್ 16 ರವರೆಗೆ ಲಭ್ಯವಿರುತ್ತದೆ. ಇದರಲ್ಲಿ ಭಾಗವಹಿಸುವ ಎಲ್ಲಾ ಬ್ರಾಂಡ್‌ಗಳು ಮತ್ತು ಮಾರಾಟಗಾರರಿಂದ ಅದ್ಭುತ ಕೊಡುಗೆಗಳನ್ನು ನೀಡಲಾಗುವುದು.

ಆಪಲ್ ಡೇಸ್ ಸೇಲ್‌ನಲ್ಲಿ ಗ್ರಾಹಕರು ಐಫೋನ್ 11 (iPhone 11) ಅನ್ನು 51,999 ರೂ.ಗಳಿಗೆ 2,900 ರೂ.ಗಳ ರಿಯಾಯಿತಿಯೊಂದಿಗೆ ಖರೀದಿಸಲು ಸಾಧ್ಯವಾಗುತ್ತದೆ. ಇದಲ್ಲದೆ ಗ್ರಾಹಕರು ಯೆಸ್ ಬ್ಯಾಂಕ್ ಕ್ರೆಡಿಟ್ ಕಾರ್ಡ್ EMI ವಹಿವಾಟಿನಲ್ಲಿ 1,750 ರೂ.ಗಳ ಹೆಚ್ಚುವರಿ ರಿಯಾಯಿತಿ ಪಡೆಯಬಹುದು.

iPhone 7 Price: 
ಈ ಸಮಯದಲ್ಲಿ ಐಫೋನ್ 7 ಅನ್ನು ಇದುವರೆಗಿನ ಅತ್ಯಂತ ಕಡಿಮೆ ಬೆಲೆಗೆ ಅಂದರೆ 23,999 ರೂ.ಗಳಿಗೆ ಖರೀದಿಸಬಹುದು. ಐಪ್ಯಾಡ್ ಮಿನಿ ಸಹ 5,000 ವರೆಗಿನ ರಿಯಾಯಿತಿಯನ್ನು ಹೊಂದಿರುತ್ತದೆ ಮತ್ತು ನೀವು ಎಚ್‌ಡಿಎಫ್‌ಸಿ ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್‌ಗಳಲ್ಲಿ ಶಾಪಿಂಗ್ ಮಾಡಿದರೆ  3,000 ರೂ.ಗಳ ಹೆಚ್ಚುವರಿ ರಿಯಾಯಿತಿಯ ಲಾಭವನ್ನು ಪಡೆಯಲು ಸಾಧ್ಯವಾಗುತ್ತದೆ. ಎಚ್‌ಡಿಎಫ್‌ಸಿ ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್ (Credit Card) ಬಳಸಿ ಆಪಲ್ ಮ್ಯಾಕ್‌ಬುಕ್ ಪ್ರೊನಲ್ಲಿ ನೀವು 6,000 ರೂ.ಗಳ ತ್ವರಿತ ರಿಯಾಯಿತಿಯನ್ನು ಸಹ ಪಡೆಯಬಹುದು.

ನಿಮ್ಮ ಫೋನ್‌ನಲ್ಲಿ ಕೂಡ ಗ್ರೀನ್ ಬ್ಲಿಂಕರ್ ಕಾಣಿಸುತ್ತಿದೆಯೇ? ಇದರ ಹಿಂದಿನ ರಹಸ್ಯವೇನು?

LTC Cash Voucher Scheme:
ಇದರೊಂದಿಗೆ ಅಮೆಜಾನ್‌ನಲ್ಲಿ (Amazon) ಶಾಪಿಂಗ್ ಮಾಡುವುದರ ಜೊತೆಗೆ ತೆರಿಗೆ ಪ್ರಯೋಜನಗಳ ಲಾಭವನ್ನೂ ನೀವು ಪಡೆಯಬಹುದು. ವಾಸ್ತವವಾಗಿ ಕೇಂದ್ರ ಸರ್ಕಾರಿ ನೌಕರರಿಗೆ ಕರೋನಾ ಯುಗದಲ್ಲಿ ಎಲ್‌ಟಿಸಿ ನಗದು ವೋಚರ್ ಯೋಜನೆಯನ್ನು ಘೋಷಿಸಲಾಗಿದೆ. 31 ಮಾರ್ಚ್ 2021 ರ ವೇಳೆಗೆ 12% ಅಥವಾ ಅದಕ್ಕಿಂತ ಹೆಚ್ಚಿನ ಜಿಎಸ್‌ಟಿಯೊಂದಿಗೆ ಸರಕು ಅಥವಾ ಸೇವೆಗಳನ್ನು ಖರೀದಿಸುವ ಮೂಲಕ ಈ ಯೋಜನೆಯ ಲಾಭವನ್ನು ಪಡೆಯಬಹುದು.

ಗ್ರಾಹಕ ಉಪಕರಣಗಳ ಮೇಲೆ ರಿಯಾಯಿತಿ:
ಇದನ್ನು ಗಮನದಲ್ಲಿಟ್ಟುಕೊಂಡು ಅಮೆಜಾನ್ ವಿಶೇಷ ಕಾರ್ಯಕ್ರಮವನ್ನು ಪ್ರಾರಂಭಿಸಿದೆ. ಇದರ ಅಡಿಯಲ್ಲಿ ಗ್ರಾಹಕರು ಗ್ರಾಹಕ ವಸ್ತುಗಳು, ಗ್ರಾಹಕ ಎಲೆಕ್ಟ್ರಾನಿಕ್ಸ್, ಟಿವಿ, ಪೀಠೋಪಕರಣಗಳು ಅಥವಾ ಇತರ ವಸ್ತುಗಳನ್ನು ಖರೀದಿಸುವ ಮೂಲಕ ತೆರಿಗೆ ಪ್ರಯೋಜನಗಳನ್ನು ಪಡೆಯಬಹುದಾಗಿದೆ.

ಫೋನ್ ಕಳುವಾದರೂ ಕಳೆದುಹೋಗಲ್ಲ ಡೇಟಾ, ಸ್ಮಾರ್ಟ್‌ಫೋನ್‌ನ ಬ್ಯಾಕಪ್ ಬಗ್ಗೆ ಇಲ್ಲಿದೆ ಮಾಹಿತಿ

ಫ್ರಿಜ್-ಟಿವಿಯಲ್ಲಿ ಭಾರೀ ರಿಯಾಯಿತಿಗಳು (Big Discounts on Fridge-TV)
ಫ್ರಿಡ್ಜ್‌ಗಳಂತಹ ದೊಡ್ಡ ವಸ್ತುಗಳನ್ನು ಖರೀದಿಸಲು 50 ಪ್ರತಿಶತ ರಿಯಾಯಿತಿ ಇದೆ. Electrolux, Toshiba ಮತ್ತು ಫಾಕ್ಸ್‌ಸ್ಕಿಯ (Foxsky) ಹೊಸದಾಗಿ ಪ್ರಾರಂಭಿಸಲಾದ ವಾಷಿಂಗ್ ಮಿಷನ್ ಬೆಲೆ 7,499 ರೂ.ಗಳಿಂದ ಪ್ರಾರಂಭವಾಗುತ್ತಿದೆ. ಎಲ್ಜಿ, ಸ್ಯಾಮ್‌ಸಂಗ್ ಮತ್ತು ಗೋದ್ರೇಜ್ ಫ್ರಿಡ್ಜ್‌ಗಳಲ್ಲಿ 30 ಪ್ರತಿಶತದವರೆಗೆ ರಿಯಾಯಿತಿ ಲಭ್ಯವಿದೆ. ಟಿವಿಯಲ್ಲಿ ಕೂಡ ಭಾರೀ ರಿಯಾಯಿತಿಗಳು ಲಭ್ಯವಿದೆ. ಪ್ರೀಮಿಯಂ ಟಿವಿ 25% ಕ್ಕಿಂತ ಹೆಚ್ಚು ಮತ್ತು 4 ಕೆ ಟಿವಿಗಳ ಮೇಲೆ 35% ರಿಯಾಯಿತಿ ಸಿಗುತ್ತಿದೆ.
 

Trending News