ನವದೆಹಲಿ: ನಾಗಲ್ಯಾಂಡ್ ಮತ್ತು ಮೇಘಾಲಯ ರಾಜ್ಯಗಳಿಗೆ ನಡೆದ ವಿಧಾನಸಭೆ ಚುನಾವಣೆಯಲ್ಲಿ ಕ್ರಮವಾಗಿ ಶೇ .75 ರಷ್ಟು 65 ರಷ್ಟು ಮತದಾನ ನಡೆದಿದೆ.
ಇನ್ನು ಮತದಾನ ನಡೆಯುತ್ತಿರುವುದರಿಂದ ಸಂಖ್ಯೆಯಲ್ಲಿ ಹೆಚ್ಚಳವಾಗುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ. ನಾಗಾಲ್ಯಾಂಡ್ ಮತ್ತು ಮೇಘಾಲಯದ ರಾಜ್ಯಗಳಲ್ಲಿ ಜನರು ವಿಧಾನಸಭೆಯ 60 ಸ್ಥಾನಗಳಲ್ಲಿ 59 ಸ್ಥಾನಗಳಿಗೆ ತಮ್ಮ ಪ್ರತಿನಿಧಿಗಳನ್ನು ಆಯ್ಕೆ ಮಾಡಲು ಮತ ಚಲಾಯಿಸಿದ್ದಾರೆ.
ಕಳೆದ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ 89 ಶೇ, ಮತದಾನ ಮೇಘಾಲಯದಲ್ಲಿ ದಾಖಲಾಗಿದ್ದರೆ, ನಾಗಲ್ಯಾಂಡ್ ನಲ್ಲಿ ಮತದಾನ ಶೇಕಡಾ 90 ರಷ್ಟು ದಾಖಲಾಗಿತ್ತು ಎಂದು ಹೇಳಲಾಗಿದೆ.
ಈ ಎರಡು ರಾಜ್ಯಗಳ ಮತ ಎಣಿಕೆ ಪ್ರಕ್ರಿಯೆಯು ಮಾರ್ಚ್ 3 ರಂದು ನಡೆಯಲಿದೆ ಎಂದು ತಿಳಿದುಬಂದಿದೆ.