Baba Ka Daba: ಬಾಬಾ ಕಾ ಡಾಬಾ ಖ್ಯಾತಿಯ ಕಾಂತ ಪ್ರಸಾದ್ ಈಗ 'ಸ್ವಂತ ರೆಸ್ಟೋರೆಂಟ್ ಮಾಲೀಕ'..!

ಹಳೆ ರೇಟಿನಲ್ಲೇ ಊಟ ತಿಂಡಿ ಲಭ್ಯ

Last Updated : Dec 21, 2020, 08:53 PM IST
  • ನೂತನ ರೆಸ್ಟೊರೆಂಟ್ ತೆರೆದ ಬಾಬಾ ಕಾ ಡಾಬಾ ಕಾಂತಪ್ರಸಾದ್
  • ಹಳೆ ಡಾಬಾದ ಬಳಿಯೇ ಹೊಸ ರೆಸ್ಟೊರೆಂಟ್
  • ಹಳೆ ರೇಟಿನಲ್ಲೇ ಊಟ ತಿಂಡಿ ಲಭ್ಯ
Baba Ka Daba: ಬಾಬಾ ಕಾ ಡಾಬಾ ಖ್ಯಾತಿಯ ಕಾಂತ ಪ್ರಸಾದ್ ಈಗ 'ಸ್ವಂತ ರೆಸ್ಟೋರೆಂಟ್ ಮಾಲೀಕ'..! title=

ದೆಹಲಿ: ಬಾಬಾ ಕಾ ಡಾಬಾ ಖ್ಯಾತಿಯ ತಾತ ಕಾಂತ ಪ್ರಸಾದ್ ಇದೀಗ ಸ್ವಂತ ರೆಸ್ಟೋರೆಂಟ್ ಮಾಲಿಕ. ಹೊಸ ಸೋಷಿಯಲ್ ಮೀಡಿಯಾದಇತ್ತೀಚಿನ ಸೆನ್ಸೇಶನ್ ಕಾಂತಾ ಪ್ರಸಾದ್ ತನ್ನ ಹಳೇ ಡಾಬಾದ ಪಕ್ಕದಲ್ಲಿ ನೂತನ ರೆಸ್ಟೊರೆಂಟನ್ನು ತೆರೆದಿದ್ದಾರೆ. 

ತನ್ನಹೊಸ ರೆಸ್ಟೊರೆಂಟ್ ನಲ್ಲಿ ಸಿಸಿ ಕ್ಯಾಮರಾಗಳನ್ನು ಅಳವಡಿಸಿದ್ದಾರೆ. ಇತ್ತೀಚೆಗೆ ತಮಗೆ ಪ್ರಾಣಭಯ ಇದೆ ಎಂದು ಹೇಳಿಕೊಳ್ಳುತ್ತಿರುವ ಕಾಂತಾಪ್ರಸಾದ್ ತನ್ನ ರೆಸ್ಟೊರೆಂಟ್(Restaurants) ನಲ್ಲಿ ಸಿಸಿ ಕ್ಯಾಮರಾ ಅಳವಡಿಸಿದ್ದಾರೆ. 
ಹೊಸ ರೆಸ್ಟೊರೆಂಟಲ್ಲಿ ತನಗಾಗಿ ಪ್ರತ್ಯೇಕ ಕ್ಯಾಬಿನ್ ಹೊಂದಿರುವ ಕಾಂತಪ್ರಸಾದ್ ರೆಸ್ಟೊರೆಂಟ್ ವ್ಯವಹಾರವನ್ನು ತಾನೇ ನೋಡಿಕೊಳ್ಳುತ್ತಿದ್ದಾರೆ. 

ಅನ್ನದಾತರಿಗೊಂದು ‘ಸಿಹಿ ಸುದ್ದಿ’: ರೈತರಿಗೆ ₹ 2 ಲಕ್ಷ ಕೋಟಿ ಸಾಲ..!
ಸುಸಜ್ಜಿತ ಅಡುಗೆ ಕೋಣೆಯನ್ನು ಹೊಂದಿರುವ ರೆಸ್ಟೊರೆಂಟಲ್ಲಿ ಬಾಬಾ ಅಡುಗೆ ಜವಾಬ್ದಾರಿಯನ್ನು ತಾನೇ ವಹಿಸಿಕೊಂಡಿದ್ದಾರೆ.ಆದರೆ ತನಗೆ ಸಹಾಯಕರಗಿ ಕೆಲವರನ್ನು ಇರಿಸಿಕೊಂಡಿದ್ದಾರೆ. 
ಡಾಬಾಕ್ಕೆ ಈಗಾಗಲೇ ಭಾರೀ ಸಂಖ್ಯೆಯಲ್ಲಿ ಗ್ರಾಹಕರು ಬರುತ್ತಿದ್ದಾರೆ. ಕಾಂತಪ್ರಸಾದ್ ಹೊಸ ರೆಸ್ಟೊರೆಂಟ್ ತೆರೆದಿದ್ದರೂ ಊಟತಿಮಡಿಯ ಹಣ ಮಾತ್ರ ರಿಕೆ ಮಾಡಿಲ್ಲ. ಈಗಲೂ ಹಳೆ ದರದಲ್ಲೇ ಊಟ ತಿಂಡಿ ಸಿಗುತ್ತಿದೆ. 

ರಾಜ್ಯ ಬಿಜೆಪಿ ನಾಯಕರಿಗೆ ‘ಖಡಕ್ ಸೂಚನೆ’ ನೀಡಿದ ಸಿಎಂ ಬಿಎಸ್‌ವೈ..

Trending News