ನಂಜನಗೂಡು: COVID-19 ಎಲ್ಲಾ ಕ್ಷೇತ್ರಗಳ ಕಂಗೆಣ್ಣು ಬೀರಿದೆ. ಎಲ್ಲರಿಗೂ ಒಂದಲ್ಲ ಒಂದು ರೀತಿಯಲ್ಲಿ ಆರ್ಥಿಕ ಹೊಡೆತಬಿದ್ದಿದೆ. ಆದರೆ ದೇವಸ್ಥಾನಗಳಿಗೆ ಬರುತ್ತಿರುವ ಹುಂಡಿ ಹಣದಲ್ಲಿ ಮಾತ್ರ ಕಡಿಮೆಯಾಗಿಲ್ಲ. ಇದಕ್ಕೆ ಉದಾಹರಣೆ ದಕ್ಷಿಣ ಕಾಶಿ (Dakshina Kashi) ಎಂದೇ ಪ್ರಖ್ಯಾತಿಯಾಗಿರುವ ನಂಜನಗೂಡು ಶ್ರೀಕಂಠೇಶ್ವರ ದೇವಾಲಯ.
ನಂಜನಗೂಡು ಶ್ರೀಕಂಠೇಶ್ವರ ದೇವಾಲಯಕ್ಕೆ (Srikanteshwara Temple) ಕಳೆದ ಒಂದೂವರೆ ತಿಂಗಳಿನಲ್ಲಿ ಬಂದಿರುವ ಹಣ ಹಾಗೂ ಚಿನ್ನ ಬೆಳ್ಳಿಗಳ ಎಣಿಕೆ ಕಾರ್ಯ ನಡೆಸಲಾಗಿದೆ. ದೇವಸ್ಥಾನದ 31 ಹರಕೆ ಹುಂಡಿಗಳಲ್ಲಿನ ಹಣ ಎಣಿಕೆ ಕಾರ್ಯ ಗುರುವಾರ ತಡರಾತ್ರಿಯವರೆಗೆ ನಡೆದಿದ್ದು ಹಿಂದಿನ ಎಲ್ಲಾ ದಾಖಲೆಗಳನ್ನು ಮುರಿದು ಕಳೆದ ಒಂದೂವರೆ ತಿಂಗಳಿನಲ್ಲಿ ದಾಖಲೆಯ 1.98 ಕೋಟಿ ರೂಪಾಯಿ ಕಾಣಿಕೆ ಹರಿದುಬಂದಿದೆ ಎಂದು ತಿಳಿದುಬಂದಿದೆ.
ಒಟ್ಟು 31 ಹರಕೆ ಹುಂಡಿಗಳಿಂದ 1.98 ಕೋಟಿ ರೂಪಾಯಿ ನಗದು, 77 ಗ್ರಾಂ ಚಿನ್ನ, 5.7 ಕೆ.ಜಿ. ಬೆಳ್ಳಿ ಹಾಗೂ ಬೇರೆ ಬೇರೆ ದೇಶಗಳ 16 ನೋಟುಗಳು ಲಭ್ಯವಾಗಿವೆ. ಇದು ಈವರೆಗೆ ದೇವಸ್ಥಾನದ ಇತಿಹಾಸದಲ್ಲಿ ಸಂಗ್ರಹವಾದ ಹಣ ಮತ್ತು ಕಾಣಿಕೆಯಲ್ಲಿಯೇ ಅತಿ ಹೆಚ್ಚು ಎಂದು ದೇವಸ್ಥಾನದ ಮೂಲಗಳಿಂದ ಗೊತ್ತಾಗಿದೆ.
ಇದನ್ನೂ ಓದಿ: Vaikuantha Ekadashi: ಪ್ರಸಿದ್ಧ ದೇವಾಲಯಗಳಲ್ಲಿ ಪ್ರವೇಶ ನಿಷಿದ್ಧ, ಆನ್ಲೈನ್ನಲ್ಲೇ ಕಣ್ತುಂಬಿಕೊಳ್ಳಲು ಅವಕಾಶ
COVID-19 ಕಾರಣದಿಂದಾಗಿ ಎಲ್ಲಾ ಕಡೆಯಂತೆ ನಂಜನಗೂಡಿನ ಶ್ರೀಕಂಠೇಶ್ವರ ದೇವಾಲಯವನ್ನೂ ಮುಚ್ಚಿ ಭಕ್ತರಿಗೆ ದೇವರ ದರ್ಶನ ಅವಕಾಶ ನಿರಾಕರಿಸಲಾಗಿತ್ತು. ಕೇಂದ್ರ ಸರ್ಕಾರ ದೇವಾಲಯಗಳಲ್ಲಿ ದರ್ಶನಕ್ಕೆ ಅವಕಾಶ ಮಾಡಿಕೊಡುವ ಸಂಬಂಧಿಸಿದಂತೆ ಮಾರ್ಗಸೂಚಿ ಬಿಡುಗಡೆ ಮಾಡಿದ ಮೇಲೆ 'ಕೋವಿಡ್–19 (COVID-19) ನಿರ್ಬಂಧಗಳನ್ನು ಸಡಿಲಗೊಳಿಸಲಾಗಿತ್ತು. ಮತ್ತೆ ನಂಜನಗೂಡಿನ ನಂಜುಂಡೇಶ್ವರನ ದರ್ಶನಕ್ಕೆ ಅವಕಾಶ ಕಲ್ಪಿಸಿಕೊಡಲಾಗಿತ್ತು. ಇದರಿಂದ ಕಾರ್ತಿಕ ಮಾಸದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ದೇವಾಲಯಕ್ಕೆ ಬಂದಿದ್ದರು. ಇದರಿಂದಾಗಿ ನಂಜನಗೂಡು (Nanjangudu) ಶ್ರೀಕಂಠೇಶ್ವರ ದೇವಾಲಯದ ಹುಂಡಿಗಳಿಗೆ ಹರಿದು ಬಂದ ಹಣದ ಪ್ರಮಾಣ ಹೆಚ್ಚಾಗಿ ಎಂದು ದೇವಾಲಯದ ಎ.ಇ.ಓ ವೆಂಕಟೇಶ್ ಪ್ರಸಾದ್ ಮಾಧ್ಯಮಗಳಿಗೆ ಹುಂಡಿ ಹಣ ಹೆಚ್ಚಾದ ಬಗ್ಗೆ ಕಾರಣ ತಿಳಿಸಿದ್ದಾರೆ.
ಇದನ್ನೂ ಓದಿ: Daily Horoscope: ದಿನಭವಿಷ್ಯ 26-12-2020 Today astrology
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಆಪ್ ಡೌನ್ ಲೋಡ್ ಮಾಡಿ
Android Link - https://bit.ly/3hDyh4G
iOS Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಕ್ಕೆ ಸಬ್ ಸ್ಕ್ರೈಬ್ ಮಾಡಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.