ಬ್ರುಸೆಲ್ಸ್: Super Spreader Santa Claus: ಬೆಲ್ಜಿಯಂನ ಆರೈಕೆ ಮನೆಯೊಂದರಲ್ಲಿ ವಾಸಿಸುವ ವೃದ್ಧರಿಗೆ ಸಾಂಟಾ ಕ್ಲಾಸ್ ನಿಂದ ಉಡುಗೊರೆ ಪಡೆಯುವುದು ಭಾರಿಯಾಗಿ ಪರಿಣಮಿಸಿದೆ. ಸಾಂಟಾ ಕ್ಲಾಸ್ ಕೊರೊನಾವೈರಸ್ ಸೋಂಕಿಗೆ ಒಳಗಾದ ಕಾರಣ ಆರೈಕೆ ಮನೆಗಳಲ್ಲಿ ವಾಸಿಸುವ 121 ಜನರು ಮತ್ತು 36 ಸಿಬ್ಬಂದಿ ಕೊರೊನಾ ಸೋಂಕಿಗೆ ಒಳಗಾಗಿದ್ದಾರೆ. ಈ ಪೈಕಿ ಇದುವರೆಗೆ 18 ಜನರು ಸಾವನ್ನಪ್ಪಿದ್ದಾರೆ.
ವೃದ್ಧರ ಆತ್ಮಸ್ಥೈರ್ಯ ಹೆಚ್ಚಾಗಲು ಸಾಂಟಾನನ್ನು ಕರೆಯಿಸಲಾಗಿತ್ತು
ಡೈಲಿ ಮೇಲ್ ನಲ್ಲಿ ಪ್ರಕಟಗೊಂಡ ವರದಿಯ ಪ್ರಕಾರ, ಬೆಲ್ಜಿಯಂನ ಆಂಟ್ವೆರ್ಪ್ನ ಆರೈಕೆ ಮನೆಯ ನೌಕರರು ಅಲ್ಲಿ ವಾಸಿಸುವ ವೃದ್ಧರ ಆತ್ಮಸ್ಥೈರ್ಯವನ್ನು ಹೆಚ್ಚಿಸಲು ಬಯಸಿದ್ದರು. ಹೀಗಾಗಿ ಅವರು ಸಾಂತಾಕ್ಲಾಸ್ಗೆ ಕರೆ ಮಾಡಿ ಅವರ ಕೈಯಾರೆ ವೃದ್ಧರಿಗೆ ಉಡುಗೊರೆ ನೀಡಲು ಯೋಜನೆ ರೂಪಿಸಿದ್ದರು.. ಇದಕ್ಕಾಗಿ, ಅವರು ಸಾಂಟಾ ಕ್ಲಾಸ್ ರೂಪದಲ್ಲಿ ಬರಲು ಆರೈಕೆ ಮನೆಯ ಜನರನ್ನು ನೋಡಿಕೊಳ್ಳುವ ವೈದ್ಯರಿಗೆ ಸೂಚಿಸಿದ್ದರು.
ಇದನ್ನು ಓದಿ-Merry Christmas 2020: ಸಂತಾ Coca-Cola ಮೆದುಳಿನ ಕೂಸೇ? ಇಲ್ಲಿದೆ Santa-Cola ಕನೆಕ್ಷನ್
ಕೇರ್ ಹೋಮ್ ತಲುಪಿದ ಸಾಂಟಾ ಕ್ಲಾಸ್ ಮೊದಲೇ ಸೋಂಕಿಗೆ ಒಳಗಾಗಿದ್ದ
ಯೋಜನೆಯ ಅನುಸಾರ ಸುಮಾರು 2 ವಾರಗಳ ಹಿಂದೆ, ವೈದ್ಯರು ಸಾಂಟಾ ಕ್ಲಾಸ್ (Santa Claus) ರೂಪ ಧರಿಸಿ ಆರೈಕೆ ಮನೆಗೆ ಬಂದಿದ್ದಾರೆ. ಸಿಬ್ಬಂದಿ ಪ್ರಕಾರ, ಸಾಂತಾ ಬಂದಾಗ ವೈದ್ಯರ ಆರೋಗ್ಯ ಸರಿಯಾಗಿರಲಿಲ್ಲ ಎನ್ನಲಾಗಿದೆ. ಅವರು ಹಿರಿಯರೊಂದಿಗೆ ಸಮಯ ಕಳೆದರು ಮತ್ತು ಅನೇಕ ಉಡುಗೊರೆಗಳನ್ನು ವಿತರಿಸಿದರು. ಆ ಸಮಯದಲ್ಲಿ, ಸಾಂಟಾ ಕ್ಲಾಸ್ ಅವರು ಕರೋನವೈರಸ್ ಸೋಂಕಿಗೆ ಒಳಗಾಗಿದ್ದಾರೆಂದು ತಿಳಿದಿರಲಿಲ್ಲ. ನಂತರ, ಅವರು ಅನಾರೋಗ್ಯಕ್ಕೆ ಒಳಗಾದಾಗ, ಅವರು ತಮ್ಮ ಪರೀಕ್ಷೆಯನ್ನು ಪೂರ್ಣಗೊಳಿಸಿದರು, ಅದರಲ್ಲಿ ಅವರ ವರದಿಯು ಸಕಾರಾತ್ಮಕ ಹೊರಬಂದಿದೆ. ಇದರ ನಂತರ, ಆರೈಕೆ ಮನೆಯಲ್ಲಿ ವಾಸಿಸುವ ಜನರು ಕೂಡ ಒಬ್ಬೊಬ್ಬರಂತೆ ಕೊರೊನಾ ಸೋಂಕಿಗೆ ಗುರಿಯಾಗಿದ್ದಾರೆ.
ಇದನ್ನು ಓದಿ- ಕ್ರಿಸ್ಮಸ್ ದಿನದಂದೇ ಸಾಂತಾ ಕ್ಲಾಸ್ ಬರೋದು ಯಾಕೆ?
ಸೋಂಕಿಗೆ ಗುರಿಯಾದ ಒತ್ತು 157 ಜನ, 18 ಸಾವು
ಮೂಲಗಳು ನೀಡಿರುವ ಪ್ರಕಾರ, ಇದುವರೆಗೆ 121 ವೃದ್ಧರು ಹಾಗೂ 36 ಸಿಬ್ಬಂದಿಗಳು ಕೊರೊನಾವೈರಸ್ ಸೋಂಕಿಗೆ ಒಳಗಾಗಿದ್ದಾರೆ. ಕ್ರಿಸ್‌ಮಸ್‌ಗೆ ಒಂದು ದಿನ ಮೊದಲು ಮತ್ತು ಕ್ರಿಸ್‌ಮಸ್ ದಿನದಂದು ಐದು ಜನರು ಪ್ರಾಣ ಕಳೆದುಕೊಂಡಿದ್ದಾರೆ, ನಂತರ ಆರೈಕೆ ಮನೆಯ 18 ಜನರು ಇದುವರೆಗೆ ಪ್ರಾಣ ಕಳೆದುಕೊಂಡಿದ್ದಾರೆ. ಕರೋನಾ ಪ್ರಕರಣದ ಏರಿಕೆಯ ನಂತರ, ಅಲ್ಲಿನ ಆಡಳಿತ ಸಾಂಟಾ ಕ್ಲಾಸ್ ಅನ್ನು ಸೂಪರ್ ಸ್ಪ್ರೆಡರ್ ಎಂದು ಘೋಷಿಸಿದೆ.
ಇದನ್ನು ಓದಿ- ಎಲ್ಲಿಂದ ಬಂದ ಸಂತಾ ಕ್ಲಾಸ್? ಕ್ರಿಸ್ಮಸ್ ಟ್ರೀ ಮಹತ್ವವೇನು? ಇಲ್ಲಿದೆ ರೋಚಕ ಕಥೆ
ಮುಂದಿನ 10 ದಿನಗಳು ಕಷ್ಟಕರವಾಗಿವೆ
ಮುಂದಿನ 10 ದಿನಗಳು ಆರೈಕೆ ಮನೆಗೆ ಕಷ್ಟಕರವಾಗಿರುತ್ತದೆ ಎಂದು ಮೇಯರ್ ವಿಮ್ ಕಿಯರ್ಸ್ ಹೇಳಿದ್ದಾರೆ. ವೃದ್ಧರಿಗೆ ಉಡುಗೊರೆಗಳನ್ನು ವಿತರಿಸುವಾಗ ನಿಯಮಗಳನ್ನು ಪಾಲಿಸಲಾಗಿಲ್ಲ ಎಂಬುದನ್ನು ಅವರು ಒಪ್ಪಿಕೊಂಡಿದ್ದಾರೆ. ಆದರೆ ಈ ಮೊದಲು ಅವರು ಎಲ್ಲಾ ನಿಯಮಗಳನ್ನು ಅನುಸರಿಸಲಾಗಿದೆ ಎಂದು ಹೇಳಿಕೊಂಡಿರುವುದು ಇಲ್ಲಿ ವಿಷಾಧನೀಯ ಸಂಗತಿ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.