Ajinkya Rahane : ನನ್ನವಳೇ ನನ್ನ ಯಶಸ್ಸಿನ ಹಿಂದಿನ ಶಕ್ತಿ : ರಹಾನೆ ರೋಚಕ ಪ್ರೇಮ್ ಕಹಾನಿ

ಅಜಿಂಕ್ಯಾ - ರಾಧಿಕಾ ರೋಚಕ ಪ್ರೇಮಕಥೆ. ನನ್ನಾಕೆಯೇ ನನ್ನ ಯಶಸ್ಸಿನ ಹಿಂದಿನ ಶಕ್ತಿ ಎನ್ನುತ್ತಾರೆ ರಹಾನೆ.

ನವದೆಹಲಿ : ಭಾರತೀಯ ಟೆಸ್ಟ್ ಕ್ರಿಕೆಟ್ ಟೀಂನ ಹಂಗಾಮಿ ನಾಯಕ ಅಜಿಂಕ್ಯಾ ರಹಾನೆ (Ajinkya Rahane)ಇತ್ತೀಚೆಗೆ ಮೆಲ್ಬೋರ್ನ್  ನಲ್ಲಿ ನಡೆದ ಬಾಕ್ಸಿಂಗ್ ಡೇ (Boxing Day Test) ಟೆಸ್ಟ್ ನಲ್ಲಿ ಭಾರತವನ್ನು ಗೆಲ್ಲಿಸಿದ  ನಂತರ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ರಹಾನೆ ಕ್ರಿಕೆಟ್ ಕರಿಯರ್ ನಂತೆಯೇ ಅವರ ಪ್ರೇಮ ಕಥೆಯೂ ಬಹಳ ರೋಚಕ.   ಕ್ರಿಕೆಟ್ ನ ಯಶಸ್ಸು ಮತ್ತು ವೈವಾಹಿಕ ಜೀವನದ ಯಶಸ್ಸಿನ ಶ್ರೇಯಸ್ಸನ್ನು ತಮ್ಮ ಪತ್ನಿಗೆ ನೀಡುತ್ತಾರೆ ರಹಾನೆ. ಅಜಿಂಕ್ಯಾ ಪ್ರೇಮಕಥೆಯ (Love Story) ಬಗ್ಗೆ ನಾವು ಹೇಳುತ್ತೇವೆ..

1 /5

6 ವರ್ಷಗಳ ಹಿಂದೆ ನಡೆಯಿತು ಅಜಿಂಕ್ಯಾ - ರಾಧಿಕಾ (Radhika Dhopavkar) ವಿವಾಹ .. 2014ರ ಸೆಪ್ಟೆಂಬರ್ 26ರಂದು ಅಜಿಂಕ್ಯಾ ರಹಾನೆ, ರಾಧಿಕಾ ಅವರನ್ನು ವರಿಸಿದ್ದರು. ರಾಧಿಕಾ ಮತ್ತು ಅಜಿಂಕ್ಯಾ ರಹಾಣೆ ಬಾಲ್ಯದಿಂದಲೂ ಸ್ನೇಹಿತರಾಗಿದ್ದವರು.  

2 /5

ರಾಧಿಕಾ ಬಾಲ್ಯದಲ್ಲಿ ಮುಂಬಯಿಯ (Mumbai) ಮುಳುಂದ್ ನಲ್ಲಿ ರಹಾನೆ ಮನೆಯ ಪಕ್ಕದಲ್ಲಿ ವಾಸಿಸುತ್ತಿದ್ದರು. ಬಾಲ್ಯದಲ್ಲಿಯೇ ಇಬ್ಬರು ಒಳ್ಳೆಯ ಸ್ನೇಹಿತರಾಗಿದ್ದರು. ನಂತರ ಸ್ನೇಹ ಪ್ರೇಮಕ್ಕೆ ತಿರುಗಿ ಇಬ್ಬರೂ ವಿವಾಹವಾಗಿದ್ದಾರೆ.

3 /5

ರಾಧಿಕಾ ಮೂಲತಃ ಪುಣೆ (Pune)ಯವರು. ರಾಧಿಕಾ ಕುಟುಂಬದವರು ಪುಣೆಯಲ್ಲಿಯೇ ನೆಲೆಸಿದ್ದಾರೆ. ಎರಡೂ ಪರಿವಾರದ ಒಪ್ಪಿಗೆ ದೊರೆತ ನಂತರವೇ ಉಭಯ ಕುಟುಂಬಗಳ ಉಪಸ್ಥಿತಿಯಲ್ಲಿಯೇ ಅವರು ಸಪ್ತಪದಿ ತುಳಿದಿದ್ದಾರೆ. 

4 /5

ಮದುವೆಗೂ ಮುನ್ನ ಅಜಿಂಕ್ಯಾ ರಹಾನೆ ತನ್ನ ಸೋಶಿಯಲ್ ನೆಟ್ ವರ್ಕಿಂಗ್ ನಲ್ಲಿ ರಾಧಿಕಾ ತಮ್ಮ ಆಪ್ತ ಸ್ನೇಹಿತೆ ಎಂದು ಹೇಳಿಕೊಂಡಿದ್ದರು.

5 /5

ಮದುವೆಯ ಕೆಲ ವರ್ಷಗಳ ನಂತರ ರಹಾನೆ ಅಂತಾರಾಷ್ಟ್ರೀಯ ಕ್ರಿಕೆಟ್ ನಲ್ಲಿ ತಮ್ಮ ಛಾಪು ಮೂಡಿಸಿದ್ದರು. ತಮ್ಮ ಬ್ಯುಸಿ ಶೆಡ್ಯುಲ್ ನಲ್ಲಿಯೂ ರಹಾನೆ ತನ್ನ ಪತ್ನಿ ರಾಧಿಕಾ ಜೊತೆ ಸಮಯ ಕಳೆಯುವುದನ್ನು ಮರೆಯುವುದಿಲ್ಲ