ಉದ್ಯೋಗ ಖಾತರಿ ಯೋಜನೆ ಕನಿಷ್ಠ ವೇತನ ಹೆಚ್ಚಿಸಿದ ಜಾರ್ಖಂಡ್‌ ಸರ್ಕಾರ

ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ (ಎಂಜಿಎನ್‌ಆರ್‌ಇಜಿಎಸ್) ಕೆಲಸ ಮಾಡುವ ಕಾರ್ಮಿಕರು ಶೀಘ್ರದಲ್ಲೇ ಜಾರ್ಖಂಡ್‌ನಲ್ಲಿ ತಮ್ಮ ಕನಿಷ್ಠ ವೇತನದಲ್ಲಿ 31 ರೂ.ಗಳ ಹೆಚ್ಚಳವನ್ನು ಪಡೆಯುವ ಸಾಧ್ಯತೆಯಿದೆ, ಏಕೆಂದರೆ ರಾಜ್ಯ ಸರ್ಕಾರವು ವೇತನವನ್ನು194 ರಿಂದ 225 ರೂ.ಗೆ ಹೆಚ್ಚಿಸಲು ನಿರ್ಧರಿಸಿದೆ.

Last Updated : Jan 3, 2021, 05:59 PM IST
  • ಎಂಜಿಎನ್‌ಆರ್‌ಇಜಿಎಸ್ (MGNREGS) ಅಡಿಯಲ್ಲಿ ಕೆಲಸ ಮಾಡುವ ಕಾರ್ಮಿಕರು ರಾಜ್ಯದ ಕನಿಷ್ಠ ವೇತನ ದರಕ್ಕಿಂತ ಕಡಿಮೆ ಕನಿಷ್ಠ ವೇತನವನ್ನು ಪಡೆಯುತ್ತಾರೆ.
  • ಕೇಂದ್ರವು ನಿಗದಿಪಡಿಸಿದ 194 ರೂ.ರಿಂದ 225 ರೂ.ಗೆ ರಾಜ್ಯ ಬೊಕ್ಕಸದಿಂದ ಕನಿಷ್ಠ ವೇತನ ಹೆಚ್ಚಿಸಲು ನಿರ್ಧರಿಸಿದ್ದೇವೆ ಎಂದು ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೆನ್ ತಮ್ಮ ಒಂದು ವರ್ಷದ ಸರ್ಕಾರದ ಆಚರಣೆಯ ಸಂದರ್ಭದಲ್ಲಿ ಹೇಳಿದ್ದಾರೆ.
ಉದ್ಯೋಗ ಖಾತರಿ ಯೋಜನೆ ಕನಿಷ್ಠ ವೇತನ ಹೆಚ್ಚಿಸಿದ ಜಾರ್ಖಂಡ್‌ ಸರ್ಕಾರ  title=
file photo

ನವದೆಹಲಿ: ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ (ಎಂಜಿಎನ್‌ಆರ್‌ಇಜಿಎಸ್) ಕೆಲಸ ಮಾಡುವ ಕಾರ್ಮಿಕರು ಶೀಘ್ರದಲ್ಲೇ ಜಾರ್ಖಂಡ್‌ನಲ್ಲಿ ತಮ್ಮ ಕನಿಷ್ಠ ವೇತನದಲ್ಲಿ 31 ರೂ.ಗಳ ಹೆಚ್ಚಳವನ್ನು ಪಡೆಯುವ ಸಾಧ್ಯತೆಯಿದೆ, ಏಕೆಂದರೆ ರಾಜ್ಯ ಸರ್ಕಾರವು ವೇತನವನ್ನು194 ರಿಂದ 225 ರೂ.ಗೆ ಹೆಚ್ಚಿಸಲು ನಿರ್ಧರಿಸಿದೆ.

ರಾಜ್ಯ ಗ್ರಾಮೀಣಾಭಿವೃದ್ಧಿ ಇಲಾಖೆ ಈ ಕುರಿತು ಕರಡನ್ನು ಅಂತಿಮಗೊಳಿಸಿದೆ ಮತ್ತು ಶೀಘ್ರದಲ್ಲೇ ಸರ್ಕಾರದ ಅನುಮೋದನೆ ಪಡೆಯುವ ನಿರೀಕ್ಷೆಯಿದೆ. ಈ ನಿಟ್ಟಿನಲ್ಲಿ ಸೋಮವಾರ ಉನ್ನತ ಮಟ್ಟದ ಸಭೆ ನಡೆಸಲು ನಿರ್ಧರಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇದನ್ನೂ ಓದಿ: MGNREGA ಅಕೌಂಟ್ಸ್ ಮ್ಯಾನೆಜರ್ ನೇಮಕಾತಿಗಾಗಿ ಆನ್‍ಲೈನ್ ಅರ್ಜಿ ಆಹ್ವಾನ

'ಎಂಜಿಎನ್‌ಆರ್‌ಇಜಿಎ (MGNREGS) ಗ್ರಾಮೀಣ ಬಡ ಜನರಿಗೆ ಜೀವಸೆಲೆಯಾಗಿದೆ. ಆದರೆ, ಕಳಪೆ ವೇತನದಿಂದಾಗಿ ಜನರು ಹೆಚ್ಚು ಆಸಕ್ತಿ ತೋರಿಸುವುದಿಲ್ಲ. ಆದ್ದರಿಂದ, ಕೇಂದ್ರವು ನಿಗದಿಪಡಿಸಿದ 194 ರೂ.ರಿಂದ 225 ರೂ.ಗೆ ರಾಜ್ಯ ಬೊಕ್ಕಸದಿಂದ ಕನಿಷ್ಠ ವೇತನ ಹೆಚ್ಚಿಸಲು ನಿರ್ಧರಿಸಿದ್ದೇವೆ ಎಂದು ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೆನ್ ತಮ್ಮ ಒಂದು ವರ್ಷದ ಸರ್ಕಾರದ ಆಚರಣೆಯ ಸಂದರ್ಭದಲ್ಲಿ ಹೇಳಿದ್ದಾರೆ.

ಎಂಜಿಎನ್‌ಆರ್‌ಇಜಿಎಸ್ (MGNREGS) ಅಡಿಯಲ್ಲಿ ಕೆಲಸ ಮಾಡುವ ಕಾರ್ಮಿಕರು ರಾಜ್ಯದ ಕನಿಷ್ಠ ವೇತನ ದರಕ್ಕಿಂತ ಕಡಿಮೆ ಕನಿಷ್ಠ ವೇತನವನ್ನು ಪಡೆಯುತ್ತಾರೆ. ರಾಜ್ಯದ ಕನಿಷ್ಠ ವೇತನ 283 ರೂ. ಎಂಜಿಎನ್‌ಆರ್‌ಇಜಿಎಸ್ ಕಾರ್ಮಿಕನಿಗೆ ಕನಿಷ್ಠ ವೇತನವಾಗಿ 194 ರೂ.ನ್ನು ಪಡೆಯುತ್ತಾರೆ.

ಇದನ್ನೂ ಓದಿ: ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಮತ್ತು ಜಾಕ್ವೆಲಿನಾಗೆ ನರೇಗಾ ಉದ್ಯೋಗ ಕಾರ್ಡ್...!

ಎಂಜಿಎನ್‌ಆರ್‌ಇಜಿಎಸ್‌ನಲ್ಲಿ ನಿಬಂಧನೆಗಳಿವೆ, ಅದರ ಅಡಿಯಲ್ಲಿ ಒಂದು ರಾಜ್ಯವು ಕಾರ್ಮಿಕರ ಕನಿಷ್ಠ ವೇತನವನ್ನು ತನ್ನದೇ ಆದ ಬೊಕ್ಕಸದಿಂದ ಹೆಚ್ಚಿಸಬಹುದು. ಬಿಹಾರ ಮತ್ತು ಒಡಿಶಾದಂತಹ ಹಲವಾರು ರಾಜ್ಯಗಳು ಈಗಾಗಲೇ ಇದನ್ನು ಮಾಡಿವೆ" ಎಂದು ರಾಜ್ಯ ಎಂಜಿಎನ್‌ಆರ್‌ಇಜಿಎಸ್ ಆಯುಕ್ತ ಸಿದ್ಧಾರ್ಥ ತ್ರಿಪಾಠಿ ಹೇಳಿದ್ದಾರೆ.

ಈ ನಿಟ್ಟಿನಲ್ಲಿ ರಾಜ್ಯಕ್ಕೆ ಕೇಂದ್ರದ ಒಪ್ಪಿಗೆ ಅಗತ್ಯವಿದೆಯೇ ಎಂದು ಕೇಳಿದಾಗ, ತ್ರಿಪಾಠಿ,'ಇದರಲ್ಲಿ ಕೇಂದ್ರದ ಒಪ್ಪಿಗೆ ಅಗತ್ಯವಿಲ್ಲ, ಆದರೆ ನಿರ್ವಹಣಾ ಮಾಹಿತಿ ವ್ಯವಸ್ಥೆಯಲ್ಲಿ (ಎಂಐಎಸ್) ರಾಜ್ಯದ ವೇತನ ಕೊಡುಗೆಗಾಗಿ ಪ್ರತ್ಯೇಕ ಅಂಕಣವನ್ನು ರಚಿಸುವಂತೆ ನಾವು ಕೇಂದ್ರವನ್ನು ಕೋರಬೇಕಾಗಿದೆ, ಇದು ಕೇವಲ 30 ನಿಮಿಷಗಳ ಪ್ರಕ್ರಿಯೆ ಎಂದು ತಿಳಿಸಿದರು.

ಇದನ್ನೂ ಓದಿ: MGNREGA: ಗ್ರಾಮೀಣ ಉದ್ಯೋಗಾವಕಾಶಕ್ಕೆ Big Boost, MGNREGAಗೆ ಹೆಚ್ಚೂವರಿಯಾಗಿ 40 ಸಾವಿರ ಕೋಟಿ ರೂ. ಅನುದಾನ

ಕಾರ್ಮಿಕರ ಆದಾಯವನ್ನು ಹೆಚ್ಚಿಸುವ ಪ್ರಯತ್ನದಲ್ಲಿ, ಎಂಜಿಎನ್‌ಆರ್‌ಇಜಿಎಸ್ ಅಡಿಯಲ್ಲಿ ಕೆಲಸ ಮಾಡುವ ಕಾರ್ಮಿಕರಿಗೆ ಪ್ರತಿ ದಿನಕ್ಕೆ ಸಿಎಫ್‌ಟಿ (ಘನ ಅಡಿ) ನಿಬಂಧನೆಯನ್ನು ಪರಿಷ್ಕರಿಸುವಂತೆ ರಾಜ್ಯವು ಕೇಂದ್ರವನ್ನು ಕೋರುತ್ತದೆ ಎಂದು ಗ್ರಾಮೀಣಾಭಿವೃದ್ಧಿ ಅಧಿಕಾರಿಗಳು ತಿಳಿಸಿದ್ದಾರೆ.

 

Trending News