What is Disease X: ಪ್ರಸ್ತುತ ಇಡೀ ಜಗತ್ತು ಕೊರೊನಾ ಹೆಸರಿನ ಮಹಾಮಾರಿಯ ಕಪಿಮುಷ್ಠಿಯಲ್ಲಿದೆ. ಆದಷ್ಟು ಬೇಗ ಈ ಮಹಾಮಾರಿ ಮುಕ್ತಾಯಗೊಂಡು ಜನರು ಬೇಗನೆ ನಿಟ್ಟುಸಿರು ಬಿಡುವಂತಾಗಲಿ ಎಂದು ಎಲ್ಲರು ನಿರೀಕ್ಷಿಸುತ್ತಿದ್ದಾರೆ. ಅಷ್ಟೇ ಅಲ್ಲ ಜೀವನ ಕೂಡ ಮತ್ತೆ ಎಂದಿನಂತೆ ಸುಗಮವಾಗಲಿ ಎಂದು ಎಲ್ಲರು ಆಶಿಸುತ್ತಿದ್ದಾರೆ. ಏತನ್ಮಧ್ಯೆ ಮತ್ತೊಂದು ಭಯ ಹುಟ್ಟಿಸುವ ವರದಿಯೊಂದು ಬಹಿರಂಗವಾಗಿದೆ. ವಿಜ್ಞಾನಿಗಳು ನೀಡಿರುವ ಈ ಎಚ್ಚರಿಕೆಯಿಂದ ನೀವೂ ಕೂಡ ಬೆಚ್ಚಿಬೀಳುವಿರಿ.
ಜಗತ್ತಿನಲ್ಲಿ ಮತ್ತೊಂದು ಮಹಾಮಾರಿ ಕದ ತಟ್ಟುವ ಸಾಧ್ಯತೆ ಇದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ. ಇದೊಂದು ಅಪಾಯಕಾರಿ ವೈರಸ್ ಮಹಾಮಾರಿಯಾಗಿದ್ದು, ಇದಕ್ಕೆ ಡಿಸೀಜ್ ಎಕ್ಸ್ ಎಂದು ಕರೆಯಲಾಗುತ್ತಿದೆ.
ಇದನ್ನು ಓದಿ-COVID-19 vaccine: Covishield vs Covaxin, ಇಲ್ಲಿದೆ ನೀವು ತಿಳಿದುಕೊಳ್ಳಬೇಕಾದ ಅಂಶಗಳು
Covid-19 ರೀತಿಯಲ್ಲೇ ಈ ಮಾರಕ ರೋಗ ಕೂಡ ಅತಿ ವೇಗವಾಗಿ ಹರಡುತ್ತಿದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ ಹಾಗೂ ಇದು ಎಬೋಲಾ ವೈರಸ್ ರೀತಿಯಲ್ಲಿ ಅಪಾಯಕಾರಿ ಸಾಬೀತಾಗುವ ಸಾಧ್ಯತೆ ಇದೆ.
ಈ ಎಚ್ಚರಿಕೆ ಮಹತ್ವ ಪಡೆದುಕೊಳ್ಳಲು ಕಾರಣ ಎಂದರೆ, ಈ ಎಚ್ಚರಿಕೆಯನ್ನು 1976ರಲ್ಲಿ ಎಬೋಲಾ ಪತ್ತೆಗೆ ಸಹಕಾರ ನೀಡಿದ್ದ ವಿಜ್ಞಾನಿ ಜಿನ್-ಜಾಕ್ಸ್ ಮ್ಯುಎಂಬೆ ನೀಡಿದ್ದಾರೆ.
ಈ ರೋಗ ವಿಶ್ವಾದ್ಯಂತ ಭಯಾನಕ ವಿನಾಶಕ್ಕೆ ಕಾರಣವಾಗಬಹುದು ಎಂದು ಅವರು ಎಚ್ಚರಿಸಿದ್ದಾರೆ. ಆಫ್ರಿಕಾದ ಉಷ್ಣವಲಯದ ಮಳೆಕಾಡಿನಿಂದ ಅನೇಕ ಹೊಸ ರೀತಿಯ ಮಾರಕ ವೈರಸ್‌ಗಳು ಹೊರಬರುತ್ತಿರುವುದರಿಂದ ಜಗತ್ತು ಜಾಗರೂಕರಾಗಿರಬೇಕು ಎಂದು ಟಾಮ್‌ಫಮ್ ಹೇಳಿದ್ದಾರೆ. ಈ ವೈರಸ್‌ಗಳು ಮಾನವ ನಾಗರಿಕತೆಗೆ ಹಾನಿಕಾರಕವಾಗಬಹುದು ಎಂದು ಅವರು ಹೇಳಿದ್ದಾರೆ.
ಇದನ್ನು ಓದಿ-Corona Vaccine: ಲಸಿಕೆ ಹಾಕಿಸಿಕೊಳ್ಳಬೇಕೇ? Co-WIN App ಮೂಲಕ ಮೊದಲು ಹೆಸರು ನೊಂದಾಯಿಸಿ
ಈ ಎಚ್ಚರಿಕೆ ಬಂದಾಗಿನಿಂದ ಈ ರೋಗವು ಸಾಮಾಜಿಕ ಮಾಧ್ಯಮದಲ್ಲಿ ಟ್ರೆಂಡ್ ಸೃಷ್ಟಿಸಿದೆ. ಅದರಲ್ಲಿ ಏನಾಗುತ್ತದೆ ಮತ್ತು ಅದು ಯಾವಾಗ ಇಡೀ ಜಗತ್ತನ್ನು ಆವರಿಸುತ್ತದೆ ಎಂಬುದನ್ನು ತಿಳಿದುಕೊಳ್ಳಲು ಜನರು ಉತ್ಸುಕರಾಗಿದ್ದಾರೆ.
ಆದರೆ ವಿಜ್ಞಾನಿಗಳು ಮಾತ್ರ ನಾವು ಹೊಸ ಮಹಾಮಾರಿಗಳು ಅಪ್ಪಳಿಸುವ ಕಾಲದಲ್ಲಿದ್ದೇವೆ. ಮತ್ತು ಈ ಮಹಾಮಾರಿಗಳು ಇಡೀ ವಿಶ್ವವನ್ನೇ ಸಂಕಷ್ಟಕ್ಕೆ ದೂರಲಿವೆ. ಇದನ್ನು ಎದುರಿಸುವುದು ಹೇಗೆ ಎಂಬುದು ಜನರಿಗೆ ಗೊತ್ತಾಗುವುದಿಲ್ಲ ಎಂದು ವಿಜ್ಞಾನಿಗಳು ಹೇಳಿದ್ದಾರೆ.
ಇದನ್ನು ಓದಿ- BIG NEWS: Covishield, Covaxin ತುರ್ತು ಬಳಕೆಗೆ DCGI ಅನುಮತಿ, ನಿರ್ಣಯ ಸ್ವಾಗತಿಸಿದ WHO
ಡಿಸೀಜ್ ಎಕ್ಸ್, ಕಾರೋನಾ ಮಹಾಮಾರಿಗಿಂತಲೂ ಅಪಾಯಕಾರಿ ಸಾಬೀತಾಗುವ ಸಾಧ್ಯತೆ ಇದೆ. ಕಾಂಗೋ ಪ್ರಜಾಸತ್ತಾತ್ಮಕ ಗಣರಾಜ್ಯದ ಇಂಗೆಂಡೆ ಪ್ರಾಂತ್ಯದಲ್ಲಿ ಈ ಮಾರಕ ಕಾಯಿಲೆಗೆ ವ್ಯಕ್ತಿಯೊಬ್ಬ ಬಲಿಯಾಗಿದ್ದಾನೆ. ಅವನಲ್ಲಿ ಈ ರಕ್ತಸ್ರಾವವಾಗುವ ಜ್ವರದ ಆರಂಭಿಕ ಲಕ್ಷಣಗಳು ಕಂಡುಬಂದಿವೆ. ಮೊದಲು ವೈದ್ಯರು ಇದನ್ನು ಎಬೋಲಾ ಎಂದು ಭಾವಿಸಿದ್ದಾರೆ. ಆದರೆ, ಬಳಿಕ ಇದು ಡಿಸೀಜ್ ಎಕ್ಸ್ ನ ಆರಂಭಿಕ ಲಕ್ಷಣಗಳಾಗಿವೆ ಎಂದು ಅವರು ಹೇಳಿದ್ದಾರೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.