ಹೊಸ ಹೊಸ ಫೀಚರ್ಸ್ ಜೊತೆಗೆ ನೂತನ ಸೇವೆಗಳನ್ನು ಆರಂಭಿಸಲು ಸಜ್ಜಾಗಿದೆ WhatsApp..
ನವದೆಹಲಿ : WhatsApp ಕಳೆದ ವರ್ಷವೂ ಅನೇಕ ಹೊಸ ಫೀಚರ್ಸ್ ಅನ್ನು ಗ್ರಾಹಕರಿಗೆ ಪರಿಚಯಿಸಿತ್ತು. ಇದಿಗ 2021ರಲ್ಲಿಯೂ ಅನೇಕ ನೂತನ ಫಿಚರ್ಸ್ ಗಳನ್ನು ತರಲು ವಾಟ್ಸ್ ಆ್ಯಪ್ ಸಜ್ಜಾಗಿದೆ. ಈ ಮೆಸೆಜಿಂಗ್ ಆ್ಯಪ್ ಈ ಬಾರಿ ಯಾವೆಲ್ಲ ಹೊಸ ಫೀಚರ್ಸ್ ಅನ್ನು ಹೊರ ತರುತ್ತಿದೆ ಎಂಬ ಮಾಹಿತಿ ಇಲ್ಲಿದೆ..
ಇನ್ನು ಮುಂದೆ ಡೆಸ್ಕ್ ಟಾಪ್ ಮತ್ತು ಲ್ಯಾಪ್ ಟಾಪ್ ನಿಂದಲೂ WhatsApp ಕರೆ ಮಾಡಬಹುದು. ವಿಡಿಯೋ ಚಾಟ್ ಮಾಡಲೂಬಹುದು. ಇನ್ನು ಕೆಲವೇ ದಿನಗಳಲ್ಲಿ ಈಸೇವೆ WhatsAppನಲ್ಲಿ ಲಭ್ಯವಿರಲಿದೆ.
ಇತ್ತೀಚೆಗಷ್ಟೇ WhatsApp Payment ಸೇವೆ ಆರಂಭವಾಗಿತ್ತು. ಇದೀಗ ಇನ್ಶುರೆನ್ಸ್ ಸೇವೆ ಕೂಡಾ WhatsAppನಲ್ಲಿ ಸಿಗಲಿದೆ. ಇನ್ಶುರೆನ್ಸ್ ಸೇವೆಗಾಗಿ ಈಗಾಗಲೇ SBI ಮತ್ತು HDFC ಜೊತೆ ಮಾತುಕತೆ ನಡೆಯುತ್ತಿದೆ.
ಮಲ್ಟಿ ಡಿವೈಸ್ಗೆ WhatsApp ಸಪೋರ್ಟ್ ನೀಡುವ ಬಗ್ಗೆ ಕಂಪನಿ ಕೆಲಸ ಮಾಡುತ್ತಿದೆ. ಹೀಗಾದರೆ ಒಂದೇ ವಾಟ್ಸ್ಆ್ಯಪ್ ಅಕೌಂಟನ್ನು ನಾಲ್ಕು ಡಿವೈಸ್ ಗಳಲ್ಲಿ ಹಾಕಿಕೊಳ್ಳಬಹುದು
ಶೀಘ್ರದಲ್ಲೇ WhatsAppನಲ್ಲಿ ರೀಡ್ ಲೇಟರ್ ಸೇವೆ ಕೂಡಾ ಲಭ್ಯವಾಗಲಿದೆ. ರೀಡ್ ಲೇಟರ್ ಅಂದರೆ ಯಾರ ಚ್ಯಾಟ್ ಅನ್ನು ರೀಡ್ ಲೇಟರ್ ಗೆ ಹಾಕಲಾಗುತ್ತದೆಯೋ ಆ ಚ್ಯಾಟ್ ನ ನೊಟಿಫಿಕೇಶನ್ ಬರುವುದು ನಿಂತು ಹೋಗುತ್ತದೆ.