ನವದೆಹಲಿ: Budget 2021 - ಫೆಬ್ರುವರಿ 1 ರಂದು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ವರ್ಷ 2021-22 ರ ಆರ್ಥಿಕ ಆಯವ್ಯಯ ಮಂಡಿಸಲಿದ್ದಾರೆ. ಇದಕ್ಕೆ ಭಾರದ ಸಿದ್ಧತೆಗಳೂ ಕೂಡ ನಡೆದಿವೆ. ಇಂತಹುದರಲ್ಲಿ ರೈತರ ಮೇಲೆ ಸರ್ಕಾರದ ಸಂಪೂರ್ಣ ಗಮನ ಕೇಂದ್ರೀಕರಿಸಿದೆ. ಮೂರು ಕೃಷಿ ಕಾನೂನುಗಳಿಗೆ ವಿರೋಧಿಸಿ ದೆಹಲಿಯ ಗಡಿಭಾಗದಲ್ಲಿ ರೈತರು ನಡೆಸುತ್ತಿರುವ ಪ್ರತಿಭಟನೆಯ ನಡುವೆ ಬಜೆಟ್ ನಲ್ಲಿ ಸರ್ಕಾರ ರೈತರ ಪರ ಹಲವು ಘೋಷಣೆಗಳನ್ನು ಮಾಡುವ ಸಾಧ್ಯತೆ ಇದೆ.
ಈ ಸಹಾಯಧನದಲ್ಲಿ ಏರಿಕೆಯಾಗುವ ಸಾಧ್ಯತೆ ಇದೆ
ಕಿಸಾನ್ ಸಮ್ಮಾನ್ ನಿಧಿ ಅಡಿಯಲ್ಲಿ ಕೇಂದ್ರ ಸರ್ಕಾರ ನೀಡುತ್ತಿರುವ 6 ಸಾವಿರ ರೂಪಾಯಿಗಳ ಕಂತನ್ನು ಹೆಚ್ಚಿಸುವ ಸಾಧ್ಯತೆ ಇದೆ. ಈ ಬಜೆಟ್ನಲ್ಲಿ ಕೃಷಿಗೆ ಈ ಮೊತ್ತ ಸಾಕಷ್ಟಿಲ್ಲ ಮತ್ತು ಅದನ್ನು ಹೆಚ್ಚಿಸಬೇಕು ಎಂದು ರೈತರು ಸರ್ಕಾರವನ್ನು ಒತ್ತಾಯಿಸಿದ್ದಾರೆ. 2019-20ರ ಹಣಕಾಸು ವರ್ಷದ ಬಜೆಟ್ ಅಂದಾಜು (BE) ಸುಮಾರು 1.51 ಲಕ್ಷ ಕೋಟಿ ರೂ. ಆಗಿದ್ದು, ಇದು ಈ ವರ್ಷ ಅಂದರೆ 2020-21ರ ಹಣಕಾಸು ವರ್ಷದಲ್ಲಿ ಸುಮಾರು 1.54 ಲಕ್ಷ ಕೋಟಿ ರೂ.ಗೆ ಏರಿದೆ. ಇದಲ್ಲದೆ 2019-20ರಲ್ಲಿ ಸುಮಾರು 1.40 ಲಕ್ಷ ಕೋಟಿ ರೂ.ಗಳಿಗೆ ಹೋಲಿಸಿದರೆ 2020-21ರಲ್ಲಿ ಗ್ರಾಮೀಣಾಭಿವೃದ್ಧಿ ಹಂಚಿಕೆಯನ್ನು 1.44 ಲಕ್ಷ ಕೋಟಿ ರೂ.ಗೆ ಹೆಚ್ಚಿಸಲಾಗಿದೆ. ಪಿಎಂ ಕೃಷಿ ನೀರಾವರಿ ಯೋಜನೆಯಡಿ ಇದನ್ನು 2019-20ರಲ್ಲಿ 9682 ಕೋಟಿಯಿಂದ 2020-21ರಲ್ಲಿ 11,127 ಕೋಟಿ ರೂ.ಗೆ ಮತ್ತು ಪಿಎಂ ಬೆಳೆ ವಿಮಾ ಯೋಜನೆಯಡಿ 2019-20ರಲ್ಲಿ 14 ಸಾವಿರ ಕೋಟಿ ರೂ.ಗಳಿಂದ 2020-21ರಲ್ಲಿ 15,695 ಕೋಟಿಗೆ ಹೆಚ್ಚಿಸಲಾಗಿದೆ.
ಇದನ್ನು ಓದಿ-PM Kisan Samman Nidhi Yojana: ನಿಮ್ಮ ಹಣ ಎಲ್ಲಿ ಸಿಲುಕಿದೆ ಎಂದು ತಿಳಿಯಿರಿ
ತಿಂಗಳಿಗೆ 500 ರೂ ಕಡಿತ
ಪಿಎಂ-ಕಿಸಾನ್ ಯೋಜನೆಯಡಿ (PM Kisan Samman Nidhi Yojana) ರೈತರಿಗೆ ತಿಂಗಳಿಗೆ 500 ರೂಪಾಯಿಗಳು ಸಿಗುತ್ತವೆ. ಇದು ಸಾಕಾಗುವುದಿಲ್ಲ ಎಂದು ರೈತರು ಹೇಳಿದ್ದಾರೆ. 1 ಎಕರೆ ಭತ್ತದ ಬೆಳೆ ತೆಗೆದುಕೊಳ್ಳಲು ಸುಮಾರು 3-3.5 ಸಾವಿರ ರೂ ಮತ್ತು ಗೋಧಿ ಬೆಳೆ ತೆಗೆದುಕೊಳ್ಳಲು ಸುಮಾರು 2-2.5 ಸಾವಿರ ರೂಪಾಯಿಗಳನ್ನು ವೆಚ್ಚವಾಗುತ್ತದೆ. ಇಂತಹ ಪರಿಸ್ಥಿತಿಯಲ್ಲಿ, ಹೆಚ್ಚಿನ ಭೂಮಿ ಹೊಂದಿರುವ ರೈತರಿಗೆ, ಆರು ಸಾವಿರ ರೂ.ಗಳ ನೆರವು ತುಂಬಾ ಕಡಿಮೆಯಾಗಿದೆ. ಇಂತಹ ಪರಿಸ್ಥಿತಿಯಲ್ಲಿ, ವೆಚ್ಚವನ್ನು ಪೂರೈಸಲು ಕಿಸಾನ್ ಸಮ್ಮಾನ್ ನಿಧಿಯ ಕೊಡುಗೆ ಹೆಚ್ಚಿಸಬೇಕು ಎಂದು ರೈತರು ಆಗ್ರಹಿಸಿದ್ದಾರೆ.
ಇದನ್ನು ಓದಿ- ಪಿಎಂ ಕಿಸಾನ್ ಸಮ್ಮನ್ ನಿಧಿ ಯೋಜನೆ: ಆನ್ಲೈನ್ನಲ್ಲಿ ನಿಮ್ಮ ಹೆಸರು ಪರಿಶೀಲಿಸಿ, ಪಡೆಯಿರಿ ₹ 2000
ಡಿಸೆಂಬರ್ 2018ರಲ್ಲಿ ಆರಂಭಗೊಂಡ ಯೋಜನೆ
ಡಿಸೆಂಬರ್ 1, 2018ರಲ್ಲಿ ಈ ಯೋಜನೆ ಆರಂಭಗೊಂಡಿದೆ ಹಾಗೂ ಈ ಯೋಜನೆಯಡಿ 2-2 ಸಾವಿರ ರೂ.ಗಳಂತೆ ವಾರ್ಷಿಕವಾಗಿ ಒಟ್ಟು ಮೂರು ಕಂತುಗಳಲ್ಲಿ 6 ಸಾವಿರ ರೂ. ರೈತರ ಖಾತೆಗೆ ವರ್ಗಾಯಿಸಲಾಗುತ್ತದೆ. ಈ ಲಾಭ ದೇಶದ ಎಲ್ಲ ರೈತರಿಗೆ ನೀಡಲಾಗುತ್ತದೆ. ಈ ಯೋಜನೆಯ ಅಡಿ ಏಪ್ರಿಲ್-ಜುಲೈ, ಆಗಸ್ಟ್-ನವೆಂಬರ್ ಹಾಗೂ ಡಿಸೆಂಬರ್-ಮಾರ್ಚ್ ಅವಧಿಯಲ್ಲಿ ರೈತರ ಖಾತೆಗೆ ಹಣ ವರ್ಗಾಯಿಸಲಾಗುತ್ತದೆ. ಪಿಎಮ್ ಕಿಸಾನ್ ಸಮ್ಮಾನ್ ನಿಧಿ ವೆಬ್ ಸೈಟ್ ನಲ್ಲಿ ನೀಡಲಾಗಿರುವ ಮಾಹಿತಿಯ ಪ್ರಕಾರ ಈ ಯೋಜನೆಯ ಸುಮಾರು 11.47 ಕೋಟಿ ಲಾಭಾರ್ಥಿಗಳಿದ್ದಾರೆ.
ಇದನ್ನು ಓದಿ-PM Kisan: ನಾಳೆಯಿಂದ ರೈತರ ಖಾತೆಗೆ ಸೇರಲಿದೆ 2000 ರೂಪಾಯಿ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.