ಅಂಕಿಅಂಶಗಳ ಪ್ರಕಾರ, ದೇಶದಲ್ಲಿ ಕೇವಲ 2.73 ರಷ್ಟು ಜನರಿಗೆ ಮಾತ್ರ ವಿಮೆ ಇದೆ. ಹಣ ಮತ್ತು ಅರಿವಿನ ಕೊರತೆಯ ಹೊರತಾಗಿ ಜನರು ಪೇಪರ್‌ವರ್ಕ್‌ನ ತೊಂದರೆಯನ್ನು ತಪ್ಪಿಸಲು ವಿಮೆ ತೆಗೆದುಕೊಳ್ಳುವುದನ್ನು ತಪ್ಪಿಸುತ್ತಾರೆ ಎಂದು ಹೇಳಲಾಗುತ್ತದೆ.
ನವದೆಹಲಿ: ಇಂದಿನ ಅಪಾಯಕಾರಿ ಸಮಯದಲ್ಲಿ ಪ್ರತಿಯೊಬ್ಬರಿಗೂ ವಿಮೆ ಇರುವುದು ಬಹಳ ಮುಖ್ಯ. ಆದರೆ ಹಣದ ಕೊರತೆ ಮತ್ತು ಜಾಗೃತಿಯ ಕೊರತೆಯಿಂದಾಗಿ ತಮಗೆ ಮತ್ತು ತಮ್ಮ ಕುಟುಂಬಗಳಿಗೆ ವಿಮೆಯನ್ನು ಖರೀದಿಸಲು ಸಾಧ್ಯವಾಗದ ಅನೇಕ ಜನರಿದ್ದಾರೆ. ನೀವು ಅವರಲ್ಲಿ ಒಬ್ಬರಾಗಿದ್ದರೆ, ಈಗ ಚಿಂತೆ ಮಾಡುವ ಅಗತ್ಯವಿಲ್ಲ. ನೀವು ಫೋನ್‌ಪೇ (PhonePe) ಬಳಸಿ ವಲ 149 ರೂ.ಗಳಿಗೆ ವಿಮೆಯನ್ನು ತೆಗೆದುಕೊಳ್ಳಬಹುದು. ಇಡೀ ಪ್ರಕ್ರಿಯೆಯನ್ನು ತಿಳಿದುಕೊಳ್ಳೋಣ ....
ಡಿಜಿಟಲ್ ಪಾವತಿ (Digital Payment) ಅಪ್ಲಿಕೇಶನ್‌ನ ಫೋನ್‌ಪೇ ತನ್ನ ಬಳಕೆದಾರರಿಗೆ ಕೇವಲ 149 ರೂ.ಗಳಿಗೆ ವಿಮೆ ನೀಡುತ್ತಿದೆ. ಯಾವುದೇ ಕಾಗದಪತ್ರ ಮತ್ತು ವೈದ್ಯಕೀಯ ತಪಾಸಣೆ ಇಲ್ಲದೆ ನೀವು ಈ ವಿಮೆಯನ್ನು ತೆಗೆದುಕೊಳ್ಳಬಹುದು.
- ಆಂಡ್ರಾಯ್ಡ್ ಮತ್ತು ಐಒಎಸ್ ಬಳಕೆದಾರರಲ್ಲಿ ಫೋನ್‌ಪೇ ಅಪ್ಲಿಕೇಶನ್‌ನ My Money ವಿಭಾಗವನ್ನು ಕ್ಲಿಕ್ ಮಾಡಿ. - ನಂತರ ವಿಮೆ (Insurance) ಕ್ಲಿಕ್ ಮಾಡಿ. - ಈಗ ಟರ್ಮ್ ಲೈಫ್ ಇನ್ಶುರೆನ್ಸ್‌ಗೆ ಹೋಗಿ. - ಈಗ ನೀವು ವಿಮೆ ಮಾಡಲು ಬಯಸುವ ಮೊತ್ತವನ್ನು ಆಯ್ಕೆ ಮಾಡಿ. - ಇದರ ನಂತರ, ನಿಮ್ಮ ಮತ್ತು ನಾಮಿನಿಯ ಮೂಲ ವಿವರಗಳನ್ನು ನೀವು ಭರ್ತಿ ಮಾಡಬೇಕಾಗುತ್ತದೆ. - ಫೋನ್‌ಪೇ ಮೂಲಕ ಆನ್‌ಲೈನ್ ಪಾವತಿ ಮಾಡುವ ಮೂಲಕ ನೀವು ಪಾಲಿಸಿಯನ್ನು ಖರೀದಿಸಬಹುದು.
ವಿಮೆ ಪಡೆಯಲು, ನಿಮ್ಮ ವಾರ್ಷಿಕ ಆದಾಯ 1 ಲಕ್ಷ ರೂಪಾಯಿ ಅಥವಾ ಅದಕ್ಕಿಂತ ಹೆಚ್ಚಾಗಿರಬೇಕು. ಇದಲ್ಲದೆ ನಿಮ್ಮ ವಯಸ್ಸು 18 ವರ್ಷದಿಂದ 50 ವರ್ಷಗಳ ಒಳಗಿರಬೇಕು. ಇದನ್ನೂ ಓದಿ : ಈ ದಿನದಿಂದ UPI ವ್ಯವಹಾರ ದುಬಾರಿಯಾಗಲಿದೆ, Extra Charge ನೀಡಬೇಕಾಗಲಿದೆ
ನೀವು ಈ ವಿಮೆಯನ್ನು ಕಾಗದಪತ್ರಗಳು ಮತ್ತು ವೈದ್ಯಕೀಯ ತಪಾಸಣೆ ಇಲ್ಲದೆ ತೆಗೆದುಕೊಳ್ಳಲು ಬಯಸಿದರೆ, ನೀವು 1 ಲಕ್ಷ ರೂ.ನಿಂದ 20 ಲಕ್ಷ ರೂ.ವರೆಗೆ ವಿಮೆ ತೆಗೆದುಕೊಳ್ಳಬಹುದು. 1 ಲಕ್ಷದ ವಿಮೆ ಕೇವಲ 149 ರೂ.ಗಳಿಗೆ ಲಭ್ಯವಿದೆ. ಇದಲ್ಲದೆ ಅವಧಿ ಮುಗಿದ ನಂತರ ನೀವು ಫೋನ್‌ಪೇ (Phonepe) ಆ್ಯಪ್ ಮೂಲಕ ವಿಮಾ ನವೀಕರಣವನ್ನು ಸಹ ಪಡೆಯಬಹುದು. ಇದನ್ನೂ ಓದಿ : UPI Transaction: 'UPI ವ್ಯವಹಾರಕ್ಕೆ ಶುಲ್ಕ...' ಸುದ್ದಿ ಸುಳ್ಳು ಎಂದ NPCI
ಅಂಕಿಅಂಶಗಳ ಪ್ರಕಾರ ದೇಶದಲ್ಲಿ ಕೇವಲ 2.73 ರಷ್ಟು ಜನರಿಗೆ ಮಾತ್ರ ವಿಮೆ ಇದೆ. ಹಣ ಮತ್ತು ಅರಿವಿನ ಕೊರತೆಯ ಹೊರತಾಗಿ, ಜನರು ಪೇಪರ್‌ವರ್ಕ್‌ನ ತೊಂದರೆಯನ್ನು ತಪ್ಪಿಸಲು ವಿಮೆ ತೆಗೆದುಕೊಳ್ಳುವುದನ್ನು ತಪ್ಪಿಸುತ್ತಾರೆ ಎಂದು ಹೇಳಲಾಗುತ್ತದೆ. ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ... Android Link - https://bit.ly/3hDyh4G Apple Link - https://apple.co/3loQYe ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.