/kannada/photo-gallery/aishwarya-rai-bachchan-this-actress-who-is-the-owner-of-800-crore-property-has-only-one-daughter-221372 800 ಕೋಟಿ ಆಸ್ತಿಯ ಒಡತಿಯಾದ ಈ ನಟಿಗೆ ಇರೋದು ಒಬ್ಬಳೆ ಮಗಳು.. ವಿಚ್ಛೇದನ ವಿಚಾರಕ್ಕೆ ಸುದ್ದಿಯಲ್ಲಿರುವ ಈ ಚೆಲುವೆ ಯಾರು ಗೊತ್ತಾ? 800 ಕೋಟಿ ಆಸ್ತಿಯ ಒಡತಿಯಾದ ಈ ನಟಿಗೆ ಇರೋದು ಒಬ್ಬಳೆ ಮಗಳು.. ವಿಚ್ಛೇದನ ವಿಚಾರಕ್ಕೆ ಸುದ್ದಿಯಲ್ಲಿರುವ ಈ ಚೆಲುವೆ ಯಾರು ಗೊತ್ತಾ? 221372

Sonakshi Sinha Latest News: ನವದೆಹಲಿ: ಸೋನಾಕ್ಷಿ ಸಿನ್ಹಾ ಇತ್ತೀಚೆಗಷ್ಟೇ ತನ್ನ ಕಾಲೇಜು ಸ್ನೇಹಿತರ ಜೊತೆ ಸೇರಿ ಸಾಮಾಜಿಕ ಮಾಧ್ಯಮದಲ್ಲಿ ಕೆಲ ಭಾಚಿತ್ರಗಳನ್ನು ಹಂಚಿಕೊಂಡಿದ್ದಾರೆ.  ಈ ಭಾವಚಿತ್ರಗಳಲ್ಲಿ ಸೋನಾಕ್ಷಿ ತನ್ನ ಗೋವಾ ರೆಸ್ಟೋರೆಂಟ್ ನಲ್ಲಿ ಸ್ನೇಹಿತರ ಜೊತೆಗೆ ಪೋಸ್ ನೀಡುತ್ತಿರುವುದನ್ನು ನೀವು ಗಮನಿಸಬಹುದು. ಈ ಭಾವಚಿತ್ರಗಳಲ್ಲಿ ಆಲ್ ವೈಟ್ ಔಟ್ ಫಿಟ್ ಹಾಗೂ ಪ್ರಿಂಟೆಡ್ ಶ್ರಾಗ್ ಧರಿಸಿರುವ ಸೋನಾಕ್ಷಿ ತುಂಬಾ ಸ್ಟೈಲಿಶ್ ಕಾಣಿಸುತ್ತಿದ್ದಾರೆ. ಆದರೆ, ಹುಮಾ ಖುರೇಷಿ ಈ ಭಾವಚಿತ್ರಕ್ಕೆ ಮಾಡಿರುವ ಕಾಮೆಂಟ್ ನಿಂದ ಎಲ್ಲರ ಗಮನ ಈ ಭಾವಚಿತ್ರದೆಡೆಗೆ ಸೆಳೆದಿದೆ. 

 
 
 
 

 
 
 
 
 
 
 
 
 
 
 

A post shared by Sonakshi Sinha (@aslisona)

ಸೋನಾಕ್ಷಿ ಸಿನ್ಹಾಗೆ ಕಳ್ಳಿ ಎಂದು ಕರೆದ ಹುಮಾ ಖುರೇಷಿ
ಈ ಭಾವಚಿತ್ರದ ಕುರಿತು ತಮಾಷೆ ಮಾಡಿರುವ ಹುಮಾ, ತನ್ನ ಕೇಶ ವಿನ್ಯಾಸ ಕಾಪಿ ಮಾಡಿದ್ದಕ್ಕಾಗಿ 'ಕಳ್ಳಿ' ಎಂದು ಕರೆದಿದ್ದಾರೆ. ಸೋನಾಕ್ಷಿ ಈ ಭಾವಚಿತ್ರವನ್ನು ತನ್ನ ಅಧಿಕೃತ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಭಾವಚಿತ್ರ ಹಂಚಿಕೊಂಡಿರುವ ಸೋನಾಕ್ಷಿ, ಕ್ಯಾಪ್ಶನ್ ನಲ್ಲಿ ತನ್ನ ಅಭಿಮಾನಿಗಳಿಗೆ ಗೋವಾ ಪ್ರವಾಸ ಕೈಗೊಳ್ಳುವ ಸಲಹೆ ನೀಡಿದ್ದಾರೆ. ಭಾವಚಿತ್ರದಲ್ಲಿ ಸೋನಾಕ್ಷಿ ಕಾಣಿಸಿಕೊಂಡ ಪರಿಗೆ ಸಾಮಾಜಿಕ ಮಾಧ್ಯಮಗಳಲ್ಲಿ ಅಭಿಮಾನಿಗಳು ಭಾರಿ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. 

ಇದನ್ನು ಓದಿ- Drugs Case: Deepika Padukone 'ಹ್ಯಾಲೊವಿನ್ ಪಾರ್ಟಿ' ಸತ್ಯ ಬಹಿರಂಗ

ಇತ್ತೀಚೆಗಷ್ಟೇ ಸೋನಾಕ್ಷಿ ಸಿನ್ಹಾ ಕೇರಳ ಪ್ರವಾಸ ಕೈಗೊಂಡಿದ್ದರು. ಅಲ್ಲಿ ಅವರ ಕೇರಳದ ಪ್ರಾಕೃತಿಕ ಸೌಂದರ್ಯವನ್ನು ಆನಂದಿಸಿದ್ದಾರೆ. ಈ ಸಂದರ್ಭದಲ್ಲಿಯೂ ಕೂಡ ಸೋನಾಕ್ಷಿ ಸಾಮಾಜಿಕ ಮಾಧ್ಯಮಗಳಲ್ಲಿ ತನ್ನ ಅಭಿಮಾನಿಗಳ ಜೊತೆಗೆ  ಭಾವಚಿತ್ರ ಹಂಚಿಕೊಂಡಿದ್ದಳು ಈ ವೇಳೆ ಸೂರ್ಯಾಸ್ತದ ಸಮಯದಲ್ಲಿ ತನ್ನ ಮೋಹಕ ಭಾವಚಿತ್ರಗಳನ್ನು ಹಂಚಿಕೊಂಡಿದ್ದರು. ಆಲ್-ಬ್ಲಾಕ್ ಔಟ್ ಫಿಟ್ ನಲ್ಲಿ ಕಾಣಿಸಿಕೊಂಡಿದ್ದ ಸೋನಾಕ್ಷಿ ಭಾವಚಿತ್ರಗಳಿಗೆ ಅಭಿಮಾನಿಗಳು ಭಾರಿ ಮೆಚ್ಚುಗೆ ವ್ಯಕ್ತಪಡಿಸಿದ್ದರು.

 
 
 
 

 
 
 
 
 
 
 
 
 
 
 

A post shared by Sonakshi Sinha (@aslisona)

ಇದನ್ನು ಓದಿ- ರಾಮಾಯಣದ ಎಲ್ಲ ಪ್ರಶ್ನೆಗಳಿಗೆ ಬಾಲಿವುಡ್ ನಟಿ ಸೋನಾಕ್ಷಿ ಸಿನ್ಹಾ ಉತ್ತರ ನೀಡಿದ್ದು ಹೇಗೆ ಗೊತ್ತೇ?

'ಬುಲ್ ಬುಲ್ ತರಂಗ್'ನಲ್ಲಿ ಸೋನಾಕ್ಷಿ
ಸೋನಾಕ್ಷಿ ವರ್ಕ್ ಫ್ರಂಟ್ ಕುರಿತು ಹೇಳುವುದಾದರೆ, ಶೀಘ್ರದಲ್ಲಿಯೇ ಸೋನಾಕ್ಷಿ(Sonakshi Sinha) ಶ್ರೀ ನಾರಾಯಣ್ ಸಿಂಗ್ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಅವರ ಮುಂದಿನ ಚಿತ್ರ 'ಬುಲ್ ಬುಲ್ ತರಂಗ್'ನಲ್ಲಿ ಪ್ರಮುಖ ಪಾತ್ರ ನಿರ್ವಹಿಸುತ್ತಿದ್ದಾರೆ. ಶ್ರೀ ನಾರಾಯಣ್ ಸಿಂಗ್ ಅವರ ಹಿಂದಿನ ಚಿತ್ರ 'ಟಾಯ್ಲೆಟ್ ಏಕ್ ಪ್ರೇಂ ಕಥಾ' ಹಾಗೂ 'ಬತ್ತಿ ಗುಲ್ ಮೀಟರ್ ಚಾಲೂ'ಗಳಂತೆಯೇ 'ಬುಲ್ ಬುಲ್ ತರಂಗ್' ಕೂಡ ನೈಜ ಘಟನೆಯಿಂದ ಪ್ರೇರಣೆಗೊಂಡ ಕಥಾ ಹಂದರ ಹೊಂದಿದೆ. ಸೋನಾಕ್ಷಿ ಜೊತೆಗೆ ಈ ಚಿತ್ರದಲ್ಲಿ ದಿಗ್ಗಜ ಬಾಲಿವುಡ್ ನಟ ರಾಜ್ ಬಬ್ಬರ್ ಕೂಡ ಪ್ರಮುಖ ಭೂಮಿಕೆಯಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಸೋನಾಕ್ಷಿ ಹಾಗೂ ರಾಜ್ ಬಬ್ಬರ್ ಅವರನ್ನು ಹೊರತುಪಡಿಸಿ ಈ ಚಿತ್ರದಲ್ಲಿ ತಾಹೀರ್ ಭಾಸಿನ್ ಕೂಡ ಕಾಣಿಸಿಕೊಳ್ಳಲಿದ್ದಾರೆ. ಭಾರತದ ಹಳೆ ಸಂಪ್ರದಾಯಗಳನ್ನು ಆಧರಿಸಿದ ಕಥೆಯನ್ನು ಈ ಚಿತ್ರ ಹೊಂದಿದೆ. ಪ್ರಕಟಗೊಂಡ ವರದಿಗಳನ್ನು ನಂಬುವುದಾದರೆ ಈ ಚಿತ್ರದ ಶೂಟಿಂಗ್ ಈ ವರ್ಷದ ಏಪ್ರಿಲ್ ನಲ್ಲಿ ಆರಂಭಗೊಳ್ಳಲಿದೆ.

ಇದನ್ನು ಓದಿ- ಸೋನಾಕ್ಷಿ ಸಿನ್ಹಾ ಅವರೊಂದಿಗಿನ ಸಂಬಂಧದ ಬಗ್ಗೆ ಮೌನ ಮುರಿದ ಜಹೀರ್ ಇಕ್ಬಾಲ್

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy

ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Section: 
English Title: 
bollywood actress humaa qureshi calls sonakshi sinha thief on recent picture know why
News Source: 
Home Title: 

Sonakshi Sihnaಗೆ ಕಳ್ಳಿ ಎಂದು ಕರೆದ Huma Qurreshi, ಕಾರಣ ಇಲ್ಲಿದೆ

Sonakshi Sihnaಗೆ ಕಳ್ಳಿ ಎಂದು ಕರೆದ Huma Qurreshi, ಕಾರಣ ಇಲ್ಲಿದೆ
Caption: 
Sonakshi Sinha Latest News (File Image)
Yes
Is Blog?: 
No
Tags: 
Facebook Instant Article: 
Yes
Highlights: 

ಸೋನಾಕ್ಷಿಯನ್ನು ಕಳ್ಳಿ ಎಂದು ಕರೆದ ಹುಮಾ ಖುರೇಷಿ.

ಇತ್ತೀಚೆಗಷ್ಟೇ ಕೇರಳದ ಪ್ರವಾಸ ಕೈಗೊಂಡಿದ್ದ ಸೋನಾಕ್ಷಿ.

ಶೀಘ್ರದಲ್ಲಿಯೇ 'ಬುಲ್ ಬುಲ್ ತರಂಗ್' ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಸೋನಾಕ್ಷಿ.

Mobile Title: 
Sonakshi Sihnaಗೆ ಕಳ್ಳಿ ಎಂದು ಕರೆದ Huma Qurreshi, ಕಾರಣ ಇಲ್ಲಿದೆ
Nitin Tabib
Publish Later: 
No
Publish At: 
Saturday, January 9, 2021 - 19:32
Created By: 
Nitin Tabib
Updated By: 
Nitin Tabib
Published By: 
Nitin Tabib
Request Count: 
10