Share Market Update -ಮುಂಬೈ: ಬಾಂಬೆ ಸ್ಟಾಕ್ ಎಕ್ಸ್ಚೇಂಜ್ (BSE) ನ ಪ್ರಮುಖ ಸೂಚ್ಯಂಕವಾಗಿರುವ ಸೆನ್ಸೆಕ್ಸ್ ಇದೀಗ ಐತಿಹಾಸಿಕ ದಾಖಲೆಯಾಗಿರುವ 50,000 ಅಂಕಗಳಿಂದ ಕೇವಲ 300 ಪಾಯಿಂಟ್ಗಳಷ್ಟು ದೂರದಲ್ಲಿದೆ. ಬುಧವಾರ ಬೆಳಗ್ಗೆ ಬ್ಯಾಂಕಿಂಗ್ ಷೇರುಗಳು ವ್ಯವಹಾರದಲ್ಲಿ ಭರಾಟೆ ಕಂಡುಬಂದಿದೆ. ಬ್ಯಾಂಕ್ ನಿಫ್ಟಿ (Bank Nifty) ಕೂಡ ಶೇಕಡಾ 1 ರಷ್ಟು ಹೆಚ್ಚಳದೊಂದಿಗೆ ಹೊಸ ದಾಖಲೆಯ ಮಟ್ಟಕ್ಕೆ ಅಂದರೆ 32,683 ಕ್ಕೆ ತಲುಪಿದೆ.
ಇದನ್ನು ಓದಿ- Stock Market Update:ಹೊಸ ಇತಿಹಾಸ ರಚಿಸಿದ ಷೇರು ಮಾರುಕಟ್ಟೆ
ಐಸಿಐಸಿಐ ಬ್ಯಾಂಕ್, ಆಕ್ಸಿಸ್ ಬ್ಯಾಂಕ್ ಷೇರುಗಳ ಬೆಲೆಯಲ್ಲಿ ಕ್ರಮೇಣವಾಗಿ ಶೇ.2 ಮತ್ತು ಶೇ.1 ರಷ್ಟು ಏರಿಕೆಯಾಗಿದೆ. ಸರ್ಕಾರಿ ಸ್ವಾಮ್ಯದ ಬ್ಯಾಂಕುಗಳಲ್ಲಿ, ಬ್ಯಾಂಕ್ ಆಫ್ ಬರೋಡಾ ಶೇ.4 ರಷ್ಟು ಏರಿಕೆ ದಾಖಲಿಸಿದ್ದಾರೆ ಮತ್ತು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಶೇ.3 ರಷ್ಟು ವೃದ್ಧಿ ಕಂಡಿದೆ. ಇಂದು, ಸೆನ್ಸೆಕ್ಸ್ ಹಿಂದಿನ ದಿನದಾಂತ್ಯದ 49,728 ಅಂಕಗಳಿಂದ ಆರಂಭಗೊಂಡು 200 ಪಾಯಿಂಟ್ಗಳಷ್ಟು ವಹಿವಾಟು ನಡೆಸುತ್ತಿದೆ. ಇದೇ ವೇಳೆ ನಿಫ್ಟಿ ಕೂಡ ಶೇಕಡಾ 0.6 ರಷ್ಟು ಲಾಭದೊಂದಿಗೆ 14,636 ಅಂಕಗಳೊಂದಿಗೆ ತನ್ನ ದಿನದ ವಹಿವಾಟು ಮುಂದುವರೆಸಿದೆ.
ಇದನ್ನು ಓದಿ- Gold Rate : ಚಿನಿವಾರ ಪೇಟೆಯ ಶಾಕಿಂಗ್ ನ್ಯೂಸ್, ಬಂಗಾರ ಇನ್ನು ಬಲು ಭಾರ..! ಯಾಕೆ ಗೊತ್ತಾ..?
ಬೆಳಗ್ಗೆ 11 ಗಂಟೆಯ ಸುಮಾರಿಗೆ ನಿಫ್ಟಿ ಸೂಚ್ಯಂಕ ಶೇ.0.33 ರಷ್ಟು ಏರಿಕೆಯೊಂದಿಗೆ 14611 ಅಂಕಗಳ ಮೂಲಕ ವಹಿವಾಟು ಮುಂದುವರೆಸಿದೆ. ಇನ್ನೊಂದೆಡೆ ಇದೆ ಅವಧಿಯಲ್ಲಿ BSE ಸೆನ್ಸೆಕ್ಸ್ ಸೂಚ್ಯಂಕ ಕೂಡ ಶೇ.0.26 ರಷ್ಟು ಏರಿಕೆಯೊಂದಿಗೆ 49,645 ಅಂಕಗಳ ಮೇಲೆ ತನ್ನ ದಿನದ ವಹಿವಾಟು ಮುಂದುವರೆಸುತ್ತಿದೆ. ಭಾರತಿ ಏರ್ಟೆಲ್ ಸೇರಿದಂತೆ ಟಾಟಾ ಮೋಟರ್ಸ್ ಹಾಗೂ ರಿಲಯನ್ಸ್ ಷೇರುಗಳಲ್ಲಿ ಭಾರಿ ವೇಗ ಕಂಡುಬರುತ್ತಿದೆ. ಹೀಗಾಗಿ ಇಂದು ದಿನದಾಂತ್ಯದ ವರೆಗೆ ಷೇರು ಮಾರುಕಟ್ಟೆ ಐತಿಹಾಸಿಕ 50 ಸಾವಿರ ಅಂಕಗಳ ಗಡಿ ದಾಟಲಿದೆಯೇ ಎಂಬ ಕುತೂಹಲ ಎಲ್ಲರಲ್ಲೂ ಮೂಡಿದೆ.
ಇದನ್ನು ಓದಿ- ಪ್ರಧಾನಿ ಘೋಷಿಸಿರುವ ಆರ್ಥಿಕ ಪ್ಯಾಕೇಜ್ ನಂತರ ಷೇರು ಮಾರುಕಟ್ಟೆಯಲ್ಲಿ ಭಾರಿ ಚೇತರಿಕೆ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.