ನವದೆಹಲಿ: ಕೃಷಿ ಕಾನೂನಿನ ವಿರುದ್ಧ ಹೋರಾಟ ನಡೆಯುತ್ತಿರುವ ಬೆನ್ನಲ್ಲೆ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಫೆಬ್ರವರಿ 1ರಂದು ಬಜೆಟ್ ಮಂಡನೆ ಮಾಡಲಿದ್ದಾರೆ. ಕೊರೊನಾ ಮಧ್ಯದ ಬಜೆಟ್ ಮೇಲೆ ಸಾಕಷ್ಟು ನಿರೀಕ್ಷೆಯಿದೆ. ಬಜೆಟ್ ನಲ್ಲಿ ರೈತರಿಗೆ ಸರ್ಕಾರ ಮತ್ತಷ್ಟು ಖುಷಿ ಸುದ್ದಿ ನೀಡುವ ಸಾಧ್ಯತೆಯಿದೆ.
ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ ರೈತ(Farmers)ರಿಗೆ 6 ಸಾವಿರ ರೂಪಾಯಿ ಸಿಗ್ತಿದೆ. ಆದ್ರೆ 2021-2022ರ ಬಜೆಟ್ ನಲ್ಲಿ ಇದನ್ನು ಹೆಚ್ಚಿಸುವ ಸಾಧ್ಯತೆಯಿದೆ. ಪಿಎಂ ಕಿಸಾನ್ ಸಮ್ಮಾನ್ ನಿಧಿಯಲ್ಲಿ ನೀಡಲಾಗ್ತಿರುವ ಮೊತ್ತವನ್ನು ಹೆಚ್ಚಿಸುವಂತೆ ರೈತರು ಒತ್ತಾಯಿಸಿದ್ದಾರೆ. ಪಿಎಂ ಕಿಸಾನ್ ಸಮ್ಮಾನ್ ನಿಧಿಯಲ್ಲಿ ಸರ್ಕಾರ ತಿಂಗಳಿಗೆ ನೀಡುವ 500 ರೂಪಾಯಿ ಸಾಲುವುದಿಲ್ಲ. ಒಂದು ಎಕರೆ ಭತ್ತದ ಬೆಲೆಗೆ 3ರಿಂದ 3.5 ಸಾವಿರ ರೂಪಾಯಿ ಖರ್ಚಾಗುತ್ತದೆ. ಕಬ್ಬಿನ ಬೆಳೆಗಾದ್ರೆ 2ರಿಂದ ಎರಡೂವರೆ ಸಾವಿರ ಖರ್ಚಾಗುತ್ತದೆ ಎಂದು ರೈತರು ಹೇಳಿದ್ದಾರೆ. ಸರ್ಕಾರ ರೈತರಿಗೆ ನೀಡುವ ಹಣವನ್ನು ಹೆಚ್ಚಿಸಿದ್ರೆ ರೈತರಿಗೆ ನೆಮ್ಮದಿ ಸಿಗಲಿದೆ ಎಂದು ರೈತರು ಹೇಳಿದ್ದಾರೆ.
Corona Vaccine Update: ಈ ರಾಜ್ಯಗಳಲ್ಲಿ ಕೊರೊನಾ ಲಸಿಕೆಯ ಉಚಿತ ವಿತರಣೆ
ಕೇಂದ್ರ ಸರ್ಕಾರ 2018ರಲ್ಲಿ ಈ ಯೋಜನೆ ಶುರು ಮಾಡಿದೆ. ರೈತರ ಖಾತೆಗೆ ವಾರ್ಷಿಕ 6 ಸಾವಿರ ರೂಪಾಯಿ ನೀಡಲಾಗ್ತಿದೆ. 2020ರ ಡಿಸೆಂಬರ್ 25ರಂದು ಸುಮಾರು 18,000 ಕೋಟಿ ರೂಪಾಯಿಯನ್ನು 9 ಕೋಟಿ ರೈತರ ಖಾತೆಗೆ ವರ್ಗಾಯಿಸಿದ್ದಾರೆ.
'ಬಿಜೆಪಿಗೆ ಬಂಗಾಳ ಮತ್ತು ಯುಪಿಯಲ್ಲಿ ಅಸಾದುದ್ದೀನ್ ಓವೈಸಿ ಸಹಾಯ ಮಾಡಲಿದ್ದಾರೆ'
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ