ಕಲಬುರಗಿ: ರಾಜ್ಯದಲ್ಲಿ ಮಹಿಳಾ ಕಾಂಗ್ರೆಸ್ ಬಲವರ್ಧನೆಗೆ ಅತ್ಯಂತ ಯೋಜಿತ ರೀತಿಯಲ್ಲಿ ಕೆಲಸ ಮಾಡಲಾಗುತ್ತಿದೆ. ನಾಡ ಶಕ್ತಿ ಅಭಿಯಾನದ ಅಡಿಯಲ್ಲಿ ಬೂತ್ ಮತ್ತು ವಾರ್ಡು ಮಟ್ಟದಲ್ಲಿ ಕಾರ್ಯಪಡೆ ರಚನೆ ಮಾಡುವುದು, ಮುಂಬರುವ ಚುನಾವಣೆಗಳಲ್ಲಿ ಅತೀ ಹೆಚ್ಚು ಮಹಿಳೆಯರು ಅಧಿಕಾರಕ್ಕೆ ಬರುವಂತೆ ಮಾಡುವುದು ನಮ್ಮ ಗುರಿಯಾಗಿದೆ ಎಂದು ರಾಜ್ಯ ಮಹಿಳಾ ಕಾಂಗ್ರೆಸ್ ಘಟಕದ ಅಧ್ಯಕ್ಷೆ ಪುಷ್ಪಾ ಅಮರನಾಥ ಹೇಳಿದರು.
ಕಾಂಗ್ರೆಸ್ ಕಚೇರಿಯಲ್ಲಿ ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅಧ್ಯಕ್ಷೆ ಪುಷ್ಪಾ ಅಮರನಾಥ, 10 ಜನ ಮಹಿಳೆಯರ ತಂಡಗಳು ಶೀಘ್ರವೇ ರಚನೆಯಾಗಲಿದ್ದು, ಇವುಗಳ ಮುಖೇನ ತಳ ಮಟ್ಟದಲ್ಲಿ ಕಾಂಗ್ರೆಸ್(Congress) ಕಟ್ಟುವ ಕೆಲಸ ಆರಂಭಿಸಲಾಗುತ್ತಿದೆ. ಬಹಳ ವರ್ಷಗಳಿಂದ ತಳ ಮಟ್ಟದಲ್ಲಿ ನಾವು ಕೆಲಸಗಳನ್ನು ಮಾಡುತ್ತಿದ್ದೇವು. ಕೆಲವು ಸಂಪರ್ಕಗಳು ಈಗ ಬಿಟ್ಟು ಹೋಗಿವೆ. ಅವುಗಳನ್ನು ಪುನಃ ಸ್ಥಾಪಿಸುವ ನಿಟ್ಟಿನಲ್ಲಿ ಮತ್ತೆ ಮಹಿಳಾ ಕಾಂಗ್ರೆಸ್ ಮನೆ ಮನೆ ಸಂಪರ್ಕ ಸಾಧಿಸುವ ಪ್ರಯತ್ನ ಮಾಡಲಾಗುವುದು ಎಂದರು.
B.C.Patil: ರೈತರ ಬಗ್ಗೆ ಮತ್ತೆ ವಿವಾದಾತ್ಮಕ ಹೇಳಿಕೆ ನೀಡಿದ ಸಚಿವ ಬಿ.ಸಿ.ಪಾಟೀಲ್..!
ಇಂದು ಎಲ್ಲ ರಾಜಕೀಯ ಪಕ್ಷಗಳಲ್ಲಿ ಮಹಿಳಾ ಮೀಸಲಾತಿ ಬಗ್ಗೆ ಚರ್ಚೆ ಇದೆ. ಆದರೆ, ಕಾಂಗ್ರೆಸ್ ಮಹಿಳೆಯರಿಗೆ ಕೊಟ್ಟಿರುವಂತಹ ಅವಕಾಶ ಯಾರೂ ಕೊಟ್ಟಿಲ್ಲ. ಬಿಜೆಪಿ ಬರಿ ಸುಳ್ಳುಗಳನ್ನೇ ಹೇಳಿಯೇ ಅಧಿಕಾರಕ್ಕೆ ಬಂದಿದೆಯೇ ಹೊರತು. ಅದರಲ್ಲಿ ಏನು ವಿಶೇಷತೆ ಇಲ್ಲ. ಕಾರ್ಪೋರೇಟ್ ಧಣಿಗಳ ಓಲೈಕೆ ಮಾಡುತ್ತಲೇ ದೇಶವನ್ನು ಅಂಧಕ್ಕಾರಕ್ಕೆ ಮತ್ತು ಗುಲಾಮಗಿರಿಗೆ ತಳ್ಳಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕೃಷ್ಣ ನಗರಿ ಉಡುಪಿಯಲ್ಲಿ ಯಡಿಯೂರಪ್ಪ ದಿಡೀರ್ ದೇಗುಲಯಾತ್ರೆ ! ಈ ಹೊತ್ತಲ್ಲಿ ಯಾಕೆ ಟೆಂಪಲ್ ರನ್..!
ಈ ವೇಳೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಜಗದೇವ ಗುತ್ತೇದಾರ, ಮಾಜಿ ಎಂಎಲ್ಸಿ ಅಲ್ಲಂಪ್ರಭು ಪಾಟೀಲ ನೆಲೋಗಿ, ಮಹಿಳಾ ಘಟಕದ ಅಧ್ಯಕ್ಷೆ ಲತಾ ರಾಠೋಡ, ಸವಿತಾ ಸಜ್ಜನ್, ರೇಣುಕಾ ಚವ್ಹಾಣ, ವನಿಲಾ ಸೂರ್ಯವಂಶಿ ಸೇರಿದಂತೆ ಅನೇಕರು ಹಾಜರಿದ್ದರು.
JDS : ಇನ್ನು ತಳಮಟ್ಟದಲ್ಲೇ ಬಲಶಾಲಿಯಾಗಲಿದೆ ಜೆಡಿಎಸ್, ಇಲ್ಲಿದೆ ದಳಪತಿಗಳ ಪಕ್ಕಾ ಪ್ಲಾನ್..!
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.