ಬೆಂಗಳೂರು: ಕಾಂಗ್ರೆಸ್ ಪ್ರತಿಭಟನೆಯ ಸಂದರ್ಭದಲ್ಲಿ ಮಹಿಳಾ ಪೊಲೀಸ್ ಪೇದೆಯ ಮೇಲೆ ಹಲ್ಲೆ ವಿಚಾರವಾಗಿ ಟ್ವಿಟ್ಟರ್ನಲ್ಲಿ ಸಚಿವ ಶ್ರೀರಾಮುಲು ಹಾಗೂ ಶಾಸಕಿ ಸೌಮ್ಯ ರೆಡ್ಡಿ ನಡುವೆ ಜಟಾಪಟಿ ನಡೆದಿದೆ.
ನೂತನ ಕೃಷಿ ಕಾಯ್ದೆಗಳನ್ನು ವಿರೋಧಿಸಿ ಬುಧವಾರ ಕಾಂಗ್ರೆಸ್(Congress) ಬೆಂಗಳೂರಿನಲ್ಲಿ ಪ್ರತಿಭಟನೆ ಹಾಗೂ ರಾಜಭವನ ಚಲೋ ಹಮ್ಮಿಕೊಂಡಿತ್ತು. ಈ ಸಂದರ್ಭದಲ್ಲಿ ರಾಜಭವನ ಮುತ್ತಿಗೆ ಹಾಕಲು ಮುಂದಾದ ಪ್ರತಿಭಟನಾಕಾರನ್ನು ವಶಕ್ಕೆ ಪಡೆಯಲು ಪೊಲೀಸರು ಮುಂದಾದರು.
ನನ್ನ ಮನೆಯ ಹೆಣ್ಣುಮಕ್ಕಳು ಪ್ರಬುದ್ಧರು. ರೈತರ ಪರವಾಗಿರುವ ಕೃಷಿ ಕಾಯ್ದೆಯ ವಿರುದ್ಧ ಹೋರಾಟ ಮಾಡುವವರಲ್ಲ.
ಪೊಲೀಸರು ಹೊಡೆದರು ಎಂದು ಆರೋಪಿಸುವ ನೀವು, ರಾಜಕಾರಣಿಯಾಗಿ ಕಾನೂನು ಕ್ರಮ ಕೈಗೊಳ್ಳಬಹುದಿತ್ತಲ್ಲ? ನಮ್ಮ ಸಂವಿಧಾನದ ಮೇಲೆ ಇಷ್ಟು ಬೇಗ ನಂಬಿಕೆ ಕಳೆದುಕೊಂಡುಬಿಟ್ಟಿರೇನು?
ಪೊಲೀಸರಿಗೆ ಹೊಡೆದ ಅಪ್ರಬುದ್ಧ ವರ್ತನೆಗೆ ಕ್ಷಮೆಯಾಚಿಸಿ. https://t.co/aedRgWprro— B Sriramulu (@sriramulubjp) January 21, 2021
ಈ ವೇಳೆ ತಮ್ಮನ್ನು ವಶಕ್ಕೆ ಪಡೆಯಲು ಬಂದ ಮಹಿಳಾ ಪೊಲೀಸ್ ಪದೇ ಸರಿಯಾಗಿ ವರ್ತನೆ ಮಾಡಿಲ್ಲ ಎಂಬ ಕಾರಣಕ್ಕಾಗಿ ಕೋಪಗೊಂಡ ಸೌಮ್ಯ ರೆಡ್ಡಿ ಕೈಯಲ್ಲಿ ಹೊಡೆದಿದ್ದರು. ಶಾಸಕಿಯ ಈ ವರ್ತನೆ ಸಾಕಷ್ಟು ಆಕ್ರೋಶಕ್ಕೆ ಕಾರಣವಾಗಿತ್ತು.
Siddaganga Swamiji: ಸಿದ್ಧಗಂಗಾಶ್ರೀಗಳ ಪುಣ್ಯಸ್ಮರಣೆ ದಿನ 'ದಾಸೋಹ ದಿನ'ವನ್ನಾಗಿ ಆಚರಣೆ: ಸಿಎಂ ಬಿಎಸ್ ವೈ
ಸಚಿವ ಶ್ರೀರಾಮುಲು ಅವರು ಸೌಮ್ಯ ರೆಡ್ಡಿ ಈ ವರ್ತನೆಯನ್ನು ಖಂಡಿಸಿ ಟ್ವೀಟ್ ಮಾಡಿದ್ದರು. ಇದಕ್ಕೆ ಪ್ರತಿಕ್ರಿಯೆ ನೀಡಿದ್ದ ಸೌಮ್ಯ ರೆಡ್ಡಿ, ಇಷ್ಟೆಲ್ಲಾ ಮಾತಾಡುವ ನೀವು ಧೈರ್ಯವಿದ್ದರೆ ಅದೇ ಪೊಲೀಸರು ನನ್ನೊಂದಿಗೆ ಕೆಟ್ಟದಾಗಿ ವರ್ತಿಸಿದ, 20 ನಿಮಿಷಕ್ಕೂ ಹೆಚ್ಚು ಸಮಯ ಬಲವಂತವಾಗಿ ಹಿಡಿದು ಎಳೆದಾಡಿದ ವಿಡಿಯೋ ಹಂಚಿಕೊಳ್ಳಿ. ನನ್ನ ಜಾಗದಲ್ಲಿ ನಿಮ್ಮದೇ ಮಗಳೋ, ತಂಗಿಯೋ ಇದ್ದಿದರೆ ಇದೇ ಮಾತು ಹೇಳ್ತಿದ್ರ ? ಎಂದು ಪ್ರಶ್ನಿಸಿದ್ದರು.
Ration Card: ಖಾತೆ ಹಂಚಿಕೆ ಬೆನ್ನಲ್ಲೇ 'ಪಡಿತರ ಚೀಟಿ'ದಾರರಿಗೆ 'ಸಿಹಿ ಸುದ್ದಿ' ನೀಡಿದ ಉಮೇಶ್ ಕತ್ತಿ..!
ಇದಕ್ಕೆ ಇದೀಗ ಟ್ವಿಟ್ಟರ್ನಲ್ಲಿ ಪ್ರತಿಕ್ರಿಯೆ ನೀಡಿರುವ ಶ್ರೀರಾಮುಲು, ನನ್ನ ಮನೆಯ ಹೆಣ್ಣುಮಕ್ಕಳು ಪ್ರಬುದ್ಧರು. ರೈತರ ಪರವಾಗಿರುವ ಕೃಷಿ ಕಾಯ್ದೆಯ ವಿರುದ್ಧ ಹೋರಾಟ ಮಾಡುವವರಲ್ಲ. ಪೊಲೀಸರು ಹೊಡೆದರು ಎಂದು ಆರೋಪಿಸುವ ನೀವು, ರಾಜಕಾರಣಿಯಾಗಿ ಕಾನೂನು ಕ್ರಮ ಕೈಗೊಳ್ಳಬಹುದಿತ್ತಲ್ಲ? ನಮ್ಮ ಸಂವಿಧಾನದ ಮೇಲೆ ಇಷ್ಟು ಬೇಗ ನಂಬಿಕೆ ಕಳೆದುಕೊಂಡುಬಿಟ್ಟಿರೇನು? ಪೊಲೀಸರಿಗೆ ಹೊಡೆದ ಅಪ್ರಬುದ್ಧ ವರ್ತನೆಗೆ ಕ್ಷಮೆಯಾಚಿಸಿ ಎಂದು ಆಗ್ರಹಿಸಿದ್ದಾರೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.