ಬೆಂಗಳೂರು: ರಾಜಕಾರಣದಲ್ಲಿ ಖಾತೆ ಕ್ಯಾತೆ ಸರ್ವೇ ಸಾಮಾನ್ಯ. ಎಲ್ಲರನ್ನು ತೃಪ್ತಿಪಡಿಸಲು ದೇವರಿಂದಲೂ ಸಾಧ್ಯವಿಲ್ಲ ಎಂದು ಕಂದಾಯ ಸಚಿವ ಆರ್.ಅಶೋಕ್ ಹೇಳಿದ್ದಾರೆ.
ಇಂದು ವಿಧಾನಸೌಧದಲ್ಲಿ ಮಾತನಾಡಿದ ಸಚಿವ ಆರ್.ಅಶೋಕ್(R Ashok), ಮುಖ್ಯಮಂತ್ರಿ ಅವರು ಎಲ್ಲ ರೀತಿಯಿಂದ ಯೋಚಿಸಿ ಖಾತೆ ಹಂಚಿಕೆ ಮಾಡಿದ್ದಾರೆ. ಗೋಪಾಲಯ್ಯ ಅವರ ಜತೆ ಮಾತನಾಡಿದ್ದೇನೆ. ಎಂಟಿಬಿ ಅವರ ಜತೆಯೂ ಚರ್ಚಿಸಿದ್ದೇನೆ. ಸಿಎಂ ಮೇಲೆ ಎಲ್ಲರಿಗೂ ಭರವಸೆ ಇದೆ. ಸಮಸ್ಯೆಯನ್ನು ಬೇಗ ಉಪಶಮನ ಮಾಡಲಾಗುತ್ತದೆ. ಮಾಧುಸ್ವಾಮಿಯವರೂ ರಾಜೀನಾಮೆ ನೀಡಿಲ್ಲ. ಅವರಿಗೂ ಉತ್ತಮ ಖಾತೆ ಸಿಕ್ಕಿದೆ. ಇದು ಸಾಮೂಹಿಕ ನಿರ್ಧಾರ ಆಗಿದೆ. ಇದಕ್ಕೆ ಎಲ್ಲರ ಸಹಮತ ಇದೆ ಎಂದರು.
MP Renukacharya: ಸಚಿವ ಸ್ಥಾನ ಸಿಗದೆ ಮುನಿಸಿಕೊಂಡಿದ್ದ ರೇಣುಕಾಚಾರ್ಯಗೆ ಸಿಎಂ ಭರ್ಜರಿ ಗಿಫ್ಟ್..!
ಖಾತೆ ಬದಲಾವಣೆ ಮುಖ್ಯಮಂತ್ರಿ ಅವರ ಪರಮಾಧಿಕಾರ. ಅದನ್ನು ಯಾರೂ ಪ್ರಶ್ನೆ ಮಾಡುವ ಹಾಗಿಲ್ಲ. ನಾನು ಯಾವುದೇ ಖಾತೆ ಕ್ಯಾತೆ ತೆಗಿದಿಲ್ಲ. ನಾನು ಗೃಹ ಇಲಾಖೆಯನ್ನೂ ಕೇಳಿಲ್ಲ. ನಾನು ಖಾತೆ ಬದಲಾವಣೆಗೆ ಕೇಳೇ ಇಲ್ಲ ಎಂದು ಇದೇ ವೇಳೆ ಸ್ಪಷ್ಟಪಡಿಸಿದರು.
B.Sriramulu: ಟ್ವಿಟ್ಟರ್ನಲ್ಲಿ ಸೌಮ್ಯ ರೆಡ್ಡಿ v/s ಶ್ರೀರಾಮುಲು ಜಟಾಪಟಿ..!
ಯಡಿಯೂರಪ್ಪ ನಾಲ್ಕು ಬಾರಿ ಮುಖ್ಯಮಂತ್ರಿ ಯಾದವರು. ಇದೇ ಮೊದಲ ಬಾರಿ ಸಿಎಂ ಆಗಿಲ್ಲ. ಅಳೆದು ತೂಗಿ ಖಾತೆ ಹಂಚಿಕೆ ಮಾಡಿದ್ದಾರೆ. ಯಾರಿಗೆ ಏನು ಕೊಡಬೇಕು ಅನಿಸಿದೆ ಅದು ಕೊಟ್ಟಿದ್ದಾರೆ. ಸಿಎಂ ಅಧಿಕಾರ ಪ್ರಶ್ನೆ ಮಾಡುವುದು ಸರಿಯಲ್ಲ. ಅವರಿಗೆ ಎಲ್ಲಾ ಕಲೆಗಳು ಗೊತ್ತಿದೆ. ಅದಕ್ಕನುಗುಣವಾಗಿ ಅವರು ಖಾತೆ ಬದಲಾವಣೆ ಮಾಡಿದ್ದಾರೆ. ನಾವೆಲ್ಲರೂ ಪಕ್ಷದ ಶಿಸ್ತಿನ ಸಿಪಾಯಿಗಳಾಗಿದ್ದೇವೆ ಎಂದು ತಿಳಿಸಿದರು.
Siddaganga Swamiji: ಸಿದ್ಧಗಂಗಾಶ್ರೀಗಳ ಪುಣ್ಯಸ್ಮರಣೆ ದಿನ 'ದಾಸೋಹ ದಿನ'ವನ್ನಾಗಿ ಆಚರಣೆ: ಸಿಎಂ ಬಿಎಸ್ ವೈ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.