ಬೆಂಗಳೂರು : ದೇವರಿಗೆ ಪೂಜೆ ಮಾಡದೇ ನಮ್ಮ ಮುಂಜಾನೆ ಪೂರ್ಣ ಗೊಳ್ಳುವುದಿಲ್ಲ. ಸಾಮಾನ್ಯವಾಗಿ ದಿನಕ್ಕೆರಡು ಸಲವಾದರೂ ದೇವರಿಗೆ ಮನೆಯಲ್ಲಿ ಪೂಜೆ (Pooja) ಮಾಡುತ್ತೀರಿ. ಮನೆಯಲ್ಲೊಂದು ದೇವರ ಮನೆಯೂ (Pooja Room) ಇರುತ್ತದೆ. ಅಥವಾ ಕನಿಷ್ಠ ಒಂದು ದೇವರ ಸ್ಟ್ಯಾಂಡ್ ಆದರೂ ಇದ್ದೇ ಇರುತ್ತದೆ. ಮನೆಯಲ್ಲಿ ದೇವರ ಅಸ್ತಿತ್ವಕ್ಕೆ ಸಾಕಷ್ಟು ಮಹತ್ವವಿದೆ. ಹಾಗಾಗಿ, ಪೂಜೆ ಮಾಡುವಾಗ ಕೆಲವೊಂದು ವಿಚಾರಗಳಲ್ಲಿ ತಪ್ಪು ಮಾಡಲೇ ಬಾರದು..
ದೇವರ ಮನೆಯಲ್ಲಿ ಹೀಗೆಲ್ಲಾ ಮಾಡಬಾರದು..!
ಪೂಜೆ ಪಾಠದಲ್ಲಿ ನಿಷ್ಠೆಯಿರುವವರು ಕೆಲವೊಂದು ವಿಚಾರಗಳನ್ನು ಪೂಜಾ ಗೃಹದಲ್ಲಿ(Pooja Room) ಅನುಸರಿಸಲೇ ಬೇಕು. ಇಲ್ಲದೇ ಹೋದರೆ ಗಂಭೀರ ವಾಸ್ತುದೋಷ ಉಂಟಾಗಬಹುದು ಎಂದು ಹೇಳುತ್ತಾರೆ ವಾಸ್ತು ಪಂಡಿತರು. ಭಗವಂತನ ಗರಿಮೆಯನ್ನು ಹೆಚ್ಚಿಸಿ, ಆತನ ಅನುಗ್ರಹಕ್ಕೆ ಪಾತ್ರರಾಗುವುದೇ ಪೂಜೆಯ ಪರಮೋದ್ದೇಶ. ಹಾಗಾದರೆ ಪೂಜೆ ಪಾವಿತ್ರ್ಯ ಹೆಚ್ಚಿಸುವುದು ಹೇಗೆ..? ವಾಸ್ತುಪಂಡಿತರು (Vastu Tips) ಹೇಳುವ ಕೆಲವೊಂದು ವಿಚಾರಗಳು ಹೀಗಿವೆ.
ಇದನ್ನೂ ಓದಿ : ಯಾರಿಗೂ ಹೇಳದೆ Saturday ಸಂಜೆ ಈ ಕೆಲಸ ಮಾಡಿದರೆ ನಿಮ್ಮ ಅದೃಷ್ಟವೇ ಬದಲಾಗುತ್ತೆ
ದೇವರ ಮೂರ್ತಿ, ಫೋಟೋ ನೆಲದ ಮೇಲಿಡಬೇಡಿ..!
ವಾಸ್ತುಶಾಸ್ತ್ರದ (Vastu Shastra) ಪ್ರಕಾರ ಯಾವೊತ್ತಿಗೂ ದೇವರ ಫೋಟೊ, ದೇವರ ಮೂರ್ತಿಯನ್ನು (Statue) ನೆಲದ ಮೇಲಿಡಬಾರದು. ಇದರಿಂದ ಗಂಭೀರ ವಾಸ್ತು ದೋಷ ಉಂಟಾಗುತ್ತದೆ. ಪೂಜಾ ಗೃಹವನ್ನು ಸ್ವಚ್ಛಮಾಡುವಾಗ ಯಾವುದಾದರೂ ಒಂದು ಸ್ವಚ್ಛ ಸ್ಥಳದ ಮೇಲೆ ಸ್ವಚ್ಛ ಬಟ್ಟೆ ಹಾಕಿ. ಅದರ ಮೇಲೆ ದೇವರ ಮೂರ್ತಿ ಅಥವಾ ಫೋಟೋ ಇಡಿ.
ಶಿವಲಿಂಗ ನೆಲದ ಮೇಲಿಡ ಬಾರದು..!
ಶಿವಲಿಂಗ(Shivlinga) ವನ್ನು ಯಾವತ್ತಿಗೂ ರೇಷ್ಮೆ ಬಟ್ಟೆ (Silk Cloth) ಹಾಕಿ ಅದರ ಮೇಲೆಯೇ ಇಡಬೇಕು. ಇಲ್ಲದೇ ಹೋದರೆ ಅದು ವಾಸ್ತುದೋಷಕ್ಕೆ ಕಾರಣವಾದೀತು. ಇದರಿಂದ ಮನೆಯಲ್ಲಿ ದಾರಿದ್ರ್ಯ ಉಂಟಾಗಬಹುದು. ಹಾಗಾಗಿ ಶಿವಲಿಂಗದ ಪಾವಿತ್ರ್ಯತೆ ಪಾಲಿಸಿ.
ಇದನ್ನೂ ಓದಿ : ಸುಖ, ಸಮೃದ್ಧಿ ತರಬಲ್ಲದು ಚಿಟಿಕೆ ಉಪ್ಪು..! ವಾಸ್ತು ನಂಬುವವರು ಓದಲೇ ಬೇಕು,!
ಶಂಖ ನೆಲದ ಮೇಲಿರಬಾರದು:
ಹೆಚ್ಚಿನವರ ಮನೆಯಲ್ಲಿ ಶಂಖ (Shankh) ಇದ್ಧೇ ಇರುತ್ತದೆ. ಶಂಖನಾದ ಮನೆಯಲ್ಲಿ ನೆಗೆಟಿವ್ ಎನರ್ಜಿ(Negative Energy) ಯನ್ನು ದೂರ ಮಾಡುತ್ತದೆ. ಶಂಖವನ್ನು ಮಹಾಲಕ್ಷ್ಮಿಯ (Maha Lakshmi) ಸಹೋದರ ಎಂದೇ ನಂಬಲಾಗುತ್ತದೆ. ಪವಿತ್ರ ಶಂಖವನ್ನು ಅಪವಿತ್ರ ಮಾಡಬಾರದು. ಪವಿತ್ರ ಶಂಖ ಮನೆಯಲ್ಲಿದ್ದರೆ ಆ ಮನೆ ಲಕ್ಷ್ಮಿಯ ನೆಲೆವೀಡಾಗುತ್ತದೆಯಂತೆ.
ಕಳಸ ನೆಲದ ಮೇಲಿಟ್ಟರೆ ಅದು ಅಶುಭ :
ಪೂಜೆಯಲ್ಲಿ ಕಳಸಕ್ಕೆ (Kalash) ಪವಿತ್ರ ಸ್ಥಾನವಿರುತ್ತದೆ. ಕಳಸವಿಲ್ಲದೆ ಪೂಜೆ ಅಪೂರ್ಣವಾಗುತ್ತದೆ. ಆದರೆ, ಹೆಚ್ಚಿನವರು ಕಳಸವನ್ನು ನೆಲದ ಮೇಲೆ ಇಟ್ಟು ಬಿಡುತ್ತಾರೆ. ಪೂಜಾಕಳಸದಲ್ಲಿ ದೇವರು ಆಹ್ವಾನಿತರಾಗುತ್ತಾರೆ ಎನ್ನಲಾಗುತ್ತದೆ. ಪೂಜಾ ಕಳಸ ನೆಲದ ಮೇಲಿಟ್ಟರು ಅದು ಅಶುಭ ಎನ್ನಲಾಗುತ್ತದೆ. ಇದರಿಂದ ಗಂಭೀರ ವಾಸ್ತುದೋಷ (Vastu Dosh) ಗಳುಂಟಾಗಬಹುದು. ಮನೆ ಉದ್ದಾರವಾಗದೇ ಹೋಗಬಹುದು.
ಇದನ್ನೂ ಓದಿ : Mantra For Beautiful Wife: ಸುಂದರ ಮಡದಿ ಸಿಗಬೇಕೆ? ಈ ಮಂತ್ರ ಪಠಿಸಿ
ಪೂಜಾ ಸಾಮಾಗ್ರಿ ನೆಲದ ಮೇಲಿಡಬಹುದು…!
ಪೂಜೆಗೆ (Pooja) ಬಳಸುವ ದೀಪ, ದೂಪ, ಹೂವಿನ ಹಾರ ಇತ್ಯಾದಿ ವಸ್ತುಗಳು ಸದಾ ಪರಿಶುದ್ಧವಾಗಿರಬೇಕು. ಹಾಗಾಗಿ ಅವುಗಳನ್ನು ಯಾವತ್ತಿಗೂ ನೆಲದ ಮೇಲಿಡಬಾರದು. ಅಂತ ಸನ್ನಿವೇಶ ಎದುರಾದರೆ, ಯಾವುದಾದರೂ ಒಂದು ಸ್ವಚ್ಛ ಬಟ್ಟೆಯ ಮೇಲಿಟ್ಟು ಪೂಜಾಕೈಂಕರ್ಯ ನೆರವೇರಿಸಬೇಕು ಎಂದು ವಾಸ್ತು ಪಂಡಿತರು ಸಲಹೆ ನೀಡುತ್ತಾರೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.