Republic Day: ಟ್ರಾಕ್ಟರ್ ರ್ಯಾಲಿಗೆ ಮಾರ್ಗ ಸಿದ್ಧಪಡಿಸಿದ ದೆಹಲಿ ಪೋಲಿಸ್

ಗಣರಾಜ್ಯೋತ್ಸವದಂದು ರೈತರ ಟ್ರಾಕ್ಟರ್ ರ್ಯಾಲಿಗಾಗಿ ದೆಹಲಿ ಪೊಲೀಸರು ಭಾನುವಾರ ಗಾಜಿಪುರ, ಸಿಂಗು, ಚಿಲ್ಲಾ ಮತ್ತು ಟಿಕ್ರಿ ಗಡಿಯಿಂದ ನಾಲ್ಕು ಮಾರ್ಗಗಳನ್ನು ಪ್ರಸ್ತಾಪಿಸಿದ್ದಾರೆ.

Last Updated : Jan 24, 2021, 08:53 PM IST
  • ಒಪ್ಪಂದದ ಪ್ರಕಾರ ರೈತರು ಗಡಿಯಿಂದ ದೆಹಲಿಯನ್ನು ಪ್ರವೇಶಿಸುತ್ತಾರೆ, ಆದರೆ ಪಕ್ಕದ ಪ್ರದೇಶಗಳಲ್ಲಿಯೇ ಇರುತ್ತಾರೆ ಮತ್ತು ಮಧ್ಯ ದೆಹಲಿಯತ್ತ ಸಾಗುವುದಿಲ್ಲ ಎನ್ನಲಾಗಿದೆ.
  • ಸಿಂಗು, ಟಿಕ್ರಿ ಮತ್ತು ಗಾಜಿಪುರ ಗಡಿಗಳಲ್ಲಿ 40,000 ಕ್ಕೂ ಹೆಚ್ಚು ಪೊಲೀಸರು, ಐಟಿಬಿಪಿ ಮತ್ತು ಸಿಆರ್‌ಪಿಎಫ್ ಸಿಬ್ಬಂದಿಯನ್ನು ನಿಯೋಜಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.
Republic Day: ಟ್ರಾಕ್ಟರ್ ರ್ಯಾಲಿಗೆ ಮಾರ್ಗ ಸಿದ್ಧಪಡಿಸಿದ ದೆಹಲಿ ಪೋಲಿಸ್  title=

ನವದೆಹಲಿ: ಗಣರಾಜ್ಯೋತ್ಸವದಂದು ರೈತರ ಟ್ರಾಕ್ಟರ್ ರ್ಯಾಲಿಗಾಗಿ ದೆಹಲಿ ಪೊಲೀಸರು ಭಾನುವಾರ ಗಾಜಿಪುರ, ಸಿಂಗು, ಚಿಲ್ಲಾ ಮತ್ತು ಟಿಕ್ರಿ ಗಡಿಯಿಂದ ನಾಲ್ಕು ಮಾರ್ಗಗಳನ್ನು ಪ್ರಸ್ತಾಪಿಸಿದ್ದಾರೆ.

ಶನಿವಾರ, ದೆಹಲಿ ಪೊಲೀಸರು ಜನವರಿ 26 ರಂದು ರಾಜಧಾನಿಯೊಳಗೆ ಟ್ರಾಕ್ಟರ್ ಪೆರೇಡ್ ನಡೆಸಲು ರೈತರಿಗೆ ಅನುಮತಿ ನೀಡಿದ್ದರು, ಆದರೆ ರಾಜ್‌ಪಾತ್‌ನಲ್ಲಿ ಅಧಿಕೃತ ಮೆರವಣಿಗೆ ಮುಗಿದ ನಂತರವೇ ಅವು ಪ್ರಾರಂಭವಾಗುತ್ತವೆ ಎಂಬ ಷರತ್ತಿನ ಮೇರೆಗೆ ಅನುಮತಿಯನ್ನು ನೀಡಲಾಗಿತ್ತು. ಒಪ್ಪಂದದ ಪ್ರಕಾರ ರೈತರು ಗಡಿಯಿಂದ ದೆಹಲಿಯನ್ನು ಪ್ರವೇಶಿಸುತ್ತಾರೆ, ಆದರೆ ಪಕ್ಕದ ಪ್ರದೇಶಗಳಲ್ಲಿಯೇ ಇರುತ್ತಾರೆ ಮತ್ತು ಮಧ್ಯ ದೆಹಲಿಯತ್ತ ಸಾಗುವುದಿಲ್ಲ ಎನ್ನಲಾಗಿದೆ.

ಇದನ್ನೂ ಓದಿ: ಕೇಂದ್ರ ಸರ್ಕಾರದ ಕೃಷಿ ಕಾಯ್ದೆಗಳನ್ನು ವಿರೋಧಿಸಿ ಮಹಾರಾಷ್ಟ್ರದಲ್ಲಿ ರೈತರ ಬೃಹತ್ ರ್ಯಾಲಿ

ಮೆರವಣಿಗೆಯಲ್ಲಿ ಭಾಗವಹಿಸಲು ಸಾವಿರಾರು ಟ್ರಾಕ್ಟರುಗಳು ಪಂಜಾಬ್ ಮತ್ತು ಹರಿಯಾಣದಿಂದ ದೆಹಲಿಗೆ ತೆರಳುತ್ತವೆ. ಪಂಜಾಬ್ ಜಮ್ಹೂರಿ ಕಿಸಾನ್ ಸಭೆಯ ಪ್ರಧಾನ ಕಾರ್ಯದರ್ಶಿ ಕುಲ್ವಂತ್ ಸಿಂಗ್ ಸಂಧು ಹೇಳಿದರು.'ಸುಮಾರು 2.5-3 ಲಕ್ಷ ಟ್ರಾಕ್ಟರುಗಳು ಪ್ರತಿಭಟನಾ (Farmers protest) ಸ್ಥಳಗಳ ಬಳಿ ರಸ್ತೆಗಳಿಗೆ ಹೋಗುತ್ತವೆ. ಮೆರವಣಿಗೆ ಸಂಪೂರ್ಣವಾಗಿ ಶಾಂತಿಯುತವಾಗಿರುತ್ತದೆ"ಎಂದು ಅವರು ಹೇಳಿದರು.

ದೆಹಲಿ ಪೊಲೀಸರು ರೈತರೊಂದಿಗೆ ಸರಣಿ ಮಾತುಕತೆ ನಡೆಸಿದ್ದರು, ಮೊದಲು ಅವರ ಮೆರವಣಿಗೆಯನ್ನು ರದ್ದುಗೊಳಿಸುವಂತೆ ಮನವೊಲಿಸಲು ಪ್ರಯತ್ನಿಸಿದರು, ಮತ್ತು ನಂತರ ಅದನ್ನು ಗಣರಾಜ್ಯೋತ್ಸವ (Republic Day) ದ ದೃಷ್ಟಿಯಿಂದ ರಾಜಧಾನಿಯ ಹೊರಗೆ ಇಡಲು ಪ್ರಯತ್ನಿಸಿದರು.

'ರೈತರಿಗೆ ಲಿಖಿತ ಅರ್ಜಿಯನ್ನು ಕಳುಹಿಸಲು ತಿಳಿಸಲಾಗಿದೆ, ಅವರ ಉದ್ದೇಶಿತ ಮಾರ್ಗಗಳು, ಟ್ರಾಕ್ಟರುಗಳು ಮತ್ತು ಮೆರವಣಿಗೆಯಲ್ಲಿ ಭಾಗವಹಿಸುವ ರೈತರ ಸಂಖ್ಯೆ ಮತ್ತು ಸಮಯವನ್ನು ನಿರ್ದಿಷ್ಟಪಡಿಸಲಾಗಿದೆ.ನಾಳೆ ಅವರೊಂದಿಗೆ ಚರ್ಚಿಸುತ್ತೇವೆ. ಆದರೆ ಅವರು ಪ್ರತಿಭಟನೆ ನಡೆಸುತ್ತಿರುವ ಗಡಿಯ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮಾತ್ರ ಟ್ರ್ಯಾಕ್ಟರ್ ಪೆರೇಡ್ ನಡೆಯಲಿದೆ ಎಂದು ಅವರು ಹೇಳಿದ್ದಾರೆ. ಮೆರವಣಿಗೆಯಲ್ಲಿ ಅವರಿಗೆ ವೈದ್ಯಕೀಯ ನೆರವು ಮತ್ತು ಭದ್ರತೆ ಭರವಸೆ ನೀಡಲಾಗಿದೆ 'ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಇದನ್ನೂ ಓದಿ: 55 ವರ್ಷಗಳಲ್ಲಿ ಮೊದಲ ಬಾರಿಗೆ ಗಣರಾಜ್ಯೋತ್ಸಕ್ಕೆ ಯಾವುದೇ ವಿದೇಶಿ ಅತಿಥಿ ಇಲ್ಲ....!

ಗಣರಾಜ್ಯೋತ್ಸವದ ಆಚರಣೆಯ ದೃಷ್ಟಿಯಿಂದ ದೆಹಲಿ ಪೊಲೀಸರು ನಗರ ಮತ್ತು ಸುತ್ತಮುತ್ತ ಐದು ಪದರಗಳ ಭದ್ರತೆಯನ್ನು ನಿಯೋಜಿಸಿದ್ದಾರೆ. ಸಿಂಗು, ಟಿಕ್ರಿ ಮತ್ತು ಗಾಜಿಪುರ ಗಡಿಗಳಲ್ಲಿ 40,000 ಕ್ಕೂ ಹೆಚ್ಚು ಪೊಲೀಸರು, ಐಟಿಬಿಪಿ ಮತ್ತು ಸಿಆರ್‌ಪಿಎಫ್ ಸಿಬ್ಬಂದಿಯನ್ನು ನಿಯೋಜಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

ಕಳೆದ ವರ್ಷ ನವೆಂಬರ್ 28 ರಿಂದ, ಪಂಜಾಬ್ ಮತ್ತು ಹರಿಯಾಣದ ರೈತರು, ಸಿಂಗು, ಟಿಕ್ರಿ ಮತ್ತು ಗಾಜಿಪುರ ಸೇರಿದಂತೆ ಹಲವಾರು ದೆಹಲಿ ಗಡಿ ಕೇಂದ್ರಗಳಲ್ಲಿ ಕಾನೂನುಗಳ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದಾರೆ ಮತ್ತು ಮೂರು ಶಾಸನಗಳನ್ನು ರದ್ದುಪಡಿಸಬೇಕೆಂದು ಒತ್ತಾಯಿಸಿದರು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News