Siddaramaiah: 'ಬಿಜೆಪಿ MLA ಗಳ ಜೊತೆ ಸಿದ್ದರಾಮಯ್ಯ ಮಾತುಕತೆ: ಕೆಲವ್ರನ್ನ ಕರೆತರ್ತಿನಿ ಅಂದಿದ್ದಾರೆ'

ಜೆಡಿಎಸ್‌ಗೆ ಯಾಕೆ ಬೆಂಬಲ ಕೊಡುತ್ತಿದ್ದೀರಿ ಎಂದು ಬಿಜೆಪಿಯ ಕೆಲವು ಶಾಸಕರನ್ನು ಕೇಳಿದ್ದಾರೆ. ಜೆಡಿಎಸ್‌ನ ಕೆಲವರನ್ನು ಕರೆದುಕೊಂಡು ಬರುತ್ತೇನೆ ಎಂದಿದ್ದಾರೆ

Last Updated : Feb 3, 2021, 02:09 PM IST
  • ಜೆಡಿಎಸ್‌ ಸಣ್ಣ ಪ್ರಮಾಣದಲ್ಲಿ ಇರಬಹುದು. ಆದರೆ, ಕರ್ನಾಟಕ ರಾಜ್ಯದ ರಾಜಕಾರಣಕ್ಕೆ ಜೆಡಿಎಸ್‌ ಅನಿವಾರ್ಯವಾಗಲಿದೆ
  • ವಿಧಾನಪರಿಷತ್‌ ಸಭಾಪತಿ ಸ್ಥಾನವನ್ನು ಜೆಡಿಎಸ್‌ಗೆ ತಪ್ಪಿಸಲು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಷಡ್ಯಂತ್ರ ನಡೆಸಿದ್ದಾರೆ
  • ಜೆಡಿಎಸ್‌ಗೆ ಯಾಕೆ ಬೆಂಬಲ ಕೊಡುತ್ತಿದ್ದೀರಿ ಎಂದು ಬಿಜೆಪಿಯ ಕೆಲವು ಶಾಸಕರನ್ನು ಕೇಳಿದ್ದಾರೆ. ಜೆಡಿಎಸ್‌ನ ಕೆಲವರನ್ನು ಕರೆದುಕೊಂಡು ಬರುತ್ತೇನೆ ಎಂದಿದ್ದಾರೆ
Siddaramaiah: 'ಬಿಜೆಪಿ MLA ಗಳ ಜೊತೆ ಸಿದ್ದರಾಮಯ್ಯ ಮಾತುಕತೆ: ಕೆಲವ್ರನ್ನ ಕರೆತರ್ತಿನಿ ಅಂದಿದ್ದಾರೆ' title=

ಬೆಂಗಳೂರು: ವಿಧಾನಪರಿಷತ್‌ ಸಭಾಪತಿ ಸ್ಥಾನವನ್ನು ಜೆಡಿಎಸ್‌ಗೆ ತಪ್ಪಿಸಲು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಷಡ್ಯಂತ್ರ ನಡೆಸಿದ್ದಾರೆ. ಸಿದ್ದರಾಮಯ್ಯ ಏನೇನು ಮಾಡುತ್ತಿದ್ದಾರೆ ಎನ್ನುವುದು ಗೊತ್ತಿದೆ. ಜೆಡಿಎಸ್‌ಗೆ ಯಾಕೆ ಬೆಂಬಲ ಕೊಡುತ್ತಿದ್ದೀರಿ ಎಂದು ಬಿಜೆಪಿಯ ಕೆಲವು ಶಾಸಕರನ್ನು ಕೇಳಿದ್ದಾರೆ. ಜೆಡಿಎಸ್‌ನ ಕೆಲವರನ್ನು ಕರೆದುಕೊಂಡು ಬರುತ್ತೇನೆ ಎಂದಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಟೀಕಾಪ್ರಹಾರ ನಡೆಸಿದ್ದಾರೆ.

ನಗರದ ಖಾಸಗಿ ಹೋಟೆಲ್‌ನಲ್ಲಿ ಮಂಗಳವಾರ ನಡೆದ ಪಕ್ಷದ ಶಾಸಕಾಂಗ ಪಕ್ಷದ ಸಭೆಯಲ್ಲಿ ಸಭಾಪತಿ ಸ್ಥಾನದ ಕುರಿತು ಸಮಾಲೋಚನೆ ನಡೆಸಲಾಯಿತು. ಇದಕ್ಕೂ ಮುನ್ನ ಸುದ್ದಿಗಾರರ ಜತೆ ಮಾತನಾಡಿದ ಕುಮಾರಸ್ವಾಮಿ(HD Kumaraswam), ಇದೆಲ್ಲವೂ ನನಗೆ ಗೊತ್ತಿದೆ. ರಾಜಕೀಯ ಲಾಭ ಪಡೆಯಲು ಹೊರಟಿದ್ದಾರೆ. ನಾಳೆಯೇ ಸಭಾಪತಿ ಸ್ಥಾನ ಸಿಗಲಿದೆ ಎಂಬ ಭ್ರಮೆಯಲ್ಲಿಲ್ಲ. 4-5 ದಿನ ತಡವಾಗಬಹುದು. ಇಲ್ಲವೇ ಮುಂದಿನ ಅಧಿವೇಶನಕ್ಕೆ ಹೋಗಬಹುದು. ಸಭಾಪತಿ ಸ್ಥಾನವನ್ನು ದಾಳಿ ಮಾಡಿ ಪಡೆಯಬೇಕು ಎಂಬುದು ಇಲ್ಲ ಎಂದರು.

BS Yediyurappa: ಸಿಎಂ ಕರೆದಿದ್ದ 'ಡಿನ್ನರ್ ಪಾರ್ಟಿಗೆ 28ಕ್ಕೂ ಅಧಿಕ ಬಿಜೆಪಿ ಶಾಸಕರು ಗೈರು'..!

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜೆಡಿಎಸ್‌ ಅನ್ನು ಪಕ್ಷವೇ ಅಲ್ಲ ಎಂದು ಹೇಳುತ್ತಾರೆ. ಆದರೆ, ದಿನಬೆಳಗಾದರೆ ಕುಮಾರಸ್ವಾಮಿ ಮತ್ತು ಜೆಡಿಎಸ್‌ ಪಕ್ಷದ ಬಗ್ಗೆ ಮಾತನಾಡುತ್ತಾರೆ. ಪಕ್ಷವು ಸಣ್ಣ ಪ್ರಮಾಣದಲ್ಲಿರಬಹುದು. ಆದರೆ, ಕರ್ನಾಟಕ ರಾಜ್ಯದ ರಾಜಕಾರಣಕ್ಕೆ ಜೆಡಿಎಸ್‌ ಅನಿವಾರ್ಯ ಎಂದರು.

BJP: ನಾವು ಪಕ್ಷದಿಂದ ಹೊರಗಿದ್ರು ಗೆಲ್ತೀವಿ: ದೂರ ಸರಿವ ಸೂಚನೆ ನೀಡಿದ್ರಾ ಬಿಜೆಪಿ ಶಾಸಕ!?

ಜೆಡಿಎಸ್‌ ಸಣ್ಣ ಪ್ರಮಾಣದಲ್ಲಿ ಇರಬಹುದು. ಆದರೆ, ಕರ್ನಾಟಕ ರಾಜ್ಯದ ರಾಜಕಾರಣಕ್ಕೆ ಜೆಡಿಎಸ್‌ ಅನಿವಾರ್ಯವಾಗಲಿದೆ. ಅದೇ ಕಾರಣಕ್ಕಾಗಿ ಜನ ನಮ್ಮನ್ನು ಇನ್ನೂ ಉಳಿಸಿದ್ದಾರೆ ಎಂದರು.

Ration Card ಹೊಂದಿರುವವರಿಗೆ ಇಲ್ಲಿದೆ ಬಹು ಮುಖ್ಯವಾದ ಮಾಹಿತಿ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 

ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News