Anxiety disorder : ಚಿಂತೆ ಏತಕೊ ಮನದ ಭ್ರಾಂತಿ ಏತಕೋ..! ಆಂಕ್ಸಾಯಿಟಿ ಡಿಸಾರ್ಡರನ್ನ ಕಡೆಗಣಿಸಬೇಡಿ.!

ಚಿಂತೆ ಏತಕೋ ಮನದ ಬ್ರಾಂತಿ ಯಾತಕೋ..?' ಇದು ದಾಸವರೇಣ್ಯ ಪುರಂದರ ದಾಸರು ಹಾಡಿರುವಂತಹ ಭಜನೆ. ಇಂದಿನ ಆಧುನಿಕ ಪ್ರಪಂಚದಲ್ಲಿ  ಈ `ಚಿಂತೆ' ಮತ್ತು `ಮನದ ಭ್ರಾಂತಿ' ಎರಡೂ ಕೂಡಾ ಮನಷ್ಯನ ಕಾಯಿಲೆಗಳಾಗಿ ಮಾರ್ಪಟ್ಟಿವೆ. 

Written by - Ranjitha R K | Last Updated : Feb 14, 2021, 08:37 AM IST
  • Anxiety ಡಿಸಾರ್ಡರ್ ಆಧುನಿಕ ಜಗತ್ತಿನ ಗಂಭೀರ ಕಾಯಿಲೆ
  • ಚಿಂತೆ, ಒತ್ತಡ, ಅಂಕ್ಸಾಯಿಟಿ ಈಗ ಸಾಮಾನ್ಯ..!
  • ಆಂಕ್ಸಾಯಿಟಿ ಡಿಸಾರ್ಡರ್ ಬಗ್ಗೆ ನೀವು ತಿಳಿದುಕೊಳ್ಳಲೇ ಬೇಕು..
Anxiety disorder : ಚಿಂತೆ ಏತಕೊ ಮನದ ಭ್ರಾಂತಿ ಏತಕೋ..! ಆಂಕ್ಸಾಯಿಟಿ ಡಿಸಾರ್ಡರನ್ನ ಕಡೆಗಣಿಸಬೇಡಿ.! title=
Anxiety ಡಿಸಾರ್ಡರ್ ಆಧುನಿಕ ಜಗತ್ತಿನ ಗಂಭೀರ ಕಾಯಿಲೆ (file photo)

ಬೆಂಗಳೂರು : `ಚಿಂತೆ ಏತಕೋ ಮನದ ಬ್ರಾಂತಿ ಯಾತಕೋ..?' ಇದು ದಾಸವರೇಣ್ಯ ಪುರಂದರ ದಾಸರು ಹಾಡಿರುವಂತಹ ಭಜನೆ. ಇಂದಿನ ಆಧುನಿಕ ಪ್ರಪಂಚದಲ್ಲಿ (Modern World) ಈ `ಚಿಂತೆ' ಮತ್ತು `ಮನದ ಭ್ರಾಂತಿ' ಎರಡೂ ಕೂಡಾ ಮನಷ್ಯನ ಕಾಯಿಲೆಗಳಾಗಿ (health problem) ಮಾರ್ಪಟ್ಟಿವೆ. ಈ ಎರಡೂ ಸಮಸ್ಯೆಗಳಿಂದ ಬಾಧಿಸದ ಮನುಷ್ಯನೇ ಇಲ್ಲ. ದುಡ್ಡು, ಆಹಾರಕ್ಕಿಂತ ಮಿಗಿಲಾಗಿ ಮನಸ್ಸಿಗೆ ಶಾಂತಿ (Mental Peace), ನೆಮ್ಮದಿ ಇಂದಿನ ಅನಿವಾರ್ಯಗಳಲ್ಲಿ ಒಂದು. ಈ ಮನಸ್ಸಿನ ಚಿಂತೆ, ಖಿನ್ನತೆ ಮತ್ತು ವ್ಯಾಕುಲತೆಗೆ ಸಂಬಂಧಿಸಿದ ಡಿಸಾರ್ಡರನ್ನು ವೈದ್ಯ ಭಾಷೆಯಲ್ಲಿ ಅಂಕ್ಸಾಯಿಟಿ (Anxiety) ಎಂದು ಕರೆಯುತ್ತಾರೆ. 

ಅಂಕ್ಸಾಯಿಟಿ ಲಕ್ಷಣಗಳೇನು..?
ಇಂದು ಬ್ಯುಸಿ ಜಗತ್ತಿನಲ್ಲಿ ಪ್ರತಿಯೊಬ್ಬ ವ್ಯಕ್ತಿ ಒಂದಲ್ಲ ಒಂದು ರೀತಿಯ ಒತ್ತಡ (Pressure), ಚಿಂತೆ (Tension), ಖಿನ್ನತೆಯ (Depression) ಸಮಸ್ಯೆಯಿಂದ ಒದ್ದಾಡುತ್ತಿರುತ್ತಾನೆ. ಒತ್ತಡ, ಚಿಂತೆ, ಖಿನ್ನತೆ ನಮ್ಮ ಜೀವನದ ಅಂಗವೇ ಆಗಿ ಹೋಗಿದೆ. ಇದನ್ನೇ ಆಂಕ್ಸಾಯಿಟಿ ಎಂದು ಕರೆಯುತ್ತಾರೆ. ಇದರಿಂದಾಗುವ ಸಮಸ್ಯೆಗಳೇ ಅಂಕ್ಸಾಯಟಿ ಡಿಸಾರ್ಡರ್.  ಅಷ್ಟಕ್ಕೂ ಈ ಆಂಕ್ಸಾಯಿಟಿಗೆ ಕಾರಣಗಳೇನು..? ಅದರ ಲಕ್ಷಣಗಳೇನು..?

ಇದನ್ನೂ ಓದಿ : Morning Mistakes : ಬೆಳಗ್ಗೆ ಎದ್ದು ಯಾವತ್ತಿಗೂ ಈ ಹತ್ತು ತಪ್ಪುಗಳನ್ನು ಮಾಡಬೇಡಿ.!

ಅಂಕ್ಸಾಯಿಟಿ ಲಕ್ಷಣಗಳು (Symptoms):
1. ಅಂಕ್ಸಾಯಿಟಿ ಡಿಸಾರ್ಡರ್ ನಿಂದ ನೀವು ಬಳಲುತ್ತಿದ್ದರೆ ನಿಮ್ಮ ಹೃದಯಬಡಿತ (Heart Beat) ಒಮ್ಮೆಲೆ ಜೋರಾಗಿ ಬಡಿದಂತೆ ನಿಮಗೆ ಭಾಸವಾಗುತ್ತದೆ. 
2. ಯಾವುದೇ ಕಾರಣವಿಲ್ಲದೆ ಸುಖಾಸುಮ್ಮನೆ ಗಾಬರಿಯಾಗುತ್ತದೆ (Panic).
3. ಸುಮ್ಮ ಸುಮ್ಮನೆ ದೇಹಾಯಾಸವಾಗುತ್ತದೆ (Tiredness).
4. ಸಣ್ಣ ಸಣ್ಣ ವಿಷಯಕ್ಕೂ ರೇಗಾಡುತ್ತೇವೆ, ತಾಳ್ಮೆ ಕಳೆದುಕೊಳ್ಳುತ್ತೇವೆ (Impatience) 
ಇವು ಆಂಕ್ಸಾಯಿಟಿಯ ಬಹುದೊಡ್ಡ ನಾಲ್ಕು ಲಕ್ಷಣಗಳು. ಸಾಮಾನ್ಯವಾಗಿ ನಾವು ಈ ಲಕ್ಷಣಗಳನ್ನು ಕಡೆಗಣಿಸಿಬಿಡುತ್ತೇವೆ. ಇವುಗಳನ್ನು ಗಂಭೀರವಾಗಿ ಪರಿಗಣಿಸುವುದೇ ಇಲ್ಲ. ಇವು ಅಂಕ್ಸಿಯಿಟಿ ಡಿಸಾರ್ಡರ್.  ಇದೊಂದು ಗಂಭೀರ ಕಾಯಿಲೆ. ಆರಂಭದ ಹಂತದಲ್ಲಿ ಕೆಲವೊಂದು ಸುಲಭ ವಿಧಾನಗಳಿಂದ ಇದಕ್ಕೆ ಪರಿಹಾರ ಕಂಡುಹಿಡಿಯಬಹುದು. ಮಿತಿ ಮೀರಿದರೆ ವೈದ್ಯರನ್ನು ಕಾಣಲೇ ಬೇಕು. 

ಅಂಕಿ ಅಂಶಗಳನ್ನು ನೋಡುವುದಾದರೆ, ದೊಡ್ಡ ದೊಡ್ಡ ನಗರಗಳಲ್ಲಿ ವಾಸಿಸುತ್ತಿರುವ ಶೇ. 15 ರಷ್ಟು ಮಂದಿ ಆಂಕ್ಸಾಯಿಟಿ ಕಾಯಿಲೆಯಿಂದ ಬಳಲುತ್ತಿರುತ್ತಾರೆ. ಮಹಾನಗರಗಳಲ್ಲಿ ಶೇ. 50 ರಷ್ಟು ಮಂದಿಗೆ ಪೂರ್ಣ ನಿದ್ರೆ (Proper sleep) ಆಗಿರುವುದಿಲ್ಲ. ನಿದ್ರಾಹೀನತೆಯೂ, ನಮ್ಮಲ್ಲಿ ಅಂಕ್ಸಾಯಿಟಿ ಡಿಸಾರ್ಡರ್ ಗೆ ಕಾರಣವಾಗುತ್ತದೆ. ಶ್ರೀಮಂತ ದೇಶಗಳಲ್ಲಿ ಶೇ. 28  ಮಂದಿ ಯುವಕರಲ್ಲಿ ಅಂಕ್ಸಾಯಿಟಿ ಡಿಸಾರ್ಡರ್  ಕಂಡು ಬರುತ್ತದೆ. ಪುರುಷರಿಗೆ ಹೋಲಿಸಿದರೆ, ಶೇ. 60 ರಷ್ಟು ಮಹಿಳೆಯರೇ ಅಂಕ್ಸಾಯಿಟಿಗೆ ಗುರಿಯಾಗುತ್ತದೆ.

ಇದನ್ನೂ ಓದಿ : ಔಟ್ ಡೋರ್ / Treadmill Walking ಇವೆರಡರಲ್ಲಿ ಯಾವುದು ಉತ್ತಮ

ಅಂಕ್ಸಾಯಿಟಿಯಿಂದ ಪಾರಾಗುವುದು ಹೇಗೆ..? 
ಅಂಕ್ಸಾಯಿಟಿ ದೂರ ಮಾಡಲು ಕೆಲವೊಂದು ಮಾರ್ಗಗಳಿವೆ. ಮಾನಸಿಕ ಮತ್ತು ದೈಹಿಕ ರೂಪದಲ್ಲಿ ಈ ಬಗ್ಗೆ ಕೆಲಸ ಮಾಡಬೇಕಾಗುತ್ತದೆ. ಊಟ, ತಿಂಡಿ (Food) ವಿಚಾರದಲ್ಲೂ ಹಲವಾರು ಬದಲಾವಣೆ ಮಾಡಿಕೊಳ್ಳುವುದು ಸೂಕ್ತ. 

ಅಂಕ್ಸಾಯಿಟಿ ಇರುವಾಗ ಡಯಟ್ (Diet) ಬದಲಾಯಿಸಿ. 
1. ಮೀನು ತಿನ್ನಿ
ನೀವು ಖಿನ್ನತೆ, ಒತ್ತಡ ಅಥವಾ ಆಂಕ್ಸಾಯಿಟಿಗೆ ಗುರಿಯಾಗಿದ್ದೀರಿ ಅನ್ನೋದು ನಿಮ್ಮ ಅರಿವಿಗೆ ಬರುತ್ತಿದ್ದರೆ, ಸಾಕಷ್ಟು ಮೀನು (Fish) ತಿನ್ನಿ. ಮೀನಿನಲ್ಲಿ ಒಮೆಗಾ 3 (Omega 3) ಫ್ಯಾಟಿ ಆಸಿಡ್, ಬೇರೆ ಬೇರೆ ರೀತಿಯ ವಿಟಮಿನ್ ಸಮೃದ್ಧವಾಗಿರುತ್ತವೆ. ಇವು ನಿಮ್ಮಲ್ಲಿ ಒತ್ತಡವನ್ನು ಕಡಿಮೆ ಮಾಡುತ್ತದೆ.
2. ಮೊಸರು ಸೇವಿಸಿ
ಮೊಸರಿನಲ್ಲೂ (Curd) ಒತ್ತಡ ಕಡಿಮೆ ಮಾಡುವ ಹಲವಾರು ಅಂಶಗಳಿವೆ. ಮೊಸರಿನಲ್ಲಿ ವಿಟಮಿನ್ ಸಿ (Vitamine C) ಇರುತ್ತದೆ. ಲ್ಯಾಕ್ಟೋಬೆಸಿಲ್ಲಸ್,  ಬ್ಯಾಕ್ಟೀರಿಯಾ ಇರುತ್ತದೆ. ಇವು ಆಂಕ್ಸಾಯಿಟಿ ಕಡಿಮೆ ಮಾಡಲು ತುಂಬಾ ಸಹಕಾರಿ. 
3. ಬದಾಮಿ ಬಹುಪಯೋಗಿ
ಬದಾಮಿ ಮೆದುಳಿನ ಬೆಳವಣಿಗೆಗೆ ಉಪಯೋಗಿ. ಇದರಲ್ಲಿ ಮೆಗ್ನೇಶಿಯಂ ಸಮೃದ್ಧವಾಗಿರುತ್ತದೆ. ಇದು ಚಿಂತೆಗೆ ಕಾರಣವಾಗುವ ರೋಗಗಳನ್ನು ಗುಣಪಡಿಸಲು ಸೂಕ್ತವಾಗಿದೆ.
4. ಶಾರೀರಿಕ ಕಸರತ್ತು ಮಾಡಿ. 
ಶಾರೀರಿಕ ಕಸರತ್ತು ಕೂಡಾ ಅಂಕ್ಸಾಯಿಟಿಯನ್ನು ಕಡಿಮೆ ಮಾಡಬಲ್ಲದು. ನಿಯಮಿತ ರೂಪದಲ್ಲಿ ವ್ಯಾಯಾಮ (Exercise), ಯೋಗ (Yoga) ಮಾಡಬೇಕು. ಇದರಿಂದ ಮೆದುಳಿಗೆ ರಕ್ತ ಸಂಚಾರ ಹೆಚ್ಚಾಗುತ್ತದೆ. ಧ್ಯಾನ, ಉಸಿರಾಟಕ್ಕೆ ಸಂಬಂಧಪಟ್ಟ ಯೋಗ ತುಂಬಾ ಉತ್ತಮ. ಆಲ್ಕೊಹಾಲಿನಿಂದ ದೂರವಿರಲೇ ಬೇಕು. ನಿಗದಿತ ಸಮಯಕ್ಕೆ ಸಾಕಷ್ಟು ಪ್ರಮಾಣದಲ್ಲಿ ನಿದ್ರೆ ಮಾಡುವುದು ಸೂಕ್ತ.

ಇದನ್ನೂ ಓದಿ : Tips for your Lungs: ಜಸ್ಟ್, ಈ ಮೂರು ಮಸಾಲೆ ತಿನ್ನಿ..! ನಿಮ್ಮ ಶ್ವಾಸಕೋಶ ಆಗುತ್ತೆ ಸ್ಟ್ರಾಂಗ್ & ಕ್ಲೀನ್.! 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಆಪ್ ಡೌನ್ ಲೋಡ್ ಮಾಡಿ
Android Link - https://bit.ly/3hDyh4G

iOS Link - https://apple.co/3loQYe
 
ನಮ್ಮ ಸೋಶಿಯಲ್ ಮೀಡಿಯಾ ಪುಟಕ್ಕೆ ಸಬ್ ಸ್ಕ್ರೈಬ್ ಮಾಡಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News