ಐಪಿಎಲ್ (IPL 2021) ಹರಾಜಿಗೆ ಕೇವಲ ಒಂದು ದಿನ ಬಾಕಿ ಇದೆ. ಜಗತ್ತಿನ ಟಾಪ್ ಕ್ರಿಕೆಟರ್ಸ್ ಈ ಹರಾಜಿನಲ್ಲಿ ಪಾಲ್ಗೊಳ್ಳುತ್ತಾರೆ.
ನವದೆಹಲಿ : ಐಪಿಎಲ್ (IPL 2021) ಹರಾಜಿಗೆ ಕೇವಲ ಒಂದು ದಿನ ಬಾಕಿ ಇದೆ. ಜಗತ್ತಿನ ಟಾಪ್ ಕ್ರಿಕೆಟರ್ಸ್ ಈ ಹರಾಜಿನಲ್ಲಿ ಪಾಲ್ಗೊಳ್ಳುತ್ತಾರೆ. ಐಪಿಎಲ್ ನಿಂದ ಕ್ರಿಕೆಟರ್ಸ್ ಗೆ ಅಪರಿಮಿತ ದುಡ್ಡು ಮತ್ತು ಒಂದು ವಿಶಿಷ್ಟ ವ್ಯಕ್ತಿತ್ವ ಸಿಗುತ್ತದೆ. ಇದೇ ಕಾರಣಕ್ಕೆ ಐಪಿಎಲ್ ಗಾಗಿ ಕ್ರಿಕೆಟಿಗರು ಹಪಹಪಿಸುತ್ತಿರುತ್ತಾರೆ. ಅತ್ಯಧಿಕ ಮೊತ್ತಕ್ಕೆ ಹರಾಜಾಗಬಲ್ಲ ಕೆಲವು ಕ್ರಿಕೆಟಿಗರ ಮೇಲೆ ಈಗ ವಿಶ್ವದ ದೃಷ್ಟಿ ನೆಟ್ಟಿದೆ. ಆ ಆರು ಟಾಪ್ ಕ್ರಿಕೆಟಿಗರು (Top Cricketers) ಯಾರು..ಗೊತ್ತಾ..?
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.
ಗ್ಲೆನ್ ಮ್ಯಾಕ್ಸ್ ವೆಲ್ : ಆಸ್ಟ್ರೇಲಿಯಾದ ಈ ಕ್ರಿಕೆಟಿಗ ಸ್ಟ್ರೈಕ್ ರೇಟ್ ಬಗ್ಗೆ ಯಾರಿಗೂ ಅನುಮಾನವಿಲ್ಲ. ಆದರೆ, ಕಿಂಗ್ಸ್ ಇಲೆವನ್ ಪಂಜಾಬಿನಲ್ಲಿದ್ದ Glenn Maxwell ನಿರೀಕ್ಷಿತ ಸಾಧನೆ ತೋರುವಲ್ಲಿ ವಿಫಲರಾಗಿದ್ದರು. ಅವರಿಗೆ ಹಲವು ಅವಕಾಶ ಸಿಕ್ಕಿತಾದರೂ, ಎಲ್ಲಾ ಸಂದರ್ಭದಲ್ಲೂ ವೈಫಲ್ಯವೇ ಉತ್ತರವಾಯಿತು. ಹಾಗಾಗಿ, ಕಿಂಗ್ಸ್ ಇಲೆವೆನ್ ಪಂಜಾಬ್ ಮ್ಯಾಕ್ಸ್ ವೆಲ್ ಅವರನ್ನು ರಿಲೀಸ್ ಮಾಡಿದೆ. ಈ ಋತುವಿನಲ್ಲಿ ಮ್ಯಾಕ್ಸ್ ವೆಲ್ ಹರಾಜಿಗಿದ್ದಾರೆ. ಅತಿ ದೊಡ್ಡ ಮೊತ್ತಕ್ಕೆ ಅವರು ಸೇಲಾಗಬಹುದು ಎನ್ನಲಾಗುತ್ತಿದೆ.
ಆಲೆಕ್ಸ್ ಹೇಲ್ಸ್ : ಚುಟುಕು ಕ್ರಿಕೆಟಿಗೆ ಹೇಳಿ ಮಾಡಿಸಿದ ಬ್ಯಾಟ್ಸ್ ಮ್ಯಾನ್ ಆಲೆಕ್ಸ್ ಹೇಲ್ಸ್ (Alex Hales). ಆದರೆ, ಐಪಿಎಲ್ ನಲ್ಲಿ ಇದುವರೆಗೆ ಕೇವಲ 6 ಮ್ಯಾಚ್ ಮಾತ್ರ ಆಡಿದ್ದಾರೆ. 2018ರಲ್ಲಿ Sun Risers Hyderabad ಪರವಾಗಿ ಬ್ಯಾಟ್ ಬೀಸಿದ್ದರು. ಇತ್ತೀಚೆಗೆ ಸಮಾಪನಗೊಂಡ ಬಿಗ್ ಬ್ಯಾಶ್ ಲೀಗ್ನಲ್ಲಿ (BBL) ಅತ್ಯಧಿಕ ರನ್ (543) ಹೊಡೆದ ದಾಖಲೆ ಹೇಲ್ಸ್ ಹೆಸರಿನಲ್ಲಿದೆ. ಈ ಲೀಗ್ನಲ್ಲಿ ಹೇಲ್ಸ್ ಒಂದು ಆಕರ್ಷಕ ಶತಕ ಹಾಗೂ ಮೂರು ಅರ್ಧ ಶತಕ ಸಿಡಿಸಿದ್ದಾರೆ. ಹೇಲ್ಸ್ ಅವರನ್ನು ತಂಡಕ್ಕೆ ಸೇರಿಸಿಕೊಳ್ಳಲು ಎಲ್ಲಾ ಫ್ರಾಂಚೈಸಿಗಳೂ ತಯಾರಿ ನಡೆಸಿವೆ. ಹಾಗಾಗಿ, ಈ ಮ್ಯಾಚ್ ವಿನ್ನರ್ ಗೆ ದೊಡ್ಡ ಮೊತ್ತ ಸಿಗುವುದರಲ್ಲಿ ಅನುಮಾನ ಇಲ್ಲ.
ಕ್ರಿಸ್ ಮಾರಿಸ್ : ದಕ್ಷಿಣ ಆಫ್ರಿಕಾದ (South Africa) ಈ ಅಲ್ರೌಂ ಡರ್ ಕ್ರಿಸ್ ಮಾರಿಸ್ (Chris Morris) 2020ರ ಐಪಿಎಲ್ ನಲ್ಲಿ ಆರ್ ಸಿಬಿ ಪರ ಆಡುತ್ತಿದ್ದರು. ಆರ್ ಸಿಬಿ ಈ ಸಲ ಅವರನ್ನು ರಿಲೀಸ್ ಮಾಡಿದೆ. ಯುಎಇಯಲ್ಲಿ ನಡೆದ ಟೂರ್ನ್ ಮೆಂಟಿನಲ್ಲಿ ಮಾರಿಸ್ 6.63ರ ಇಕಾನಮಿಯಲ್ಲಿ 11 ವಿಕೆಟ್ ಕಬಳಿಸಿದ್ದಾರೆ. ಮಾರಿಸ್ ಕೂಡಾ ಮ್ಯಾಚ್ ವಿನ್ನರ್ ಅತ್ಯುತ್ತಮ ಅಲ್ರೌಂ ಡರ್. ಇವರ ಮೇಲೂ ಫ್ರಾಂಚೈಸಿಗಳು ದೊಡ್ಡ ಮೊತ್ತ ಚೆಲ್ಲುವ ಸಾಧ್ಯತೆ ಇದೆ.
ಹರ್ಭಜನ್ ಸಿಂಗ್ : 40 ವರ್ಷದ ಹರ್ಭಜನ್ ಸಿಂಗ್ (Harbhajan Singh) ವೈಯುಕ್ತಿಕ ಕಾರಣಗಳಿಂದ 2020ರ ಐಪಿಎಲ್‍ನಿಂದ ಹೊರಗುಳಿದಿದ್ದರು. ಈ ಸಲ ಚೆನ್ನೈ ಸೂಪರ್ ಕಿಂಗ್ಸ್ (CSK) ಅವರನ್ನು ರಿಲೀಸ್ ಮಾಡಿದೆ. ಭಾರತ ಕ್ರಿಕೆಟ್ ತಂಡದ ಈ ಸರ್ವಶ್ರೇಷ್ಠ ಸ್ಪಿನ್ನರ್, ಇದುವರೆಗೆ 160 ಐಪಿಎಲ್ ಮ್ಯಾಚ್ ಆಡಿದ್ದಾರೆ. 150 ವಿಕೆಟ್ ಪಡೆದಿದ್ದಾರೆ. ಹರ್ಭಜನ್ ಕೂಡಾ ದೊಡ್ಡ ಮೊತ್ತಕ್ಕೆ ಮಾರಾಟವಾಗುವ ಸಾಧ್ಯತೆ ಹೆಚ್ಚಾಗಿದೆ.
ಸ್ಟೀವ್ ಸ್ಮಿತ್ : ಈ ಸಲದ ಹರಾಜಿನಲ್ಲಿ ಅಸ್ಟ್ರೇಲಿಯಾದ ಈ ಸ್ಟಾರ್ ಕ್ರಿಕೆಟಿಗ . ಸ್ಟೀವ್ ಸ್ಮಿತ್ (Steve Smith) ಅತ್ಯಧಿಕ ಬೆಲೆಗೆ ಮಾರಾಟವಾಗುವ ಸಾಧ್ಯತೆಗಳು ಹೆಚ್ಚಿವೆ. ರಾಜಾಸ್ತಾನ್ ರಾಯಲ್ಸ್ ಅವರನ್ನು ಈ ಸಲ ರಿಲೀಸ್ ಮಾಡಿದೆ. ಈಗ ಸೂಪರ್ ಫಾರ್ಮಿನಲ್ಲಿದ್ದಾರೆ . ಸ್ಟೀವ್ ಸ್ಮಿತ್ ಆರ್ ಸಿಬಿ ಸೇರಿದಂತೆ ಹಲವು ತಂಡಗಳಿಗೆ ಉತ್ತಮ ಆರಂಭಿಕರ ಅಗತ್ಯವಿದೆ. ಇವರನ್ನು ಕೊಳ್ಳಲು ಫ್ರಾಂಚೈಸಿಗಳಲ್ಲಿ ಪೈಪೋಟಿ ನಡೆದರೆ ಅಚ್ಚರಿ ಏನಿಲ್ಲ.
ಡೇವಿಡ್ ಮಲನ್: ಇಂಗ್ಲೆಂಡಿನ ಡೆವಿಡ್ ಮಲನ್ (David Malan) ಚುಟುಕು ಕ್ರಿಕೆಟಿನ ನಂಬರ್ ಒನ್ ಬ್ಯಾಟ್ಸ್ ಮ್ಯಾನ್. ಅಚ್ಚರಿಯೆಂದರೆ, ಟ್ವೆಂಟಿ ಟ್ವೆಂಟಿ ಫಾರ್ಮಾಟಿನ ಈ ಸೂಪರ್ ಕ್ರಿಕೆಟರ್ ಇದುವರೆಗೆ ಒಂದೇ ಒಂದು ಐಪಿಎಲ್ ಆಡಿಲ್ಲ. ಕೇವಲ 19 ಟಿ20 ಪಂದ್ಯಗಳಲ್ಲಿ ಡೆವಿಡ್ ಮಲನ್ 855 ರನ್ ಪೇರಿಸಿದ್ದಾರೆ. ಅವರ ರನ್ ಸರಾಸರಿ 53. ಐಪಿಎಲ್ ಹರಾಜಿನಲ್ಲಿ ಮಲನ್ ಕೋಟಿ ಕೊಳ್ಳೆ ಹೊಡೆಯಬಲ್ಲರು ಎಂದು ಊಹಿಸಲಾಗಿದೆ.