ನವದೆಹಲಿ: ಸರ್ಕಾರಿ ಉದ್ಯೋಗ (Sarkari Naukri) ಉತ್ತಮ ಅವಕಾಶಕ್ಕಾಗಿ ಕಾಯುತ್ತಿರುವವರಿಗೆ ಇಲ್ಲಿದೆ ಗುಡ್ ನ್ಯೂಸ್. ಫಿಶಿಂಗ್ ಆಪರೇಟರ್, ಎಲ್ಪಿಜಿ ಆಪರೇಟರ್, ಡ್ರಿಲ್ಲಿಂಗ್ / ವರ್ಕ್ಓವರ್ ಅಸಿಸ್ಟೆಂಟ್ ಆಪರೇಟರ್ ಮತ್ತು ಡ್ರಿಲ್ಲಿಂಗ್ / ವರ್ಕ್ಓವರ್ ಮೆಕ್ಯಾನಿಕ್ ಹುದ್ದೆಗಳಿಗೆ ನೇಮಕಾತಿಗಾಗಿ ಅಧಿಸೂಚನೆಯನ್ನು ಬಿಡುಗಡೆ ಮಾಡುವ ಮೂಲಕ ಆಯಿಲ್ ಇಂಡಿಯಾ ಅರ್ಜಿಗಳನ್ನು ಆಹ್ವಾನಿಸಿದೆ.
ಈ ಬಗ್ಗೆ ವಿವರವಾದ ಅಧಿಸೂಚನೆಯನ್ನು ಆಯಿಲ್ ಇಂಡಿಯಾ ಅಧಿಕೃತ ವೆಬ್ಸೈಟ್ ಆಯಿಲ್-ಇಂಡಿಯಾ.ಕಾಂ (oil-india.com)ನಲ್ಲಿ ನೀಡಿದೆ. ವಾಕ್-ಇನ್ ಸಂದರ್ಶನದ ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು 2021 ಫೆಬ್ರವರಿ 25 ರಿಂದ ಮಾರ್ಚ್ 22 ರವರೆಗೆ ಸಂದರ್ಶನಕ್ಕೆ ಹಾಜರಾಗಬಹುದು.
ಪೋಸ್ಟ್ಗಳ ವಿವರಣೆ
- ಫಿಶಿಂಗ್ ಆಪರೇಟರ್: 01 ಪೋಸ್ಟ್
- ಎಲ್ಪಿಜಿ (LPG) ಆಪರೇಟರ್: 07 ಪೋಸ್ಟ್ಗಳು
- ಡ್ರಿಲ್ಲಿಂಗ್ / ವರ್ಕ್ಓವರ್ ಆಪರೇಟರ್: 04 ಪೋಸ್ಟ್ಗಳು
- ಡ್ರಿಲ್ಲಿಂಗ್ / ವರ್ಕ್ಓವರ್ ಮೆಕ್ಯಾನಿಕ್: 04 ಪೋಸ್ಟ್ಗಳು
- ಡ್ರಿಲ್ಲಿಂಗ್ / ವರ್ಕ್ಓವರ್ ಸಹಾಯಕ ಆಪರೇಟರ್: 32 ಹುದ್ದೆಗಳು
- ಒಟ್ಟು: 48 ಪೋಸ್ಟ್ಗಳು
ಇದನ್ನೂ ಓದಿ - Indian Railway Recruitment 2021: 10, 12ನೇ ತರಗತಿ ಪಾಸ್ ಆದವರಿಗೆ ರೈಲ್ವೆಯಲ್ಲಿ ಉದ್ಯೋಗಾವಕಾಶ
ಶೈಕ್ಷಣಿಕ ವಿದ್ಯಾರ್ಹತೆ :
10 ನೇ ತರಗತಿ ಪಾಸ್ ಆಗಿರುವ ಅಭ್ಯರ್ಥಿಗಳು ಈ ಹುದ್ದೆಗಳಿಗೆ (Govt Jobs) ಅರ್ಜಿ ಅರ್ಹರಾಗಿದ್ದಾರೆ.
ವಯೋಮಿತಿ :
ಸಂದರ್ಶನದಲ್ಲಿ ಭಾಗವಹಿಸಲು ಅಭ್ಯರ್ಥಿಯ ವಯಸ್ಸು 18 ವರ್ಷದಿಂದ 40 ವರ್ಷ ವಯಸ್ಸಿನವರಾಗಿರಬೇಕು. ಅಭ್ಯರ್ಥಿಗಳು ತಮ್ಮ ಹುಟ್ಟಿದ ದಿನಾಂಕದ ಮಾನ್ಯ ಪುರಾವೆಗಳನ್ನು ಸಲ್ಲಿಸಬೇಕಾಗುತ್ತದೆ.
ವೇತನ ಪ್ರಮಾಣ :
ಈ ಹುದ್ದೆಗಳಲ್ಲಿ ಆಯ್ದ ಅಭ್ಯರ್ಥಿಗಳಿಗೆ ಸಂಬಳವೂ ವಿಭಿನ್ನವಾಗಿರುತ್ತದೆ. ಆಯ್ಕೆಯಾಗುವ ಅಭ್ಯರ್ಥಿಗಳಿಗೆ 15,700 / - ರಿಂದ 18,400 / - ವರೆಗಿನ ವೇತನ ಪ್ರಮಾಣ ಲಭ್ಯವಿರಲಿದೆ.
ವಾಕ್-ಇನ್ ಸಂದರ್ಶನದ ದಿನಾಂಕಗಳು :
- ಫಿಶಿಂಗ್ ಆಪರೇಟರ್: 25 ಫೆಬ್ರವರಿ 2021
- ಎಲ್ಪಿಜಿ ಆಪರೇಟರ್: 01 ಮಾರ್ಚ್ 2021
- ಡ್ರಿಲ್ಲಿಂಗ್ / ವರ್ಕ್ಓವರ್ ಆಪರೇಟರ್: 08 ಮಾರ್ಚ್ 2021
- ಡ್ರಿಲ್ಲಿಂಗ್ / ವರ್ಕ್ಓವರ್ ಮೆಕ್ಯಾನಿಕ್: 15 ಮಾರ್ಚ್ 2021
- ಡ್ರಿಲ್ಲಿಂಗ್ / ವರ್ಕ್ಓವರ್ ಸಹಾಯಕ ಆಪರೇಟರ್: 22 ಮಾರ್ಚ್ 2021
ಇದನ್ನೂ ಓದಿ - SSC: ಡಿಗ್ರಿ ಆದವರಿಗೆ ಸಿಹಿ ಸುದ್ದಿ: SSC ಯಲ್ಲಿ 6506 ಹುದ್ದೆಗಳ ನೇಮಕಾತಿಗೆ ಅರ್ಜಿ!
ಸಂದರ್ಶನ ಸ್ಥಳ :
ಈ ವಿಳಾಸದಲ್ಲಿ ಅಭ್ಯರ್ಥಿಗಳು ವಾಕ್-ಇನ್ ಸಂದರ್ಶನಕ್ಕೆ ಹಾಜರಾಗಬೇಕಾಗುತ್ತದೆ.
ವಿಳಾಸ: ಸಿಬ್ಬಂದಿ ಕಲ್ಯಾಣ ಕಚೇರಿ,
ನೌಕರರ ಸಂಬಂಧ ಇಲಾಖೆ, ನೆಹರೂ ಮೈದಾನ,
ಆಯಿಲ್ ಇಂಡಿಯಾ ಲಿಮಿಟೆಡ್, ದುಲಿಯಾಜನ್
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.