ಲೇಖಕಿ ಡಾ.ಅನುಪಮಾ ಅವರಿಗೆ ಶ್ರೀ ತೋಂಟದ ಸಿದ್ಧಲಿಂಗ ಮಹಾಸ್ವಾಮಿಗಳ ರಾಜ್ಯ ಪ್ರಶಸ್ತಿ

ವಿಚಾರಗಳು ಹಾಗೂ ಸಂಘಟನೆಗಳ ಭಾಗ ಆಗಿರುವ ಲೇಖಕಿ,ಹೋರಾಟಗಾರ್ತಿ ಎಚ್.ಎಸ್.ಅನುಪಮಾ ಅವರು ಈ ಸಮಾಜ ನನ್ನನ್ನು ಪ್ರಶಸ್ತಿಗಳ ಮೂಲಕ ಗುರ್ತಿಸುವಂತಾಗಬಾರದು ಎಂದವರು.ಅವರು ಸಮಾಜದಲ್ಲಿ ಲಿಂಗ ಸಮಾನತೆ,ಸಾಮಾಜಿಕ ನ್ಯಾಯ ಅನುಸರಣೆಯಾಗುತ್ತಿಬೇಕು.ಬರಹದಂತೆ ಬರಹಗಾರ ಬದುಕಬೇಕೆಂಬ ನಿಲುವು ತಾಳಿದವರು ಎಂದು ಲಡಾಯಿ ಪ್ರಕಾಶನ ಮುಖ್ಯಸ್ಥ,ಸಾಹಿತಿ ಬಸವರಾಜ ಸೂಳಿಬಾವಿ ಅಭಿಪ್ರಾಯಪಟ್ಟರು.

Last Updated : Mar 2, 2021, 06:29 AM IST
  • ವಿಚಾರಗಳು ಹಾಗೂ ಸಂಘಟನೆಗಳ ಭಾಗ ಆಗಿರುವ ಲೇಖಕಿ,ಹೋರಾಟಗಾರ್ತಿ ಎಚ್.ಎಸ್.ಅನುಪಮಾ ಅವರು ಈ ಸಮಾಜ ನನ್ನನ್ನು ಪ್ರಶಸ್ತಿಗಳ ಮೂಲಕ ಗುರ್ತಿಸುವಂತಾಗಬಾರದು ಎಂದವರು.
  • ಸಮಾಜದಲ್ಲಿ ಲಿಂಗ ಸಮಾನತೆ,ಸಾಮಾಜಿಕ ನ್ಯಾಯ ಅನುಸರಣೆಯಾಗುತ್ತಿಬೇಕು.ಬರಹದಂತೆ ಬರಹಗಾರ ಬದುಕಬೇಕೆಂಬ ನಿಲುವು ತಾಳಿದವರು ಎಂದು ಲಡಾಯಿ ಪ್ರಕಾಶನ ಮುಖ್ಯಸ್ಥ,ಸಾಹಿತಿ ಬಸವರಾಜ ಸೂಳಿಬಾವಿ ಅಭಿಪ್ರಾಯಪಟ್ಟರು.
ಲೇಖಕಿ ಡಾ.ಅನುಪಮಾ ಅವರಿಗೆ ಶ್ರೀ ತೋಂಟದ ಸಿದ್ಧಲಿಂಗ ಮಹಾಸ್ವಾಮಿಗಳ ರಾಜ್ಯ ಪ್ರಶಸ್ತಿ  title=

ಧಾರವಾಡ: ವಿಚಾರಗಳು ಹಾಗೂ ಸಂಘಟನೆಗಳ ಭಾಗ ಆಗಿರುವ ಲೇಖಕಿ,ಹೋರಾಟಗಾರ್ತಿ ಎಚ್.ಎಸ್.ಅನುಪಮಾ ಅವರು ಈ ಸಮಾಜ ನನ್ನನ್ನು ಪ್ರಶಸ್ತಿಗಳ ಮೂಲಕ ಗುರ್ತಿಸುವಂತಾಗಬಾರದು ಎಂದವರು.ಅವರು ಸಮಾಜದಲ್ಲಿ ಲಿಂಗ ಸಮಾನತೆ,ಸಾಮಾಜಿಕ ನ್ಯಾಯ ಅನುಸರಣೆಯಾಗುತ್ತಿಬೇಕು.ಬರಹದಂತೆ ಬರಹಗಾರ ಬದುಕಬೇಕೆಂಬ ನಿಲುವು ತಾಳಿದವರು ಎಂದು ಲಡಾಯಿ ಪ್ರಕಾಶನ ಮುಖ್ಯಸ್ಥ,ಸಾಹಿತಿ ಬಸವರಾಜ ಸೂಳಿಬಾವಿ ಅಭಿಪ್ರಾಯಪಟ್ಟರು.

ಅವರು ಧಾರವಾಡ ಜಿಲ್ಲೆ,ಅಣ್ಣಿಗೇರಿ ಪಟ್ಟಣದ ನಿಂಗಮ್ಮ ಹೂಗಾರ ಕಾಲೇಜು ಆವರಣದಲ್ಲಿ ರವಿವಾರ ಸಂಜೆ,ರಾಜ್ಯಪ್ರಶಸ್ತಿ ಸಮಿತಿ ವತಿಯಿಂದ ನಡೆದ ಲಿಂಗೈಕ್ಯ ಡಾ.ತೋಂಟದ ಸಿದ್ಧಲಿಂಗ ಮಹಾಸ್ವಾಮಿಗಳ ರಾಜ್ಯ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅಭಿನಂದನಾ ನುಡಿಗಳನ್ನಾಡಿದರು.

ಇದನ್ನೂ ಓದಿ: ಗ್ರಾಮೀಣ ಭಾಗದಲ್ಲಿ ಸೇವೆ ಸಲ್ಲಿಸುವ ವೈದ್ಯರಿಗೆ ಶೀಘ್ರ ಮುಂಬಡ್ತಿ - ಆರೋಗ್ಯ ಸಚಿವ ಕೆ. ಸುಧಾಕರ

ಲಿಂ.ಸಿದ್ಧಲಿಂಗ ಶ್ರೀಗಳು ಮನುಷ್ಯತ್ವವನ್ನು,ಕಾಯಕ ತತ್ವವನ್ನು ಪ್ರೀತಿಸುತ್ತಿದ್ದರು.ಜನಸಾಮಾನ್ಯರೊಂದಿಗೆ ಬೆರೆಯುವ ಸ್ವಾಮೀಜಿಯೆಂದೆನಿಸಿಕೊಂಡಿದ್ದರು.ಮಠದಿಂದ ಆರುನೂರಕ್ಕು ಹೆಚ್ಚು ಗುಣಮಟ್ಟದ ಪುಸ್ತಕಗಳನ್ನು ಪ್ರಕಟಿಸಿ ಪುಸ್ತಕದ ಸ್ವಾಮೀಜಿ ಎಂದೆನಿಸಿಕೊಂಡಿದ್ದರು.ಲಿಂಗೈಕ್ಯ ತೋಂಟದ ಸಿದ್ಧಲಿಂಗ ಮಹಾಸ್ವಾಮಿಗಳ ಹೆಸರಿನಲ್ಲಿ ನೀಡಲಾಗುವ ರಾಜ್ಯಮಟ್ಟದ ಈ ಪುರಸ್ಕಾರವನ್ನು ಈ ವರ್ಷ ಈಗಾಗಲೇ ಐವತ್ತು ಪುಸಕ್ತ ಬರೆದಿರುವ ಡಾ.ಎಚ್.ಎಸ್.ಅನುಪಮಾ ಅವರಿಗೆ ಕೊಡಮಾಡಲಾಗುತ್ತಿರುವುದು ಹೆಮ್ಮೆ ಹಾಗೂ ಸಂತಸದಾಯಕವಾಗಿದೆ ಎಂದು ಪ್ರಾಚಾರ್ಯ ಎಸ್.ಎಸ್.ಹರ್ಲಾಪೂರ ಅವರು ಪ್ರಾಸ್ತಾವಿಕ ಮಾತುಗಳಲ್ಲಿ ಹೇಳಿದರು.

ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಅನುಪಮಾ ಅವರು,ಬರವಣಿಗೆ ಬರೀ ಅಕ್ಷರವಾಗಬಾರದು.ಬರಹವನ್ನು ಆಚರಣಾ ಪಟ್ಟಿಯಾಗಿ ನೋಡಬೇಕು.ಬರದಂಗೆ ಬದುಕಲಿಕ್ಕೆ ಸಾಧ್ಯವಾಗಬೇಕೆಂದರು.ಸದ್ಯದ ವ್ಯವಸ್ಥೆಯಲ್ಲಿ ಸತ್ಯದ ನಾಲಿಗೆ ಕತ್ತರಿಸಿ ಬೀದಿಯಲ್ಲಿ ಬೀಸಾಕುತ್ತಿರುವ ಸದ್ದು ಕೇಳುತ್ತಿರುವುದು ಆತಂಕಕಾರಿ ಬೆಳವಣಿಗೆ ಎಂದರು.

ಇದನ್ನೂ ಓದಿ: ಉತ್ತರ ಕರ್ನಾಟಕದ ಪ್ರಥಮ ಸಂಚಾರಿ ಪ್ರಾಣಿ ಚಿಕಿತ್ಸಾಲಯ ಲೋಕಾರ್ಪಣೆ

ಸನ್ನಿಧಾನ ವಹಿಸಿದ್ದ ಗದಗ ತೋಂಟದಾರ್ಯ ಮಠದ ಸಿದ್ಧರಾಮ ಮಹಾಸ್ವಾಮಿಗಳು ಮಾತನಾಡಿ,ಅನಿಷ್ಠ ಆಚರಣೆಗಳಿಂದ ಪಾರಾಗದೇ ದೇಶಕ್ಕೆ ಭವಿಷ್ಯವಿಲ್ಲ.ಮನುಷ್ಯ ಕುಲವೆಲ್ಲವು ಒಂದೇ ಎಂದು ಸಾರಿಹೋದ ಪಂಪನಂತೆ ಲಿಂಗೈಕ್ಯ ತೋಂಟದ ಸಿದ್ಧಲಿಂಗ ಮಹಾಸ್ವಾಮಿಗಳು ಅಣ್ಣಿಗೇರಿ ಭಾಗದಲ್ಲಿ ಭಾವೈಕ್ಯತೆಯ ಬೀಜವನ್ನು ಬಿತ್ತಿ ಹೋಗಿದ್ದಾರೆಂದು ಹೇಳಿದರು.

ಇದನ್ನೂ ಓದಿ: ಧಾರವಾಡ ಮೂಲದ ಕನ್ನಡತಿ ಮಾಧುರಿ ಕಾನಿಟ್ಕರ್ ಲೆಫ್ಟಿ​ನೆಂಟ್‌ ಜನ​ರಲ್‌ ಹುದ್ದೆಗೆ ಬಡ್ತಿ

ಅನ್ವರ ಹುಬ್ಬಳ್ಳಿ,ಸುಧಾ ಕೌಜಗೇರಿ,ಮಲ್ವಿಕಾರ್ಜುನ ಸುರಕೋಡ,ಡಾ.ಗೀತಾ ಹರ್ಲಾಪೂರ,ಅರ್ಜುನ ಕಲಾಲ,ಎಚ್.ಡಿ.ಡಬರಿ,ಕುಸುಮಾ ಉಳ್ಳಾಗಡ್ಡಿ,ವಿ.ಎಂ.ಹಿರೇಮಠ,ಹಾಲಪ್ಪ ತುರ್ಕಾಣಿ,ಶಿವಯೋಗಿ ಹುಬ್ಬಳ್ಳಿ,ಶಶಿಧರ ಹರ್ಲಾಪೂರ,ಷಣ್ಮುಖ ಗುರಿಕಾರ,ಭಗವಂತಪ್ಪ ಪುಟ್ಟಣ್ಣವರ,ಮೃತ್ಯುಂಜಯ ನವಲಗುಂದ,ವೀರೇಶ ಶಾನುಭೋಗರ,ಡಿ.ಬಿ.ಗವಾನಿ,ಶರೀಫ ಬಿಳಿಯಲಿ,ರಾಮಚಂದ್ರ ಹಂಸನೂರ,ಮುತ್ತು ಬಿಳಿಯಲಿ,ಪರಶುರಾಮ ಕಾಳೆ,ರವೀಂದ್ರ ಹೊನವಾಡ , ಎನ್.ಬಿ.ಬೀರಣ್ಣವರ , ಎ.ಆರ್.ಅಕ್ಕಿ , ಬಿ.ಆರ್.ದಿವಟರ ಮತ್ತೀತರರು ಸಮಾರಂಭದಲ್ಲಿ ಉಪಸ್ಥಿತರಿದ್ದರು.

-ರವೀಂದ್ರ ಹೊನವಾಡ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

 

Trending News