Daily Horoscope: ದಿನಭವಿಷ್ಯ 09-03-2021 Today astrology

ಶ್ರೀ ಕ್ಷೇತ್ರ ಕೊಲ್ಲೂರು ಮೂಕಾಂಬಿಕೆ ದೇವಿಯ  ತಾಯಿಯ ಕೃಪೆಯಿಂದ ಈ ರಾಶಿಗಳಿಗೆ ಇಂದು ಶುಭ ಮತ್ತು ಲಾಭ, ಇಂದಿನ ನಿಮ್ಮ ರಾಶಿ ಭವಿಷ್ಯ ನೋಡಿ

Written by - Zee Kannada News Desk | Last Updated : Mar 9, 2021, 06:40 AM IST
  • ಮಿಥುನ ರಾಶಿಯವರು ನಿಮ್ಮ ಹಿನ್ನಡೆಗೆ ನಿಮ್ಮ ತಪ್ಪುಗಳು ಕಾರಣವಾಗಿವೆ ಎಂದು ತಿದ್ದಿಕೊಳ್ಳಿ
  • ಸಿಂಹ ರಾಶಿಯವರಿಗೆ ಕುಟುಂಬದ ಬೆಂಬಲ ನಿಮಗೆ ಶ್ರೀರಕ್ಷೆಯಾಗಲಿದೆ
  • ತುಲಾ ರಾಶಿಯವರಿಗೆ ಕೆಲಸದ ಒತ್ತಡ ಹೆಚ್ಚಾಗಲಿದೆ
Daily Horoscope: ದಿನಭವಿಷ್ಯ 09-03-2021 Today astrology  title=
Daily horoscope (ದಿನಭವಿಷ್ಯ 09-03-2021)

Daily horoscope (ದಿನಭವಿಷ್ಯ 09-03-2021) : ಶ್ರೀ ಕ್ಷೇತ್ರ ಕೊಲ್ಲೂರು ಮೂಕಾಂಬಿಕೆ ದೇವಿಯ  ತಾಯಿಯ ಕೃಪೆಯಿಂದ ಈ ರಾಶಿಗಳಿಗೆ ಇಂದು ಶುಭ ಮತ್ತು ಲಾಭ, ಇಂದಿನ ನಿಮ್ಮ ರಾಶಿ ಭವಿಷ್ಯ ನೋಡಿ

ಮೇಷ ರಾಶಿ :
ಕೆಲವೊಮ್ಮೆ ನಡೆಯುವ ಅಚಾತುರ್ಯಗಳನ್ನು ಮನಸ್ಸಲ್ಲಿಟ್ಟುಕೊಂಡು ಕೊರಗುತ್ತಾ ಕೂರಬೇಡಿ, ತಪ್ಪು ಎಲ್ಲರಿಂದಲೂ ಸಹ ಆಗಬಹುದು ಅದನ್ನು ತಿದ್ದಿಕೊಳ್ಳುವುದು ದೊಡ್ಡ ಗುಣ ಅದು ನಿಮ್ಮಲ್ಲಿ ಇದೆ. ಕಾರ್ಯಕ್ಷೇತ್ರಗಳಲ್ಲಿ ಎದುರಾಗುವ ಸಮಸ್ಯೆಗಳಿಂದ ನಿಮ್ಮಲ್ಲಿ ಮಾನಸಿಕ ಚಿಂತೆಗಳು ಹೆಚ್ಚಾಗಬಹುದು. ತ್ವರಿತವಾಗಿ ಸಮಸ್ಯೆಗಳಿಗೆ ಪರಿಹಾರ ಹುಡುಕುವುದು ಒಳ್ಳೆಯದು. ನಿಮ್ಮೆಲ್ಲಾ ವಿಚಾರಗಳಿಗೆ ಕುಟುಂಬಸ್ಥರು ಬೆಂಗಾವಲಾಗಿ ನಿಲ್ಲಲಿದ್ದಾರೆ ಚಿಂತೆ ಮಾಡುವುದು ಬೇಡ. 

ವೃಷಭ ರಾಶಿ :
ಈ ದಿನ ಕೆಲವು ಸೋಜಿಗ ಎನಿಸುವ ವಿಚಾರಗಳನ್ನು ಕೇಳುತ್ತೀರಿ. ಆರ್ಥಿಕವಾಗಿ ಸಂಜೆಯ ವೇಳೆಗೆ ನಿಮ್ಮ ನಿರೀಕ್ಷೆಗೆ ತಕ್ಕಂತೆ ಲಾಭವಾಗಲಿದೆ. ಹೊಸ ಯೋಜನೆಯ ಪ್ರಾರಂಭದಿಂದ ನಿಮ್ಮ ಬಹುದಿನದ ಸಂಕಷ್ಟಗಳು ದೂರವಾಗಲಿದೆ. ಮಕ್ಕಳಿಂದ ಕುಟುಂಬದಲ್ಲಿ ಸಂತೋಷದ ವಾತಾವರಣ ಪ್ರಾಪ್ತಿಯಾಗಲಿದೆ. ಸಂಗಾತಿಯು ನಿಮ್ಮ ಕಷ್ಟನಷ್ಟಗಳಿಗೆ ಸಹಭಾಗಿಯಾಗಿ ನಿಮ್ಮನ್ನು ಆರೈಕೆ ಮಾಡಲಿದ್ದಾರೆ. 

ಮಿಥುನ ರಾಶಿ :
ಹಿರಿಯರು ದೊಡ್ಡಮಟ್ಟದ ಜವಾಬ್ದಾರಿಗಳನ್ನು ನೀಡುವ ಸಾಧ್ಯತೆ ಕಂಡುಬರುತ್ತದೆ. ಗೃಹ ಚಟುವಟಿಕೆಗಳಲ್ಲಿ ಭಾಗಿಯಾಗುವಿರಿ. ಪಾವತಿಗಳ ವಸೂಲಿಯನ್ನು ಯಶಸ್ವಿಯಾಗಿ ಮಾಡುವಿರಿ. ಆರ್ಥಿಕ ಯೋಜನೆಯನ್ನು ಸದೃಡಗೊಳಿಸುವ ಪ್ರಯತ್ನ ಮಾಡುವುದು ಉತ್ತಮ. ನಿಮ್ಮ ಹಿನ್ನಡೆಗೆ ನಿಮ್ಮ ತಪ್ಪುಗಳು ಕಾರಣವಾಗಿವೆ ಎಂದು ತಿದ್ದಿಕೊಳ್ಳಿ. ದೈವಿಕ ಕಾರ್ಯಗಳಲ್ಲಿ ಪಾಲ್ಗೊಳ್ಳುವ ಸಾಧ್ಯತೆ ಇದೆ.

ಕರ್ಕಾಟಕ ರಾಶಿ :
ವಿವಾಹದ ಯೋಗ ಕೂಡಿಬರಲಿದೆ. ಶತ್ರುಗಳ ಉಪಟಳ ಹೆಚ್ಚಾಗಿ ಅನುಭವಿಸುತ್ತೀರಿ. ನಡೆದಿರುವ ವಿರುದ್ಧ ಘಟನೆಗಳನ್ನು ನೆನೆಯುತ್ತ ಕೊರಗದಿರಿ. ಆದಷ್ಟು ಬದುಕಿನ ವಿಶ್ವಾಸ ಹಾಗೂ ಚೈತನ್ಯ ಬೆಳೆಸಿಕೊಳ್ಳಿ. ಉದ್ಯೋಗದಲ್ಲಿ ಕೆಲವು ಸಮಸ್ಯೆಗಳಿಂದ ಮಾನಸಿಕವಾಗಿ ವಿಚಲಿತರಾಗುವ ಸಾಧ್ಯತೆ ಕಂಡುಬರುತ್ತದೆ. 

ಇದನ್ನೂ ಓದಿ - vastu tips : ಮನೆಯಲ್ಲಿ ಮನಿಪ್ಲಾಂಟ್ ಇಡುವ ಮೊದಲು ಈ ಮಾತುಗಳನ್ನು ತಿಳಿದುಕೊಳ್ಳಿ..!

ಸಿಂಹ ರಾಶಿ :
ಕುಟುಂಬದ ಬೆಂಬಲ ನಿಮಗೆ ಶ್ರೀರಕ್ಷೆಯಾಗಲಿದೆ. ಅದ್ಭುತ ಆಲೋಚನೆಗಳು ಹೊಳೆಯುವುದನ್ನು ಕಾಣಬಹುದು. ಅರ್ಥವ್ಯವಸ್ಥೆ ಸರಿಹೋಗುವ ಸಂದರ್ಭಗಳು ಬರಲಿದೆ. ಮಕ್ಕಳಿಂದ ಮನೆಯಲ್ಲಿ ಸಂತಸದ ವಾತಾವರಣ ಕಂಡುಬರುತ್ತದೆ. ಹಿರಿಯರು ನಿಮಗೆ ಜವಾಬ್ದಾರಿಗಳನ್ನು ದಯಪಾಲಿಸಲಿದ್ದಾರೆ. 

ಕನ್ಯಾ ರಾಶಿ :
ನಿಮ್ಮ ಮನಸ್ಥಿತಿಯನ್ನು ಉತ್ತಮವಾಗಿದ್ದು ಹಿಡಿದ ಕೆಲಸವನ್ನು ಸಾಧಿಸುತ್ತೀರಿ. ಕೆಲಸದಲ್ಲಿ ಮಧ್ಯವರ್ತಿಗಳನ್ನು ದೂರವಿಡುವುದು ಒಳ್ಳೆಯದು. ಜಂಟಿ ವ್ಯವಹಾರಗಳು ನಷ್ಟ ಕೂಡಲಿವೆ. ಉತ್ತಮ ಹಣಕಾಸಿನ ಆದಾಯ ನಿರೀಕ್ಷಿಸಬಹುದು. ವಿನಾಕಾರಣ ದುಂದುವೆಚ್ಚ ಮಾಡುವ ಮನಸ್ಥಿತಿಯನ್ನು ತೆಗೆದುಹಾಕಿ. ಜಾಣ್ಮೆಯ ಮಾತುಗಳಿಂದ ಎದುರಾಳಿಗಳನ್ನು ಬಗ್ಗಿಸುವ ವ್ಯವಸ್ಥೆ ಕಾಣಬಹುದು. 

ತುಲಾ ರಾಶಿ :
ಕೆಲಸದ ಒತ್ತಡ ಹೆಚ್ಚಾಗಲಿದೆ. ನಿಮ್ಮ ಆರೋಗ್ಯಕರ ಚಟುವಟಿಕೆಗಳಿಂದ ಉತ್ತಮ ದಿನವನ್ನಾಗಿ ರೂಪಿಸುವಿರಿ. ಕೆಲವು ವರ್ತನೆಗಳು ಅಪ್ರಯೋಜಕ ಎನಿಸಬಹುದು ಆದಷ್ಟು ನಿಮ್ಮ ವರ್ಚಸ್ಸನ್ನು ನೀವು ಕಾಯ್ದುಕೊಳ್ಳಿ. ಕುಟುಂಬದಲ್ಲಿ ಬರುವ ಶುಭ ಸುದ್ದಿಗಳು ಮನೆಯ ವಾತಾವರಣವನ್ನು ಸಂತೋಷಮಯಗೊಳಿಸುತ್ತದೆ.

ವೃಶ್ಚಿಕ ರಾಶಿ :
ನಿಮ್ಮ ದಾರಿಯನ್ನು ತಪ್ಪಿಸಲು ಬರುವವರೇ ದಾರಿ ತಪ್ಪುವರು. ನಿಮ್ಮಿಂದ ನಿಮ್ಮ ಕುಟುಂಬದ ಜನರು ನಾಲ್ಕು ಒಳ್ಳೆಯ ಮಾತುಗಳನ್ನು ನಿರೀಕ್ಷಿಸಿರುತ್ತಾರೆ. ಆದರೆ ಎಲ್ಲಾ ವಿಷಯದಲ್ಲೂ ತಪ್ಪನ್ನು ಹುಡುಕುವ ನಿಮ್ಮ ಸ್ವಭಾವದಿಂದಾಗಿ ಅವರು ನಿಮ್ಮ ಮೇಲಿಟ್ಟಿರುವ ವಿಶ್ವಾಸವನ್ನು ಕಳೆದುಕೊಳ್ಳುವಿರಿ. ಹಾಗಾಗದಂತೆ ಎಚ್ಚರ ವಹಿಸಿ. ನಿಮಗೆ ಕಾಲ ಕಾಲಕ್ಕೆ ಹಿರಿಯರಿಂದ ಸೂಕ್ತ ಮಾರ್ಗದರ್ಶನ ಸಿಗುವುದರಿಂದ ನಿಮ್ಮ ಮನೋಕಾಮನೆಗಳನ್ನು ಪೂರೈಸಿಕೊಳ್ಳಲು ಸಾಕಷ್ಟು ಅವಕಾಶಗಳು ದೊರೆಯುವುವು. 

ಇದನ್ನೂ ಓದಿ - Vastu tips: ನಿಮ್ಮ ಪರ್ಸ್ ನಲ್ಲಿ ಈ ಐದು ವಸ್ತುಗಳಿದ್ದರೆ ನಷ್ಟ ತಪ್ಪಿದ್ದಲ್ಲ..!

ಧನಸ್ಸು ರಾಶಿ :
ಮನರಂಜನೆ ಮತ್ತು ಮೋಜಿನ ಒಂದು ದಿನ. ಯಾವುದೇ ಸಮಯದಲ್ಲಿ ಹಣದ ಅಗತ್ಯವಿರುತ್ತದೆ. ಆದ್ದರಿಂದ ಸಾಧ್ಯವಾದಷ್ಟು ನಿಮ್ಮ ಹಣವನ್ನು ಸಂಗ್ರಹಿಸುವ ಬಗ್ಗೆ ಆಲೋಚಿಸಿ. ಜನರು ನಿಮಗೆ ಹೊಸ ಭರವಸೆ ಹಾಗೂ ಕನಸುಗಳನ್ನು ನೀಡುತ್ತಾರೆ -ಇದು ನಿಮ್ಮ ಸ್ವಸಾಮರ್ಥ್ಯವನ್ನು ಅವಲಂಬಿಸಿರುತ್ತದೆ. 

ಮಕರ ರಾಶಿ :
ಕನಸಿನ ಚಿಂತೆಗಳನ್ನು ಬಿಟ್ಟು ನಿಮ್ಮ ಪ್ರೀತಿಪಾತ್ರ ಸಂಗಾತಿಯ ಜೊತೆಯಿರಿ. ಸ್ನೇಹಿತರೊಂದಿಗೆ ಈ ಅಮೂಲ್ಯ ಕ್ಷಣಗಳನ್ನು ಹಾಳುಮಾಡಬೇಡಿ ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಲಾಗಿದೆ. ಸ್ನೇಹಿತರು ಮುಂಬರುವ ಸಮಯದಲ್ಲೂ ಸಿಗಬಹುದು. ಆದರೆ ಅಧ್ಯಯನಕ್ಕಾಗಿ ಇದೆ ಸಮಯ ಅತ್ಯುತ್ತಮವಾಗಿದೆ. 

ಕುಂಭ ರಾಶಿ : 
ನಿಮ್ಮ ಸಂಗಾತಿಯು ನಿಮ್ಮ ಬಗೆಗಿನ ಎಲ್ಲಾ ಒಳ್ಳೆಯ ಗುಣಗಳನ್ನು ಹೊಗಳುತ್ತಾರೆ ಹಾಗೂ ಮತ್ತೆ ನಿಮ್ಮನ್ನು ಪ್ರೀತಿಸುತ್ತಾರೆ. ನಿಮ್ಮ ಆಪ್ತರು ವಾರಾಂತ್ಯದಲ್ಲಿ ನಿಮ್ಮಿಂದ ಏನನ್ನಾದರೂ ನಿರೀಕ್ಷಿಸಿದರೆ ನಿಮಗೆ ಕೋಪ ಬರುವುದು ಸಹಜ. ಆದರೆ ಶಾಂತವಾಗಿರುವುದು ನಿಮಗೆ ಪ್ರಯೋಜನಕಾರಿ ಎಂದು ಸಾಬೀತುಪಡಿಸುತ್ತದೆ.

ಮೀನ ರಾಶಿ :
ಸಾಲದ ಬಾದೆ ನಿಮಗೆ ಹೆಚ್ಚಾಗಿ ಕಾಟ ನೀಡುತ್ತದೆ. ಕೆಲವು ಆತ್ಮೀಯರು ನಿಮ್ಮ ವಿರುದ್ಧ ತಿರುಗಿ ಬೀಳಬಹುದು. ಅನಗತ್ಯವಾದ ಹೂಡಿಕೆಗಳು ಸಂಕಷ್ಟ ತಂದುಕೊಡಲಿದೆ ಎಚ್ಚರ. ಮನೋ ವ್ಯಾಧಿಗೆ ಆದಷ್ಟು ಕ್ರಿಯಾಶೀಲತೆಯಿಂದ ನಡೆದುಕೊಳ್ಳಿ. ಕುಟುಂಬಸ್ಥರ ಸಹಕಾರವನ್ನು ಕೇಳಿ ಪಡೆಯುವುದು ಉತ್ತಮ. 

ಇದನ್ನೂ ಓದಿ - Mahashivaratri ದಿನ ಬುಧ ಗ್ರಹದ ಸ್ಥಾನ ಬದಲಾವಣೆ ಯಾವ ರಾಶಿಗೆ ಅದೃಷ್ಟ ಎಂದು ತಿಳಿಯಿರಿ

ಪಂಡಿತ್ ದಾಮೋದರ್ ಭಟ್  ಶ್ರೀ ಶೃಂಗೇರಿ ಶಾರದಾಂಬೆ ವೇದಾಂಗ ಜ್ಯೋತಿಷ್ಯಂ ನಿಮ್ಮ ಪ್ರೀತಿ, ಪ್ರೇಮ, ಮದುವೆ, ದಾಂಪತ್ಯ ಕಲಹ, ಹಣಕಾಸು ವ್ಯವಹಾರಗಳು, ಉದ್ಯೋಗ ಇತ್ಯಾದಿ ಸಮಸ್ಯೆಗಳಿಗೆ ಕರೆ ಮಾಡಿ: 9008993001 Call / WhatsApp

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News