H-1B visa ಪಾಲಿಸಿ ಬಗ್ಗೆ ಬಿಡೆನ್ ಮಹತ್ವದ ನಿರ್ಧಾರ

ಭಾರತ ಮತ್ತು ಅಮೆರಿಕ ನಡುವಿನ ಸ್ನೇಹ ಎಷ್ಟು ಬಲಿಷ್ಠವಾಗಿದೆ ಎಂಬುದಕ್ಕೆ ನಿದರ್ಶನವೆಂಬಂತೆ  ಯುಎಸ್ ಅಧ್ಯಕ್ಷ ಜೋ ಬಿಡನ್  (Joe Biden) ಎಚ್ -1 ಬಿ ವೀಸಾ ನೀತಿಯನ್ನು ಮರುಪರಿಶೀಲಿಸಲು ನಿರ್ಧರಿಸಿದ್ದಾರೆ. ಭಾರತದ ಐಟಿ ವೃತ್ತಿಪರರಿಗೆ ಇದರಿಂದ ನೆಮ್ಮದಿ ಸಿಕ್ಕಂತಾಗಿದೆ.  

Written by - Yashaswini V | Last Updated : Mar 13, 2021, 02:55 PM IST
  • ಅಮೆರಿಕದಿಂದ ಒಳ್ಳೆಯ ಸುದ್ದಿ
  • ಅಮೆರಿಕವು ಎಚ್ -1 ಬಿ ವೀಸಾದ ಹಿಂದಿನ ನಿರ್ಧಾರವನ್ನು ಮರುಪರಿಶೀಲಿಸಲಿದೆ
  • ಎಚ್ -1 ಬಿ ವೀಸಾಗಳಿಗೆ ಸಂಬಂಧಿಸಿದಂತೆ ಟ್ರಂಪ್ ಆಡಳಿತ ಆಕ್ಷೇಪಣೆ ಸಲ್ಲಿಸಿತ್ತು
H-1B visa ಪಾಲಿಸಿ ಬಗ್ಗೆ ಬಿಡೆನ್ ಮಹತ್ವದ ನಿರ್ಧಾರ title=
America will Reconsider H-1B visa policy

ನವದೆಹಲಿ: ಬದಲಾಗುತ್ತಿರುವ ಸಮಯದೊಂದಿಗೆ ಬದಲಾಗುವ ಸ್ನೇಹವನ್ನು ಯಾರೂ ಸ್ನೇಹ ಎಂದು ಕರೆಯುವುದಿಲ್ಲ ಎಂಬುದಕ್ಕೆ ಅಮೆರಿಕ ಉತ್ತಮ ನಿದರ್ಶನವಾಗಿದೆ. ಅಮೇರಿಕ ನೂತನ ಅಧ್ಯಕ್ಷ ಜೋ ಬಿಡೆನ್ (Joe Biden) ಆಡಳಿತವು ಎಚ್ -1 ಬಿ ವೀಸಾ ನೀತಿಗೆ ಸಂಬಂಧಿಸಿದ ಹಳೆಯ ನಿಯಮಗಳನ್ನು ಹಿಂತೆಗೆದುಕೊಳ್ಳುವ ಮೂಲಕ ಭಾರತ ಮತ್ತು ಯುನೈಟೆಡ್ ಸ್ಟೇಟ್ಸ್ ನಡುವಿನ ಸ್ನೇಹದ ಬಲಿಷ್ಠತೆಗೆ ಸಾಕ್ಷಿಯಾಗಿದೆ. ಅಮೆರಿಕದ ಈ ಹೆಜ್ಜೆ ಭಾರತದಲ್ಲಿ ಸಂತೋಷದ ಅಲೆಯನ್ನು ಹುಟ್ಟುಹಾಕಿದೆ. ಏಕೆಂದರೆ ಉದ್ಯೋಗದ ದೊಡ್ಡ ಮಾರ್ಗವನ್ನು ತೆರೆಯಲಾಗಿದೆ.

ಬಿಡೆನ್ ಅವರ ದೊಡ್ಡ ನಿರ್ಧಾರ :
ಅಮೆರಿಕ ಅಧ್ಯಕ್ಷ ಜೋ ಬಿಡನ್  (Joe Biden)  ಅವರು ಟ್ರಂಪ್ ಸರ್ಕಾರದ ನಿರ್ಧಾರಗಳನ್ನು ಮರುಪರಿಶೀಲಿಸಲು ನಿರ್ಧರಿಸಿದ್ದಾರೆ. ಈ ಪಟ್ಟಿಯಲ್ಲಿ ಎಚ್ -1 ಬಿ ವೀಸಾ ನೀತಿಯ ವಿಷಯವೂ ಇದೆ. ಟ್ರಂಪ್ ಸರ್ಕಾರ ವಿದೇಶಿ ಉದ್ಯೋಗಿಗಳಿಗೆ ನೀಡಬೇಕಾದ ಎಚ್ -1 ಬಿ ವೀಸಾಗಳಿಗೆ ಸಂಬಂಧಿಸಿದ 3 ಹೊಸ ನಿಯಮಗಳನ್ನು ಜಾರಿಗೊಳಿಸಿದ್ದರು. ಹೊಸ ನಿಯಮಗಳಿಂದಾಗಿ, ಅಮೆರಿಕದಲ್ಲಿ ಕೆಲಸ ಮಾಡುವ ಭಾರತೀಯ ಜನರಿಗೆ ಸಾಕಷ್ಟು ಸಮಸ್ಯೆಗಳಿದ್ದವು. ಸರ್ಕಾರ ಬದಲಾವಣೆಯ ನಂತರ, ಬಿಡೆನ್ ಆಡಳಿತವು ಅಮೆರಿಕದ ಇತರ ದೇಶಗಳ ಜನರಿಗೆ ಸಮಸ್ಯೆಗಳನ್ನು ಉಂಟುಮಾಡುವ ಮೂರು ನೀತಿ ನಿರ್ಧಾರಗಳನ್ನು ಹಿಂತೆಗೆದುಕೊಂಡಿದೆ.

ಬಿಡೆನ್-ಮೋದಿ ಸ್ನೇಹದ ಶಕ್ತಿ:
ಭಾರತ ಮತ್ತು ಅಮೆರಿಕ ನಡುವಿನ ಸ್ನೇಹ ಎಷ್ಟು ಪ್ರಬಲವಾಗಿದೆ ಎಂಬುದಕ್ಕೆ ಬಿಡೆನ್ ಸರ್ಕಾರದ ಹೊಸ ನಿರ್ಧಾರ ದೊಡ್ಡ ಉದಾಹರಣೆಯಾಗಿದೆ. ಅಮೆರಿಕ ಅಧ್ಯಕ್ಷ ಜೋ ಬಿಡನ್ ಮತ್ತು ಪ್ರಧಾನಿ ನರೇಂದ್ರ ಮೋದಿ ಪರಸ್ಪರ ಗೌರವಿಸುತ್ತಾರೆ ಮತ್ತು ವಿವಾದಗಳನ್ನು ಬಗೆಹರಿಸಲು ಮುಕ್ತ ಮನಸ್ಸಿನಿಂದ ಚರ್ಚಿಸುತ್ತಾರೆ. ಎಚ್ -1 ಬಿ ವೀಸಾದ (H-1B visa) ಹೊಸ ನಿಯಮಗಳನ್ನು ಭಾರತ ವಿರೋಧಿಸಿತ್ತು ಮತ್ತು ಆಕ್ಷೇಪಣೆ ಸಲ್ಲಿಸಿತ್ತು. 

ಇದನ್ನೂ ಓದಿ - ಪ್ರಮುಖ ಆಡಳಿತಾತ್ಮಕ ಹುದ್ದೆಗಳಿಗೆ ಇಬ್ಬರು ಭಾರತೀಯ-ಅಮೇರಿಕನ್ ರನ್ನು ನೇಮಿಸಿದ ಬಿಡೆನ್

ಭಾರತೀಯ ಐಟಿ ವೃತ್ತಿಪರರಿಗೆ ಪರಿಹಾರ ಸಿಗಲಿದೆ :
ಭಾರತೀಯ ಐಟಿ ವೃತ್ತಿಪರರು ಬಿಡೆನ್ ನಿರ್ಧಾರದಿಂದ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ. ಎಚ್ -1 ಬಿ ವೀಸಾಗಳಿಗೆ ಸಂಬಂಧಿಸಿದಂತೆ ಟ್ರಂಪ್ ಆಡಳಿತದ ವಿವಾದಾತ್ಮಕ ನಿಯಮಗಳಿಂದಾಗಿ ಐಟಿ ವೃತ್ತಿಪರರು ಸಾಕಷ್ಟು ತೊಂದರೆಗಳನ್ನು ಎದುರಿಸುತ್ತಿದ್ದರು. ಬಿಡೆನ್ ಸರ್ಕಾರದ ದೊಡ್ಡ ನಿರ್ಧಾರವು ಈಗ ಅಮೆರಿಕಕ್ಕೆ ಹೋಗುವ ಕನಸು ಕಾಣುತ್ತಿರುವ ಎಲ್ಲ ಭಾರತೀಯ ಐಟಿ ವೃತ್ತಿಪರರಿಗೆ ಪ್ರಯೋಜನವನ್ನು ನೀಡುತ್ತದೆ. ಅಮೆರಿಕದಲ್ಲಿ ಸಾವಿರಾರು ಭಾರತೀಯ ಮೂಲದ ಐಟಿ ವೃತ್ತಿಪರರು ಕೆಲಸ ಮಾಡುತ್ತಾರೆ ಮತ್ತು ಲಕ್ಷಾಂತರ ಯುವ ಐಟಿ ವೃತ್ತಿಪರರು ತಮ್ಮ ವೃತ್ತಿಜೀವನವನ್ನು ಅಮೆರಿಕದಲ್ಲಿ ಪ್ರಾರಂಭಿಸಲು ಬಯಸುತ್ತಾರೆ. ಅವರೆಲ್ಲರಿಗೂ ಬಿಡನ್ ನಿರ್ಧಾರ ಸಂತಸವನ್ನುಂಟು ಮಾಡಿದೆ.

ಇದನ್ನೂ ಓದಿ - ಇಬ್ಬರು ಭಾರತೀಯ-ಅಮೆರಿಕನ್ ಮಹಿಳೆಯರಿಗೆ ಬಿಡೆನ್ ಆಡಳಿತದಲ್ಲಿ ಪ್ರಮುಖ ಸ್ಥಾನ..!

ಎಚ್ -1 ಬಿ ವೀಸಾ ನೀತಿ ಎಂದರೇನು?
ಯುಎಸ್ ಆಡಳಿತವು ವಿದೇಶದಿಂದ ಬರುವ ವೃತ್ತಿಪರರಿಗೆ ಎಚ್ -1 ಬಿ ವೀಸಾಗಳನ್ನು ನೀಡುತ್ತದೆ. ವಾಸ್ತವವಾಗಿ, ಟ್ರಂಪ್ ಸರ್ಕಾರದ ನಿಯಮಗಳಿಂದಾಗಿ ಹೆಚ್ಚು ನುರಿತ ಮತ್ತು ಹೆಚ್ಚು ಸಂಭಾವನೆ ಪಡೆಯುವ ಜನರು ಮಾತ್ರ ಎಚ್ -1 ಬಿ ವೀಸಾಗಳನ್ನು ಪಡೆಯುತ್ತಿದ್ದರು. ಕಡಿಮೆ ವೇತನದಲ್ಲಿ ಕೆಲಸ ಮಾಡುವ ಕಡಿಮೆ ನುರಿತ ಜನರಿಗೆ ಅಮೆರಿಕಕ್ಕೆ ಹೋಗಲು ಎಚ್ -1 ಬಿ ವೀಸಾ ಪಡೆಯಲು ಸಾಧ್ಯವಾಗಲಿಲ್ಲ, ಇದು ಸಾಕಷ್ಟು ತೊಂದರೆಗಳನ್ನುಂಟು ಮಾಡಿತ್ತು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.
 

Trending News