ಹೈದರಾಬಾದ್: ಕರ್ನಾಟಕದಲ್ಲೇ ಇದ್ದು ಕನ್ನಡ ಮಾತನಾಡದ ಹಲವರು ಕನ್ನಡ ಪ್ರೇಮ ಮನಸ್ಸಿನಲ್ಲಿದ್ದರೆ ಸಾಕು ಅದನ್ನು ತೋರಿಸುವ ಅವಶ್ಯಕತೆ ಇಲ್ಲ ಎಂದು ವಾದಿಸುತ್ತಾರೆ. ಆದರೆ ಮೂಲತಃ ಕರ್ನಾಟಕದವರಾದರೂ ತೆಲುಗು, ತಮಿಳು ಚಿತ್ರಗಳಲ್ಲಿ ಖ್ಯಾತಿ ಪಡೆದಿರುವ ಪ್ರಸಿದ್ಧ ನಟಿ ತಮ್ಮ ತಂದೆ-ತಾಯಿಯ ವಿವಾಹ ವಾರ್ಷಿಕೋತ್ಸವಕ್ಕೆ ಕನ್ನಡದಲ್ಲಿ ಶುಭಹಾರೈಸುವ ಮೂಲಕ ಮತ್ತೆ ಕರುನಾಡಿನ ಜನತೆಯ ಮನ ಗೆದ್ದಿದ್ದಾರೆ.
ವಾಸ್ತವವಾಗಿ ಮಾರ್ಚ್ 16ರಂದು ನಟಿ ಅನುಷ್ಕಾ ಶೆಟ್ಟಿ ಅವರ ತಂದೆ ವಿಠಲ ಶೆಟ್ಟಿ ಮತ್ತು ತಾಯಿ ಪ್ರಫುಲ್ಲ ಅವರ ವಿವಾಹ ವಾರ್ಷಿಕೋತ್ಸವ ಆಚರಿಸಿಕೊಂಡರು. ಈ ಸಂದರ್ಭದಲ್ಲಿ ಹೆತ್ತವರಿಗೆ ಸಾಮಾಜಿಕ ಜಾಲತಾಣದ (Social Media) ಮೂಲಕ ವಿಶ್ ಮಾಡಿದ ಅನುಷ್ಕಾ ಮದುವೆ ವಾರ್ಷಿಕೋತ್ಸವದ ಹಾರ್ದಿಕ ಶುಭಾಶಯಗಳು ಪಪ್ಪ ಮತ್ತು ಅಮ್ಮ ಎಂದು ಬರೆದಿದ್ದಾರೆ.
ಅನುಷ್ಕಾ ಶೆಟ್ಟಿ (Anushka Shetty) ಕನ್ನಡಾಭಿಮಾನಕ್ಕೆ ಫಿದಾ ಆಗಿರುವ ನೆಟ್ಟಿಗರು ನಿಮ್ಮ ಕನ್ನಡತನಕ್ಕೆ ನೀವು ಸದಾ ಇಷ್ಟವಾಗುತ್ತೀರಿ ಎಂದು ಓರ್ವ ಅಭಿಮಾನಿ ಬರೆದಿದ್ದರೆ, ಇನ್ನೋರ್ವ ಅಭಿಮಾನಿ ನಿಮ್ಮ ಕನ್ನಡ ಭಾಷೆಯ ಮೇಲಿನ ರ್ಪೀತಿಗೆ ಧನ್ಯವಾದಗಳು ಮೇಡಂ ಎಂದಿದ್ದಾರೆ.
ಇದನ್ನೂ ಓದಿ - ಅನುಷ್ಕಾ ಶೆಟ್ಟಿ ಜೊತೆಗಿನ ಪ್ರೇಮ ಕಹಾನಿ ಬಗ್ಗೆ 'ಬಾಹುಬಲಿ' ಏನಂತಾರೆ ?
ಮತ್ತೋರ್ವ ಅಭಿಮಾನಿ ವೀರ ಕನ್ನಡತಿಯ ಹೆತ್ತ ತಂದೆ ತಾಯಿಗಳಿಗೆ ಮದುವೆ ವಾರ್ಷಿಕೋತ್ಸವದ ಹಾರ್ದಿಕ ಶುಭಾಶಯಗಳು ಎಂದು ವಿಶ್ ಮಾಡಿದ್ದಾರೆ.
ಎಲ್ಲಾದರೂ ಇರು, ಎಂತಾದರೂ ಇದ್ರೂ ಎಂದೆಂದಿಗೂ ನೀ ಕನ್ನಡವಾಗಿರು ಎಂಬುದನ್ನು ಕಟ್ಟುನಿಟ್ಟಿನಿಂದ ಪಾಲನೆ ಮಾಡುತ್ತಿರುವ ಕನ್ನಡತಿ ಈ ನಮ್ಮ ಅನುಷ್ಕಾ ಶೆಟ್ಟಿ ಎಂದು ಅಭಿಮಾನಿಯೊಬ್ಬರು ಹೊಗಳಿದ್ದಾರೆ.
ಇದನ್ನೂ ಓದಿ - ರಿಯಲ್ ಆಗೂ ಕಪಲ್ಸ್ ಆಗಲಿದ್ದಾರೆಯೇ ಬಾಹುಬಲಿಯ ಈ ಜೋಡಿ: ಕಡೆಗೂ ಮೌನ ಮುರಿದ ಅನುಷ್ಕಾ ಶೆಟ್ಟಿ
ಮತ್ತೋರ್ವ ಅಭಿಮಾನಿ ಕನ್ನಡತಿ ಅಂದ್ರೆ ಇದು ಪರಭಾಷೆಯಲ್ಲಿ ಅಭಿನಯ ಮಾಡಿದರೂ ಕನ್ನಡ ಪ್ರೇಮ ಮಾತ್ರ ಹಾಗೆ ಇದೆ. ಹ್ಯಾಟ್ಸಪ್ ಮೇಡಂ ಎಂದಿದ್ದಾರೆ.
ಈ ರೀತಿಯಾಗಿ ಇದುವರೆಗೂ ಅನುಷ್ಕಾ ಶೆಟ್ಟಿ ಅವರ ಈ ಪೋಸ್ಟ್ ಗೆ ಸುಮಾರು ಏಳು ಸಾವಿರ ಮಂದಿ ಪ್ರತಿಕ್ರಿಯಿಸಿದ್ದಾರೆ. 700ಕ್ಕೂ ಹೆಚ್ಚು ಜನರು ಇದನ್ನು ಶೇರ್ ಮಾಡಿದ್ದಾರೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.