VIDEO: ಮತ್ತೊಮ್ಮೆ ಒಂದೇ ಓವರ್‌ನಲ್ಲಿ 4 ಸಿಕ್ಸರ್‌ಗಳನ್ನು ಬಾರಿಸಿ ಘರ್ಜಿಸಿದ Yuvraj Singh

ರೋಡ್ ಸೇಫ್ಟಿ ವರ್ಲ್ಡ್ ಸೀರೀಸ್ 2021 (Road Safety World Series 2021) ರ ಮೊದಲ ಸೆಮಿಫೈನಲ್ ಪಂದ್ಯ ಇಂಡಿಯಾ ಲೆಜೆಂಡ್ಸ್ (India Legends) ಮತ್ತು ವೆಸ್ಟ್ ಇಂಡೀಸ್ ಲೆಜೆಂಡ್ಸ್ (West Indies Legends)  ನಡುವೆ ಬುಧವಾರ ಸಂಜೆ ರಾಯ್ಪುರ ಮೈದಾನದಲ್ಲಿ ನಡೆಯಿತು. ಈ ಪಂದ್ಯದಲ್ಲಿ ಯುವರಾಜ್ ಸಿಂಗ್ ತಮ್ಮ ಅತ್ಯುತ್ತಮ ಬ್ಯಾಟಿಂಗ್ ಮೂಲಕ ಪ್ರತಿ ಕ್ರಿಕೆಟ್ ಅಭಿಮಾನಿಗಳ ಹೃದಯವನ್ನು ಗೆದ್ದರು.

Written by - Yashaswini V | Last Updated : Mar 18, 2021, 07:40 AM IST
  • ಯುವರಾಜ್ ಸಿಂಗ್ ಅದ್ಭುತ ಬ್ಯಾಟಿಂಗ್
  • ಒಂದೇ ಓವರ್‌ನಲ್ಲಿ 4 ಸಿಕ್ಸರ್‌ಗಳು
  • ಫೈನಲ್‌ನಲ್ಲಿ ಇಂಡಿಯಾ ಲೆಜೆಂಡ್ಸ್
VIDEO: ಮತ್ತೊಮ್ಮೆ ಒಂದೇ ಓವರ್‌ನಲ್ಲಿ 4 ಸಿಕ್ಸರ್‌ಗಳನ್ನು ಬಾರಿಸಿ ಘರ್ಜಿಸಿದ Yuvraj Singh title=
Yuvraj Singh (Image courtesy: Twitter/@RSWorldSeries)

ನವದೆಹಲಿ: ಭಾರತ (India) ಮತ್ತು ವೆಸ್ಟ್ ಇಂಡೀಸ್‌ನ ಶ್ರೇಷ್ಠ ಆಟಗಾರರನ್ನು ನೋಡಲು ಛತ್ತೀಸ್‌ಗಢದ  (Chhattisgarh) ಶಹೀದ್ ವೀರ್ ನಾರಾಯಣ್ ಸಿಂಗ್ ಅಂತರರಾಷ್ಟ್ರೀಯ ಕ್ರೀಡಾಂಗಣದಲ್ಲಿ ಭಾರಿ ಜನಸಂದಣಿ ಇತ್ತು. ರೋಡ್ ಸೇಫ್ಟಿ ವರ್ಲ್ಡ್ ಸೀರೀಸ್ 2021 ರ ಅದ್ಭುತ ಪಂದ್ಯಕ್ಕೆ ಈ ಕ್ರೀಡಾಂಗಣ ಸಾಕ್ಷಿಯಾಯಿತು.

ಯುವರಾಜ್ ಸ್ಫೋಟ :
ಈ ಪಂದ್ಯದಲ್ಲಿ ಯುವರಾಜ್ ಸಿಂಗ್ (Yuvraj Singh) ಕೇವಲ 20 ಎಸೆತಗಳಲ್ಲಿ 1 ಬೌಂಡರಿ ಮತ್ತು 6 ಸಿಕ್ಸರ್ ಸಹಾಯದಿಂದ ಅಜೇಯ 49 ರನ್ ಗಳಿಸಿದರು. ಕೆರಿಬಿಯನ್ ಬೌಲರ್ ಮಹೇಂದ್ರ ನಾಗಮೂಟೂ (Mahendra Nagamootoo) ಅವರ 19 ನೇ ಓವರ್‌ನಲ್ಲಿ ಯುವರಾಜ್ ಸಿಂಗ್ ನಾಲ್ಕು ಸಿಕ್ಸರ್ ಬಾರಿಸಿದರು. ಗಮನಿಸಬೇಕಾದ ಸಂಗತಿಯೆಂದರೆ, 2007 ರಲ್ಲಿ ಯುವಿ ಇಂಗ್ಲೆಂಡ್‌ನ ಸ್ಟುವರ್ಟ್ ಬ್ರಾರ್ಡ್‌ನ ಒಂದು ಓವರ್‌ನಲ್ಲಿ 6 ಸಿಕ್ಸರ್ ಬಾರಿಸುವ ಮೂಲಕ ವಿಶ್ವ ಕ್ರಿಕೆಟ್‌ನಲ್ಲಿ ಸದ್ದು ಮಾಡಿದ್ದರು.

ಇದನ್ನೂ ಓದಿ - Ind vs Eng: ಮೂರನೇ T-20ಯಲ್ಲಿ ಟೀಮ್ ಇಂಡಿಯಾದ ಈ 5 ತಪ್ಪುಗಳೇ ಸೋಲಿಗೆ ಕಾರಣ

ಮಾರ್ಚ್ 13, 2021 ರಂದು, ರೋಡ್ ಸೇಫ್ಟಿ ವರ್ಲ್ಡ್ ಸೀರೀಸ್ ಪಂದ್ಯದಲ್ಲಿ ಯುವರಾಜ್ ಸಿಂಗ್ (Yuvraj Singh) 22 ಎಸೆತಗಳಲ್ಲಿ 2 ಬೌಂಡರಿ ಮತ್ತು 6 ಸಿಕ್ಸರ್‌ಗಳ ಸಹಾಯದಿಂದ ಔಟಾಗದೆ 55 ರನ್ ಗಳಿಸಿದರು. ದಕ್ಷಿಣ ಆಫ್ರಿಕಾದ ಬೌಲರ್ ಜಾಂಡರ್ ಡಿ ಬ್ರೂಯಿನ್ ಅವರ 18 ನೇ ಓವರ್‌ನಲ್ಲಿ ಸತತ ನಾಲ್ಕು ಎಸೆತಗಳಲ್ಲಿ ನಾಲ್ಕು ಸಿಕ್ಸರ್‌ಗಳನ್ನು ಹೊಡೆದರು. ಈಗ ಮತ್ತೊಮ್ಮೆ  ಅಂತಹ ಪ್ರದರ್ಶನವನ್ನು ನೋಡಿದಾಗ, ಯುವಿಯ ಶೈಲಿಯಲ್ಲಿ ಯಾವುದೇ ಬದಲಾವಣೆ ಆಗಿಲ್ಲ ಎಂದರೆ  ತಪ್ಪಾಗಲಾರದು.

20 ಓವರ್‌ಗಳಲ್ಲಿ ಭಾರತದ ಲೆಜೆಂಡ್ಸ್ 218 :
ಬುಧವಾರ ನಡೆದ ಸೆಮಿಫೈನಲ್‌ನಲ್ಲಿ ಯುವರಾಜ್ ಸಿಂಗ್ ಅವರನ್ನು ಹೊರತುಪಡಿಸಿ, ಇಂಡಿಯಾ ಲೆಜೆಂಡ್ಸ್ (India Legends)  ಸಚಿನ್ ತೆಂಡೂಲ್ಕರ್ (Sachin Tendulkar) 42 ಎಸೆತಗಳಲ್ಲಿ 65 ರನ್ ಗಳಿಸಿದರೆ, ವೀರೇಂದ್ರ ಸೆಹ್ವಾಗ್ (Virender Sehwag) 17 ಎಸೆತಗಳಲ್ಲಿ 35 ರನ್ ಗಳಿಸಿದ್ದಾರೆ. ಇದಲ್ಲದೆ ಯೂಸುಫ್ ಪಠಾಣ್ 37 ಮತ್ತು ಮೊಹಮ್ಮದ್ ಕೈಫ್ 27 ರನ್ ಗಳಿಸಿದರು ಮತ್ತು ನಿಗದಿತ 20 ಓವರ್‌ಗಳಲ್ಲಿ ತಮ್ಮ ತಂಡದ ಸ್ಕೋರ್ 218/3 ಕ್ಕೆ ಹೆಚ್ಚಿಸಿದರು. ಇದರೊಂದಿಗೆ ವೆಸ್ಟ್ ಇಂಡೀಸ್ ಲೆಜೆಂಡ್ಸ್ ಕೇವಲ 219 ರನ್ ಗಳಿಸುವ ಗುರಿಯನ್ನು ಪಡೆಯಿತು.

ಇದನ್ನೂ ಓದಿ - Road Safety World Series T20 2020-21: ಇಂಡಿಯಾ ಲೆಜೆಂಡ್ಸ್ ಗೆ 12 ರನ್ ಗಳ ಗೆಲುವು
 
ಫೈನಲ್‌ನಲ್ಲಿ ಭಾರತ ಲೆಜೆಂಡ್ಸ್ : 
20 ಓವರ್‌ಗಳಲ್ಲಿ 219 ರನ್‌ಗಳ ಗುರಿ ಕಾಣುವುದು ಕಷ್ಟ, ಆದರೆ ವೆಸ್ಟ್ ಇಂಡೀಸ್‌ನ ಬ್ಯಾಟ್ಸ್‌ಮನ್‌ಗಳು ಬೌಂಡರಿ ಮತ್ತು ಸಿಕ್ಸರ್‌ಗಳನ್ನು ಬಾರಿಸಿ ಗುರಿ ಬೆನ್ನತ್ತಲು ಯತ್ನಿಸಿದರು. ಡ್ವೇನ್ ಸ್ಮಿತ್ ಮತ್ತು ಬ್ರಿಯಾನ್ ಲಾರಾ ಕ್ರಮವಾಗಿ 63 ಮತ್ತು 46 ರನ್ ಗಳಿಸಿದರು, ವಿಂಡೀಸ್ ಅನ್ನು ಗೆಲುವಿನ ಸಮೀಪಕ್ಕೆ ತಂದರು. ನಂತರ ವಿನಯ್ ಕುಮಾರ್ ಮತ್ತು ಇರ್ಫಾನ್ ಪಠಾಣ್ ಅವರ ಅದ್ಭುತ ಬೌಲಿಂಗ್ ಆತಿಥೇಯರಿಗೆ 13 ರನ್‌ಗಳ ರೋಚಕ ಗೆಲುವು ತಂದುಕೊಟ್ಟಿತು. ಇದರೊಂದಿಗೆ ಇಂಡಿಯಾ ಲೆಜೆಂಡ್ಸ್ ತಂಡ ಈ ಪಂದ್ಯಾವಳಿಯ ಫೈನಲ್ ತಲುಪಿತು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News