ನವದೆಹಲಿ: ಭಾರತ ಮತ್ತು ಇಂಗ್ಲೆಂಡ್ (IND vs ENG) ನಡುವಿನ ಟಿ -20 ಸರಣಿಯನ್ನು 3-2ರಿಂದ ಗೆದ್ದ ನಂತರ ವಿರಾಟ್ ಕೊಹ್ಲಿ (Virat Kohli) ಪಡೆ ಏಕದಿನ ಸರಣಿ ಬಗ್ಗೆ ಬಹಳ ಉತ್ಸುಕವಾಗಿದೆ. ಈಗ 3 ಪಂದ್ಯಗಳ ಏಕದಿನ ಸರಣಿಯಲ್ಲಿ ತನ್ನ ಶಕ್ತಿ ಪ್ರದರ್ಶಿಸಲು ಟೀಮ್ ಇಂಡಿಯಾ (Team India) ಪುಣೆ ತಲುಪಿದೆ.
ಪಿಪಿಇ ಕಿಟ್ಗಳಲ್ಲಿ ಸಿಬ್ಬಂದಿ ಸದಸ್ಯರು:
ಈ ಮಧ್ಯೆ ಬಿಸಿಸಿಐ (BCCI) ತನ್ನ ಟ್ವಿಟ್ಟರ್ ಖಾತೆ ಟೀಮ್ ಇಂಡಿಯಾದ ಹಾರಾಟದ ವಿಡಿಯೋವನ್ನು ಬಿಡುಗಡೆ ಮಾಡಿದೆ. ಅಹಮದಾಬಾದ್ (Ahmedabad) ನಿಂದ ಪುಣೆ (Pune) ಗೆ ಪ್ರಯಾಣಿಸುತ್ತಿರುವ ಭಾರತೀಯ ಕ್ರಿಕೆಟಿಗರ ಬಗ್ಗೆ ವಿಶೇಷ ಕಾಳಜಿ ವಹಿಸುತ್ತಿರುವುದನ್ನು ಈ ವಿಡಿಯೋದಲ್ಲಿ ಕಾಣಬಹುದು. ಇದಲ್ಲದೆ ಈ ವೀಡಿಯೊದಲ್ಲಿ ವಿಮಾನದ ಸಿಬ್ಬಂದಿ ಪಿಪಿಇ ಕಿಟ್ನಲ್ಲಿ ಕಾಣಿಸಿಕೊಂಡಿದ್ದಾರೆ.
Hello Pune, we're here 👋#TeamIndia #INDvENG @Paytm pic.twitter.com/JmP6EwoU3R
— BCCI (@BCCI) March 21, 2021
ಇದನ್ನೂ ಓದಿ - Ind Vs Eng: ODI ಸರಣಿಗೂ ಮುನ್ನ England ತಂಡಕ್ಕೆ ಭಾರಿ ಹಿನ್ನಡೆ!
ಮಹಾರಾಷ್ಟ್ರದಲ್ಲಿ ಕರೋನಾ ಆತಂಕ :
ಭಾನುವಾರ, ಮಹಾರಾಷ್ಟ್ರದಲ್ಲಿ ಕೋವಿಡ್ -19 (Covid 19) ನ 30,535 ಹೊಸ ಪ್ರಕರಣಗಳು ವರದಿಯಾಗಿವೆ. ಇದು ಇದುವರೆಗೆ ದಾಖಲಾದ ಅತಿ ಹೆಚ್ಚು ದೈನಂದಿನ ಪ್ರಕರಣವಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಟೀಮ್ ಇಂಡಿಯಾದ ಕ್ರಿಕೆಟಿಗರ ಸುರಕ್ಷತೆ ದೃಷ್ಟಿಯಿಂದ ಹಲವು ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ.
Today, along with Maharashtra Cricket Association President, Mr. Vikas Kakatkar ji met with the Hon’ble CM Shri Uddhav ji Thackeray and Minister Shri Aaditya ji Thackeray regarding the India-England One-Day International Matches to be held in Maharashtra. pic.twitter.com/ipoidsX7Bl
— Milind Narvekar (@NarvekarMilind_) February 27, 2021
ಇದನ್ನೂ ಓದಿ - Ind vs Eng: 4 ಓವರ್ಗಳ ನಾಯಕತ್ವದಲ್ಲಿ 'ಹಿಟ್ಮ್ಯಾನ್' ಎಂದು ಸಾಬೀತು ಪಡಿಸಿದ Rohit Sharma
ಪ್ರೇಕ್ಷಕರಿಲ್ಲದೇ ನಡೆಯಲಿರುವ ಪಂದ್ಯ:
ಕೊರೋನವೈರಸ್ ಪ್ರಕರಣಗಳು ಹೆಚ್ಚುತ್ತಿರುವ ಕಾರಣದಿಂದಾಗಿ ಮಹಾರಾಷ್ಟ್ರದ ಮಹಾರಾಷ್ಟ್ರ ಕ್ರಿಕೆಟ್ ಅಸೋಸಿಯೇಶನ್ ಕ್ರೀಡಾಂಗಣದಲ್ಲಿ ನಡೆಯಲಿರುವ ಭಾರತ ಮತ್ತು ಇಂಗ್ಲೆಂಡ್ (IND vs ENG) ನಡುವಿನ 3 ಏಕದಿನ ಪಂದ್ಯಗಳಲ್ಲಿ ಕ್ರೀಡಾಂಗಣದಲ್ಲಿ ಯಾವುದೇ ಪ್ರೇಕ್ಷಕರು ಹಾಜರಾಗಲು ಅನುಮತಿ ನೀಡಿಲ್ಲ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.