Bathing Tips: ಸ್ನಾನ ಮಾಡುವಾಗ ದೇಹದ ಈ ಭಾಗಕ್ಕೆ ಮೊದಲು ನೀರು ಹಾಕಿದರೆ, ಒತ್ತಡ ದೂರವಾಗುತ್ತೆ

ಸ್ನಾನ ಮಾಡುವುದರಿಂದ ದೇಹದ ಬ್ಯಾಕ್ಟೀರಿಯಾವನ್ನು ತೆಗೆದುಹಾಕುವುದು ಮಾತ್ರವಲ್ಲ, ವ್ಯಕ್ತಿಯು ಉಲ್ಲಾಸವನ್ನು ಅನುಭವಿಸುತ್ತಾನೆ. ಆಯುರ್ವೇದದಲ್ಲಿ ಸ್ನಾನ ಬಹಳ ಮುಖ್ಯ ಎಂದು ವಿವರಿಸಲಾಗಿದೆ. 

Written by - Yashaswini V | Last Updated : Apr 3, 2021, 02:31 PM IST
  • ನಿತ್ಯ ಸ್ನಾನ ಮಾಡುವುದರಿಂದ ದೇಹ ಉತ್ಸಾಹದಿಂದ ಇರುತ್ತದೆ
  • ಇದು ದೇಹದ ಬ್ಯಾಕ್ಟೀರಿಯಾವನ್ನು ತೆಗೆದುಹಾಕುವುದು ಮಾತ್ರವಲ್ಲ ಹಲವು ಪ್ರಯೋಜನಗಳನ್ನು ನೀಡುತ್ತದೆ
  • ಆಯುರ್ವೇದದಲ್ಲಿ ಸ್ನಾನ ಬಹಳ ಮುಖ್ಯ ಎಂದು ವಿವರಿಸಲಾಗಿದೆ
Bathing Tips: ಸ್ನಾನ ಮಾಡುವಾಗ ದೇಹದ ಈ ಭಾಗಕ್ಕೆ ಮೊದಲು ನೀರು ಹಾಕಿದರೆ, ಒತ್ತಡ ದೂರವಾಗುತ್ತೆ  title=
Bathing Tips

Bathing Tips: ದೈನಂದಿನ ಸ್ನಾನವು ಉತ್ಸಾಹವನ್ನು ತುಂಬುತ್ತದೆ. ಸ್ನಾನ ಮಾಡುವುದರಿಂದ ದೇಹದ ಬ್ಯಾಕ್ಟೀರಿಯಾವನ್ನು ತೆಗೆದುಹಾಕುವುದು ಮಾತ್ರವಲ್ಲ, ವ್ಯಕ್ತಿಯು ಉಲ್ಲಾಸವನ್ನು ಅನುಭವಿಸುತ್ತಾನೆ. ಆಯುರ್ವೇದದಲ್ಲಿ ಸ್ನಾನ ಬಹಳ ಮುಖ್ಯ ಎಂದು ವಿವರಿಸಲಾಗಿದೆ. ಸ್ನಾನ ಮಾಡುವುದರಿಂದ ದೇಹದ ಶಕ್ತಿ ಹೆಚ್ಚಾಗುತ್ತದೆ ಮತ್ತು ಸೋಮಾರಿತ ದೂರವಾಗುತ್ತದೆ.

ಅನೇಕ ಬಾರಿ ಸ್ನಾನ ಮಾಡಿದ ನಂತರವೂ ನೀವು ತಾಜಾತನವನ್ನು ಅನುಭವಿಸುವುದಿಲ್ಲ ಮತ್ತು ದೇಹದಲ್ಲಿ ಆಲಸ್ಯ ಕಂಡು ಬರಬಹುದು. ಆದರೆ ನೀವು ಸ್ನಾನ ಮಾಡುವಾಗ ಈ ಅಂಶಗಳನ್ನು ನೆನಪಿನಲ್ಲಿಟ್ಟರೆ ಖಂಡಿತ ನಿಮ್ಮ ಹಲವು ಸಮಸ್ಯೆಗಳಿಗೆ ಪರಿಹಾರ ದೊರೆಯಬಹುದು.

ಇದನ್ನೂ ಓದಿ - Fenugreek Seed Water: ನಿತ್ಯ ಖಾಲಿ ಹೊಟ್ಟೆಯಲ್ಲಿ ಮೆಂತ್ಯದ ನೀರು ಸೇವಿಸಿ, ಈ ರೋಗಗಳಿಂದ ದೂರವಿರಿ

ಸ್ನಾನ ಮಾಡುವಾಗ ದೇಹದ ಈ ಭಾಗಕ್ಕೆ ಮೊದಲು ನೀರು ಹಾಕಿ :
ಹೆಚ್ಚಿನ ಜನರು ಸ್ನಾನ ಮಾಡುವಾಗ ಮೊದಲು ತಲೆಗೆ ನೀರು ಸುರಿಯುತ್ತಾರೆ. ಹಾಗೆ ಮಾಡುವುದರಿಂದ ಮೆದುಳಿನ ನರಗಳು ಹಾನಿಯಾಗಬಹುದು. ಆದ್ದರಿಂದ, ಸ್ನಾನ ಮಾಡುವಾಗ, ಮೊದಲು ಕಾಲುಗಳ ಮೇಲೆ ನೀರನ್ನು ಸುರಿಯಿರಿ. ಹೀಗೆ ಮಾಡುವುದರಿಂದ, ನೀವು ನೀರಿನ ತಾಪಮಾನವನ್ನು ತಿಳಿದುಕೊಳ್ಳುತ್ತೀರಿ. 

ಇದಲ್ಲದೆ, ನೀವು ಒತ್ತಡ (Stress)ದಿಂದ ಬಳಲುತ್ತಿದ್ದರೆ, ಮೊದಲು ತಲೆ ಬಾಗಿಸಿ ಕತ್ತಿನ ಹಿಂಭಾಗದಲ್ಲಿ ನೀರನ್ನು ಸುರಿಯಿರಿ. ಇದರ ನಂತರ, ಇಡೀ ದೇಹದ ಮೇಲೆ ನೀರು ಸುರಿಯಿರಿ. ಇದನ್ನು ಮಾಡುವುದರಿಂದ ಒತ್ತಡ ಮತ್ತು ನೋವು (Pain) ನಿವಾರಣೆಯಾಗುತ್ತದೆ.

ಇದನ್ನೂ ಓದಿ - Elaichi Tea: ಪ್ರತಿದಿನ ಒಂದು ಕಪ್ ಏಲಕ್ಕಿ ಚಹಾ ಕುಡಿದು ಈ ಅದ್ಭುತ ಪ್ರಯೋಜನ ಪಡೆಯಿರಿ

ಹೆಚ್ಚಿನ ಜನರು ನಿಗದಿತ ಸಮಯದಲ್ಲಿ ಸ್ನಾನ ಮಾಡುವುದಿಲ್ಲ. ಹಲವರು ತಮಗೆ ಮನಸ್ಸಾದಾಗ ದಿನದ ಯಾವುದೇ ಸಮಯದಲ್ಲಾದರೂ ಸ್ನಾನ ಮಾಡುತ್ತಾರೆ. ನೀವೂ ಸಹ ಇದೇ ರೀತಿ ಮಾಡುತ್ತಿದ್ದರೆ ಈ ಕೆಲವು ಅಂಶಗಳನ್ನು ನೆನಪಿನಲ್ಲಿಡುವುದು ಅತ್ಯವಶ್ಯಕ. ಆಹಾರವನ್ನು ಸೇವಿಸಿದ ನಂತರ ಅಥವಾ ಉಪಾಹಾರ ಸೇವಿಸಿದ ನಂತರ ನೀವು ಎಂದಿಗೂ ಸ್ನಾನ ಮಾಡಬಾರದು. ಆಯುರ್ವೇದದ (Ayurveda) ಪ್ರಕಾರ ಹೀಗೆ ಮಾಡುವುದರಿಂದ ಇದು ನಿಮ್ಮ ಜೀರ್ಣ ಕ್ರಿಯೆಯ ಮೇಲೆ ಪರಿಣಾಮ ಬೀರುತ್ತದೆ ಮತ್ತು ಆಹಾರವನ್ನು ಜೀರ್ಣಿಸಿಕೊಳ್ಳಲು ಸಾಧ್ಯವಾಗುವುದಿಲ್ಲ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News