ವಿರಾಟ್ ಕೊಹ್ಲಿ ದಾಖಲೆಗಳಿಗೆ ಲಗ್ಗೆ ಇಡುತ್ತಿದ್ದಾನೆ ಈ ಪಾಕ್ ಆಟಗಾರ..!

ಪಾಕಿಸ್ತಾನದ ನಾಯಕ ಬಾಬರ್ ಅಜಮ್ ಅವರು ಈಗಾಗಲೇ ಅಲಂಕರಿಸಿದ ಕ್ಯಾಪ್‌ಗೆ ಮತ್ತೊಂದು ಗರಿ ಸೇರಿಸಿದ್ದಾರೆ.

Last Updated : Apr 11, 2021, 03:41 PM IST
  • ಪಾಕಿಸ್ತಾನದ ನಾಯಕ ಬಾಬರ್ ಅಜಮ್ ಅವರು ಈಗಾಗಲೇ ಅಲಂಕರಿಸಿದ ಕ್ಯಾಪ್‌ಗೆ ಮತ್ತೊಂದು ಗರಿ ಸೇರಿಸಿದ್ದಾರೆ.
  • ಟಿ 20 ಕ್ರಿಕೆಟ್‌ನಲ್ಲಿ 6000 ರನ್‌ಗಳ ಹೆಗ್ಗುರುತನ್ನು ಸಾಧಿಸಿದ ವಿಶ್ವದ ಎರಡನೇ ಅತಿ ವೇಗದ ಬ್ಯಾಟ್ಸ್‌ಮನ್ ಎನ್ನುವ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
  • ಶನಿವಾರ (ಏಪ್ರಿಲ್ 10) 1 ನೇ ಟಿ 20 ಯಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧದ ತಂಡದ ಗೆಲುವಿನ ಸಂದರ್ಭದಲ್ಲಿ ಅವರು ಈ ಸಾಧನೆ ಮಾಡಿದ್ದಾರೆ.
ವಿರಾಟ್ ಕೊಹ್ಲಿ ದಾಖಲೆಗಳಿಗೆ ಲಗ್ಗೆ ಇಡುತ್ತಿದ್ದಾನೆ ಈ ಪಾಕ್ ಆಟಗಾರ..! title=
Photo Courtesy: Twitter

ನವದೆಹಲಿ: ಪಾಕಿಸ್ತಾನದ ನಾಯಕ ಬಾಬರ್ ಅಜಮ್ ಅವರು ಈಗಾಗಲೇ ಅಲಂಕರಿಸಿದ ಕ್ಯಾಪ್‌ಗೆ ಮತ್ತೊಂದು ಗರಿ ಸೇರಿಸಿದ್ದಾರೆ.

ಟಿ 20 ಕ್ರಿಕೆಟ್‌ನಲ್ಲಿ 6000 ರನ್‌ಗಳ ಹೆಗ್ಗುರುತನ್ನು ಸಾಧಿಸಿದ ವಿಶ್ವದ ಎರಡನೇ ಅತಿ ವೇಗದ ಬ್ಯಾಟ್ಸ್‌ಮನ್ ಎನ್ನುವ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.ಶನಿವಾರ (ಏಪ್ರಿಲ್ 10) 1 ನೇ ಟಿ 20 ಯಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧದ ತಂಡದ ಗೆಲುವಿನ ಸಂದರ್ಭದಲ್ಲಿ ಅವರು ಈ ಸಾಧನೆ ಮಾಡಿದ್ದಾರೆ.

ಇದನ್ನೂ ಓದಿ : IPL 2021: ಕೊನೆಯ ಬಾಲ್‌ವರೆಗೂ ಕುತೂಹಲ, ರೋಮಾಂಚಕ ಪಂದ್ಯದಲ್ಲಿ ಆರ್‌ಸಿಬಿ ಗೆಲುವು

ಅಜಮ್ ತನ್ನ 165 ನೇ ಇನ್ನಿಂಗ್ಸ್‌ನಲ್ಲಿ ಈ ಮೈಲಿಗಲ್ಲು ತಲುಪಿದರು ಮತ್ತು ಅವರು 2014 ರಲ್ಲಿ 6,000 ಟಿ 20 ರನ್-ಮಾರ್ಕ್ ಅನ್ನು ದಾಟಿದ ವೆಸ್ಟ್ ಇಂಡೀಸ್ ಕ್ರಿಸ್ ಗೇಲ್ ಅವರ ಹಿಂದೆ ಇದ್ದಾರೆ.ಅವರು 162 ಇನ್ನಿಂಗ್ಸಳನ್ನು ತೆಗೆದುಕೊಂಡು ಈ ಸಾಧನೆ ಮಾಡಿದ್ದಾರೆ.ವಿಶೇಷವೆಂದರೆ, ಆಸ್ಟ್ರೇಲಿಯಾದ ಶಾನ್ ಮಾರ್ಷ್, ಭಾರತದ ವಿರಾಟ್ ಕೊಹ್ಲಿ (Virat Kohli) ಮತ್ತು ಆಸ್ಟ್ರೇಲಿಯಾದ ಎಜೆ ಫಿಂಚ್ ಅವರರು ಕ್ರಮವಾಗಿ 180, 184 ಮತ್ತು 190 ಇನ್ನಿಂಗ್ಸ್‌ಗಳಲ್ಲಿ ಸಾಧಿಸಿದ್ದಾರೆ.

ಇದನ್ನೂ ಓದಿ : IPL 2021: ಇಂದಿನಿಂದ ಐಪಿಎಲ್ ಉತ್ಸವ, ಇಲ್ಲಿಯವರೆಗಿನ ಅತಿದೊಡ್ಡ ದಾಖಲೆಗಳಿವು

ಬಾಬರ್ ಈಗಾಗಲೇ 4,000 ಮತ್ತು 5,000 ಟಿ 20 ರನ್ ಗಳಿಸಿದ ಮೂರನೇ ಅತಿ ವೇಗದ ಬ್ಯಾಟ್ಸ್‌ಮನ್ ಶ್ರೇಯವನ್ನು ಹೊಂದಿದ್ದಾರೆ.ಟಿ 20 ಅಂತರರಾಷ್ಟ್ರೀಯ ಪಂದ್ಯಗಳಲ್ಲಿ 1,000 ರನ್ ಗಳಿಸಿದ ಎರಡನೇ ಅತಿ ವೇಗದ ಬ್ಯಾಟ್ಸ್‌ಮನ್ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

Trending News