ರಾಜ್ಯದಾದ್ಯಂತ ನೈಟ್ ಕರ್ಪ್ಯೂ ಜಾರಿಗೊಳಿಸಿದ ಸರ್ಕಾರ

ರಾಜ್ಯದಲ್ಲಿ ವ್ಯಾಪಕ ಪ್ರಮಾಣದಲ್ಲಿ ಕೊರೊನಾ ಪ್ರಕರಣಗಳ ಹೆಚ್ಚಳ ಕಂಡು ಬಂದಿರುವ ಹಿನ್ನೆಲೆಯಲ್ಲಿ ಮಂಗಳವಾರದಂದು ರಾಜ್ಯ ಸರ್ಕಾರ ಹೊಸ ಮಾರ್ಗಸೂಚಿಗಳನ್ನು ಹೊರಡಿಸಿದ್ದು ವಾರಾಂತ್ಯದ ಕರ್ಪ್ಯೂ ಘೋಷನೆಯನ್ನು ಮಾಡಿದೆ.

Last Updated : Apr 20, 2021, 10:43 PM IST
ರಾಜ್ಯದಾದ್ಯಂತ ನೈಟ್ ಕರ್ಪ್ಯೂ ಜಾರಿಗೊಳಿಸಿದ ಸರ್ಕಾರ title=
ಸಾಂದರ್ಭಿಕ ಚಿತ್ರ

ಬೆಂಗಳೂರು: ರಾಜ್ಯದಲ್ಲಿ ವ್ಯಾಪಕ ಪ್ರಮಾಣದಲ್ಲಿ ಕೊರೊನಾ ಪ್ರಕರಣಗಳ ಹೆಚ್ಚಳ ಕಂಡು ಬಂದಿರುವ ಹಿನ್ನೆಲೆಯಲ್ಲಿ ಮಂಗಳವಾರದಂದು ರಾಜ್ಯ ಸರ್ಕಾರ ಹೊಸ ಮಾರ್ಗಸೂಚಿಗಳನ್ನು ಹೊರಡಿಸಿದ್ದು ವಾರಾಂತ್ಯದ ಕರ್ಪ್ಯೂ ಘೋಷನೆಯನ್ನು ಮಾಡಿದೆ.

ಇದನ್ನೂ ಓದಿ: ಮಹಾರಾಷ್ಟ್ರದಲ್ಲಿ ಲಾಕ್ ಡೌನ್ : ನಾಳೆ ಸಿಎಂ ಉದ್ಧವ್ ಠಾಕ್ರೆ ಮಹತ್ವದ ನಿರ್ಧಾರ

ಈ ಮಾರ್ಗ ಸೂಚಿಯನ್ವಯ ಬುಧುವಾರದಿಂದ ಮೇ 4 ರವರೆಗೂ ಸರ್ಕಾರ ಈಗ ಕೊರೊನಾ ಹಿನ್ನಲೆಯಲ್ಲಿ ಕಠಿಣ ನಿಯಮಗಳನ್ನು ಜಾರಿ ಮಾಡಿದೆ. ರಾಜ್ಯದಲ್ಲಿ ಬೆಂಗಳೂರು ಈಗ ಕೊರೊನಾ ಪ್ರಕರಣಗಳ ಕೇಂದ್ರವಾಗಿ ಪರಿಣಮಿಸಿರುವುದು ನಿಜಕ್ಕೂ ತಲೆ ಬಿಸಿಯಾಗಿ ಪರಿಣಮಿಸಿದೆ.ಈ ಹಿನ್ನಲೆಯಲ್ಲಿ ಈಗ ಸರ್ಕಾರ ಕರ್ಪ್ಯೂಗೆ ಅನಿವಾರ್ಯವಾಗಿ ಮೊರೆಹೊಗಬೇಕಾಗಿದೆ.

ಇದನ್ನೂ ಓದಿ:  WhatsApp- ಸ್ವಯಂಚಾಲಿತವಾಗಿ ಕಣ್ಮರೆಯಾಗುತ್ತೆ ವಾಟ್ಸಾಪ್ ಚಾಟ್, ಯಾವುದೀ ಹೊಸ ವೈಶಿಷ್ಟ್ಯ ತಿಳಿಯಿರಿ

ಸರ್ಕಾರ ಘೋಷಿಸಿರುವ ಮಾರ್ಗಸೂಚಿಗಳು:

-ಬೆಂಗಳೂರು ನಗರದ ಮಾರುಕಟ್ಟೆಗಳನ್ನು 14 ದಿನಗಳ ಕಾಲ ಬೇರೆ ಕಡೆಗೆ ಸ್ಥಳಾಂತರಿಸಲಾಗುವುದು.
-ಶನಿವಾರ ಮತ್ತು ಭಾನುವಾರದಂದು ತರಕಾರಿ, ಕಿರಾಣಿ, ಹಾಲು ಅಂಗಡಿಗಳನ್ನು 6 ರಿಂದ 10 ವರೆಗೆ ಮಾತ್ರ ತೆರೆಯಬಹುದಾಗಿದೆ.
-ಸಾರ್ವಜನಿಕ ಸ್ಥಳಗಳಾದ ಶಾಲೆ ಕಾಲೇಜು, ಸಿನಿಮಾ ಹಾಲ್,ಮಾಲ್ ಈಜುಕೊಳ,ಧಾರ್ಮಿಕ ಸ್ಥಳ,ಹೋಟೆಲ್ ಗಳು ಬಂದ್ ಆಗಿರುತ್ತವೆ.
-ಮಧ್ಯದ ಅಂಗಡಿಗಳಲ್ಲಿ ಪಾರ್ಸಲ್ ಗೆ ಮಾತ್ರ ಅವಕಾಶವಿರುತ್ತದೆ.
-ಕಟ್ಟಡ ನಿರ್ಮಾಣ ಕಾರ್ಯಗಳಿಗೆ ಅವಕಾಶ ನೀಡಲಾಗಿದೆ.
ಸೆಕ್ಷನ್ 144 ಜಾರಿಯಲ್ಲಿರುತ್ತದೆ, ಈ ಹಿನ್ನಲೆಯಲ್ಲಿ ಮದುವೆ ಕಾರ್ಯಗಳಿಗೆ ಕೇವಲ 50 ಜನರವರೆಗೆ ಮಾತ್ರ ಅವಕಾಶವಿರುತ್ತದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News