Namma Metro: ರಾಜ್ಯದಲ್ಲಿ ವೀಕ್ ಎಂಡ್ ಕರ್ಫ್ಯೂ: ನಾಳೆ ನಾಡಿದ್ದು ಮೆಟ್ರೋ ರೈಲು ಸೇವೆ ಬಂದ್!

ರಾಜ್ಯದಲ್ಲಿ ಹೆಚ್ಚುತ್ತಿರುವ ಕೋವಿಡ್ -19 ಪ್ರಕರಣಗಳನ್ನು ತಡೆಯಲು ರಾಜ್ಯ ಸರ್ಕಾರ ವಿಧಿಸಿರುವ ವೀಕ್ ಎಂಡ್ ಕರ್ಫ್ಯೂ

Last Updated : Apr 23, 2021, 04:44 PM IST
  • ರಾಜ್ಯದಲ್ಲಿ ಹೆಚ್ಚುತ್ತಿರುವ ಕೋವಿಡ್ -19 ಪ್ರಕರಣಗಳನ್ನು ತಡೆಯಲು ರಾಜ್ಯ ಸರ್ಕಾರ ವಿಧಿಸಿರುವ ವೀಕ್ ಎಂಡ್ ಕರ್ಫ್ಯೂ
  • ಮೆಟ್ರೊ ರೈಲು ಸೇವೆಗಳನ್ನು ಶನಿವಾರ ಮತ್ತು ಭಾನುವಾರ ಬಂದ್
  • ಮೆಟ್ರೋ ರೈಲು ನಿಗಮ ಲಿಮಿಟೆಡ್ (ಬಿಎಂಆರ್ಸಿಎಲ್) ಇಂದು ಪ್ರಕಟಿಸಿದೆ.
Namma Metro: ರಾಜ್ಯದಲ್ಲಿ ವೀಕ್ ಎಂಡ್ ಕರ್ಫ್ಯೂ: ನಾಳೆ ನಾಡಿದ್ದು ಮೆಟ್ರೋ ರೈಲು ಸೇವೆ ಬಂದ್! title=

ಬೆಂಗಳೂರು: ರಾಜ್ಯದಲ್ಲಿ ಹೆಚ್ಚುತ್ತಿರುವ ಕೋವಿಡ್ -19 ಪ್ರಕರಣಗಳನ್ನು ತಡೆಯಲು ರಾಜ್ಯ ಸರ್ಕಾರ ವಿಧಿಸಿರುವ ವೀಕ್ ಎಂಡ್ ಕರ್ಫ್ಯೂ ಕಾರಣ ಮೆಟ್ರೊ ರೈಲು ಸೇವೆಗಳನ್ನು ಶನಿವಾರ ಮತ್ತು ಭಾನುವಾರ ಬಂದ್ ಇರುತ್ತದೆ ಎಂದು ಬೆಂಗಳೂರು ಮೆಟ್ರೋ ರೈಲು ನಿಗಮ ಲಿಮಿಟೆಡ್ (ಬಿಎಂಆರ್ಸಿಎಲ್) ಇಂದು ಪ್ರಕಟಿಸಿದೆ.

ಏಪ್ರಿಲ್ 21 ರಿಂದ ರಾಜ್ಯದಲ್ಲಿ ನೈಟ್ ಕರ್ಫ್ಯೂ(Night Curfew) ಮತ್ತು  ವಾರಾಂತ್ಯದಲ್ಲಿ ವೀಕ್ ಎಂಡ್ ಕರ್ಫ್ಯೂ ವಿಧಿಸಲಾಗಿದೆ ಎಂದು ಸರ್ಕಾರ ಮಂಗಳವಾರ ಹೊಸ ಮಾರ್ಗಸೂಚಿಗಳನ್ನು ಹೊರಡಿಸಿದೆ.

ಇದನ್ನೂ ಓದಿ : "ಇದೇನು ಚುನಾಯಿತ ಸರ್ಕಾರವೋ? ಹುಚ್ಚರ ಸಂತೆಯೋ?"

"ಇಡೀ ರಾಜ್ಯದಲ್ಲಿ ರಾತ್ರಿ 9 ರಿಂದ ಬೆಳಿಗ್ಗೆ 6 ರವರೆಗೆ ನೈಟ್ ಕರ್ಫ್ಯೂ ವಿಧಿಸಲಾಗಿದೆ ಮತ್ತು ಶುಕ್ರವಾರ ರಾತ್ರಿ 9 ರಿಂದ ಸೋಮವಾರ ಬೆಳಿಗ್ಗೆ 6 ರವರೆಗೆ ವೀಕ್ ಎಂಡ್ ಕರ್ಫ್ಯೂ(Weekend Curfew) ಇರುತ್ತದೆ" ಎಂದು ರಾಜ್ಯದ ಮುಖ್ಯ ಕಾರ್ಯದರ್ಶಿ ಪಿ ರವಿ ಕುಮಾರ್ ತಿಳಿಸಿದ್ದಾರೆ.

ಇದನ್ನೂ ಓದಿ : K Sudhakar: 'ರಾಜ್ಯದಲ್ಲಿ ರೆಮ್ಡೆಸಿವಿರ್ ಔಷಧದ ಕೊರತೆ ಇದೆ, ಆಕ್ಸಿಜನ್ ಕೊರತೆಯಿಲ್ಲ'

ರಾಜ್ಯದಲ್ಲಿ ಕೋವಿಡ್-19(COVID-19) ಮಾರ್ಗಸೂಚಿಗಳು ಏಪ್ರಿಲ್ 21 ರಂದು ರಾತ್ರಿ 9 ರಿಂದ ಜಾರಿಗೆ ಬರಲಿದ್ದು, ಮೇ 4 ರಂದು ಬೆಳಿಗ್ಗೆ 6 ಗಂಟೆಯವರೆಗೆ ಜಾರಿಯಲ್ಲಿರುತ್ತದೆ ಎಂದು ತಿಳಿಸಿದ್ದಾರೆ.

ಪ್ರಕರಣಗಳ ಏರಿಕೆಯ ಮಧ್ಯೆ ರಾಜ್ಯದಲ್ಲಿ ಚಾಲ್ತಿಯಲ್ಲಿರುವ ಕೋವಿಡ್ ಪರಿಸ್ಥಿತಿ ಕುರಿತು ಚರ್ಚಿಸಲು ರಾಜ್ಯಪಾಲ ವಾಜುಬಾಯಿ ವಾಲಾ(Vajubhai Vala) ಅವರ ಅಧ್ಯಕ್ಷತೆಯಲ್ಲಿ ನಡೆದ ವರ್ಚುವಲ್ ಸರ್ವಪಕ್ಷಗಳ ಸಭೆಯಾ ನಂತ್ರ ಮುಖ್ಯಮಂತ್ರಿ ಬಿ ಎಸ್ ಯಡಿಯುರಪ್ಪ ನಿನ್ನೆ ಸಂಜೆ ಮಾರ್ಗಸೂಚಿಗಳನ್ನು ಹೊರಡಿಸಲಾಗಿದೆ.

ಇದನ್ನೂ ಓದಿ : BS Yediyurappa: 'ರಾಜ್ಯದಲ್ಲಿ ಕೊರೋನಾ ಪರಸ್ಥಿತಿ ಕೈ ಮೀರಿದೆ'

ಬೆಂಗಳೂರು ಮತ್ತು ಇತರ ಕೆಲವು ಸ್ಥಳಗಳಲ್ಲಿನ ನಿರ್ಬಂಧಗಳಂತಹ ಸರ್ಕಾರವು ಲಾಕ್‌ಡೌನ್‌(Lockdown)ಗೆ ಹೋಗಬಹುದು ಎಂಬ ತೀವ್ರ  ಹೂಹಾಪೋಹಗಳ ಮಧ್ಯೆ ಘೋಷಿಸಲಾಗಿದೆ. ಮಾಜಿ ಮುಖ್ಯಮಂತ್ರಿ  ಹೆಚ್ ಡಿ ಕುಮಾರಸ್ವಾಮಿ ಕೂಡ ಇದನ್ನು ಒತ್ತಾಯಿಸಿದ್ದಾರೆ.

ಇದನ್ನೂ ಓದಿ : ಬೆಂಗಳೂರಿಗೆ ಗುಡ್ ನ್ಯೂಸ್ : ಮೆಟ್ರೋ ರೈಲು 2ಎ ಮತ್ತು 2ಬಿ ಹಂತಕ್ಕೆ ಕೇಂದ್ರ ಸರ್ಕಾರ ಅನುಮೋದನೆ

ರಾಜ್ಯ ಮುಖ್ಯ ಕಾರ್ಯದರ್ಶಿ ತಜ್ಞರು ಒಳಗೊಂಡ ಮತ್ತು ವಿರೋಧ ಪಕ್ಷಗಳೊಂದಿಗೆ ಸಮಾಲೋಚಿಸಿದ ನಂತರ ಕೋವಿಡ್ ಕುರಿತ ರಾಜ್ಯದ ತಾಂತ್ರಿಕ ಸಲಹಾ ಸಮಿತಿಯ ಶಿಫಾರಸುಗಳ ಪ್ರಕಾರ ಮಾರ್ಗಸೂಚಿಗಳಿವೆ ಎಂದು ಸಮರ್ಥಿಸಿಕೊಂಡರು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News