ರಾಜ್ಯದಲ್ಲಿ ರೂಲ್ಸ್ ಯಥಾವತ್ತಾಗಿ ಇರುತ್ತೆ. ವೀಕೆಂಡ್ ಕರ್ಫ್ಯು ಕ್ಯಾನ್ಸಲ್ ಆಗುತ್ತೆ ಅಷ್ಟೇ. ಜನರ ಮೇಲೆ ಹೆಚ್ಚು ಜವಾಬ್ದಾರಿ ಇದೆ. ಬಡವರಿಗೆ ಸಹಾಯ ಆಗಿಲ್ಲ ಎಂದು ವೀಕೆಂಡ್ ಕರ್ಫ್ಯು ತೆಗೆದುಹಾಕಿದ್ದೇವೆ. ಜನ ಹೆಚ್ಚೆತ್ತುಕೊಳ್ಳದಿದ್ರೆ ಇದಕ್ಕಿಂತ ಹೆಚ್ಚು ರೂಲ್ಸ್ ಮಾಡುತ್ತೇವೆ ಎಂದು ಹೇಳಿದ್ದಾರೆ.
ಸರ್ಕಾರದ ನಿರ್ಧಾರಕ್ಕೆ ಬೇಸರ ವ್ಯಕ್ತಪಡಿಸಿರುವ ಚಿತ್ರಮಂದಿರಗಳ ಮಾಲೀಕರು, ವೀಕೆಂಡ್ ಕರ್ಫ್ಯೂ ಹಾಗೂ ನೈಟ್ ಕರ್ಫ್ಯೂ ತೆಗೆಯುವವರೆಗೂ ಚಿತ್ರಮಂದಿರಗಳನ್ನ ಬಂದ್ ಮಾಡಲು ನಿರ್ಧರಿಸಿದ್ದು, ಇಂದಿನಿಂದ ಮೈಸೂರಿನಲ್ಲಿ ಚಿತ್ರಮಂದಿರಗಳನ್ನು ಬಂದ್ ಮಾಡಿದ್ದಾರೆ.
ಕರೋನಾ ಮೂರನೇ ಅಲೆ (Corona Third Wave) ಹಾಗೂ ಒಮಿಕ್ರಾನ್ (Omicron) ಸೋಂಕನ್ನು ತಡೆಗಟ್ಟುವ ನಿಟ್ಟಿನಲ್ಲಿ ಪ್ರಸ್ತುತ ರಾಜ್ಯದಲ್ಲಿ ಪ್ರತಿನಿತ್ಯ ನೈಟ್ ಕರ್ಫ್ಯೂ ಜಾರಿಗೊಳಿಸಲಾಗಿದೆ. ಆದರೆ ಇದರಿಂದ ತಮ್ಮ ವ್ಯಾಪಾರ- ವ್ಯವಹಾರಗಳಿಗೆ ತೊಂದರೆಯಾಗುತ್ತಿದೆ ಎಂದು ಅಳಲು ತೋಡಿಕೊಂಡಿರುವ ಹೋಟೆಲ್ ಮಾಲೀಕರು.
BBMP Commissioner Gaurav Gupta: ನೈಟ್ ಕರ್ಫ್ಯೂ, ವೀಕೆಂಡ್ ಕರ್ಫ್ಯೂ ಸೇರಿದಂತೆ ಈಗಿರುವ ಎಲ್ಲಾ ನಿರ್ಬಂಧಗಳನ್ನು ಈ ವಾರಕ್ಕೆ ಅಂತ್ಯಗೊಳಿಸಲು ಸಭೆಯಲ್ಲಿ ತೀರ್ಮಾನಿಸಲಾಗಿದೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತಾ ಹೇಳಿದ್ದಾರೆ.
ಸರ್ಕಾರ ಜವಾಬ್ದಾರಿಯಿಂದ ಕೆಲಸ ಮಾಡ್ತಿದೆ, ಇಡೀ ವಿಶ್ವದಲ್ಲಿ ಯಾವ ವಿರೋಧ ಪಕ್ಷವೂ ಸರ್ಕಾರದ ಕೋವಿಡ್ ನಿಯಂತ್ರಣ ಟೀಕಿಸಿಲ್ಲ.ಇಡೀ ವಿಶ್ವದಲ್ಲಿ ವಿಪಕ್ಷಗಳು ಮೊಸರಲ್ಲಿ ಕಲ್ಲು ಹುಡುಕಲು ಹೋಗಿಲ್ಲ.
ಸಾರ್ವಜನಿಕರು ಅತ್ಯಾವಶ್ಯಕ ಮತ್ತು ತುರ್ತು ಕಾರ್ಯಚಡುವಟಿಕೆಗಳನ್ನು ಹೊರತುಪಡಿಸಿ, ಶುಕ್ರವಾರ ರಾತ್ರಿ 10 ಗಂಟೆಯಿಂದ ಸೋಮವಾರ ಬೆಳಿಗ್ಗೆ 05 ಗಂಟೆಯವರೆಗೆ ಜನರ ಓಡಾಟವನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿರುತ್ತದೆ.
ವೀಕೆಂಡ್ ಕರ್ಪ್ಯೂ (Weekend Curfew) ಸಂದರ್ಭದಲ್ಲಿ ಅಂದರೆ ಶನಿವಾರ, ಭಾನುವಾರ ಸಾರಿಗೆ (Transport) ಸಂಚಾರದಲ್ಲಿ ಭಾರಿ ಬದಲಾವಣೆ ಮಾಡಲಾಗಿದೆ. ಅದರಲ್ಲೂ ಬಿಎಂಟಿಸಿ ಬಹುತೇಕ ಸ್ತಬ್ಧವಾಗಲಿದೆ. ವೀಕೆಂಡ್ ಕರ್ಫ್ಯೂ ದಿನ ಶೇ. 10ರಷ್ಟು ಬಿಎಂಟಿಸಿ ಬಸ್ ಗಳು ಮಾತ್ರ ರಸ್ತೆಗೆ ಇಳಿಯಲಿವೆ. ಆದರೆ ಈ ಬಸ್ ಗಳು ಸಾಮಾನ್ಯ ಪ್ರಯಾಣಿಕರ ಓಡಾಟಕ್ಕೆ ಲಭ್ಯವಿರುವುದಿಲ್ಲ.
Weekend Curfew: ದೆಹಲಿ ಸೇರಿದಂತೆ ಇಡೀ ದೇಶದಲ್ಲಿ ವೇಗವಾಗಿ ಹೆಚ್ಚುತ್ತಿರುವ ಕೊರೊನಾವೈರಸ್ ಪ್ರಕರಣಗಳ ಮಧ್ಯೆ ರಾಷ್ಟ್ರ ರಾಜಧಾನಿಯಲ್ಲಿ ಸೋಂಕಿನ ವೇಗವನ್ನು ತಡೆಯಲು ಮಹತ್ವದ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ. ಇಂದು ನಡೆದ ಡಿಡಿಎಂಎ ಮಹತ್ವದ ಸಭೆಯಲ್ಲಿ ಇಲ್ಲಿ ವೀಕೆಂಡ್ ಕರ್ಫ್ಯೂ ಹೇರಲು ನಿರ್ಧರಿಸಲಾಗಿದೆ.
ವಾರಾಂತ್ಯದ ಕರ್ಫ್ಯೂ ಸಮಯದಲ್ಲಿ ವೈದ್ಯಕೀಯ ಮತ್ತು ಆರೋಗ್ಯ ಸಂಬಂಧಿತ ತುರ್ತು ಸೇವೆಗಳು ಮುಕ್ತವಾಗಿರುತ್ತವೆ ಎಂದು ಯೋಗಿ ಆದಿತ್ಯನಾಥ್ ಸರ್ಕಾರ ಸ್ಪಷ್ಟಪಡಿಸಿದೆ. ಅದೇ ಸಮಯದಲ್ಲಿ, ಕೊನೆಯ ವಿಧಿಗಳಿಗಾಗಿ ಶವಸಂಸ್ಕಾರ ಅಥವಾ ಸ್ಮಶಾನಕ್ಕೆ ಹೋಗಲು 20 ಕ್ಕೂ ಹೆಚ್ಚು ಜನರನ್ನು ಅನುಮತಿಸಲಾಗುವುದಿಲ್ಲ. ವಾರಾಂತ್ಯದ ಕರ್ಫ್ಯೂ ಜೊತೆಗೆ, ರಾತ್ರಿ ಕರ್ಫ್ಯೂ ಎಂದಿನಂತೆ ಮುಂದುವರಿಯುತ್ತದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.