Complete Lockdown: ರಾಜ್ಯದಲ್ಲಿ 'ಸಂಪೂರ್ಣ ಲಾಕ್ ಡೌನ್' : ಸರ್ಕಾರದ ಉನ್ನತ ಅಧಿಕಾರಿಗಳಿಂದ ಮಾಹಿತಿ!

ಬಿಎಸ್‌ವೈ ಸರ್ಕಾರವು ರಾಜ್ಯದಲ್ಲಿ ಸಂಪೂರ್ಣ ಲಾಕ್ ಡೌನ್ ವಿಧಿಸಲು ಮುಂದಾಗಿದೆ

Last Updated : Apr 25, 2021, 11:56 AM IST
  • ರಾಜ್ಯದಲ್ಲಿ ಹೆಚ್ಚುತ್ತಿರುವ ಕೊರೊನಾವೈರಸ್ ಪ್ರಕರಣ
  • ಬಿಎಸ್‌ವೈ ಸರ್ಕಾರವು ರಾಜ್ಯದಲ್ಲಿ ಸಂಪೂರ್ಣ ಲಾಕ್ ಡೌನ್ ವಿಧಿಸಲು ಮುಂದಾಗಿದೆ
  • ರಾಜ್ಯ ಮುಖ್ಯ ಕಾರ್ಯದರ್ಶಿ ಪಿ ರವಿ ಕುಮಾರ್ ಶನಿವಾರ ಖಚಿತಪಡಿಸಿದ್ದಾರೆ.
Complete Lockdown: ರಾಜ್ಯದಲ್ಲಿ 'ಸಂಪೂರ್ಣ ಲಾಕ್ ಡೌನ್' : ಸರ್ಕಾರದ ಉನ್ನತ ಅಧಿಕಾರಿಗಳಿಂದ ಮಾಹಿತಿ! title=

ಬೆಂಗಳೂರು: ರಾಜ್ಯದಲ್ಲಿ ಹೆಚ್ಚುತ್ತಿರುವ ಕೊರೊನಾವೈರಸ್ ಪ್ರಕರಣಗಳ ಮಧ್ಯೆ, ಬಿಎಸ್‌ವೈ ಸರ್ಕಾರವು ರಾಜ್ಯದಲ್ಲಿ ಸಂಪೂರ್ಣ ಲಾಕ್ ಡೌನ್ ವಿಧಿಸಲು ಮುಂದಾಗಿದೆ ಎಂದು ರಾಜ್ಯ ಮುಖ್ಯ ಕಾರ್ಯದರ್ಶಿ ಪಿ ರವಿ ಕುಮಾರ್ ಶನಿವಾರ ಖಚಿತಪಡಿಸಿದ್ದಾರೆ. 

ಕೋವಿಡ್-19 ಹರಡುವುದನ್ನು ತಡೆಯಲು ರಾಜ್ಯದಲ್ಲಿ  ಸಂಪೂರ್ಣ ಲಾಕ್‌ಡೌನ್(Complete Lockdown) ತರಹದ ಕ್ರಮಗಳನ್ನು ಜಾರಿಗೆ ತರಲಾಗುವುದು ಎಂದು ರವಿಕುಮಾರ್ ಸುಳಿವು ನೀಡಿದರು ಮತ್ತು ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರ ಕ್ಯಾಬಿನೆಟ್ ಸೋಮವಾರ ಲಾಕ್‌ಡೌನ್ ಹೇರುವ ಕುರಿತು ಸಭೆ ನಡೆಸುವ ನಿರೀಕ್ಷೆಯಿದೆ ಎಂದು ಹೇಳಿದರು. "ರಾಜ್ಯ ಸರ್ಕಾರವು ಸಂಪೂರ್ಣ ಲಾಕ್ ಡೌನ್ ಮಾಡಲು ಬಯಸಿದೆ" ಎಂದು ಮುಖ್ಯ ಕಾರ್ಯದರ್ಶಿ ಪಿ ರವಿ ಕುಮಾರ್ ತಿಳಿಸಿದ್ದಾರೆ.

ಇದನ್ನೂ ಓದಿ : ಕಳೆದ 24 ಗಂಟೆಯಲ್ಲಿ ಬೆಂಗಳೂರಿನಲ್ಲಿ 17 ಸಾವಿರ ಕೊರೊನಾ ಪ್ರಕರಣ ದಾಖಲು

ನೈಟ್ ಕರ್ಫ್ಯೂ ಜೊತೆಗೆ, ರಾಜ್ಯದಲ್ಲಿ ಸೋಮವಾರ ಬೆಳಿಗ್ಗೆ ತನಕ ವೀಕ್ ಎಂಡ್ ಕರ್ಫ್ಯೂ(Wekkend Curfew) ಕೂಡ ಜಾರಿಯಲ್ಲಿದೆ. “ಆದರೆ, ಇದು ಜನರಿಗೆ ಸರಿ ಕಾಣುತ್ತಿಲ್ಲ, ಜನಗಳು ಎಲ್ಲವನ್ನೂ ಸಡಿಲಗೊಳಿಸಬೇಕೆಂದು  ಬಯಸುತ್ತಾರೆ ಮತ್ತು ಸಾಯಿವವರು ಸಾಯಲಿ ನಾವೇನು ಮಾಡೋಣ? ಎಂಬ ವರ್ತನೆಯಲ್ಲಿ ಜನರಿದ್ದಾರೆ ಎಂದು ರವಿ ಕುಮಾರ್ ಹೇಳಿದರು.

ಇದನ್ನೂ ಓದಿ : ಶಿಷ್ಯವೇತನಕ್ಕಾಗಿ ಕಾನೂನು ಪದವೀಧರರಿಂದ ಅರ್ಜಿ ಆಹ್ವಾನ

ಸೋಮವಾರ ನಡೆಯುವ ಸಭೆಯಲ್ಲಿ ಕಠಿಣ ಕ್ರಮಗಳನ್ನು ಹೇರುವುದು ಕುರಿತು ಕ್ಯಾಬಿನೆಟ್ ಸದಸ್ಯರು ಚರ್ಚೆ ನಡೆಸಲಿದ್ದಾರೆ ಎಂದು ಆರೋಗ್ಯ ಸಚಿವ ಕೆ.ಸುಧಾಕರ್(K Sudhakar) ಹೇಳಿದ್ದಾರೆ. “ಈ ಸಭೆಯಲ್ಲಿ ನಮ್ಮ ಎಲ್ಲಾ ಕ್ಯಾಬಿನೆಟ್ ಸಹೋದ್ಯೋಗಿಗಳು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಾರೆ. ಅಂತಿಮವಾಗಿ ಸಿಎಂ ಮತ್ತು ಕ್ಯಾಬಿನೆಟ್ ನಿರ್ಧರಿಸುತ್ತದೆ ”ಎಂದು ಸುಧಾಕರ್ ಹೇಳಿದರು.

ಇದನ್ನೂ ಓದಿ : Weekend Curfew: ಕರ್ನಾಟಕದಲ್ಲಿ ವೀಕೆಂಡ್ ಕರ್ಪ್ಯೂ: ಏನಿರುತ್ತೆ? ಏನಿರಲ್ಲ?

ಗಮನಾರ್ಹವಾಗಿ, ಕೋವಿಡ್-19(COVID-19) ಕುರಿತ ರಾಜ್ಯ ತಾಂತ್ರಿಕ ಸಲಹಾ ಸಮಿತಿಯು 14 ದಿನಗಳವರೆಗೆ ಲಾಕ್‌ಡೌನ್ ಸೇರಿದಂತೆ ಕಠಿಣ ನಿರ್ಬಂಧಗಳನ್ನು ವಿಧಿಸಲು ಶಿಫಾರಸು ಮಾಡಿದೆ.

ಇದನ್ನೂ ಓದಿ : BS Yediyurappa: 'ಕರ್ನಾಟಕಕ್ಕೆ ತುರ್ತಾಗಿ ಬೇಕು 1,471 ಟನ್ ಆಕ್ಸಿಜನ್'

ಅಕ್ಟೋಬರ್-ನವೆಂಬರ್ ನಲ್ಲಿ ರಾಜ್ಯದಲ್ಲಿ ಕೋವಿಡ್ -19 ಮೂರನೇ ಅಲೆ ಎದುರಿಸಬೇಕಾಗುತ್ತದೆ  ಎಂದು ಟಿಎಸಿ ಸದಸ್ಯರು(Technical Advisory Committee) ಹೇಳಿದ್ದಾರೆ ಮತ್ತು ಮುಂದಿನ ಪ್ರಸ್ಥಿತಿಯನ್ನು ಗಮನದಲ್ಲಿ ಇಟ್ಟುಕೊಂಡು  ಮುಂಚಿತವಾಗಿಯೇ ಹಿರಿಯ ನಾಗರಿಕರಿಗೆ ಕೊರೋನಾ ಲಸಿಕೆ ಹಾಕುವುದನ್ನು ಸರ್ಕಾರ ಪೂರ್ಣಗೊಳಿಸಬೇಕು ಎಂದು ಒತ್ತಾಯಿಸಿದರು.

ಇದನ್ನೂ ಓದಿ : ಬೆಳಗೆದ್ದು ಪ್ರಾಣಾಯಾಮ ಮಾಡಿ ಕರೋನಾ ಬರಲ್ಲ : ಡಾ. ಸುಧಾಕರ್

ರಾಜ್ಯದಲ್ಲಿ ಶನಿವಾರ ಕೊರೋನಾ ಪೀಡತರ ಸಂಖ್ಯೆ 13 ಲಕ್ಷ ಗಡಿ ದಾಟಿದ್ದು, ನಿನ್ನೆ ಒಂದೇ ದಿನ 29,438 ಪ್ರಕರಣಗಳು ಕಂಡು ಬಂದಿವೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

Trending News