ಬೇಸಿಗೆಯಲ್ಲಿ ಸೋರೆಕಾಯಿ ಸೇವಿಸಿ, ದೇಹ ತಂಪಾಗಿರಿಸಿ

ಸೋರೆಕಾಯಿ ಅತಿಹೆಚ್ಚು ನೀರಿನಂಶ ಹೊಂದಿದ್ದು, ದೇಹವನ್ನು ತಂಪಾಗಿರಿಸುವ ಗುಣಗಳನ್ನು ಹೊಂದಿದೆ. 

Last Updated : Mar 29, 2018, 05:26 PM IST
  • ದೇಹದ ತೂಕವನ್ನು ಕಡಿಮೆ ಮಾಡಿಕೊಳ್ಳಲು ಸೋರೆಕಾಯಿ ಸಹಕಾರಿ.
  • ಸೋರೆಕಾಯಿ ಟೈಫಾಯ್ಡ್ ಸಮಸ್ಯೆಯನ್ನು ನಿವಾರಿಸುತ್ತದೆ.
  • ಮಲಬದ್ಧತೆ ಸಮಸ್ಯೆ ನಿವಾರಣೆಯಾಗುತ್ತದೆ.
ಬೇಸಿಗೆಯಲ್ಲಿ ಸೋರೆಕಾಯಿ ಸೇವಿಸಿ, ದೇಹ ತಂಪಾಗಿರಿಸಿ title=

ಬೇಸಿಗೆಯಲ್ಲಿ, ನಮ್ಮ ದೇಹಕ್ಕೆ ಹೆಚ್ಚು ನೀರಿನ ಅಗತ್ಯವಿದೆ. ಉಷ್ಣಾಂಶ ಹೆಚ್ಚಾದಂತೆ ದೇಹದಲ್ಲಿನ ನೀರಿನ ಪ್ರಮಾಣ ಕಡಿಮೆಯಾಗುತ್ತಾ ಹೋಗುತ್ತದೆ. ಇದನ್ನು ತಡೆಯಲು ಹೆಚ್ಚು ನೀರಿನಂಶ ಇರುವ ತರಕಾರಿ ಮತ್ತು ಹಣ್ಣುಗಳ ಸೇವನೆ ಅಗತ್ಯವಾಗುತ್ತದೆ. ಅವುಗಳಲ್ಲಿ ಸೋರೆಕಾಯಿ ಅತಿಹೆಚ್ಚು ನೀರಿನಂಶ ಹೊಂದಿದ್ದು, ದೇಹವನ್ನು ತಂಪಾಗಿರಿಸುವ ಗುಣಗಳನ್ನು ಹೊಂದಿದೆ. 

ಸೋರೆಕಾಯಿ ಸೇವನೆ ದೇಹದ ಆರೋಗ್ಯಕ್ಕೆ ಹೇಗೆ ಒಳ್ಳೆಯದು ಎಂಬುದನ್ನು ತಿಳಿದುಕೊಳ್ಳೋಣ.

ತಾಜಾತನ
ಸೋರೆಕಾಯಿ ರಸವನ್ನು ಕುಡಿಯುವುದರಿಂದ ದೇಹವನ್ನು ಯಾವಾಗಲೂ ಉಲ್ಲಾಸಭಾರಿತವಾಗಿರಿಸಿ, ತಾಜಾತನ ಮೂಡಿಸುತ್ತದೆ. ಇದರ ರಸಕ್ಕೆ ಸ್ವಲ್ಪ ಜೀರಿಗೆ ಮತ್ತು ಉಪ್ಪು ಸೇರಿಸಿ ಪ್ರತಿದಿನ ಬೆಳಿಗ್ಗೆ ಸೇವಿಸಿದರೆ ಬಹಳ ಒಳ್ಳೆಯದು. 

ಜೀರ್ಣಕ್ರಿಯೆ
ಪ್ರತಿದಿನ ಬೆಳಿಗ್ಗೆ ಒಂದು ಲೋಟ ಸೋರೆಕಾಯಿ ರಸ ಅಥವಾ ಜ್ಯೂಸ್ ಕುಡಿಯುವುದರಿಂದ ಜೀರ್ಣಕ್ರಿಯೆ ಸರಿಯಾಗಿ ಆಗಿ ಮಲಬದ್ಧತೆ ಸಮಸ್ಯೆ ನಿವಾರಣೆಯಾಗುತ್ತದೆ. ಅಲ್ಲದೆ, ಹೊಟ್ಟೆಗೆ ಸಂಬಂಧಿಸಿದ ಹಲವು ರೋಗಗಳಿಗೆ ಸೋರೆಕಾಯಿ ರಾಮಬಾಣ.

ಅತಿಸಾರ 
ಸೋರೆಕಾಯಿಯನ್ನು ಮಜ್ಜಿಗೆ ಅಥವಾ ಮೊಸರಿನೊಂದಿಗೆ ಬೆರೆಸಿ ಸೇವಿಸುವುದರಿಂದ ಅತಿಸಾರ ಕಡಿಮೆಯಾಗುತ್ತದೆ. ಈ ಸಮಯದಲ್ಲಿ ದೇಹಕ್ಕೆ ನೀರಿನ ಅಗತ್ಯತೆ ಸೋರೆಕಾಯಿ ಜ್ಯೂಸ್ ಅಷ್ಟೇ ಅಲ್ಲದೆ, ಸೋರೆಕಾಯಿ ರೊಟ್ಟಿಯನ್ನೂ ಸಹ ಮಾಡಿ ಸೇವಿಸಬಹುದು. 

ದೇಹದ ತೂಕ ಇಳಿಸಲು
ದೇಹದ ತೂಕವನ್ನು ಕಡಿಮೆ ಮಾಡಿಕೊಳ್ಳಲು ಸೋರೆಕಾಯಿ ಸಹಕಾರಿ. ಸೋರೆಕಾಯಿ ರಸವನ್ನು ನಿತ್ಯ ಕುಡಿಯುವುದರಿಂದ ಹೆಚ್ಚು ಹಸಿವಾಗುವುದಿಲ್ಲ. ಇದರಲ್ಲಿ ನಾರಿನಂಶ ಅಧಿಕವಿರುವುದರಿಂದ ಹೊಟ್ಟೆ ತುಂಬುತ್ತದೆ ಮತ್ತು ಜೀರ್ಣಕ್ರಿಯೆಗೆ ಸಹಾಯವಾಗಿದೆ. ಸಂಜೆ ಹೊತ್ತು ಕುರುಕಲು ತಿಂಡಿ ತಿನ್ನುವ ಬದಲು ಒಂದು ಲೋಟ ಸೋರೆಕಾಯಿ ಜ್ಯೂಸ್ ಮತ್ತು ಸ್ವಲ್ಪ ಹಣ್ಣುಗಳನ್ನು ತಿನ್ನುವುದು ಒಳ್ಳೆಯದು. 

ಕೂದಲ ಬೆಳವಣಿಗೆ

ಒಂದು ಚಮಚ ಸೋರೆಕಾಯಿ ರಸಕ್ಕೆ 2 ಚಮಚ ನೆಲ್ಲಿಕಾಯಿ ಪುಡಿ ಮಿಕ್ಸ್‌ ಮಾಡಿ. ಇದನ್ನು ಕೂದಲಿಗೆ ಹಚ್ಚಿ, 20 ನಿಮಿಷದ ನಂತರ ತೊಳೆಯಿರಿ. ಇದನ್ನು ವಾರದಲ್ಲಿ 2 ಅಥವಾ 3 ಬಾರಿ ಮಾಡುತ್ತ ಬಂದರೆ ಕೂದಲು ಬೇಗನೆ ಬೆಳೆಯುತ್ತದೆ. 

ಟೈಫಾಯಿಡ್
ಸೋರೆಕಾಯಿ ಟೈಫಾಯ್ಡ್ ಸಮಸ್ಯೆಯನ್ನು ನಿವಾರಿಸುತ್ತದೆ. ಸೋರೆಕಾಯಿಯನ್ನು ಕತ್ತರಿಸಿ ಪಾದಗಳಿಗೆ ಉಜ್ಜುವುದರಿಂದ ಟೈಫಾಯಿಡ್ ಜ್ವರದ ಕಿರಿಕಿರಿ ಕಡಿಮೆ ಆಗುತ್ತದೆಯಲ್ಲದೆ, ದೇಹಕ್ಕೂ ಆರಾಮ ಎನಿಸುತ್ತದೆ. 

ಚರ್ಮ ಸೋಂಕು ನಿವಾರಣೆ 
ಒಂದು ಚಮಚ ಸೋರೆಕಾಯಿ ರಸಕ್ಕೆ ಅಲೋವೆರಾ ಜೆಲ್‌ ಸೇರಿಸಿ, ಅದನ್ನು ಇನ್‌ಫೆಕ್ಷನ್‌ ಆದ ಜಾಗಕ್ಕೆ ಹಚ್ಚಬೇಕು. ಇದರಿಂದ ಚರ್ಮದ ಸೋಂಕು ನಿವಾರಣೆಯಾಗುತ್ತದೆ. 

Trending News