Shiv Sundar Das: ಮಹಿಳಾ ತಂಡದ ಬ್ಯಾಟಿಂಗ್ ಕೋಚ್ ಆಗಿ ಶಿವ ಸುಂದರ್ ದಾಸ್ ಆಯ್ಕೆ

ಭಾರತೀಯ ಮಹಿಳಾ ತಂಡದ ಬ್ಯಾಟಿಂಗ್ ಕೋಚ್ ಆಗಿ ಮಾಜಿ ಟೆಸ್ಟ್ ಬ್ಯಾಟ್ಸ್‌ಮನ್ ಶಿವ್ ಸುಂದರ್ ದಾಸ್ ಅವರನ್ನು ನೇಮಿಸಲಾಗಿದೆ.

Written by - Yashaswini V | Last Updated : May 18, 2021, 11:05 AM IST
  • ಇತ್ತೀಚೆಗೆ ಬಿಸಿಸಿಐ ಮಾಜಿ ಕ್ರಿಕೆಟಿಗ ರಮೇಶ್ ಪೊವಾರ್ ಅವರನ್ನು ಮುಖ್ಯ ಕೋಚ್ ಆಗಿ ನೇಮಕ ಮಾಡಿತು
  • ಪವಾರ್ ತಮ್ಮ ಅಂತರರಾಷ್ಟ್ರೀಯ ವೃತ್ತಿಜೀವನದಲ್ಲಿ 2 ಟೆಸ್ಟ್ ಮತ್ತು 31 ಏಕದಿನ ಪಂದ್ಯಗಳನ್ನು ಆಡಿದ್ದಾರೆ
  • ಈಗ ಮಾಜಿ ಟೆಸ್ಟ್ ಕ್ರಿಕೆಟಿಗ ಶಿವ ಸುಂದರ್ ದಾಸ್ (Shiv Sundar Das) ಅವರ ಸಹಾಯಕರಾಗಿ ಆಯ್ಕೆಯಾಗಿದ್ದಾರೆ
Shiv Sundar Das: ಮಹಿಳಾ ತಂಡದ ಬ್ಯಾಟಿಂಗ್ ಕೋಚ್ ಆಗಿ ಶಿವ ಸುಂದರ್ ದಾಸ್ ಆಯ್ಕೆ title=
File Image

ನವದೆಹಲಿ: ಭಾರತದ ಮಹಿಳಾ ಕ್ರಿಕೆಟ್ ತಂಡದ ಕೋಚಿಂಗ್ ಸಿಬ್ಬಂದಿಯ ವ್ಯಾಪ್ತಿಯನ್ನು ಪುರುಷ ತಂಡದಂತೆಯೇ ವಿಸ್ತರಿಸಲಾಗುತ್ತಿದೆ. ಇತ್ತೀಚೆಗೆ ಬಿಸಿಸಿಐ ಮಾಜಿ ಕ್ರಿಕೆಟಿಗ ರಮೇಶ್ ಪೊವಾರ್ ಅವರನ್ನು ಮುಖ್ಯ ಕೋಚ್ ಆಗಿ ನೇಮಕ ಮಾಡಿತು. ಈಗ ಮಾಜಿ ಟೆಸ್ಟ್ ಕ್ರಿಕೆಟಿಗ ಶಿವ ಸುಂದರ್ ದಾಸ್ (Shiv Sundar Das) ಅವರ ಸಹಾಯಕರಾಗಿ ಆಯ್ಕೆಯಾಗಿದ್ದಾರೆ. ಶಿವ ಸುಂದರ್ ದಾಸ್ ಕೋಚ್ ತಂಡದೊಂದಿಗೆ ಬ್ಯಾಟ್ಸ್‌ಮನ್ ಆಗಿ ಸಂಬಂಧ ಹೊಂದಿದ್ದಾರೆ. 

2000 ಮತ್ತು 2002 ರ ನಡುವೆ ಭಾರತಕ್ಕಾಗಿ 23 ಟೆಸ್ಟ್ ಪಂದ್ಯಗಳನ್ನು ಆಡಿದ  ಶಿವ ಸುಂದರ್ ದಾಸ್ (Shiv Sundar Das), ಎನ್‌ಸಿಎಯಲ್ಲಿ ರಾಹುಲ್ ದ್ರಾವಿಡ್ ಅವರೊಂದಿಗೆ ಪಡೆದಿರುವ ಬ್ಯಾಟಿಂಗ್ ಅನುಭವವು ಖಂಡಿತವಾಗಿಯೂ ಮಹಿಳಾ ಕ್ರಿಕೆಟ್ ತಂಡಕ್ಕೆ ಪ್ರಯೋಜನವನ್ನು ನೀಡುತ್ತದೆ ಎಂದು ಆಶಯ ವ್ಯಕ್ತಪಡಿಸಿದ್ದಾರೆ. 

ಇದನ್ನೂ ಓದಿ - Indian Women squad for England tour: ಇಂಗ್ಲೆಂಡ್ ಪ್ರವಾಸಕ್ಕಾಗಿ ಭಾರತೀಯ ಮಹಿಳಾ ಕ್ರಿಕೆಟ್ ತಂಡದ ಘೋಷಣೆ

ರಾಹುಲ್ ದ್ರಾವಿಡ್ (Rahul Dravid) ಅವರ ಮಾರ್ಗದರ್ಶನದಲ್ಲಿ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ ಬ್ಯಾಟಿಂಗ್ ತರಬೇತುದಾರರಾಗಿದ್ದ ಶಿವ ಸುಂದರ್ ದಾಸ್, ಆ ಅನುಭವವು ಬ್ಯಾಟ್ಸ್‌ಮನ್‌ಗಳ ತಾಂತ್ರಿಕ ಸಮಸ್ಯೆಗಳನ್ನು ನಿವಾರಿಸಲು ಸಹಾಯ ಮಾಡುತ್ತದೆ ಎಂದು ಅವರು ನಂಬುತ್ತಾರೆ. 'ನಾನು 4-5 ವರ್ಷಗಳಿಂದ ಎನ್‌ಸಿಎಯ ಭಾಗವಾಗಿದ್ದೆ ಮತ್ತು ಕೆಲವು ಕಾಲ ಬ್ಯಾಟಿಂಗ್ ತರಬೇತುದಾರನಾಗಿದ್ದೆ. ನನಗೆ ಈ ಅವಕಾಶವನ್ನು ನೀಡಿದ ರಾಹುಲ್ ದ್ರಾವಿಡ್ ಮತ್ತು ಸೌರವ್ ಗಂಗೂಲಿ ಅವರಿಗೆ ನಾನು ಆಭಾರಿಯಾಗಿದ್ದೇನೆ ಎಂದು ಶಿವ ಸುಂದರ್ ದಾಸ್ ತಿಳಿಸಿದ್ದಾರೆ.

ಇದನ್ನೂ ಓದಿ - "10-12 ವರ್ಷಗಳ ಕಾಲ ಆತಂಕವನ್ನು ಅನುಭವಿಸಿದೆ, ಅನೇಕ ನಿದ್ರೆಯಿಲ್ಲದ ರಾತ್ರಿಗಳನ್ನು ಕಳೆದಿದ್ದೇನೆ"

ಇದಕ್ಕೂ ಮೊದಲು ಬಿಸಿಸಿಐನ ಮೂವರು ಸದಸ್ಯರ ಸಲಹಾ ಸಮಿತಿಯು ಮುಖ್ಯ ಕೋಚ್ ಹುದ್ದೆಗೆ ಭಾರತದ ಅನೇಕ ಮಾಜಿ ಆಟಗಾರರನ್ನು ಸಂದರ್ಶಿಸಿತ್ತು. ಈ ಸಂದರ್ಶನದಲ್ಲಿ ರಮೇಶ್ ಪವಾರ್ ಅವರನ್ನು ಕೋಚ್ ಆಗಿ ಶಿಫಾರಸು ಮಾಡಲಾಗಿದೆ. ಇದಕ್ಕೂ ಮೊದಲು ಭಾರತದ ಮಾಜಿ ಕ್ರಿಕೆಟಿಗ ಡಬ್ಲ್ಯು.ವಿ.ರಾಮನ್ ಭಾರತ ತಂಡದ ಕೋಚ್ ಆಗಿದ್ದರು. ಪವಾರ್ ತಮ್ಮ ಅಂತರರಾಷ್ಟ್ರೀಯ ವೃತ್ತಿಜೀವನದಲ್ಲಿ 2 ಟೆಸ್ಟ್ ಮತ್ತು 31 ಏಕದಿನ ಪಂದ್ಯಗಳನ್ನು ಆಡಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News