"10-12 ವರ್ಷಗಳ ಕಾಲ ಆತಂಕವನ್ನು ಅನುಭವಿಸಿದೆ, ಅನೇಕ ನಿದ್ರೆಯಿಲ್ಲದ ರಾತ್ರಿಗಳನ್ನು ಕಳೆದಿದ್ದೇನೆ"

 ಸಚಿನ್ ತೆಂಡೂಲ್ಕರ್ ಅವರು ತಮ್ಮ 24 ವರ್ಷದ ವೃತ್ತಿ ಜೀವನದಲ್ಲಿ ಪ್ರಮುಖವಾಗಿ ಆತಂಕವನ್ನು ಎದುರಿಸಿರುವುದಾಗಿ ಹೇಳಿದ್ದಾರೆ.

Last Updated : May 16, 2021, 10:35 PM IST
  • ಸಚಿನ್ ತೆಂಡೂಲ್ಕರ್ ಅವರು ತಮ್ಮ 24 ವರ್ಷದ ವೃತ್ತಿ ಜೀವನದಲ್ಲಿ ಪ್ರಮುಖವಾಗಿ ಆತಂಕವನ್ನು ಎದುರಿಸಿರುವುದಾಗಿ ಹೇಳಿದ್ದಾರೆ.
"10-12 ವರ್ಷಗಳ ಕಾಲ ಆತಂಕವನ್ನು ಅನುಭವಿಸಿದೆ, ಅನೇಕ ನಿದ್ರೆಯಿಲ್ಲದ ರಾತ್ರಿಗಳನ್ನು ಕಳೆದಿದ್ದೇನೆ"

ನವದೆಹಲಿ: ಸಚಿನ್ ತೆಂಡೂಲ್ಕರ್ ಅವರು ತಮ್ಮ 24 ವರ್ಷದ ವೃತ್ತಿ ಜೀವನದಲ್ಲಿ ಪ್ರಮುಖವಾಗಿ ಆತಂಕವನ್ನು ಎದುರಿಸಿರುವುದಾಗಿ ಹೇಳಿದ್ದಾರೆ.

ಆಟಕ್ಕೆ ದೈಹಿಕವಾಗಿ ತಯಾರಿ ಮಾಡುವುದರ ಜೊತೆಗೆ, ನೀವು ಮಾನಸಿಕವಾಗಿ ಸಹ ನಿಮ್ಮನ್ನು ಸಿದ್ಧಪಡಿಸಿಕೊಳ್ಳಬೇಕು ಎನ್ನುವುದನ್ನು ಕಾಲಕ್ರಮೇಣ ನಾನು ಅರಿತುಕೊಂಡೆ.ನನ್ನ ಮನಸ್ಸಿನಲ್ಲಿ ಪಂದ್ಯವು ಮೈದಾನಕ್ಕೆ ಪ್ರವೇಶಿಸುವ ಮೊದಲೇ ಪ್ರಾರಂಭವಾಗಿರುತ್ತಿತ್ತು. ಆತಂಕದ ಮಟ್ಟಗಳು ತುಂಬಾ ಹೆಚ್ಚಾಗಿದ್ದವು" ಎಂದು ಸಚಿನ್ (Sachin Tendulkar) ಹೇಳಿದರು.

ಇದನ್ನೂ ಓದಿ: world's Richest Cricketer: ವಿಶ್ವದ ಅತ್ಯಂತ 'ಶ್ರೀಮಂತ ಕ್ರಿಕೆಟಿಗರ ಟಾಪ್ 5 ಪಟ್ಟಿಯಲ್ಲಿ ಭಾರತದ ಮೂವರು ಆಟಗಾರರು!

'ನಾನು 10-12 ವರ್ಷಗಳಿಂದ ಆತಂಕವನ್ನು ಅನುಭವಿಸಿದೆ, ಆಟಕ್ಕೆ ಮೊದಲು ಅನೇಕ ನಿದ್ದೆಯಿಲ್ಲದ ರಾತ್ರಿಗಳನ್ನು ಹೊಂದಿದ್ದೆ. ನಂತರ ಅದು ನನ್ನ ತಯಾರಿಕೆಯ ಭಾಗವೆಂದು ನಾನು ಒಪ್ಪಿಕೊಳ್ಳಲು ಪ್ರಾರಂಭಿಸಿದೆ.ರಾತ್ರಿಯಲ್ಲಿ ನಿದ್ದೆ ಮಾಡಲು ಸಾಧ್ಯವಾಗದ ಸಮಯಗಳೊಂದಿಗೆ ನಾನು ಸಮಾಧಾನ ಮಾಡಿಕೊಂಡೆ.ನನ್ನ ಮನಸ್ಸನ್ನು ಹಾಯಾಗಿಡಲು ಏನಾದರೂ ಮಾಡಲು ಪ್ರಾರಂಭಿಸಿದೆ" ಎಂದರು ಹೇಳಿದರು.

ಇದನ್ನೂ ಓದಿ: Sachin Tendulkar Birthday: ಸಚಿನ್ ತೆಂಡೂಲ್ಕರ್ ಅವರ 5 ಸ್ಮರಣೀಯ ಇನಿಂಗ್ಸ್ ಗಳು

ಶಾಡೋ ಬ್ಯಾಟಿಂಗ್, ಟಿವಿ ನೋಡುವುದು ಮತ್ತು ದಿನದ ಮುಂಜಾನೆ ವಿಡಿಯೋ ಗೇಮ್‌ಗಳನ್ನು ಆಡುವುದು ಇದರಲ್ಲಿ ಒಳಗೊಂಡಿತ್ತು. ಬೆಳಗ್ಗೆ ಚಹಾ ತಯಾರಿಸುವುದು ಕೂಡ ತಮ್ಮ ಆಟಕ್ಕೆ ಅನುಕೂಲಕರವಾಯಿತು ಎಂದು ಹೇಳಿದ್ದಾರೆ.

ಚಹಾ ತಯಾರಿಸುವುದು, ನನ್ನ ಬಟ್ಟೆಗಳನ್ನು ಇಸ್ತ್ರಿ ಮಾಡುವುದು ಸಹ ಆಟದ ತಯಾರಿಗಾಗಿ ನನಗೆ ಸಹಾಯ ಮಾಡಿತು. ಆಟದ ಹಿಂದಿನ ದಿನ ನಾನು ನನ್ನ ಬ್ಯಾಗ್ ಅನ್ನು ಪ್ಯಾಕ್ ಮಾಡುತ್ತಿದ್ದೆ, ನನ್ನ ಸಹೋದರ ನನಗೆ ಎಲ್ಲವನ್ನೂ ಕಲಿಸಿದನು ಮತ್ತು ಅದು ಅಭ್ಯಾಸವಾಯಿತು. ಕೊನೆಯ ಪಂದ್ಯದಲ್ಲೂ ನಾನು ಅದೇ ಡ್ರಿಲ್ ಅನ್ನು ಅನುಸರಿಸಿದೆ ಎಂದು ಸಚಿನ್ ಹೇಳಿದರು.ಅವರು 2013 ರಲ್ಲಿ ತನ್ನ 200 ನೇ ಟೆಸ್ಟ್ ಪಂದ್ಯವನ್ನು ಆಡಿದ ನಂತರ ನಿವೃತ್ತರಾದರು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

 

More Stories

Trending News