ನವದೆಹಲಿ : ಸಿಬಿಎಸ್ಇ ಪ್ರಶ್ನೆ ಪತ್ರಿಕೆ ಸೋರಿಕೆ ಹಿನ್ನೆಲೆಯಲ್ಲಿ ರದ್ದಾಗಿದ್ದ ಪರೀಕ್ಷೆಗಳ ಹೊಸ ದಿನಾಂಕಗಳನ್ನು ಶಿಕ್ಷಣ ಇಲಾಖೆ ಪ್ರಕಟಿಸಿದೆ.
ಇಂದು ಸುದ್ದಿಗೋಷ್ಟಿಯನ್ನು ಉದ್ದೇಶಿಸಿ ಮಾತನಾಡಿದ ಶಿಕ್ಷಣ ಇಲಾಖೆ ಕಾರ್ಯದರ್ಶಿ ಅನಿಲ್ ಸ್ವರೂಪ್, 12ನೇ ತರಗತಿ ಅರ್ಥಶಾಸ್ತ್ರ ಮರು ಪರೀಕ್ಷೆ ಏಪ್ರಿಲ್ 25ರಂದು ನಡೆಯಲಿದೆ ಎಂದು ಹೇಳಿದರು.
Re-examination of Class 12th exam will be on 25th April: Secretary Education #CBSEPaperLeak pic.twitter.com/V4P5IXKjpJ
— ANI (@ANI) March 30, 2018
ಅತಿ ಮುಖ್ಯ ವಿಷಯವೆಂದರೆ, 10 ನೇ ತರಗತಿಯ ಮರುಪರೀಕ್ಷೆ ದೆಹಲಿ ಮತ್ತು ಹರ್ಯಾಣ ರಾಜ್ಯಗಳಲ್ಲಿ ಮಾತ್ರ ನಡೆಯಲಿದೆ. ಇತರ ಪ್ರದೇಶಗಳ ವಿದ್ಯಾರ್ಥಿಗಳು ಮರು ಪರೀಕ್ಷೆ ಬರೆಯುವ ಅಗತ್ಯವಿಲ್ಲ. ಅಲ್ಲದೆ, ಪ್ರಶ್ನೆ ಪತ್ರಿಕೆ ಸೋರಿಕೆ ಬಗ್ಗೆ ಇನ್ನೂ ತನಿಖೆ ನಡೆಯುತ್ತಿರುವುದರಿಂದ 10ನೇ ತರಗತಿ ಗಣಿತಶಾಸ್ತ್ರ ವಿಷಯಕ್ಕೂ ಮರುಪರೀಕ್ಷೆ ನಡೆಸಬೇಕೇ, ಬೇಡವೇ ಎಂಬುದನ್ನು 15 ದಿನಗಳಲ್ಲಿ ಪ್ರಕಟಿಸಲಾಗುವುದು ಎಂದು ಅವರು ಸ್ಪಷ್ಟಪಡಿಸಿದರು.
Regarding Class 10th re examination, as leak was restricted to Delhi and Haryana, if it at all a re-exam will happen, it will happen only in Delhi & Haryana and a decision will be taken on this in next 15 days. If at all a re-exam is done, it will be in July: Secretary Education
— ANI (@ANI) March 30, 2018