ನವದೆಹಲಿ : ನಿಮ್ಮ ಖಾತೆಯಿಂದ ಹಣ ಲಪಟಾಯಿಸಲು ಆನ್ ಲೈನ್ ವಂಚಕರು (Online fraud) ತರಹೆವಾರಿ ಐಡಿಯಾ ಹುಡುಕುತ್ತಿದ್ದಾರೆ. ಮೋಸ ಮಾಡಲು ನಾನಾ ದಾರಿ ಶೋಧದಲ್ಲಿದ್ದಾರೆ. ನೀವು ಮಾತ್ರ ಹುಷಾರಾಗಿರಬೇಕು. ಈ ಹಿನ್ನೆಲೆಯಲ್ಲಿ ದೆಹಲಿ ಪೊಲೀಸ್ ಸೈಬರ್ ಕ್ರೈಂ (Dehli police cyber crime) ವಿಭಾಗ ಟ್ವೀಟ್ ಮಾಡಿ ಹುಷಾರಾಗಿರುವಂತೆ ಜನರಲ್ಲಿ ಮನವಿ ಮಾಡಿದೆ.
ಸೈಬರ್ ಪೊಲೀಸರು ಹೇಳಿದ್ದೇನು..?
ಟ್ವೀಟ್ (Tweet) ಮಾಡಿರುವ ದೆಹಲಿ ಸೈಬರ್ ಪೊಲೀಸರು (Delhi police) ಆನ್‍ಲೈನ್ ವಂಚಕರ ಮೋಸದ ಹೊಸ ವಿಧಾನಕ್ಕೆ ಬಲಿಯಾಗದಿರುವಂತೆ ಮನವಿ ಮಾಡಿದ್ದಾರೆ. ಆನ್ ಲೈನ್ ವಂಚಕರ (Online fraud) ಹೊಸ ವಿಧಾನ ಹೀಗಿದೆ. ನಿಮಗೆ ಕೆಲವೊಂದು ನಂಬರಿನಿಂದ ದೂರವಾಣಿ ಕರೆ ಅಥವಾ ಎಸ್‍ಎಂಎಸ್ (SMS) ಸಂದೇಶ ಬರುತ್ತದೆ. ಕರೆ ಮಾಡುವ ವ್ಯಕ್ತಿ ಹೇಳುತ್ತಾನೆ..``ಕೆವೈಸಿ ಅಪ್‍ಡೇಟ್ ಆಗದ ಕಾರಣ ನಿಮ್ಮ ಸಿಮ್ ಕಾರ್ಡ್ ಬ್ಲಾಕ್ ಆಗಬಹುದು. ಅದನ್ನು ತಡೆಯಬೇಕಾದರೆ ಈ ಕೆಳಗಿನ ಸಂಖ್ಯೆಗಳಿಗೆ ಕಾಲ್ ಮಾಡಿ'' ಎಂದು ಹೇಳುತ್ತಾನೆ. ಅಥವಾ ಅದೇ ರೀತಿ ಎಸ್‍ಎಂಎಸ್ ಸಂದೇಶ ಅದರಲ್ಲಿರುತ್ತದೆ. ಆ ಸಂದೇಶ ನಂಬಿ ನೀವೆನಾದರೂ ಅಲ್ಲಿ ಕೊಟ್ಟಿರುವ ಸಂಖ್ಯೆಗೆ ಫೋನಾಯಿಸಿದರೆ, ಕೆಲವೊಂದು ಪೇಮೆಂಟ್ (Payment) ಮಾಡಲು ಹೇಳುತ್ತಾರೆ. ಅಥವಾ ಯಾವುದಾದರೂ ಆಪ್ ಡೌನ್ ಲೋಡ್ ಮಾಡಲು ಹೇಳುತ್ತಾರೆ. ಅದನ್ನು ನಂಬಿ ನೀವು ಹಾಗೆ ಏನಾದರೂ ಮಾಡಿದರೆ ನಿಮ್ಮ ಬ್ಯಾಂಕ್ ಖಾತೆಯಿಂದ (Bank account) ದುಡ್ಡು ಮಂಗಮಾಯವಾಗಿಬಿಡುತ್ತದೆ.
ಇದನ್ನೂ ಓದಿ : "ಮಮತಾ ದೀದಿ ನನಗೆ ನಿಮ್ಮನ್ನು ಬಿಟ್ಟು ಇರಲು ಸಾಧ್ಯವಿಲ್ಲ"
You may receive a fake SMS claiming your SIM will be blocked due to KYC issues.These havenumbers on which people are asked to call.
Never call on such fraud numbers
Never download any App on their instruction
Never make even a token payment to them@LtGovDelhi @CPDelhi pic.twitter.com/bNFkKn2vM3
— DCP Cybercrime (@DCP_CCC_Delhi) May 21, 2021
ಕೆವೈಸಿ (KYC) ನೆಪದಲ್ಲಿ ನಿಮ್ಮ ಎಲ್ಲಾ ಮಾಹಿತಿ ಪಡೆಯುವ ವಂಚಕರು, ಅದನ್ನು ಬಳಸಿಕೊಂಡು ನಿಮ್ಮ ಬ್ಯಾಂಕ್ ಖಾತೆಗೆ ಕನ್ನ ಹಾಕಬಹುದು ಅಥವಾ ನಿಮ್ಮ ಮೊಬೈಲ್ ಹ್ಯಾಕ್ (Mobile Hack) ಮಾಡಬಹುದು. ದೆಹಲಿ ಸೈಬರ್ ಪೊಲೀಸರ ಟ್ವೀಟ್ ಇಲ್ಲಿದೆ. ಅದರಲ್ಲಿ ಆನ್ ಲೈನ್ ವಂಚಕರ ಸಂದೇಶದ ಸ್ಕ್ರೀನ್ ಶಾಟ್ ಇದೆ. ಅದರಲ್ಲಿ ಕೆಲವು ಮೊಬೈಲ್ (Mobile) ನಂಬರ್ ಗಳೂ ಇವೆ. ಅದನ್ನು ಸರಿಯಾಗಿ ಗುರುತುಮಾಡಿಕೊಳ್ಳಿ.
ಇದನ್ನೂ ಓದಿ : Arvind Kejriwal : ಕೊರೋನಾದಿಂದ ಮಗನ ಕಳೆದುಕೊಂಡ ತಂದೆಗೆ ₹ 1 ಕೋಟಿ ಪರಿಹಾರ ನೀಡಿದ ದೆಹಲಿ ಸಿಎಂ!
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.