ನವದೆಹಲಿ: ದೇಶದಲ್ಲಿ ಕೊರೊನಾವೈರಸ್ ಸೋಂಕಿನ ಪ್ರಕರಣಗಳು ಸ್ಥಿರವಾಗಿ ಕಡಿಮೆಯಾಗುತ್ತಿವೆ. ಜನರಿಗೆ ಲಸಿಕೆ ಹಾಕುವ ಅಭಿಯಾನ ಕೂಡ ಮುಂದುವರೆದಿದೆ. ಆದರೆ ಕರೋನಾ ವಿರುದ್ಧದ ಹೋರಾಟದಲ್ಲಿ ಮತ್ತೊಂದು ಹೊಸ ಸವಾಲು ಎದುರಾಗಿದೆ. ಇತ್ತೀಚಿಗೆ ಕೆಲವು ರಾಜ್ಯಗಳಲ್ಲಿ ಮಕ್ಕಳಲ್ಲಿ ಕರೋನಾ ಸೋಂಕಿನ ಪ್ರಕರಣಗಳು ಹೆಚ್ಚಾಗುತ್ತಿದ್ದು ಇದು ಸರ್ಕಾರದ ನಿದ್ದೆಗೆಡಿಸಿದೆ.
ಮಕ್ಕಳಲ್ಲಿ ಕರೋನಾ ಸೋಂಕು:
ರಾಜಸ್ಥಾನದ (Rajasthan) 2 ಜಿಲ್ಲೆಗಳಿಂದ ಮಕ್ಕಳು ಕರೋನಾ ಸೋಂಕಿಗೆ ಒಳಗಾಗಿದ್ದಾರೆ ಎಂಬ ವರದಿಗಳು ಬಂದಿವೆ. ದೌಸಾ (Dausa)ನಲ್ಲಿ, 22 ದಿನಗಳಲ್ಲಿ 300 ಮಕ್ಕಳು ಮತ್ತು ಸಿಕಾರ್ (Sikar) ನಲ್ಲಿ 83 ದಿನಗಳಲ್ಲಿ 1757 ಮಕ್ಕಳು ಸೋಂಕಿಗೆ ಒಳಗಾಗಿದ್ದಾರೆ. ಅದೇ ಸಮಯದಲ್ಲಿ, ಮಧ್ಯಪ್ರದೇಶದ (Madhya Pradesh) ಸಾಗರ್ (Sagar) ನಲ್ಲಿ 30 ದಿನಗಳಲ್ಲಿ 302 ಮಕ್ಕಳು ಸೋಂಕಿಗೆ ಒಳಗಾಗಿದ್ದಾರೆ. ಉತ್ತರಾಖಂಡದಲ್ಲಿ, 20 ದಿನಗಳಲ್ಲಿ 2044 ಮಕ್ಕಳು ಸೋಂಕಿಗೆ ಒಳಗಾಗಿದ್ದಾರೆ ಎಂಬ ಆಘಾತಕಾರಿ ಮಾಹಿತಿ ಲಭ್ಯವಾಗಿದೆ. ಸಾಮಾನ್ಯ ಚಿಕಿತ್ಸೆಯ ನಂತರ ಇವರಲ್ಲಿ ಬಹುತೇಕ ಮಕ್ಕಳು ಚೇತರಿಸಿಕೊಂಡಿರುವುದು ನಿರಾಳದ ವಿಷಯವಾಗಿದೆ. ಆದಾಗ್ಯೂ, ಕೆಲವು ಮಕ್ಕಳಿಗೆ ಚಿಕಿತ್ಸೆ ಫಲಕಾರಿಯಾಗದೆ ಅವರು ಅಸುನೀಗಿರುವ ಸುದ್ದಿಯೂ ಕೆಲ ಪ್ರದೇಶಗಳಿಂದ ವರದಿಯಾಗಿರುವುದು ಬೇಸರದ ಸಂಗತಿಯಾಗಿದೆ.
ಆಘಾತಕಾರಿ ಅಂಕಿ ಅಂಶಗಳು:
ನಮ್ಮ ಉದ್ದೇಶ ನಿಮ್ಮನ್ನು ಹೆದರಿಸುವುದಲ್ಲ, ಆದರೆ ಮಕ್ಕಳನ್ನು ಕರೋನಾ ಸೋಂಕಿನಿಂದ ರಕ್ಷಿಸಲು ಜಾಗರೂಕರಾಗಿರಿ. ಕರೋನಾ ಸೋಂಕು ಮಕ್ಕಳಲ್ಲಿ ಹರಡದಂತೆ ತಡೆಯಲು ಸೂಕ್ತ ಕ್ರಮಗಳನ್ನು ಕೈಗೊಳ್ಳಿ. ಅದಕ್ಕೂ ಮೊದಲು ನಾವು ಮಕ್ಕಳಲ್ಲಿ ಹೆಚ್ಚುತ್ತಿರುವ ಕರೋನಾ ಸೋಂಕಿನ ಆಘಾತಕಾರಿ ಪ್ರಕರಣಗಳ ಬಗ್ಗೆ ತಿಳಿಯೋಣ...
ಇದನ್ನೂ ಓದಿ - ಆಕ್ಸಿಮೀಟರ್ ಬೇಕಾಗಿಲ್ಲ.!ಮೊಬೈಲ್ ನಲ್ಲೇ ನೋಡಬಹುದು ಆಕ್ಸಿಜನ್ ಲೆವೆಲ್..!
ರಾಜಸ್ಥಾನದ ದೌಸಾದಲ್ಲಿ ಕರೋನಾ ಏಕಾಏಕಿ:
ರಾಜಸ್ಥಾನದ ದೌಸಾದಲ್ಲಿ ಮಕ್ಕಳಲ್ಲಿ ಕರೋನಾ ಸೋಂಕು (Corona Infection in Kids) ಶೀಘ್ರವಾಗಿ ಹರಡುತ್ತಿರುವುದು ಆಘಾತಕಾರಿ. ದೌಸಾ ಜಿಲ್ಲೆಯಲ್ಲಿ ಕಳೆದ 22 ದಿನಗಳಲ್ಲಿ 300 ಮಕ್ಕಳು ಕರೋನಾ ಸೋಂಕಿಗೆ ಒಳಗಾಗಿದ್ದಾರೆ. ಆದರೆ ಈ ಸೋಂಕಿತ ಮಕ್ಕಳಲ್ಲಿ ಕರೋನದ ಯಾವುದೇ ಲಕ್ಷಣಗಳು ಕಂಡುಬಂದಿಲ್ಲ. ಕರೋನಾ ಸೋಂಕು ಪತ್ತೆಯಾಗಿದ್ದ ಮಕ್ಕಳನ್ನು ಗುಣಪಡಿಸಲಾಗಿದೆ. ದೌಸಾದಲ್ಲಿ ಇದೀಗ ಒಂದೇ ಒಂದು ಮಗು ಕೂಡ ಕರೋನಾ ಸೋಂಕಿನಿಂದ ಬಳಲುತ್ತಿಲ್ಲ. ಮಕ್ಕಳ ಬಗ್ಗೆ ವಿಶೇಷ ಕಾಳಜಿ ವಹಿಸುವಂತೆ ದೌಸಾ ಜಿಲ್ಲೆಯ ಆರೋಗ್ಯ ಇಲಾಖೆ ಜನರಿಗೆ ಮನವಿ ಮಾಡಿದೆ.
ಮಧ್ಯಪ್ರದೇಶದ ಸಾಗರದಲ್ಲಿ ಕರೋನಾ ಸೋಂಕಿಗೆ ಒಳಗಾಗಿದ್ದ ಮಕ್ಕಳು :
ಮಧ್ಯಪ್ರದೇಶದ ಸಾಗರದಲ್ಲಿ ಹಲವು ಮಕ್ಕಳು ಕರೋನಾ ಹಿಡಿತಕ್ಕೆ ಸಿಲುಕಿದ್ದಾರೆ. ಸಾಗರ್ ಜಿಲ್ಲೆಯಲ್ಲಿ ಕಳೆದ 1 ತಿಂಗಳಲ್ಲಿ 302 ಮಕ್ಕಳು ಕರೋನಾವೈರಸ್ ಸೋಂಕಿಗೆ ಒಳಗಾಗಿದ್ದಾರೆ. ಇಲ್ಲಿ 4 ಸೋಂಕಿತ ಮಕ್ಕಳು ಸಾವನ್ನಪ್ಪಿದ್ದಾರೆ. ಸಾಗರ್ ಜಿಲ್ಲೆಯಲ್ಲಿ ಮಕ್ಕಳ ಕೋವಿಡ್ ಆರೈಕೆ ಕೇಂದ್ರವನ್ನು ಸ್ಥಾಪಿಸಲಾಗಿದೆ. ಮಕ್ಕಳಲ್ಲಿ ಶೀಘ್ರವಾಗಿ ಕರೋನಾ ಪಸರಿಸುತ್ತಿರುವುದು ಇಲ್ಲಿನ ಆಡಳಿತವನ್ನು ಚಿಂತಿಸುವಂತೆ ಮಾಡಿದೆ.
ಈ ಎಲ್ಲದರ ಮಧ್ಯೆ, ಉತ್ತರಾಖಂಡ ಸರ್ಕಾರ ಬಿಡುಗಡೆ ಮಾಡಿದ ಕರೋನಾ ಸೋಂಕಿನ ಅಂಕಿ ಅಂಶಗಳಲ್ಲಿ ಆಶ್ಚರ್ಯಕರ ಸಂಗತಿ ಹೊರಬಿದ್ದಿದೆ. ಈ ವರ್ಷ ಮೇ 1 ರಿಂದ 20 ರವರೆಗೆ, ಉತ್ತರಾಖಂಡದಲ್ಲಿ, 9 ವರ್ಷದೊಳಗಿನ 2044 ಮಕ್ಕಳು ಕರೋನಾ ಸೋಂಕಿಗೆ ಒಳಗಾಗಿದ್ದಾರೆ. ಇದಲ್ಲದೆ, 10 ರಿಂದ 19 ವಯೋಮಾನದ 8,661 ಸೋಂಕಿತರು ಇಲ್ಲಿ ಕಂಡುಬಂದಿದ್ದಾರೆ.
ಇದನ್ನೂ ಓದಿ - Vaccination Fear In Village: ವ್ಯಾಕ್ಸಿನ್ ಭಯದಿಂದ ನದಿಗೆ ಹಾರಿದ ಗ್ರಾಮೀಣ ಜನ, ಲಸಿಕೆ ಹಾಕಿಸಿಕೊಂಡಿದ್ದು ಕೇವಲ 14 ಜನ ಮಾತ್ರ
ಮಕ್ಕಳಲ್ಲಿ ಈ ರೋಗಲಕ್ಷಣಗಳು ಕಂಡು ಬಂದರೆ ಜಾಗರೂಕರಾಗಿರಿ:
ಮಕ್ಕಳಲ್ಲಿ ಕರೋನಾ ಸೋಂಕಿನ ಆರಂಭಿಕ ಚಿಹ್ನೆಗಳು ಯಾವುವು ಎಂಬ ಬಗ್ಗೆ ಕೆಲವು ತಜ್ಞರು ಮಾಹಿತಿ ನೀಡಿದ್ದಾರೆ. ಮಗುವಿಗೆ ಉಸಿರಾಟಕ್ಕೆ ಸಂಬಂಧಿಸಿದ ಯಾವುದೇ ಸಮಸ್ಯೆ ಕಾಣಿಸಿಕೊಂಡರೆ, ಮಗುವಿಗೆ ಮೂಗು ಸ್ರವಿಸುತ್ತದೆ, ಅಧಿಕ ಜ್ವರ ಅಥವಾ ಸೌಮ್ಯ ಕೆಮ್ಮು ಇದ್ದರೆ, ಇಲ್ಲವೇ, ಮಗುವಿಗೆ ಹೊಟ್ಟೆಗೆ ಸಂಬಂಧಿಸಿದ ಯಾವುದೇ ಸಮಸ್ಯೆ ಕಾಣಿಸಿಕೊಂಡರೆ ತಡಮಾಡದೆ ವೈದ್ಯರನ್ನು ಸಂಪರ್ಕಿಸಿ. ಅವರೊಂದಿಗೆ ಮಾತನಾಡಿ ಪರಿಸ್ಥಿತಿಯನ್ನು ವಿವರಿಸಿ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.