Priyanka Chopra: ಯಶಸ್ವೀ ವಿವಾಹದ ರಹಸ್ಯ ಬಹಿರಂಗಪಡಿಸಿದ ದೇಸಿ ಗರ್ಲ್

Priyanka Chopra Marriage Tips: ಸುಖ-ದಾಂಪತ್ಯಕ್ಕೆ ಸರಳ ಸೂತ್ರ ಬಹಿರಂಗಪಡಿಸಿದ ದೇಸಿ ಗರ್ಲ್ ಪ್ರಿಯಾಂಕ ಚೋಪ್ರಾ.

Written by - Yashaswini V | Last Updated : May 25, 2021, 02:55 PM IST
  • ಬಾಲಿವುಡ್ ಮತ್ತು ಹಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ
  • ತಮ್ಮ ಯಶಸ್ವೀ ದಾಂಪತ್ಯ ಜೀವನದ ರಹಸ್ಯ ಬಿಚ್ಚಿಟ್ಟ ದೇಸಿ ಗರ್ಲ್
  • ಯಶಸ್ವೀ ವೈವಾಹಿಕ ಜೀವನಕ್ಕೆ ಸಂಬಂಧಿಸಿದಂತೆ ಸಂದರ್ಶನವೊಂದರಲ್ಲಿ ಅನೇಕ ವಿಷಯಗಳನ್ನು ಹಂಚಿಕೊಂಡಿರುವ ಪ್ರಿಯಾಂಕ ಚೋಪ್ರಾ
Priyanka Chopra: ಯಶಸ್ವೀ ವಿವಾಹದ ರಹಸ್ಯ ಬಹಿರಂಗಪಡಿಸಿದ ದೇಸಿ ಗರ್ಲ್ title=
File Image

ನವದೆಹಲಿ: ಬಾಲಿವುಡ್ ಮತ್ತು ಹಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ (Priyanka Chopra) ಈ ದಿನಗಳಲ್ಲಿ ಸುದ್ದಿಯಲ್ಲಿದ್ದಾರೆ. ಒಂದೆಡೆ ಕರೋನಾ ಸಂಕಷ್ಟದಲ್ಲಿರುವ ಭಾರತೀಯರಿಗೆ ಸಹಾಯ ಹಸ್ತ ಚಾಚಿರುವ ಪ್ರಿಯಾಂಕ ಚೋಪ್ರಾ, ಇನ್ನೊಂದೆಡೆ ತಮ್ಮ ವೃತ್ತಿ ಜೀವನಕ್ಕೆ ಸಂಬಂಧಿಸಿದಂತೆ ಚರ್ಚೆಯಲ್ಲಿದ್ದಾರೆ. ಈ ಮಧ್ಯೆ ಇತ್ತೀಚೆಗೆ, ದೇಸಿ ಗರ್ಲ್ ಪ್ರಿಯಾಂಕಾ ಚೋಪ್ರಾ ತಮ್ಮ ಯಶಸ್ವೀ ವೈವಾಹಿಕ ಜೀವನಕ್ಕೆ ಸಂಬಂಧಿಸಿದಂತೆ ಸಂದರ್ಶನವೊಂದರಲ್ಲಿ ಅನೇಕ ವಿಷಯಗಳನ್ನು ಹಂಚಿಕೊಂಡಿದ್ದಾರೆ.

ಪ್ರಿಯಾಂಕಾ ಚೋಪ್ರಾ ಇತ್ತೀಚೆಗೆ ವೋಗ್ ಆಸ್ಟ್ರೇಲಿಯಾ ಪತ್ರಿಕೆಗೆ ಸಂದರ್ಶನ ನೀಡಿದ್ದಾರೆ. ಈ ಸಂದರ್ಶನದಲ್ಲಿ ಪ್ರಿಯಾಂಕಾ ಚೋಪ್ರಾ (Priyanka Chopra) ತಮ್ಮ ವೈವಾಹಿಕ ಜೀವನದ ಬಗ್ಗೆ ಸಾಕಷ್ಟು ಮಾತನಾಡಿದ್ದಾರೆ. 'ನನ್ನ ಮದುವೆಯಾಗಿ ಕೇವಲ ಎರಡು ವರ್ಷಗಳಷ್ಟೇ ಆಗಿದೆ. ವೈವಾಹಿಕ ಜೀವನದಲ್ಲಿ  ಪರಸ್ಪರರಿಗೆ ಸಮಯ ನೀಡುವುದು ಬಹಳ ಮುಖ್ಯ. ಇದರೊಂದಿಗೆ ಸುಖ-ದಾಂಪತ್ಯ ಜೀವನಕ್ಕಾಗಿ ಸಂಭಾಷಣೆ ಬಹಳ ಮುಖ್ಯವಾಗುತ್ತದೆ. ದಂಪತಿಗಳು ಒಟ್ಟಿಗೆ ಕುಳಿತುಕೊಳ್ಳುವುದು, ತಮ್ಮ ಇಷ್ಟ-ಕಷ್ಟಗಳನ್ನು ಹಂಚಿಕೊಳ್ಳುವುದು, ಒಬ್ಬರ ಕಷ್ಟಕ್ಕೆ ಒಬ್ಬರು ಸಹಾಯ ಮಾಡುವುದು. ತಾವು ಜೊತೆಗಿರುವ ಸಮಯವನ್ನು ಆನಂದಿಸುವುದು ದಾಂಪತ್ಯವನ್ನು ಗಟ್ಟಿಗೊಳಿಸುತ್ತದೆ ಎಂದಿದ್ದಾರೆ.

ಇದನ್ನೂ ಓದಿ - Virat Kohli ಸಹೋದರಿಯೊಂದಿಗೆ Anushka Sharma ಸಂಬಂಧ ಹೇಗಿದೆ?

ಪ್ರಿಯಾಂಕಾ ಚೋಪ್ರಾ ತಮ್ಮ ಪತಿ ನಿಕ್ ಜೋನಸ್ (Nick Jonas) ಅವರೊಂದಿಗೆ ಕೆಲವು ರೋಮ್ಯಾಂಟಿಕ್ ಚಿತ್ರಗಳನ್ನು ತನ್ನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಈ ಫೋಟೋಗಳಲ್ಲಿ ಇಬ್ಬರೂ ಒಬ್ಬರನೊಬ್ಬರು ನೋಡುತ್ತಾ ಕಳೆದುಹೋಗಿದ್ದಾರೆ. ಈ ಸಮಯದಲ್ಲಿ, ಪ್ರಿಯಾಂಕಾ ಚೋಪ್ರಾ ಸ್ಕಿನ್ ಕಲರ್ ಮಿನುಗುವ ಹೈಸ್ಲಿಟ್ ಡ್ರೆಸ್ ಧರಿಸಿದ್ದದ್ದರೆ, ನಿಕ್ ಜೊನಸ್ ಹಸಿರು ಬಣ್ಣದ ಕೋಟ್ ಪ್ಯಾಂಟ್‌ನಲ್ಲಿ ಕಾಣಿಸಿಕೊಂಡಿದ್ದಾರೆ.

ಇದನ್ನೂ ಓದಿ - Aishwarya Rai ಇಂದ Kajalವರೆಗೆ ಅವರು ಧರಿಸಿರುವ ಮಂಗಳಸೂತ್ರದ ಬೆಲೆ ಎಷ್ಟು ಗೊತ್ತೇ?

ಇತ್ತೀಚೆಗೆ, ಬಿಲ್ಬೋರ್ಡ್ ಮ್ಯೂಸಿಕ್ ಅವಾರ್ಡ್ಸ್ 2021 (Billboard Music Awards 2021) ಕಾರ್ಯಕ್ರಮದಲ್ಲಿ ನಿಕ್ ಜೊತೆಗೆ ಪ್ರಿಯಾಂಕಾ ಕೂಡಾ ಕಾಣಿಸಿಕೊಂಡರು. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News