ನವದೆಹಲಿ: ದೀರ್ಘಕಾಲದ ಕೋವಿಡ್ ನಿರ್ಬಂಧಗಳ ನಂತರ ದೇಶಗಳು ಪ್ರಯಾಣ ಮತ್ತು ಪ್ರವಾಸೋದ್ಯಮವನ್ನು ಕ್ರಮೇಣ ಮರುಪ್ರಾರಂಭಿಸಲು ತಯಾರಿ ನಡೆಸುತ್ತಿರುವಾಗ,ವಿಶ್ವ ಆರೋಗ್ಯ ಸಂಸ್ಥೆ ಇದುವರೆಗೆ ಭಾರತ್ ಬಯೋಟೆಕ್ ತಯಾರಿಸಿರುವ ಕೋವಾಕ್ಸಿನ್ ಲಸಿಕೆಗೆ ಅನುಮೋದನೆ ನೀಡದಿರುವುದು ಭಾರತೀಯ ವಿದ್ಯಾರ್ಥಿಗಳಲ್ಲಿ ಆತಂಕ ಎದುರಾಗಿದೆ.
ಯುಎಸ್, ಕೆನಡಾ, ಆಸ್ಟ್ರೇಲಿಯಾ, ಐರ್ಲೆಂಡ್ ಮತ್ತು ಇಯು ಮುಂತಾದ ರಾಷ್ಟ್ರಗಳು ಕೋವಾಕ್ಸಿನ್ (Covaxin)
ಅನ್ನು ತಮ್ಮ ಅನುಮೋದಿತ ಲಸಿಕೆಗಳ ಪಟ್ಟಿಯಲ್ಲಿ ಇದುವರೆಗೆ ಗುರುತಿಸಿಲ್ಲ.ಉನ್ನತ ವಿಶ್ವವಿದ್ಯಾಲಯಗಳು ತಮ್ಮ ದೇಶಗಳು ಅಥವಾ ಡಬ್ಲ್ಯುಎಚ್‌ಒ ಅನುಮೋದಿಸಿದ ಲಸಿಕೆಗಳನ್ನು ಪಡೆದವರಿಗೆ ಮಾತ್ರ ಅವಕಾಶ ನೀಡುತ್ತಿವೆ.
ಇದನ್ನೂ ಓದಿ: Covid-19 : ಈ 18 ಜಿಲ್ಲೆಗಳಲ್ಲಿ ಸೋಂಕಿತರಿಗೆ 'Home Isolation' ರದ್ದು ಪಡೆಸಿದ ಸರ್ಕಾರ!
"ಕೋವಾಕ್ಸಿನ್ ಅನುಮೋದಿತ ಪಟ್ಟಿಯಲ್ಲಿಲ್ಲ, ಇದರಿಂದಾಗಿ ವಿದ್ಯಾರ್ಥಿಗಳಿಗೆ ಕಡ್ಡಾಯವಾದ ಹೋಟೆಲ್ ಕ್ಯಾರೆಂಟೈನ್‌ನಿಂದ ವಿನಾಯಿತಿ ನೀಡಲಾಗುವುದಿಲ್ಲ.14 ದಿನಗಳ ಕಾಲ ಹೋಟೆಲ್‌ನಲ್ಲಿ ಉಳಿಯುವುದು ನಿಜಕ್ಕೂ ದುಬಾರಿಯಾಗುತ್ತದೆ" ಎಂದು ಲಿಮೆರಿಕ್ ವಿಶ್ವವಿದ್ಯಾಲಯದ ದೇಶದ ಸಲಹೆಗಾರಾದ ಸೌಮ್ಯಾ ಪಾಂಡೆ ಹೇಳಿದ್ದಾರೆ.
WHO ತನ್ನ ಅನುಮೋದಿತ ಪಟ್ಟಿಯಲ್ಲಿ ಫಿಜರ್, ಮಾಡರ್ನಾ ಮತ್ತು ಕೋವಿಶೀಲ್ಡ್ ಅನ್ನು ಹೊಂದಿದೆ ಆದರೆ ಕೊವಾಕ್ಸಿನ್‌ಗೆ, ಹೆಚ್ಚಿನ ಮಾಹಿತಿ ಅಗತ್ಯವಿದೆ ಎಂದು ಅದು ಹೇಳುತ್ತದೆ.ಭಾರತ್ ಬಯೋಟೆಕ್ ಕಂಪನಿಯು ಅನುಮೋದನೆಗಳನ್ನು ಪಡೆಯುವ ಹಾದಿಯಲ್ಲಿದೆ ಮತ್ತು ತುರ್ತು ಬಳಕೆ ಪಟ್ಟಿಗಾಗಿ ಡಬ್ಲ್ಯುಎಚ್‌ಒ ಅನುಮೋದನೆಗಾಗಿ ಅಗತ್ಯವಿರುವ ಶೇ 90 ರಷ್ಟು ದಾಖಲೆಯನ್ನು ಸಲ್ಲಿಸಿದೆ.ಉಳಿದವುಗಳನ್ನು ಜೂನ್‌ನಲ್ಲಿ ಸಲ್ಲಿಸುವ ನಿರೀಕ್ಷೆಯಿದೆ' ಎಂದು ಕಂಪನಿಯು ಹೇಳಿದೆ.
Black Fungus: ಖಾಸಗಿ ಅಂಗಗಳ ಮೇಲೂ Mucormycosis ದಾಳಿ ಇಡುತ್ತಂತೆ ಎಚ್ಚರ!
ವಿದೇಶಿ ವಿಶ್ವವಿದ್ಯಾಲಯಗಳಲ್ಲಿ ಆಗಸ್ಟ್-ಸೆಪ್ಟೆಂಬರ್ ವೇಳೆಗೆ ಶೈಕ್ಷಣಿಕ ಅವಧಿಗಳು ಪ್ರಾರಂಭವಾಗಲಿರುವುದರಿಂದಾಗಿ ಈಗ ವಿದ್ಯಾರ್ಥಿಗಳಲ್ಲಿ ಆತಂಕ ಎದುರಾಗಿದೆ.
ಎರಡೂ ದೇಶಗಳೊಂದಿಗೆ ವ್ಯಾಪಕ ದ್ವಿಪಕ್ಷೀಯ ಸಮಾಲೋಚನೆಗಳ ನಂತರ ಬ್ರೆಜಿಲ್ ಮತ್ತು ಹಂಗೇರಿಯಲ್ಲಿ ಕೋವಾಕ್ಸಿನ್ ಅನುಮೋದನೆಗಾಗಿ ದಾಖಲೆಗಳನ್ನು ಸಲ್ಲಿಸುವ ಅಂತಿಮ ಹಂತದಲ್ಲಿದೆ ಎಂದು ಭಾರತ್ ಬಯೋಟೆಕ್ ಹೇಳಿದೆ.ಡಬ್ಲ್ಯುಎಚ್‌ಒ ಮುಂದೆ ತನ್ನ ಅರ್ಜಿಯ ಸ್ಥಿತಿಗತಿ ಕುರಿತು ಸರ್ಕಾರದೊಂದಿಗೆ ನಡೆಸಿದ ಸಭೆಯ ನಂತರ ಭಾರತ್ ಬಯೋಟೆಕ್ ಹೇಳಿಕೆ ಬಿಡುಗಡೆ ಮಾಡಿದೆ.
ಕೋವಾಕ್ಸಿನ್ 11 ದೇಶಗಳಿಂದ ನಿಯಂತ್ರಕ ಅನುಮೋದನೆಗಳನ್ನು ಪಡೆದಿದೆ ಮತ್ತು ಏಳು ದೇಶಗಳ 11 ಕಂಪನಿಗಳು ಕೋವಿಡ್ ಶಾಟ್‌ನ ತಂತ್ರಜ್ಞಾನ ವರ್ಗಾವಣೆ ಮತ್ತು ಉತ್ಪಾದನೆಯ ಬಗ್ಗೆ ಆಸಕ್ತಿ ತೋರಿಸಿವೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.