Mistakes After Eating Food:ಊಟವಾದ ಬಳಿಕ ಅಪ್ಪಿ-ತಪ್ಪಿಯೂ ಇವುಗಳನ್ನು ಮಾಡಲೇ ಬಾರದು

ನಾವು ಸಾಮಾನ್ಯವಾಗಿ ಆಹಾರ ಸೇವಿಸಿದ ಬಳಿಕ ಕೆಲವು ಅಭ್ಯಾಸಗಳನ್ನು ಹೊಂದಿರುತ್ತೇವೆ. ಆದರೆ ಈ ತಪ್ಪುಗಳು ನಮಗೆ ಅನುಕೂಲದ ಬದಲು ಅನಾನುಕೂಲವನ್ನು ಉಂಟು ಮಾಡಬಹುದು ಎಂದು ನಿಮಗೆ ತಿಳಿದಿದೆಯೇ?

Written by - Yashaswini V | Last Updated : May 28, 2021, 01:40 PM IST
  • ಆರೋಗ್ಯವು ನಮ್ಮ ಜೀವನಶೈಲಿ ಮತ್ತು ಅಭ್ಯಾಸಗಳನ್ನು ಅವಲಂಬಿಸಿರುತ್ತದೆ
  • ನಾವೆಲ್ಲರೂ ಆಹಾರ ಸೇವಿಸಿದ ಬಳಿಕ ಒಂದಲ್ಲಾ ಒಂದು ರೀತಿಯ ಅಭ್ಯಾಸಗಳನ್ನು ಹೊಂದಿರುತ್ತೇವೆ
  • ಕೆಲವರು ಮಧ್ಯಾಹ್ನ ಮತ್ತು ರಾತ್ರಿ ಊಟದ ನಂತರ ತಕ್ಷಣ ಮಲಗುವ ಅಭ್ಯಾಸ ಹೊಂದಿರುತ್ತಾರೆ
Mistakes After Eating Food:ಊಟವಾದ ಬಳಿಕ ಅಪ್ಪಿ-ತಪ್ಪಿಯೂ ಇವುಗಳನ್ನು ಮಾಡಲೇ ಬಾರದು title=
Mistakes After Eating Food

ಬೆಂಗಳೂರು: ನಮ್ಮೆಲ್ಲರ ಆರೋಗ್ಯವು ನಮ್ಮ ಜೀವನಶೈಲಿ ಮತ್ತು ಅಭ್ಯಾಸಗಳನ್ನು ಅವಲಂಬಿಸಿರುತ್ತದೆ. ಕಾಲಾನಂತರದಲ್ಲಿ ಇದು ನಮ್ಮ ಫಿಟ್‌ನೆಸ್ ಮತ್ತು ಆರೋಗ್ಯದ ಗುಣಮಟ್ಟವನ್ನು ನಿರ್ಧರಿಸುತ್ತದೆ. ಜನರು ಆಹಾರವನ್ನು ಸೇವಿಸಿದ ಕೂಡಲೇ ಕೆಲವು ಕೆಲಸಗಳನ್ನು ಮಾಡುತ್ತಾರೆ, ಇದು ಅವರ ಆರೋಗ್ಯದ ಮೇಲೆ ನಕಾರಾತ್ಮಕ ಪರಿಣಾಮವನ್ನು ಉಂಟು ಮಾಡುತ್ತದೆ. ಹಾಗಾಗಿ ನಾವು ಊಟ ಸೇವಿಸಿದ ಬಳಿಕ ಯಾವ ಕೆಲಸಗಳನ್ನು ಮಾಡಬಾರದು ಎಂಬ ಬಗ್ಗೆ ಇದರಲ್ಲಿ ತಿಳಿಸಲಿದ್ದೇವೆ.

ಊಟದ ನಂತರ ಸ್ನಾನ ಮಾಡುವುದು:
ಬೇಸಿಗೆ ಕಾಲದಲ್ಲಿ ಚೆನ್ನಾಗಿ ಬೆವರುತ್ತೇವೆ. ಹಾಗಾಗಿ ಕೆಲವರು ಮಲಗುವ ಮೊದಲು ಸ್ನಾನ ಮಾಡುವ ಅಭ್ಯಾಸ ಹೊಂದಿರುತ್ತಾರೆ. ಮಲಗುವ ಮುನ್ನ ಸ್ನಾನ (Bath)  ಮಾಡುವುದು ಉತ್ತಮ ನಿದ್ರೆಗೆ ಉತ್ತಮ ಉಪಾಯವಾಗಿದೆ. ಆದರೆ ನಿರೀಕ್ಷಿಸಿ, ನೀವು ಆಹಾರವನ್ನು ಸೇವಿಸಿದ ನಂತರ ಸ್ನಾನ ಮಾಡುವ ಬಗ್ಗೆ ಯೋಚಿಸುತ್ತಿದ್ದರೆ, ಅದು ನಿಮಗೆ ಅಪಾಯಕಾರಿ.  ಏಕೆಂದರೆ ಇದು ನಿಮ್ಮ ದೇಹದ ಜೀರ್ಣಕ್ರಿಯೆಯನ್ನು ಅಡ್ಡಿಪಡಿಸುತ್ತದೆ ಮತ್ತು ನಿಮಗೆ ಅಜೀರ್ಣ, ವಾಯು, ಎದೆಯ ಕಿರಿಕಿರಿ ಮತ್ತು ಹೊಟ್ಟೆಯ ಸೆಳೆತದಂತಹ ಸಮಸ್ಯೆಗಳನ್ನು ಉಂಟು ಮಾಡುತ್ತದೆ. ಹಾಗಾಗಿ ಊಟವಾದ ನಂತರ ಸುಮಾರು 20 ನಿಮಿಷಗಳ ಮೊದಲು ಯಾವುದೇ ಕಾರಣಕ್ಕೂ ಸ್ನಾನ ಮಾಡಬಾರದು.

ಇದನ್ನೂ ಓದಿ -  7 Weight Loss Mistakes: ತೂಕ ಇಳಿಸಿಕೊಳ್ಳಬೇಕೇ! ಹಾಗಿದ್ದರೆ ಬೆಳಿಗ್ಗೆ ಹೊತ್ತು ಈ 7 ತಪ್ಪುಗಳನ್ನು ಎಂದಿಗೂ ಮಾಡಬೇಡಿ

ಹಲ್ಲುಜ್ಜುವುದು :
ರಾತ್ರಿಯಲ್ಲಿ ಮಲಗುವ ಮೊದಲು ಹಲ್ಲುಜ್ಜುವುದು ಒಳ್ಳೆಯ ಅಭ್ಯಾಸ. ಆದರೆ ಆಹಾರವನ್ನು ಸೇವಿಸಿದ ಕೂಡಲೇ ಈ ಕೆಲಸವನ್ನು ಮಾಡಬೇಡಿ. ಏಕೆಂದರೆ ಇದನ್ನು ಮಾಡುವುದರಿಂದ ನೀವು ಸೇವಿಸುವ ಅಧಿಕ ಆಮ್ಲ ಆಹಾರದ ಕಣಗಳು ನಿಮ್ಮ ಹಲ್ಲುಗಳ ಮೇಲೆ ಹೆಪ್ಪುಗಟ್ಟುತ್ತವೆ. ಈ ಕಾರಣಕ್ಕಾಗಿ, ನಿಮ್ಮ ಹಲ್ಲುಗಳು ಎನಾಮೆಲ್ (Enamel) ಅನ್ನು ರಕ್ಷಿಸುವ ಬದಲು ಹೊರಗಿನ ಗಟ್ಟಿಯಾದ ಪದರವನ್ನು ಹಾನಿಗೊಳಿಸುತ್ತವೆ. ಆಹಾರವನ್ನು ಸೇವಿಸಿದ ನಂತರ 30 ನಿಮಿಷಗಳ ಕಾಲ ಹಲ್ಲುಜ್ಜದಿರುವುದು ಒಳ್ಳೆಯದು.

ವ್ಯಾಯಾಮ:
ಬೆಳಿಗ್ಗೆ ಅಥವಾ ಸಂಜೆ ಸ್ವಲ್ಪ ಆಹಾರದೊಂದಿಗೆ ವ್ಯಾಯಾಮ (Exercise) ಮಾಡುವುದು ಎಂದು ಜನರು ಭಾವಿಸುತ್ತಾರೆ. ಆದರೆ ಇದು ಅಪೂರ್ಣ ಸತ್ಯ. ತಿಂದ ಕೂಡಲೇ ವ್ಯಾಯಾಮ ಮಾಡುವುದರಿಂದ ಹೊಟ್ಟೆ ನೋವು, ವಾಂತಿ ಮತ್ತು ಸೋಮಾರಿತನ ಉಂಟಾಗುತ್ತದೆ. ನೀವು ಏನನ್ನಾದರೂ ತಿಂದ ಬಳಿಕ ವ್ಯಾಯಾಮ ಮಾಡಲು ಕನಿಷ್ಠ 45 ನಿಮಿಷ ಕಾಯಬೇಕು.

ಇದನ್ನೂ ಓದಿ - Exercise- ದೀರ್ಘಾವಧಿಯ ಬಳಿಕ ವ್ಯಾಯಾಮ ಪ್ರಾರಂಭಿಸುತ್ತಿದ್ದರೆ ಈ ವಿಷಯಗಳ ಬಗ್ಗೆ ಇರಲಿ ಎಚ್ಚರ

ನಿದ್ರೆ ಮಾಡುವುದು:
ಕೆಲವರು ಮಧ್ಯಾಹ್ನ ಮತ್ತು ರಾತ್ರಿ ಊಟದ ನಂತರ ತಕ್ಷಣ ಮಲಗುವ ಅಭ್ಯಾಸ ಹೊಂದಿರುತ್ತಾರೆ. ಆದರೆ ತಿಂದ ತಕ್ಷಣ ಮಲಗುವುದು ನಿಮ್ಮ ಜೀರ್ಣಾಂಗ ವ್ಯವಸ್ಥೆಗೆ ಹಾನಿಕಾರಕವಾಗಿದೆ. ತಿಂದ ನಂತರ ನೀವು ಲಘುವಾಗಿ ನಡೆಯಬೇಕು. ಇದರಿಂದ ದೇಹದ ಜೀರ್ಣಕಾರಿ ಪ್ರಕ್ರಿಯೆಯು ತ್ವರಿತವಾಗಿ ಮತ್ತು ಉತ್ತಮ ರೀತಿಯಲ್ಲಿ ಪ್ರಾರಂಭವಾಗುತ್ತದೆ. ಇದರೊಂದಿಗೆ ನೀವು ಆಹಾರವನ್ನು ಸೇವಿಸಿದ ನಂತರ ಎದೆಯುರಿ ಸಮಸ್ಯೆಯಿಂದಲೂ ಪರಿಹಾರ ಪಡೆಯಬಹುದು.

(ಸೂಚನೆ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಂಪೂರ್ಣ ಸತ್ಯವಾಗಿದೆ ಮತ್ತು ಸ್ಫುಟವಾಗಿದೆ ಎಂಬುದನ್ನು ಝೀ ಹಿಂದೂಸ್ತಾನ್ ಕನ್ನಡ ಪುಷ್ಟೀಕರಿಸುವುದಿಲ್ಲ.  ಈ ಮಾಹಿತಿಯನ್ನು ಅನುಸರಿಸುವ ಮುನ್ನ ಸಂಬಂಧಿತ ಕ್ಷೇತ್ರದ ತಜ್ಞರ ಸಲಹೆ ಪಡೆಯುವುದು ಉತ್ತಮ)

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News